Friday, 20th September 2024

ಆರ್‌ಸಿಇಪಿ ಆತಂಕ ದೂರವಿಡಿ

ಪ್ರದೀಪ್ ಭಾರದ್ವಾಜ್, ಉಪನ್ಯಾಸಕರು
ಸಂಯೋಜಕರು, ಸ್ವದೇಶಿ ಜಾಗರಣ ಮಂಚ್, ಕರ್ನಾಟಕ

ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದ ಬಗ್ಗೆೆ ಪ್ರಾಾಥಮಿಕ ಮಾಹಿತಿಗಳು ಮತ್ತು ಭಾರತ ಸರಕಾರವು ಅದರ ಭಾಗವಾಗುವುದು ಹಾಗೆಯೇ ಇದರಲ್ಲಿರುವ ಯಾವ ರೀತಿಯಲ್ಲಿ ಅನುಕೂಲಗಳಿವೆಯೇ ಎಂಬುದರ ಬಗ್ಗೆೆ ವಿಶೇಷ ಲೇಖನ.

ಮುಕ್ತ ವ್ಯಾಾಪಾರದಿಂದ ಪ್ರಬಲ ಅರ್ಥಿಕತೆಗಳು ಲಾಭಗಳಿಸುವುದು ನಿಶ್ಚಿಿತ. ಭಾರತವು ಒಪ್ಪಂದದ ಭಾಗವಾಗಬೇಕೆ ಎಂಬುದರಲ್ಲಿ ಆಯ್ಕೆೆಗಳಿಲ್ಲ. ಜಾಗತೀಕರಣದ ಇಂದಿನ ವೇಗದಲ್ಲಿ ಒಪ್ಪಂದ ಹೊರಗಿದ್ದರೂ ನಷ್ಟವೇ. ಇತ್ತೀಚಿನ ದಿನಗಳವರೆಗೆ ಭಾರತವನ್ನು ಏಷ್ಯಾಾ ಪೆಸಿಫಿಕ್ ಭಾಗವಾಗಿ ಸ್ವೀಕರಿಸಿರಲೇ ಇಲ್ಲ. ಆದರೆ, ಇಂದು ನಮ್ಮ ದೇಶದ ನಾಯಕತ್ವ ಭಾರತವನ್ನು ಏಷ್ಯಾಾ ಪೆಸಿಫಿಕ್‌ನ ಪ್ರಬಲ ರಾಷ್ಟ್ರವಾಗಿ ರೂಪುಗೊಳಿಸಿದೆ. ಇಂತಹ ಅವಕಾಶವನ್ನು ಭಾರತವು ಸುಲಭವಾಗಿ ಕೈಬಿಡಲು ಆಗುವುದಿಲ್ಲ.

ಆರ್‌ಸಿಇಪಿ ಸದ್ದು ಮಾಡುತ್ತಿಿದೆ. ಸನ್ಮಾಾನ್ಯ ಸಿದ್ದರಾಮಯ್ಯನವರು ಭಾರತ ಸರಕಾರ ಆರ್‌ಸಿಇಪಿ ಕರಡಿಗೆ ಸಹಿ ಮಾಡಿದರೆ ಬೀದಿಗಿಳಿದು ಹೋರಾಟ ನಡೆಸುವುದಾಗಿ ಘೋಷಿಸಿದರು. ಅಸಲಿಗೆ ಸಭೆಯಲ್ಲಿದ್ದವರಲ್ಲಿ ಮುಕ್ಕಾಾಲುವಾಸಿ ಜನರಿಗೆ ಆರ್‌ಸಿಇಪಿ ಎಂದರೇನೆಂದು ತಿಳಿಯದೆ ಮುಖ ಇಳೆಬಿಟ್ಟುಕೊಂಡು ಕೂತಿದ್ದರು. ಭಾಷಣ ಮುಗಿದ ನಂತರ ಗಟ್ಟಿಿಯಾಗಿ ಚಪ್ಪಾಾಳೆ ತಟ್ಟಿಿ ಕೃತಾರ್ಥರಾದರು. ಸಹಿ ಮಾಡಿದ ನಂತರ ಬೀದಿಗಿಳಿದು ಹೋರಾಟ ನಡೆಸಿದರೆ ಪ್ರಯೋಜನವೇನೂ? ಮತ್ತೊೊಂದೆಡೆ ಸಣ್ಣಪುಟ್ಟ ವಿಚಾರಗಳಿಗೆ ತಮ್ಮ ವಲಯದ ವಿದ್ಯಾಾರ್ಥಿ ವೃಂದವನ್ನು ಟೋಲ್‌ಗೇಟ್ ಬಳಿಯ ಭಿಕ್ಷುಕರ ರೀತಿ ಚಪ್ಪಾಾಳೆ ಬಡಿಯುತ್ತಾಾ ಪ್ರತಿಭಟಿಸುವುದಕ್ಕೆೆ ಪ್ರಚೋದಿಸುವ ಕಮ್ಯುನಿಸ್‌ಟ್‌ ಕಾಮ್ರೇಡ್‌ಗಳು ಆರ್‌ಸಿಇಪಿ ವಿಚಾರದಲ್ಲೇಕೋ ದಿವ್ಯ ಮೌನ ತಾಳಿದ್ದಾಾರೆ. ಚುನಾವಣೆಯಲ್ಲಿ ಗೆದ್ದ ಸೀಟ್‌ಗಳಿಗೆ ಬರವಾದರೆ ವೈಚಾರಿಕತೆಗೆ ಬರವೆ.

