ವಿಶ್ಲೇಷಣೆ
ಸುರೇಂದ್ರ ಪೈ.ಭಟ್ಕಳ
ಹುಷಾರ್! ಹುಷಾರ್! ನಿಮ್ಮ ಟೂತ್ ಪೇ ನಲ್ಲಿ ಉಪ್ಪು ಇದೆಯೇ? ಎಂಬ ಜಾಹೀರಾತು ನಾವು ನೋಡಿದ್ದೇವೆ. ಹಾಗೆಯೇ ಮದ್ಯಪಾನ ಮತ್ತು ಧೂಮ ಪಾನ ಆರೋಗ್ಯಕ್ಕೆ ಹಾನಿಕರ ಹಾಗೂ ಕ್ಯಾನ್ಸರ್ಗೂ ಕಾರಕ ಎಂಬ ಜಾಹೀರಾತನ್ನು ನಾವು ನೋಡಿರುತ್ತೇವೆ. ಆದರೆ ನೀವು ದಿನನಿತ್ಯ ಬಳಸುವ ಮಸಾಲೆ ಯಲ್ಲಿ ಕ್ಯಾನ್ಸರ್ ಹರಡುವ ವಿಷಕಾರಿ ಕೀಟನಾಶವಿದೆಯೇ? ಎಂದು ಗ್ರಾಹಕರನ್ನು ಎಚ್ಚರಿಸುವ ಜಾಹೀರಾತುಗಳನ್ನು ಇದುವರೆಗೂ ನಾವು ನೋಡಿಲ್ಲ, ಕೇಳಿಲ್ಲ ಅಲ್ಲವೇ? ಈ ಮಾತನ್ನು ಪ್ರಸ್ತಾಪಿಸಲು ಬಹು ಮುಖ್ಯ ಕಾರಣವೊಂದಿದೆ.
ಕೋಟ್ಯಾಂತರ ಭಾರತೀಯರು ದಿನನಿತ್ಯದ ಅಡುಗೆಯಲ್ಲಿ ಬಳಸುವ ಭಾರತದ ಪ್ರತಿಷ್ಠಿತ ಎಂಡಿಹೆಚ್ ಹಾಗೂ ಎವರೆ ಮಸಾಲೆ ಕಂಪನಿಗಳ ಉತ್ಪನ್ನ ಗಳಲ್ಲಿ ಕ್ಯಾನ್ಸರ್ ಹರಡುವ ವಿಷಕಾರಿ ‘ಇಟಿಓ ಮತ್ತು ಸಾಲ್ಮೊನೆ’ ಕೀಟನಾಶಗಳಿರುವುದು ಸಾಬೀತಾದ ಬಳಿಕ ಜಾಗತಿಕ ಮಟ್ಟದಲ್ಲಿ ಹಲವು ರಾಷ್ಟ್ರಗಳು ಭಾರತೀಯ ಮಸಾಲೆ ಪದಾರ್ಥಗಳ ಮೇಲೆ ನಿಷೇಧ ಹೇರಿದ್ದಾರೆ.
ನಿಮಗಿದು ನಂಬಲಸಾಧ್ಯ ಎನಿಸುತ್ತಿದೆ ಅಲ್ಲವೇ? ನಿಮಗೆಲ್ಲ ನೆನಪಿರಬಹುದು ೨೦೧೫ ರಲ್ಲಿ ಮ್ಯಾಗಿ ನೂಡಲ್ಸ್ ನಲ್ಲಿ ಎಮ್ಎಸ್ಜಿ ಅಂಶ ಪತ್ತೆಯಾದ ಕಾರಣಕ್ಕಾಗಿ ಬ್ಯಾನ್ ಮಾಡಲಾಗಿತ್ತು. ಈಗ ಅಂದಕ್ಕಿಂತಲೂ ಅಘಾತಕಾರಿ ಅಂಶ ನಮ್ಮನ್ನೆಲ್ಲ ಬೆಚ್ಚಿಬೀಳಿಸಿದೆ. ಏಪ್ರಿಲ್ ೫, ೨೦೨೪ ರಂದು ಹಾಂಕಾಂಗ್ ಸರಕಾರದ ಆಹಾರ ಮತ್ತು ಪರಿಸರ ನೈರ್ಮಲ್ಯ ಇಲಾಖೆಯ ‘ಆಹಾರ ಸುರಕ್ಷತೆ ಕೇಂದ್ರ (ಸಿಎಫ್ ಎಸ್)’ ಒಂದು ಸುತ್ತೋಲೆಯನ್ನು ಹೊರಡಿಸಿದ್ದಾರೆ.
