Friday, 20th September 2024

ರೈತೋದ್ಧಾರದ ಸೋಲಾರ್ ಪಂಪ್ ಮತ್ತು ಅಂತರ್ಜಲ ನಿರ್ವಹಣೆ

 ಕೃಷಿ

ಗುರುರಾಜ್‌ಎಸ್‌ದಾವಣಗೆರೆ
ಪ್ರಾಚಾರ್ಯರು, ಆಚಾರ್ಯ ಪದವಿ ಪೂರ್ವಕಾಲೇಜು

ಕೇಂದ್ರ ಸರಕಾರದ ಹೊಸ ಮತ್ತು ಅಕ್ಷಯ ಇಂಧನ ಶಕ್ತಿಿ ಸಚಿವಾಲಯ ರೈತರ ವ್ಯವಸಾಯಿಕ ಬದುಕನ್ನು ಹಸನುಗೊಳಿಸುವ ಸೌರಶಕ್ತಿಿ ಪಂಪ್ ಬಳಕೆಯ ಬೃಹತ್ ಯೋಜನೆಯನ್ನು ರೂಪಿಸಲು ಮುಂದಾಗಿದೆ. ರೈತರ ಹಿತ ಕಾಯಲೆಂದೇ ಸ್ಥಾಾಪಿತವಾಗಿರುವ ‘ಪಿಎಮ್-ಕುಸುಮ್’ ಅಡಿಯಲ್ಲಿ ಹದಿನೇಳೂವರೆ ಲಕ್ಷ ಸ್ವತಂತ್ರ ಹಾಗೂ ಗ್ರಿಿಡ್‌ಗೆ ಜೋಡಿಸಲಾದ ಹತ್ತು ಲಕ್ಷ ಸೌರ ಪಂಪ್‌ಗಳನ್ನು ಸ್ಥಾಾಪಿಸುವುದರ ಜತೆಗೆ 0.5 ರಿಂದ 2 ಮೆ.ವಾ. ಸೌರ ವಿದ್ಯುತ್ ಉತ್ಪಾಾದನಾ ಘಟಕಗಳಿಂದ ಒಟ್ಟು ಹತ್ತು ಸಾವಿರ ಮೆ.ವಾ ವಿದ್ಯುತ್ ಉತ್ಪಾಾದಿಸಿ ಗ್ರಾಾಮೀಣ ವಿದ್ಯುತ್ ಜಾಲಕ್ಕೆೆ ಸೇರಿಸುವ ವಿಕೇಂದ್ರೀಕೃತ ವ್ಯವಸ್ಥೆೆಯನ್ನು ಅನುಷ್ಠಾಾನಗೊಳಿಸಲಿದೆ. ಇದರಿಂದ ದೇಶದಲ್ಲಿ ಈಗ ಕಾರ್ಯನಿರ್ವಹಿಸುತ್ತಿಿರುವ ಮೂರು ಕೋಟಿ ನೀರಾವರಿ ಪಂಪ್‌ಸೆಟ್‌ಗಳ ಪೈಕಿ ಮೂರನೇ ಒಂದು ಭಾಗದಷ್ಟನ್ನು ಮುಂದಿನ ಒಂದು ವರ್ಷದಲ್ಲಿ ಸೌರ ಪಂಪ್‌ಗಳನ್ನಾಾಗಿ ಬದಲಾಯಿಸುವ ತ್ವರಿತ ಗುರಿ ಹೊಂದಿರುವ ಸರಕಾರ, ರೈತರು ಸೋಲಾರ್ ಪಂಪ್‌ಗಳನ್ನು ಕೊಳ್ಳಲು ಉತ್ತೇಜನ ನೀಡಲು ಶೇ 60ರಷ್ಟು ಸಬ್ಸಿಿಡಿ ನೀಡಲು ಮುಂದಾಗಿದೆ. ಶೇ.30 ರಷ್ಟನ್ನು ಬ್ಯಾಾಂಕ್‌ಗಳು ಸಾಲದ ರೂಪದಲ್ಲಿ ಭರಿಸಲಿವೆ. ರೈತ ಖರ್ಚು ಮಾಡಬೇಕಾದದ್ದು ಶೇ 10 ಮಾತ್ರ. ಸದಾ ಕಷ್ಟ-ಕಾರ್ಪಣ್ಯಗಳನ್ನೇ ಹೊದ್ದು ಮಲಗುವ ರೈತರಿಗೆ ನೆರವಾಗುವುದು ಸರಿ ಮತ್ತು ಸದ್ಯದ ತುರ್ತುಗಳಲ್ಲೊೊಂದು. ಆದರೆ ಈ ತ್ವರಿತ ಬದಲಾವಣೆ ಈಗಾಗಲೇ ಬರಿದಾಗುತ್ತಿಿರುವ ಅಂತರ್ಜಲ ಮೂಲಗಳ ಮೇಲೆ ತೀವ್ರಒತ್ತಡ ಹಾಕಲಿದೆೆ.