ಏನಿದು ಆರ್‌ಸಿಇಪಿ?* ್ಕಛಿಜಜಿಟ್ಞ ಇಟಞ್ಟಛಿಛ್ಞಿಿಜಿಛಿ ಉ್ಚಟ್ಞಟಞಜ್ಚಿಿ ್ಟಠ್ಞಿಿಛ್ಟಿಿಜಿ ಅಥವಾ ಪ್ರಾಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ ಹತ್ತು ಆಸಿಯಾನ್* (ಅಟ್ಚಜಿಠಿಜಿಟ್ಞ ಟ್ಛ ಖಟ್ಠಠಿ ಉಠಿ ಅಜ್ಞಿ ಘೆಠಿಜಿಟ್ಞ) ಮತ್ತು ಆರು ವ್ಯಾಾಪಾರ ಪಾಲುದಾರ ರಾಷ್ಟ್ರಗಳಾದ ಚೀನಾ, ಜಪಾನ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಮುಕ್ತ ವ್ಯಾಾಪಾರ ಒಪ್ಪಂದ. ಒಪ್ಪಂದವು ಇನ್ನು ಚಾಲ್ತಿಿಯಲ್ಲಿಲ್ಲ. ಆರ್‌ಸಿಇಪಿ ಮಾತುಕತೆಗಳು 2012ರಲ್ಲಿ ಕಾಂಬೋಡಿಯಾದಲ್ಲಿ ನಡೆದ ಆಸಿಯಾನ್ ದೇಶದ ಸದಸ್ಯ ದೇಶಗಳ ವಾಣಿಜ್ಯ ಮಂತ್ರಿಿಗಳ ಸಭೆಯಲ್ಲಿ ಮೊದಲು ಪ್ರಸ್ತಾಾಪಿತವಾಯಿತು. ಇಲ್ಲಿಯವರೆಗೂ 27 ಸುತ್ತಿಿನ ಮಾತುಕತೆಗಳು ನಡೆದಿವೆ. ಪ್ರಾಾದೇಶಿಕ ಆರ್ಥಿಕ ಪಾಲುದಾರಿಕೆ ದೇಶಗಳ ಒಟ್ಟು ಜನಸಂಖ್ಯೆೆ 340 ಕೋಟಿ ಮತ್ತು ಜಿಡಿಪಿಯು 49.5 ಟ್ರಿಿಲಿಯನ್ ಯು.ಎಸ್.ಡಾಲರ್‌ಗಳು (3465*10*9 ಕೋಟಿ ರುಪಾಯಿಗಳು) ಈ ಮೊತ್ತವು ಪ್ರಪಂಚದ ಒಟ್ಟು ಜಿಡಿಪಿಯ ಶೇ.40ರಷ್ಟು. ಇಷ್ಟು ದೊಡ್ಡ ಮೊತ್ತದ ಜಿಡಿಪಿ ಮತ್ತು ಜನಸಂಖ್ಯೆೆಯ ದೃಷ್ಟಿಿಯಿಂದ ಗಮನಿಸಿದರೆ ಆರ್‌ಸಿಇಪಿ ಮಹತ್ವದ ಮುಕ್ತ ವ್ಯಾಾಪಾರದ ಒಪ್ಪಂದ ಇದ್ದಾಾಗಿದೆ.