ಅದರಲ್ಲಿ ಭಾರತದ ಎಂಡಿಹೆಚ್ ಬ್ರಾಂಡ್ನ ಮೂರು ಮಸಾಲೆಗಳಾದ ಮದ್ರಾಸ್ ಕರಿ ಪೌಡರ್, ಸಾಂಬಾರ್ ಮಸಾಲಾ ಪೌಡರ್, ಮತ್ತು ಕರಿ ಪೌಡರ್ ಹಾಗೂ ಎವರೆ ಬ್ರಾಂಡ್ನ ಫಿಶ್ ಕರಿ ಮಸಾಲಾದಲ್ಲಿ ನಿಗದಿತ ಪ್ರಮಾಣಕ್ಕಿಂತ ಅಧಿಕ ಪ್ರಮಾಣದ ಎಥಿಲೀನ್ ಆಕ್ಸೈಡ್ ಕಂಡುಬಂದಿರುವ ಕಾರಣ ಇವುಗಳ ಮೇಲೆ ನೀಷೇಧ ಹೇರಿದೆ. ಎಥಿಲೀನ್ ಆಕ್ಸೈಡ್ ಬಳಕೆಯು ನೇರವಾಗಿ ಕ್ಯಾನ್ಸರ್ ಸಂಬಂಧಿತ ಕಾಯಿಲೆಯೊಂದಿಗೆ ಸಂಪರ್ಕ ಹೊಂದಿರುವು ದರಿಂದ ಬಹಳಷ್ಟು ದೇಶಗಳಲ್ಲಿ ಅದರ ಬಳಕೆಗೆ ನಿಷೇಧವಿದೆ. ಇದೇ ಕಾರಣಕ್ಕಾಗಿ ಸಿಂಗಾಪುರ್ ಫುಡ್ ಏಜೆನ್ಸಿ (ಎಸ್ಎಫ್ ಎ)ಯು ಸಹ ಎವರೆ ಫಿಶ್ ಕರಿ ಮಸಾಲಾವನ್ನು ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲೂ ಅನುಮತಿಸುವ ಮಿತಿಯನ್ನು ಮೀರಿದ ಮಟ್ಟದಲ್ಲಿ ಎಥಿಲೀನ್ ಆಕ್ಸೈಡ್ ಎಂಬ ಕೀಟನಾಶಕ ಪತ್ತೆಯಾಯಿತು.
ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ ಸಂಸ್ಥೆ ಎಥಿಲೀನ್ ಆಕ್ಸೈಡ್ ಅನ್ನು ಗ್ರೂಪ್ ೧ ಕಾರ್ಸಿನೋಜೆನ್ ಎಂದು ವರ್ಗೀಕರಿಸಿದೆ. ಆದ್ದರಿಂದ ಯೂರೋಪಿನ್ ದೇಶಗಳಲ್ಲಿ ಇದರ ಬಳಕೆಗೆ ಸಂಪೂರ್ಣ ನಿಷೇಧವಿದೆ. ಹಾಂಕಾಂಗ್ನಲ್ಲಿ ಆಹಾರ ಭದ್ರತಾ ನಿಯಮ ಪಾಲಿಸದಿದ್ದರೆ ೫೦ ಸಾವಿರ ಡಾಲರ್ ದಂಡ ಹಾಗೂ ೬ ತಿಂಗಳ ಸೆರೆಮನೆವಾಸವನ್ನು ವಿಧಿಸಲಾಗುತ್ತದೆ. ಸಿಂಗಾಪುರ್ ಫುಡ್ ಏಜೆನ್ಸಿ (ಎಸ್ಎಫ್ ಎ) ಯು ಎಥಿಲೀನ್ ಆಕ್ಸೈಡ್
ಒಂದು ಕೀಟನಾಶಕವಾಗಿದ್ದು ಅದು ಆಹಾರದಲ್ಲಿ ಬಳಸಲು ಅನುಮತಿಯಿಲ್ಲ.