ಕೇಂದ್ರದ ಯೋಜನೆಯಿಂದ ರೈತನಿಗೆ ಬಾವಿಯಿಂದ ನೀರೆತ್ತಲು ಸೌರ ವಿದ್ಯುತ್ ದೊರೆತು, ಆದಾಯ ಹೆಚ್ಚಿಿ, ಪರಿಸ್ಥಿಿತಿ ಸುಧಾರಿಸುವುದಂತೂ ನಿಜ. ಈಗಿನ ಪರಿಸ್ಥಿಿತಿಯಲ್ಲಿ ರೈತನಿಗೆ ದಿನಕ್ಕೆೆ ಆರು ಗಂಟೆ ಮಾತ್ರ ವಿದ್ಯುತ್ ದೊರೆಯುತ್ತಿಿದೆ. ಅದೂ ರಾತ್ರಿಿ ಹೊತ್ತಿಿನಲ್ಲಾಾದ್ದರಿಂದ, ರಾತ್ರಿಿಯೆಲ್ಲಾಾ ನಿದ್ದೆೆಗೆಟ್ಟು, ಬೆಳೆಗೆ ನೀರುಣಿಸಬೇಕಾದ ದುಸ್ಥಿಿತಿ ಇದೆ. ಹಗಲಿನಲ್ಲೇ ದೊರೆಯುವ ಸೌರ ವಿದ್ಯುತ್ತನ್ನು ಬಳಸಿ, ನೀರು ಹಾಯಿಸುವುದರಿಂದ ಸಾಂಪ್ರದಾಯಿಕ ವಿದ್ಯುತ್ ಸರಬರಾಜು ವ್ಯವಸ್ಥೆೆಯ ಮೇಲಿನ ಒತ್ತಡವೂ ಕಡಿಮೆಯಾಗುತ್ತದೆ. ರೈತರಿಗೆ ಉಚಿತ ವಿದ್ಯುತ್ ನೀಡಲು ರಾಜ್ಯ ಸರಕಾರಗಳು ಪ್ರತೀ ವರ್ಷ ಸುಮಾರು 50 ಸಾವಿರ ಕೋಟಿ ರುಪಾಯಿಗಳನ್ನು ಸಬ್ಸಿಿಡಿಯ ರೂಪದಲ್ಲಿ ವ್ಯಯಿಸುವುದೂ ನಿಲ್ಲುತ್ತದೆ. ಕೇಂದ್ರದ ಯೋಜನೆ ಸಾಕಾರಗೊಂಡರೆ ಸರಕಾರ ಮತ್ತು ರೈತ ಇಬ್ಬರಿಗೂ ಬಂಪರ್ ಲಾಟರಿ ಹೊಡೆದಂತಾಗುತ್ತದೆ.