ಭಾರತದ ಆತಂಕಗಳು:
2019 ಸೆಪ್ಟೆೆಂಬರ್ ತಿಂಗಳಲ್ಲಿ ಬ್ಯಾಾಂಕಾಕ್ ನಲ್ಲಿ ನಡೆದ 7ನೇ ಆಸಿಯಾನ್ ಪಾಲುದಾರ ರಾಷ್ಟ್ರಗಳ ಮಂತ್ರಿಿಸ್ತರದ ಸಭೆಯ ಬದಲಾಗುತ್ತಿಿರುವ ಜಾಗತಿಕ ವಾಣಿಜ್ಯ ಸಂಕೀರ್ಣದ ಹಿನ್ನೆೆಲೆಯಲ್ಲಿ ಆರ್‌ಸಿಇಪಿ ಮಾತುಕತೆಗಳು ಬೇಗನೆ ಮುಗಿದು ತ್ವರಿತವಾಗಿ ಎಲ್ಲಾಾ ಸದಸ್ಯ ರಾಷ್ಟ್ರಗಳು ಅಂತಿಮ ಒಪ್ಪಂದಕ್ಕೆೆ ಸಹಿ ಮಾಡಬೇಕೆಂದು ತೀರ್ಮಾನಕ್ಕೆೆ ಬಂದವು. ಮಂತ್ರಿಿಸ್ತರದ ಸಭೆಯು ಇಂದಿನ ಜಾಗತಿಕ ಪರಿಸ್ಥಿಿತಿಯಲ್ಲಿ ಅರ್ಥಿಕ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಬಹಳ ಅವಶ್ಯವಿರುವ ಸ್ಥಿಿರತೆ ಮತ್ತು ಹೂಡಿಕೆಯು ಹೆಚ್ಚಾಾಗುವುದೆಂದು ಅಭಿಪ್ರಾಾಯ ವ್ಯಕ್ತಪಡಿಸಿತು. ಒಪ್ಪಂದದಲ್ಲಿರುವ ಎಲ್ಲಾಾ ವಿವಾದಿತ ಅಂಶಗಳು ವರ್ಷಾಂತ್ಯದೊಳಗೆ ನಿವಾರಣೆಯಾಗಿ 2019ರ ನವೆಂಬರ್ 4ರೊಳಗೆ ಅಂತಿಮ ಒಪ್ಪಂದಕ್ಕೆೆ ಎಲ್ಲಾಾ ಸದಸ್ಯ ರಾಷ್ಟ್ರಗಳು ಸಹಿ ಹಾಕಬೇಕೆಂಬ ಅಭಿಪ್ರಾಾಯ ವ್ಯಕ್ತವಾಯಿತು.

ಒಪ್ಪಂದದ ಭಾಗವಾಗಿರುವ ಭಾರತಕ್ಕೆೆ ಮೂರು ಕ್ಷೇತ್ರದಲ್ಲಿ ಭಾರಿ ಆತಂಕವಿದೆ. ಮೊದಲನೆಯದಾಗಿ ಉತ್ಪಾಾದನಾ ಕ್ಷೇತ್ರದಲ್ಲಿ, ಸದಸ್ಯ ರಾಷ್ಟ್ರಗಳಾದ ಚೀನಾ, ವಿಯೆಟ್ನಾಾಂ, ತೈವಾನ್ ಮತ್ತು ದಕ್ಷಿಣ ಕೊರಿಯಾಗಳಿಂದ ಪೈಪೋಟಿ ಎದುರಾಗುವ ನಿರೀಕ್ಷೆಯಿದೆ. ಉತ್ಪಾಾದನಾ ಕ್ಷೇತ್ರದಲ್ಲಿ ಭಾರತವು ಚೀನಾದೊಂದಿಗೆ 53 ಶತಕೋಟಿ ಡಾಲರ್ ಮತ್ತು ಆಸಿಯಾನ್ ರಾಷ್ಟ್ರಗಳು ಚೀನಾದ ಜತೆ ಸೇರಿದರೆ ಸರಿ ಸುಮಾರು 100 ಶತಕೋಟಿ ಡಾಲರ್‌ಗಳ ವ್ಯಾಾಪಾರಿ ಕೊರತೆಯನ್ನು ಎದುರಿಸುತ್ತಿಿದೆ. ಆರ್‌ಸಿಇಪಿನ ಸುಂಕ ಕಡಿತ ಜಾರಿಗೊಂಡದ್ದೆೆ ಆದಲ್ಲಿ ಭಾರತದ ಉತ್ಪಾಾದನಾ ಕ್ಷೇತ್ರ ಮತ್ತಷ್ಟು ಪಾತಾಳಕ್ಕೆೆ ಕುಸಿಯಲಿದೆ. ಚೀನಾ ಮತ್ತಿಿತರ ದೇಶಗಳು ಭಾರತದಲ್ಲಿ ಆಗ್ಗದ ದರದ ಮಾಲುಗಳನ್ನು ಹೇರುವುದರಿಂದ ದೇಶದ ಉತ್ಪಾಾದನಾ ಕ್ಷೇತ್ರವು ಮತ್ತಷ್ಟು ಆತಂಕ ಎದುರಿಸಬೇಕಾಗಬಹುದು.* ಛಿ ಐ್ಞ ಐ್ಞಜಿ ಮತ್ತು ಕೇಂದ್ರ ಸರಕಾರದ ಇನ್ನಿಿತರ ಕಾರ್ಯ ಯೋಜನೆಗಳು ಉತ್ಪಾಾದನಾ ಕ್ಷೇತ್ರವನ್ನು ನಿರೀಕ್ಷಿತ ಮಟ್ಟಕ್ಕೆೆ ಮೇಲೆತ್ತಲು ಆಗಿಲ್ಲ.