ಸಿಂಗಾಪುರ್, ಹಾಂಗ್ ಕಾಂಗ್ ನಂತರ ಮಾಲ್ಡೀ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ನೇಪಾಳದ ಆಹಾರ ಸುರಕ್ಷತಾ ಏಜೆನ್ಸಿಗಳು ಈ ಬಗ್ಗೆ ತನಿಖೆ ನಡೆಸು
ತ್ತಿದ್ದು, ಅಲ್ಲೂ ನಿಷೇಧ ಹೇರುವ ಸಾಧ್ಯತೆಗಳು ಹೆಚ್ಚಾಗಿವೆ. ಕಳೆದ ಆರು ತಿಂಗಳಲ್ಲಿ ಎಂಡಿಹೆಚ್ ರಫ್ತು ಮಾಡಿದ ಎಂಡಿಹೆಚ್ ಮಸಾಲೆ ಉತ್ಪನ್ನಗಳಲ್ಲಿ ‘ಸಾಲ್ಮೊನೆ’ ಪತ್ತೆಯಾದ ಕಾರಣ ೩೧ ಪ್ರತಿಶತದಷ್ಟು ಯುನೈಟೆಡ್ ಸ್ಟೇಟ್ ನ ಕಸ್ಟಮ್ಸ ಅಧಿಕಾರಿಗಳು ನಿರಾಕರಿಸಿದ್ದಾರೆ. ಸಾಲ್ಮೊನೆ ಎಂಬುದು ಬ್ಯಾಕ್ಟೀರಿಯಾ ಆಗಿದ್ದು ಇದರಿಂದ ಪುಡ್ ಪಾಯಿಸನ್, ಜ್ವರ, ವಾಂತಿ, ಬೇಧಿ, ನರಮಂಡಲ ಸಂಬಂಽಸಿದ ಕಾಯಿಲೆಗಳು ಬರುವ ಸಾಧ್ಯತೆಗಳಿವೆ.
ಭಾರತೀಯ ಮಸಾಲೆ ಉತ್ಪನ್ನಗಳ ಸಾಗಾಣಿಕೆಯ ನಿರಾಕರಣೆ ದರವು ೨೦೨೨ ಕ್ಕಿಂತ ೨೦೨೩ರಲ್ಲಿ ಶೇ.೧೫ ಪ್ರತಿಶತ ದ್ವಿಗುಣವಾಗಿದೆ. ೨೦೨೦ ರಿಂದ ೨೦೨೩ ರ ಅವಧಿಯಲ್ಲಿ ಭಾರತದಿಂದ ಅಮೆರಿಕಕ್ಕೆ ಕಳುಹಿಸಲಾದ ೩೯೨೫ ಆಮದು ಸಾಗಾಣಿಕೆಯಲ್ಲಿ ಸಾಲ್ಮೊನೆ ಪತ್ತೆಯಾದ ಬಳಿಕ ೭೮೬ ಆಮದು ಸಾಗಾಣಿಕೆ ಯನ್ನು ಬಹಿಷ್ಕರಿಸಿದೆ. ಹಾಗೂ ಜನವರಿ ೨೦೨೨ ರಲ್ಲಿ ಎಂಡಿಹೆಚ್ನ ಉತ್ಪಾದನಾ ಘಟಕದ ತಪಾಸಣೆ ನಡೆಸಿದಾಗ ಘಟಕಗಳು ಸಾಕಷ್ಟು ನೈರ್ಮಲ್ಯ ಸೌಲಭ್ಯಗಳು ಮತ್ತು ಸಂಸ್ಕರಣಾ ವ್ಯವಸ್ಥೆ ಹೊಂದಿಲ್ಲ ಎಂದು ಎಫ್ ಡಿಎ ವರದಿ ಮಾಡಿದೆ. ಐರೋಪ್ಯ ಒಕ್ಕೂಟದ ಆಹಾರ ಸುರಕ್ಷತಾ ಅಧಿಕಾರಿಗಳು ಭಾರತಕ್ಕೆ ಸಂಬಂಧಿಸಿದ ೫೨೭ ಉತ್ಪನ್ನಗಳಲ್ಲಿ ಕ್ಯಾನ್ಸರ್ ಉಂಟುಮಾಡುವ ಎಥಿಲೀನ್ ಆಕ್ಸೈಡ್ ಇರುವಿಕೆಯನ್ನು
ಖಚಿತಪಡಿಸಿದ್ದಾರೆ.