ತಜ್ಞರ ಪ್ರಕಾರ ಈ ಯೋಜನೆ ಸುಸ್ಥಿಿರವಲ್ಲ ಮತ್ತು ಭವಿಷ್ಯದಲ್ಲಿ ಇದರಿಂದ ಅನಾನುಕೂಲಗಳು ಹೆಚ್ಚು. ಭಾರತ ಈಗಾಗಲೇ ವಿಶ್ವದ ಒಟ್ಟು ಅಂತರ್ಜಲದ ಕಾಲು ಭಾಗವನ್ನು ಬಳಸುತ್ತಿಿದೆ. ಇದು ಚೈನಾ ಮತ್ತು ಆಮೆರಿಕದ ಒಟ್ಟು ಬಳಕೆಗಿಂತ ಹೆಚ್ಚು. ಭಾರತದಲ್ಲಿ ಲಭ್ಯವಿರುವ ಅಂತರ್ಜಲದ ಶೇ. 90 ರಷ್ಟನ್ನು ದೇಶದ ಶೇ.70 ಭಾಗವನ್ನು ನೀರಾವರಿಗೊಳಿಸಲು ಬಳಸಲಾಗುತ್ತಿಿದೆ. ಇದರಿಂದ ಆಹಾರ ಇಳುವರಿ ಪ್ರಮಾಣ ಅಧಿಕಗೊಂಡಿದೆಯಾದರೂ ಅಂತರ್ಜಲ ಪಾತ್ರೆೆ ದಿನೇ ದಿನೇ ಬರಿದಾಗುತ್ತಿಿದೆ. ಇನ್ನು ಹತ್ತು ವರ್ಷಗಳಲ್ಲಿ ಭಾರತದ ಶೇ.60 ರಷ್ಟು ಜಲಕುಹರ (ಆ್ಯಕ್ವಿಿಫರ್) ಗಳು ಸಂಪೂರ್ಣ ಬರಿದಾಗುತ್ತವೆ ಎಂದು ವಿಶ್ವಬ್ಯಾಾಂಕ್ ವರದಿ ನೀಡಿದೆ. ಈಗ ಬೃಹತ್ ಪ್ರಮಾಣದ ಸೋಲಾರ್ ಪಂಪ್‌ಗಳನ್ನು ಸ್ಥಾಾಪಿಸಿ, ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಿಸಿದರೆ, ಅಂತರ್ಜಲ ಇನ್ನೂ ತೀವ್ರಗತಿಯಲ್ಲಿ ಬರಿದಾಗಿ ಮುಂದಿನ ದಿನಗಳ ನೀರಾವರಿ ವ್ಯವಸಾಯ ದುಸ್ತರವಾಗಲಿದೆ. ಸುಮಾರು ಮೂರು ಸಾವಿರ ತಾಲ್ಲೂಕುಗಳಲ್ಲಿ ಅಂತರ್ಜಲ ಮುಕ್ಕಾಾಲು ಭಾಗ ಖಾಲಿಯಾಗಿ ನೀರಿನಲ್ಲಿ ಆರ್ಸೆನಿಕ್, ಫ್ಲೋೋರೈಡ್ ಮತ್ತು ಲವಣಾಂಶ ಹೇರಳವಾಗಿ ಬಳಸುವವರ ಆರೋಗ್ಯ ಹದಗೆಟ್ಟಿಿದೆ.