ಎರಡನೇ ಕ್ಷೇತ್ರವಾದ ಹೈನುಗಾರಿಕೆ ಭಾರಿ ಆತಂಕಗಳು ಎದುರಾಗಲಿವೆ. ಭಾರತ ದೇಶದಲ್ಲಿ ಇಂದು ಸರಿ ಸುಮಾರು 6 ಕೋಟಿ ಕುಟುಂಬಗಳು (ದೇಶದ ಜನಸಂಖ್ಯೆೆಯ ಶೇ.22 ರಷ್ಟು) ಹೈನೋದ್ಯಮದ ಫಲಾನುಭವಿಗಳು. ಭಾರತ ಪ್ರಪಂಚದಲ್ಲಿ ಅತ್ಯಧಿಕ ಹಾಲು ಉತ್ಪಾಾದನೆ ಮಾಡುವ ದೇಶ. ದೇಶದ ಇಷ್ಟು ದೊಡ್ಡ ಜನಸಂಖ್ಯೆೆ ಹೈನೋದ್ಯಮದಲ್ಲಿ ತೊಡಗಿಕೊಳ್ಳಲು ಕಾರಣವೆಂದರೆ ಹಾಲಿನ ಮಾರುಕಟ್ಟೆೆ ಬೆಲೆಯ ಶೇ.61 ರಷ್ಟು ಫಲಾನುಭವಿಗಳಿಗೆ ನೇರವಾಗಿ ಸಲ್ಲಿಕೆಯಾಗುತ್ತದೆ. ಹಾಗಾಗಿ ಹೈನೋದ್ಯಮವು ಅತ್ಯಂತ ಲಾಭದಾಯಕ ಮತ್ತು ಯಶಸ್ವಿಿ ಉದ್ಯಮ. ಆದರೆ, ನ್ಯೂಜಿಲೆಂಡ್‌ನ ಕತೆ ನೋಡಿ, ಅದು ತನ್ನ ದೇಶದ ಎಂಟು ಪಟ್ಟು ಹೆಚ್ಚು ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ತಯಾರು ಮಾಡುತ್ತದೆ. ಆರ್‌ಸಿಇಪಿ ಒಪ್ಪಂದದಂತೆ ಭಾರತವು ಹಾಲಿನ ಮಾರುಕಟ್ಟೆೆಯನ್ನು ಮುಕ್ತಗೊಳಿಸಿದಲ್ಲಿ ನ್ಯೂಜಿಲೆಂಡ್ ಹಾಗೂ ಅಸ್ಟ್ರೇಲಿಯಾದ ಅಗ್ಗದ ಹಾಲು ಮತ್ತು ಉತ್ಪನ್ನಗಳು ಭಾರತವನ್ನು ಹೈನೋದ್ಯಮವನ್ನು ಅಪೋಶಣ ತೆಗೆದುಕೊಳ್ಳಲು ಬಹಳು ಸಮಯ ಬೇಕಿಲ್ಲ.