ಇವುಗಳಲ್ಲಿ ಬೀಜಗಳು ಮತ್ತು ಎಳ್ಳು, ಎಣ್ಣೆ ಕಾಳುಗಳು, ಗಿಡಮೂಲಿಕೆಗಳು ಮತ್ತು ಮಸಾಲೆಗಳು, ಧಾನ್ಯಗಳು, ಐಸ್ ಕ್ರೀಮ, ಹಣ್ಣು, ತರಕಾರಿಗಳು, ಬೇಕರಿ
ಉತ್ಪನ್ನಗಳು ಸೇರಿದಂತೆ ೫೪ ಸಾವಯುವ ಉತ್ಪನ್ನಗಳು ಸೇರಿವೆ ಎಂದು ಯೂರೋಪಿನ ಪುಡ್ ಸೇಫ್ಟಿ ಇಲಾಖೆ ರಾಪಿಡ್ ಅಲರ್ಟ್ ಸಿಸ್ಟಮ್ -ರ್ ಪುಡ್ ಅಂಡ್ ಫೀಡ್ (ಆರ್ಎಎಸ್ಎಸ್ಎಫ್) ವರದಿ ಮಾಡಿದೆ. ಯುರೋಪಿಯನ್ ಯೂನಿಯನ್ ೧೯೯೧ ರಲ್ಲಿ ಎಥಿಲೀನ್ ಆಕ್ಸೈಡ್ ಬಳಕೆಯ ಮೇಲಿನ ನಿರ್ಬಂಧವನ್ನು ಹೇರಿದೆ. ೨೦೨೦- ೨೧ರಲ್ಲಿ ಭಾರತ ಸೇರಿದಂತೆ ಹಲವಾರು ದೇಶಗಳಿಂದ ಆಮದು ಮಾಡಿಕೊಳ್ಳಲಾದ ೪೬೮ ವಸ್ತುಗಳಲ್ಲಿ ಎಥಿಲೀನ್
ಆಕ್ಸೈಡ್ ಪ್ರಕರಣವನ್ನು ಅಧಿಕಾರಿಗಳು ವರದಿ ಮಾಡಿದ್ದಾ.
೨೦೨೦ ರಲ್ಲಿ ಭಾರತದಿಂದ ಬೆಲ್ಜಿಯಂಗೆ ರವಾನಿಸಲಾದ ಎಳ್ಳಿನಲ್ಲಿ ಮೊದಲ ಬಾರಿಗೆ ಈ ಕೀಟನಾಶಕದ ಅಂಶ ಪತ್ತೆಯಾದಾಗಲೇ ಯೂರೋಪ್ ರಾಷ್ಟ್ರಗಳು ಭಾರತದ ಆಹಾರ ಭದ್ರತೆ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದು ಎನ್ನಬಹುದು. ಅದಕ್ಕಾಗಿ ಯೂರೋಪ್ ರಾಷ್ಟ್ರಗಳು ಆರ್ಎಎಸ್ಎಸ್ಎಫ್ ಎಂಬ ಸಂಸ್ಥೆಯ ಮೂಲಕ ನಿಗಾ ವಹಿಸುತ್ತಿದೆ. ಇದರ ವರದಿಯಂತೆ ೨೦೧೯ ರಿಂದ ೨೦೨೪ ರ ತನಕ ಭಾರತದಿಂದ ಆಮದು ಮಾಡಲಾದ ಒಟ್ಟು ೯೮೫ ಉತ್ಪನ್ನಗಳನ್ನು ನಿಷೇಧಿಸಿದೆ.