ರೈತರ ಹಾಗೂ ಪರಿಸರದ ಬಗ್ಗೆೆ ನಿಜವಾದ ಕಾಳಜಿ ಇದ್ದರೆ ಸರಕಾರ ಈ ಬೃಹತ್ ಯೋಜನೆಯಲ್ಲಿ ಪರಿಣಾಮಕಾರೀ ನೀರಾವರಿ ವ್ಯವಸ್ಥೆೆಯನ್ನು ಜಾರಿಗೆ ತಂದು ಅಂತರ್ಜಲ ಪೋಲಾಗದಂತೆ ನೋಡಿಕೊಳ್ಳುವ ವ್ಯವಸ್ಥೆೆ ಕಲ್ಪಿಿಸಲೇಬೇಕು. ಸದರೀ ಯೋಜನೆಯನ್ನು ಅತೀ ಸಣ್ಣ ಮತ್ತು ತುಂಡು ಹಿಡುವಳಿದಾರರಿಗೆ ಮಾತ್ರ ಕಲ್ಪಿಿಸಿ, ಬೃಹತ್ ಭೂಮಾಲೀಕರನ್ನು ಇದರ ವ್ಯಾಾಪ್ತಿಿಯಿಂದ ಹೊರಗಿಡಬೇಕು. ಕಡಿಮೆ ನೀರನ್ನು ಬೇಡುವ ಬೆಳೆಗಳಿಗೆ ಮಾತ್ರ ಈ ಯೋಜನೆಯನ್ನು ವಿಸ್ತರಿಸಬೇಕು. ನೀರಾವರಿ ವ್ಯವಸ್ಥೆೆಯನ್ನು ಸುಧಾರಿಸುವ ಮತ್ತು ಅಂತರ್ಜಲ ನಿರ್ವಹಣೆಯನ್ನು ಸರಿಯಾಗಿ ಮಾಡುವ ರಾಜ್ಯಗಳನ್ನಷ್ಟೇ ಯೋಜನೆಯ ವ್ಯಾಾಪ್ತಿಿಗೆತರಬೇಕು.

ಸ್ವತಂತ್ರ ಸೋಲಾರ್ ಪಂಪ್‌ಗಳನ್ನು ಸಾಮಾನ್ಯ ವಿದ್ಯುತ್ ಸಂಪರ್ಕ ಹೊಂದಿರದ ಮತ್ತು ಅಂತರ್ಜಲ ಪ್ರಮಾಣ ಅಧಿಕವಾಗಿರುವ ಗ್ರಾಾಮೀಣ ಪ್ರದೇಶಗಳಲ್ಲೇ ಸ್ಥಾಾಪಿಸಬೇಕು. ಸ್ವತಂತ್ರ ಸೋಲಾರ್ ಪಂಪ್‌ಗಳು ಉತ್ಪಾಾದಿಸುವ ವಿದ್ಯುತ್ತನ್ನು ಗ್ರಾಾಮೀಣ ವಿದ್ಯುದೀಕರಣಕ್ಕೆೆ ಬಳಸಿಕೊಂಡು ಸಮುದಾಯಉತ್ಪಾಾದನೆ ಮತ್ತು ಬಳಕೆ ಮಾದರಿಯನ್ನು ರೂಪಿಸಿ ಅಂತರ್ಜಲ ಬಳಕೆಯ ನಿಯಂತ್ರಣ ಮಾಡಿ ದುರ್ಬಳಕೆಯನ್ನು ತಡೆಯಬೇಕು. ಸಾರ್ವಜನಿಕ ಗ್ರಿಿಡ್‌ಗೆ ವಿದ್ಯುತ್ ನೀಡುವ ರೈತರಿಗೆ ಪ್ರೋೋತ್ಸಾಾಹಧನ ನೀಡಿ ಸೌರ ವಿದ್ಯುತ್‌ನ ಸಮರ್ಪಕ ಬಳಕೆಯ ತರಬೇತಿ ನೀಡಬೇಕು. ರೈತರ ಸಾಲ ತೀರಿದ ನಂತರ ಅವರು ಬಳಸುವ ವಿದ್ಯುತ್ತಿಿನ ಮೇಲೆ ಕ್ರಮೇಣ ದರ ನಿಗದಿ ಮಾಡಿ ಅಂತರ್ಜಲ ಶೋಷಣೆಯನ್ನು ತಡೆಯಬೇಕು. ಸೂರ್ಯನ ಅಕ್ಷಯ ಶಕ್ತಿಿಯನ್ನು ಬಳಸಿಕೊಳ್ಳುವ ಯೋಜನೆಯ ಅನುಷ್ಠಾಾನ ಪರಿಸರ ಸ್ನೇಹಿಯಾಗಿರಬೇಕು. ಆಗ ಕೇಂದ್ರದ ಕುಸುಮ ಎಲ್ಲ ರಾಜ್ಯಗಳಿಗೂ ತನ್ನ ಸುಗಂಧ ಪಸರಿಸಬಲ್ಲದು.