ಮೂರನೆಯದಾಗಿ ಹೂಡಿಕೆ ಕ್ಷೇತ್ರ. ಭಾರತವು ಇಂದು ಅಸಿಯಾನ್ ಮತ್ತು ಹೊರತಾಗಿರುವ ರಾಷ್ಟ್ರಗಳ ಹೂಡಿಕೆಯ ಸ್ವರ್ಗ. ಭಾರತವು ಹೂಡಿಕೆದಾರರ ವ್ಯಾಾಜ್ಯಗಳನ್ನು ದೇಶದಲ್ಲೇ ಮೊದಲು ಪರಿಹರಿಸಬೇಕೆಂಬ ತಾತ್ವಿಿಕ ನಿಲುವನ್ನು ತಾಳಿದೆ. ಭಾರತದಲ್ಲಿ ಹೂಡಿಕೆ ಮಾಡುವವರಿಗೆ ಸರಕಾರವೇ ಪ್ರಾಾಥಮಿಕ ಕಕ್ಷಿದಾರ. ಹೂಡಿಕೆಗಳಿಗೆ ಸಂಬಂಧಪಟ್ಟ ವ್ಯಾಾಜ್ಯಗಳು ಅಂತಾರಾಷ್ಟ್ರೀಯ ನ್ಯಾಾಯಾಲಯಗಳಲ್ಲಿ ನಿರ್ಣಯವಾಗಬಹುದೆಂಬುದು, ಆರ್‌ಸಿಇಪಿ ಒಪ್ಪಂದದ ಒಂದು ಭಾಗ. ಹಾಗಾಗಿ ಹೂಡಿಕೆ ಮಾಡುವ ವಿದೇಶಿ ಕಂಪನಿಗಳು ಹಾಗೂ ಸಂಸ್ಥೆೆಗಳು ಹೂಡಿಕೆಯ ವ್ಯಾಾಜ್ಯಗಳಿಗೆ ಸಂಬಂಧಿಸಿದಂತೆ ಮಾತೃ ರಾಷ್ಟ್ರಗಳ ನ್ಯಾಾಯಾಲಯಗಳ ಮೆಟ್ಟಿಿಲೇರಿದರೆ ವ್ಯಾಾಜ್ಯದ ತ್ವರಿತ ವಿಲೇವಾರಿಗಳು ಸಾಧ್ಯವಿಲ್ಲ.

ಭಾರತವು ಇಲ್ಲಿಯವರೆಗೆ ಮಂತ್ರಿಿಸ್ತರದ ಮಾತುಕತೆಗಳು ಮತ್ತು ಶೃಂಗಸಭೆಗಳಲ್ಲಿ ತನ್ನ ಆತಂಕವನ್ನು ವ್ಯಕ್ತಪಡಿಸುತ್ತಲೇ ಬಂದಿದೆ. ಆಸಿಯಾನ್ ರಾಷ್ಟ್ರಗಳು ಭಾರತವನ್ನು ಒಪ್ಪಂದದ ಬೇಲಿಯಂದೇ ಪರಿಗಣಿಸಲ್ಪಟ್ಟಿಿವೆೆ. ಹಾಗಾದರೆ ಭಾರತವನ್ನು ಹೊರಗಿಟ್ಟು ಉಳಿದ 15 ರಾಷ್ಟ್ರಗಳ ಆರ್‌ಸಿಇಪಿಗೆ ಸಹಿ ಹಾಕಿ ಮುಂದುವರೆಯಲಿವೆಯೇ? ಸಾಧ್ಯವಿಲ್ಲ. ಪ್ರಪಂಚದ ಅತ್ಯಂತ ವೇಗವಾಗಿ ಬೆಳೆಯುತ್ತಿಿರುವ ಆಸಿಯಾನ್ ಮತ್ತು ಮಿತ್ರ ರಾಷ್ಟ್ರಗಳ ಪಟ್ಟಿಿಯಲ್ಲಿ ಮೂರನೇ ದೊಡ್ಡ ಅರ್ಥಿಕ ಶಕ್ತಿಿಯಾಗಿರುವ ಭಾರತವನ್ನು ಹೊರಗಿಟ್ಟು ಒಪ್ಪಂದಕ್ಕೆೆ ಸಹಿ ಹಾಕಲು ಇತರ ರಾಷ್ಟ್ರಗಳಿಗೂ ಸಾಧ್ಯವಿಲ್ಲ. ಆದ್ದರಿಂದ 2019ರ ನವೆಂಬರ್‌ನಲ್ಲಿ ಸಹಿ ಅಗಬೇಕಿದ್ದ ಒಪ್ಪಂದವನ್ನು ಮುಂದೂಡಬಹುದು (2016 ರಿಂದ ಒಪ್ಪಂದದ ಅಂತಿಮ ಸಹಿಯ ಗಡುವು ಹಲವು