ಎಂಡಿಹೆಚ್ ಮತ್ತು ಎವರೆ ಭಾರತದ ಸಾಂಬಾರ ಪದಾರ್ಥಗಳ ಮಾರುಕಟ್ಟೆಯಲ್ಲಿ ಅತಿದೊಡ್ಡ ಕಂಪನಿಯಾಗಿದ್ದು, ೨೦೨೨ ರಲ್ಲಿ ೧೦.೪೪ ಶತಕೋಟಿ ಮೌಲ್ಯದ ವಹಿವಾಟು ನಡೆಸಿದೆ. ೨೦೨೨-೨೩ರ ಅವಧಿಯಲ್ಲಿ ದಕ್ಷಿಣ ಏಷ್ಯಾ ರಾಷ್ಟ್ರವು ೪ ಶತಕೋಟಿ ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡಿದೆ. ಈ ಪ್ರಕರಣದ ಕುರಿತಂತೆ ಭಾರತೀಯ ಮಸಾಲೆ ಮಂಡಳಿಯ ಪ್ರಯೋಗಾಲಯಗಳಿಂದ ಅಗತ್ಯ ಅನುಮತಿಗಳು ಮತ್ತು ಅನುಮೋದನೆಯನ್ನು ಪಡೆದ
ನಂತರವೇ ರಫ್ತು ಮಾಡಲಾಗಿದೆ ಎಂದು ಎಂಡಿಹೆಚ್ ಅಧಿಕಾರಿಗಳು ಹೇಳಿದ್ದಾರೆ.
ಭಾರತೀಯ ಮಸಾಲೆ ಮಂಡಳಿಯು ಭಾರತ ಸರಕಾರದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯದ ಅಡಿಯಲ್ಲಿ ಬರುತ್ತದೆ. ಹಾಗೂ ನಾವು ಬಳಸುವ ಆಹಾರದಲ್ಲಿ ವಿಷಕಾರ ಕೀಟನಾಶಕಗಳ ಅಂಶಗಳ ಪ್ರಮಾಣದ ಬಗ್ಗೆ ತನಿಖೆ ಮಾಡುವ ಜವಾಬ್ದಾರಿ ಎಫ್ ಎಸ್ಎಸ್ಎಐ ಮೇಲಿದೆ. ಇದು ಭಾರತ ಸರಕಾರದ ಕುಟುಂಬ ಮತ್ತು ಆರೋಗ್ಯ ಕಲ್ಯಾಣ ಸಚಿವಾಲಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಎಲ್ಲ ನಿಷೇಧಗಳ ನಡುವೆಯೇ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ ಎಸ್ಎಸ್ ಎಐ) ಈ ಹಿಂದೆ ಅನುಮತಿಸಿದ್ದಕ್ಕಿಂತ ಈಗ ಹೆಚ್ಚಿನ ಪ್ರಮಾಣದ ಕೀಟನಾಶಕಗಳನ್ನು ಅನುಮತಿಸಿದೆ. ಗರಿಷ್ಠ ಶೇಷ ಮಿತಿ ಎಂದು ಕರೆಯಲ್ಪಡುವ ಎಮ್ಆರ್ಎಲ್ ಅನ್ನು ಪ್ರತಿ ಕಿಲೋಗ್ರಾಂಗೆ ೦.೦೧ ಮಿಲಿಗ್ರಾಂಗಳಿಂದ (ಞಜ/hಜ)
೦.೧ ಞಜ/hಜಗೆ ಹೆಚ್ಚಿಸಲಾಗಿದೆ. ಅಂದರೆ ನಿಗದಿತ ಪ್ರಮಾಣಕ್ಕಿಂತ ಹತ್ತರಷ್ಟು ಹೆಚ್ಚಳವಾಗಿದೆ.