ಬಾರಿ ಮುಂದೂಡಲ್ಪಟ್ಟಿಿದೆ) ಒಪ್ಪಂದದಂತೆ ಭಾರತವು ಒಟ್ಟು ಉತ್ಪನ್ನಗಳ ಶೇ.28 ರಷ್ಟು ಮತ್ತು ಸರಕುಗಳ ಮೇಲೆ ಶೇ.35 ರಷ್ಟು ಸುಂಕ ಕಡಿತವನ್ನು ಮಾಡಬೇಕೆನ್ನುವುದು ಒಪ್ಪಲು ಸಾಧ್ಯವೇ ಇಲ್ಲ. ಭಾರತವು ಇಂದು ಪ್ರಪಂಚದ ಔಷಧ ಮಳಿಗೆಯೆಂದೇ ಪರಿಚಿತ. ಭಾರತದಲ್ಲಿ ತಯಾರಾದ ಅಗ್ಗದ ಜೀವ ರಕ್ಷಕ ಔಷಧಗಳು ಆಸಿಯಾನ್ ರಾಷ್ಟ್ರಗಳಲ್ಲಿ ಪ್ರಖ್ಯಾಾತಿಗಳಿಸಿದೆ ಮುಕ್ತ ವ್ಯಾಾಪಾರ ಒಪ್ಪಂದದಿಂದ ಭಾರತೀಯ ಔಷಧಗಳು ಆಸಿಯಾನ್ ರಾಷ್ಟ್ರಗಳಲ್ಲೇ ದುಬಾರಿಯಾಗಿ ತಮ್ಮ ದೇಶದ ಆರೋಗ್ಯ ಕ್ಷೇತ್ರವು ಹೊಡೆತ ತಿನ್ನುವುದೆಂಬ ಆತಂಕವು ಆ ರಾಷ್ಟ್ರಗಳಿಗಿವೆ. ಆರ್‌ಸಿಇಪಿನಲ್ಲಿ ಭಾರತವನ್ನು ಉಳಿಸಿಕೊಳ್ಳಲೆಂದೇ 2019ರ ನವೆಂಬರ್ ಬದಲು 2020 ಡಿಸೆಂಬರ್‌ವರೆಗೂ ಮಾತುಕತೆಗಳು ನಡೆದು ಎಲ್ಲವೂ ತಿಳಿಗೊಂಡ ಮೇಲೆ 2021ರಲ್ಲಿ ಅಂತಿಮ ಸಹಿಗೆ ಮೇಲ್ನೋೋಟಕ್ಕೆೆ ಒಪ್ಪಿಿಗೆ ನೀಡಿದೆ.

ಭಾರತದ ಇಂದಿನ ಅತ್ಯಂತ ಪ್ರಭಾವಶಾಲಿ ಮತ್ತು ಶಕ್ತಿಿಶಾಲಿ ಕ್ಷೇತ್ರವೆಂದರೆ ಸೇವಾಕ್ಷೇತ್ರ* (ಖಛ್ಟಿಿಜ್ಚಿಿಛಿ ಖಛ್ಚಿಿಠಿಟ್ಟ) ಈವರೆಗೆ ನಡೆದಿರುವ 27 ಸುತ್ತಿಿನ ಮಾತುಕತೆಗಳಲ್ಲಿ ಸೇವಾ ಕ್ಷೇತ್ರದ ಬಗ್ಗೆೆ ಹೆಚ್ಚು ಚರ್ಚೆಯಾಗಿಲ್ಲ. ಮಾತುಕತೆಗಳೆಲ್ಲವೂ ಹೂಡಿಕೆ, ಸರಕು ವಿನಿಮಯ ಮತ್ತು ಉತ್ಪಾಾದನೆ ಸುತ್ತಲೂ ಗಿರಕಿ ಹೊಡೆಯುತ್ತಿಿದೆ. ಭಾರತವೂ ಸೇವಾ ಕ್ಷೇತ್ರದ ಮುಕ್ತತೆಗೆ ಆರ್‌ಸಿಇಪಿನಲ್ಲಿ ಪಟ್ಟು ಹಿಡಿಯಬಹುದು. ಪ್ರಧಾನಮಂತ್ರಿಿಗಳು ಹೇಳುವಂತೆ ಸೇವಾ ಕ್ಷೇತ್ರವು ಅತ್ಯಂತ ಸೋವಿ ಮತ್ತು ವೇಗವಾಗಿ ಬೆಳೆಯುತ್ತಿಿರುವ ಕ್ಷೇತ್ರವಾಗಿದ್ದು ಅದರ ಮುಕ್ತತೆಯಿಂದ ಭಾರತಕ್ಕೆೆ ಹೆಚ್ಚಿಿನ ಲಾಭವಿದೆ. ಮುಕ್ತ ವ್ಯಾಾಪಾರದಿಂದ ಪ್ರಬಲ ಅರ್ಥಿಕತೆಗಳು ಲಾಭಗಳಿಸುವುದು ನಿಶ್ಚಿಿತ. ಭಾರತವು ಒಪ್ಪಂದದ ಭಾಗವಾಗಬೇಕೆ ಎಂಬುದರಲ್ಲಿ ಆಯ್ಕೆೆಗಳಿಲ್ಲ. ಜಾಗತೀಕರಣದ ಇಂದಿನ ವೇಗದಲ್ಲಿ ಒಪ್ಪಂದ ಹೊರಗಿದ್ದರೂ ನಷ್ಟವೇ. ಇತ್ತೀಚಿನ ದಿನಗಳವರೆಗೆ ಭಾರತವನ್ನು ಏಷ್ಯಾಾ ಪೆಸಿಫಿಕ್ ಭಾಗವಾಗಿ ಸ್ವೀಕರಿಸಿರಲೇ ಇಲ್ಲ. ಆದರೆ, ಇಂದು ನಮ್ಮ ದೇಶದ ನಾಯಕತ್ವ ಭಾರತವನ್ನು ಏಷ್ಯಾಾ ಪೆಸಿಫಿಕ್‌ನ ಪ್ರಬಲ ರಾಷ್ಟ್ರವಾಗಿ ರೂಪುಗೊಳಿಸಿದೆ. ಇಂತಹ ಅವಕಾಶವನ್ನು ಭಾರತವು ಸುಲಭವಾಗಿ ಕೈಬಿಡಲು ಆಗುವುದಿಲ್ಲ.

ಆದುದರಿಂದ ನಮ್ಮಲ್ಲಿನ ದೌರ್ಬಲ್ಯದ ಕ್ಷೇತ್ರಗಳಿಗೆ ಸರಿಯಾದ ಕವಚ ಹಾಕಿ ಶಕ್ತಿಿಯುತ ಕ್ಷೇತ್ರಗಳನ್ನು ಇನ್ನಷ್ಟು ವಿಸ್ತರಿಸುವ ದೃಷ್ಟಿಿಯಿಂದ ಈ ಒಪ್ಪಂದ ಮಹತ್ವದ್ದಾಾಗಿದೆ. ವಿಶ್ವದ ಅತ್ಯಂತ ಮುಕ್ತ ವ್ಯಾಾಪಾರ ಒಪಂದವಾಗಿರುವ ಆರ್‌ಸಿಇಪಿ ಒದಗಿಸಬಹುದಾದ ಮಾರುಕಟ್ಟೆೆಯನ್ನು ಕಳೆದುಕೊಳ್ಳಲು ಭಾರತ ತಯಾರಾಗಿಲ್ಲ. ಸೇವಾ ಕ್ಷೇತ್ರದ ಅವಕಾಶಗಳು ಹೈನುಗಾರಿಕೆ ಅಗ್ಗದ ಬೆಲೆ ಔಷಧಗಳು ಕೃಷಿ, ತೋಟಗಾರಿಕೆ ಹಾಗೂ ಉತ್ಪಾಾದನಾ ಕ್ಷೇತ್ರದಲ್ಲಿನ ಅತಂಕಗಳ ನಿವಾರಣೆಗೆ ಭಾರತದ ನಿರಂತರ ಮಾತುಕತೆಗಳು ಮುಂದುವರೆಯಬಹುದು. ಈ ಕ್ಷೇತ್ರಗಳಲ್ಲಿ ದೇಶದ ಮೇಲಾಗುವ ನಕಾರಾತ್ಮಕ ಬೆಳವಣಿಗೆಗಳನ್ನು ಮುನ್ನೆೆಲೆಗೆ ತಂದು ಮಾತುಕತೆಗಳನ್ನು ಮತ್ತಷ್ಟು ವಿಸ್ತರಿಸಬಹುದು. ಒಪ್ಪಂದ ಜಾರಿಯಾದಲ್ಲಿ ಕೆಲವು ಕ್ಷೇತ್ರಗಳು ಹಿನ್ನೆೆಡೆ ಅನುಭವಿಸುವುದು ನಿಶ್ಚಿಿತವಾದರೂ ಒಟ್ಟಾಾರೆಯಾಗಿ ಲಾಭವೇ ಆಗಲಿದೆ. ಆದ್ದರಿಂದ ತನ್ನ ಆತಂಕಗಳು ಸಂಪೂರ್ಣ ನಿವಾರಣೆಯಾಗುವವರೆಗೂ ಒಪ್ಪಂದಕ್ಕೆೆ ಅಂತಿಮ ಸಹಿ ಹಾಕುವುದನ್ನು ಭಾರತ ಮುಂದೂಡಬಹುದು.