ಇದರ ನಡುವೆ ಇವೆಲ್ಲವೂ ಬೇರೆ ದೇಶಗಳು ಭಾರತದ ಪ್ರಗತಿ ಹಾಗೂ ಕೇಂದ್ರ ಸರಕಾರದ ಸಾಧನೆಯನ್ನು ಸಹಿಸದೇ ಸುಳ್ಳು ಆರೋಪ ಮಾಡುತ್ತಿವೆ ಎಂಬ ವದಂತಿಗಳು ಬಂದವು. ಆದರೆ ಇದರ ಬಗ್ಗೆ ಎಫ್ಎಸ್ಎಸ್ಎಐ ಮೌನ ವಹಿಸಿತು. ಆದರೆ ಪುಡ್ ಹೈಜಿನ್ ಅಂಡ್ ಹೆಲ್ತ್ ಲ್ಯಾಬೋರೇಟರಿ ನಲ್ಲಿ ಭಾರತೀ ಯ ವ್ಯಕ್ತಿಯೊಬ್ಬ ಸತ್ಯಾಂಶ ತಿಳಿಯಲು ಫಿಶ್ ಕರಿಯ ಮಸಾಲೆಯನ್ನು ಪರೀಕ್ಷಿಸಿದಾಗ ಆ ವರದಿಯಲ್ಲಿ ಶೇಕಡಾ ೭೦ರಷ್ಟು ವಿಷಕಾರಿ ಕೀಟನಾಶಕ ಅಂಶ ಇರುವುದು ಪತ್ತೆಯಾಯಿತು.
ಇನ್ನೂ ರೈತರು ಬೆಳೆಯುವ ಬೆಳೆಯಲ್ಲಿ ವಿಷಕಾರಿ ಕೀಟನಾಶಕ ಇರುವುದಿಲ್ಲ, ಬದಲಾಗಿ ಫ್ಯಾಕ್ಟರಿಗಳಲ್ಲಿ ಪ್ಯಾಕೇಜ್ ಮಾಡುವ ಸಮಯದಲ್ಲಿ ಇದನ್ನು
ಸೇರಿಸಲಾಗುತ್ತದೆ. ಬಿಎಂಸಿಯ ವರದಿ ಪ್ರಕಾರ ಜಾಗತಿಕ ಮಟ್ಟದಲ್ಲಿ ವಾರ್ಷಿಕ ೧೧,೦೦೦ ರೈತರು ವಿಷಕಾರಿ ಕೀಟನಾಶಕದಿಂದ ಸಾವನ್ನಪ್ಪುತ್ತಿದ್ದಾರೆ. ಇವರಲ್ಲಿ ೬೫೦೦ ರೈತರು ಭಾರತದವರಾಗಿದ್ದಾರೆ. ೨೦೧೫ ರಲ್ಲಿ ಕೇಂದ್ರ ಸರಕಾರವು ಇವುಗಳ ಬಗ್ಗೆ ತನಿಖೆಗಾಗಿ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ (ಐಎಆರ್ಐ) ಮಾಜಿ ಪ್ರಾಧ್ಯಾಪಕ ಡಾ. ಅನುಪಮ್ ವರ್ಮಾ ನೇತೃತ್ವದ ಸಮಿತಿಯನ್ನು ರಚಿಸಿತ್ತು. ಒಂದು ಅಥವಾ ಹೆಚ್ಚಿನ ದೇಶಗಳಲ್ಲಿ ನಿಷೇಧಿತ, ನಿರ್ಬಂಧಿತ, ಹಿಂತೆಗೆದುಕೊಳ್ಳಲ್ಪಟ್ಟ ಆದರೆ ಭಾರತದಲ್ಲಿ ನೋಂದಾಯಿಸಲ್ಪಟ್ಟಿರುವ ೬೬ ಕೀಟನಾಶಕಗಳ ತಾಂತ್ರಿಕ ಪರಿಶೀಲನೆಯನ್ನು ಕೈಗೊಂಡ ಬಳಿಕ ೧೩ ಕೀಟನಾಶಕಗಳನ್ನು ನಿಷೇಧಿಸುವಂತೆ, ೬ ಕೀಟನಾಶಕಗಳನ್ನು ೨೦೨೦ ರ ಅವಧಿಯ ಒಳಗೆ ಹಂತ ಹಂತವಾಗಿ ಸ್ಥಗಿತಗೊಳಿಸು ವಂತೆಯೂ ಶಿಫಾರಾಸು ಮಾಡಿತ್ತು.