ಅಮುಲ್‌ನ ಬೆಳವಣಿಗೆ ಮತ್ತು ಸಾಧನೆಯನ್ನು ಕಣ್ಣಾಾರೆ ಕಂಡಿರುವ ಮತ್ತು ಮೆಚ್ಚುಗೆ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ ಹೈನುಗಾರಿಕೆ ಭಾರತೀಯ ಜೀವನ ಪದ್ಧತಿಯಲ್ಲಿ ಯಾವ ಸ್ಥಾಾನವನ್ನು ಪಡೆದಿದೆ ಎಂಬುದನ್ನು ಅರಿತಿದ್ದಾಾರೆ. ವಾಣಿಜ್ಯ ಮಂತ್ರಿಿಗಳಾದ ಪಿಯೂಶ್ ಗೋಯೆಲ್ ಬಹಳ ದಿನಗಳಿಂದ ಸಣ್ಣ ಕೈಗಾರಿಕೆಗಳು ಮತ್ತು ಬೃಹತ್ ಕೈಗಾರಿಕೆಗಳ ಒಕ್ಕೂಟದ ಜತೆಗೆ ಒಡನಾಟ ಇಟ್ಟುಕೊಂಡವರು ಮತ್ತು ಒಕ್ಕೂಟಗಳ ಸಲಹೆಗಾರರು ಆಗಿದ್ದವರು. ಉತ್ಪಾಾದನಾ ಕ್ಷೇತ್ರದ ಒಳಹೊರಗನ್ನು ತಿಳಿದವರು. ಹೀಗಾಗಿ ಹೈನುಗಾರಿಕೆ ಮತ್ತು ಉತ್ಪಾಾದನಾ ಕ್ಷೇತ್ರವನ್ನು ಅಷ್ಟು ಸುಲಭವಾಗಿ ಒಪ್ಪಂದದ ಭಾಗವಾಗಿ ಬಿಟ್ಟುಕೊಡುವರೆಂಬ ನಂಬಿಕೆಯಿಲ್ಲ. ಮೇಲಾಗಿ ಭಾರತೀಯ ಜನತಾ ಪಕ್ಷದ ಪರಿವಾರ ಸಂಘಟನೆಗಳಾದ ಸ್ವದೇಶಿ ಜಾಗರಣ ಮಂಚ್, ಕಿಸಾನ್ ಸಂಘ, ಲಘು ಉದ್ಯೋೋಗ ಭಾರತಿ ಮತ್ತು ಭಾರತೀಯ ಮಜ್ದೂರ್ ಸಂಘಗಳು ಆರ್‌ಸಿಇಪಿನ ಯಥಾವತ್ತು ಪ್ರತಿಗೆ ಸಹಿ ಹಾಕದಿರಲು ಒತ್ತಡ ಹೇರುತ್ತಿಿದೆ. ಇವೆಲ್ಲವನ್ನು ಗಮನಿಸಿದರೆ ಆರ್‌ಸಿಇಪಿನಲ್ಲಿನ ಭಾರತದ ಆತಂಕಗಳು ಸಂಪೂರ್ಣ ನಿವಾರಣೆಯಾಗುವವರೆಗೂ ಭಾರತ ಅದರ ಭಾಗವಾಗುವುದು ಅನುಮಾನ. ಆದ್ದರಿಂದ ಸಿದ್ದರಾಮಯ್ಯನವರ ಹೋರಾಟ ಸದ್ಯಕ್ಕೆೆ ಮುಂದೂಡಲ್ಪಡಬಹುದು.