ಇನ್ನೂಳಿದ ೨೭ ಕೀಟನಾಶಗಳನ್ನು ತಾಂತ್ರಿಕ ಅಧ್ಯಯನಕ್ಕೆ ಒಳಪಡಿಸಿ, ಮೇ ೧೪, ೨೦೨೦ ರಲ್ಲಿ ಅವುಗಳನ್ನು ನಿಷೇಧಿಸುವಂತೆ ಶಿಫಾರಸಿ ಮಾಡುತ್ತದೆ.
ಆದರೆ ಫೆಬ್ರುವರಿ ೨೦೨೩ ರಲ್ಲಿ ಸರಕಾರ ಅವುಗಳಲ್ಲಿ ಕೇವಲ ೩ ಕೀಟನಾಶಕ ಮಾತ್ರ ನಿಷೇಧಿಸುತ್ತವೆ. ಒಂದು ವೇಳೆ ಇವುಗಳ ಬಗ್ಗೆ ಬೇರೆ ದೇಶಗಳು
ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸದಿದ್ದರೆ, ನಮಗೆ ಎಂದಿಗೂ ಇದರ ಬಗ್ಗೆ ತಿಳಿಯುತ್ತಿರಲಿಲ್ಲ. ಬೇರೆ ದೇಶಗಳಲ್ಲಿ ಸಂಪೂರ್ಣವಾಗಿ ನಿಷೇಧಿಸ ಲಾದ ೨೪ ಕೀಟನಾಶವು ನಮ್ಮ ದೇಶದಲ್ಲಿ ಬಳಕೆಗೆ ಅನುಮತಿ ಇದೆ ಎಂದಾದರೆ ನಮ್ಮ ಸರಕಾರವು ನಾಗರಿಕರ ಆರೋಗ್ಯದ ದೃಷ್ಟಿಯಿಂದ ಎಷ್ಟರ ಮಟ್ಟಿಗೆ ಕಾಳಜಿ ಹೊಂದಿದೆ ಎಂದು ಯೋಚಿಸಿ. ಈ ಮೇಲಿನ ಎಲ್ಲ ಘಟನೆಗಳು ಬೆಳಕಿಗೆ ಬಂದ ನಂತರ ಇದೇ ಜುಲೈ ೫, ೨೦೨೪ ರಂದು ಎಫ್ ಎಸ್ಎಸ್ ಎಐ ರಾಷ್ಟ್ರವ್ಯಾಪಿ ೪,೦೦೦ ಮಾದರಿಗಳನ್ನು ಸಂಗ್ರಹಿಸಿ, ಅವುಗಳಲ್ಲಿ ೨೨೦೦ ಮಾದರಿ ಪರೀಕ್ಷಿಸಿದ ಬಳಿಕ ಎವರೆ, ಎಂಡಿಹೆಚ್, ಮತ್ತು ಬಾದ್ಶಾಹ್ ಮುಂತಾದ ಪ್ರಸಿದ್ಧ ಬ್ರಾಂಡ್ಗಳ ಉತ್ಪನ್ನಗಳೊಂದಿಗೆ ಇತರೆ ೧೧೧ ಮಸಾಲೆ ತಯಾರಕರ ಪರವಾನಗಿಯನ್ನು ರದ್ದುಗೊಳಿಸುವಂತೆ ಆದೇಶ ಜಾರಿ ಯಾಗಿದೆ. ಇದಕ್ಕೆ ತೆಗೆದುಕೊಂಡ ಸಮಯ ಬರೋಬ್ಬರಿ ೯ ವರ್ಷ ಎಂಬುದೇ ಚರ್ಚೆಯ ಸಂಗತಿ.
ಕೊನೆಯದಾಗಿ ಇಂದು ನಾವು ಸೇವಿಸುವ ನೀರು, ಗಾಳಿ, ಆಹಾರ ಎಲ್ಲವೂ ಕಲುಷಿತಗೊಂಡಿದೆ, ಅದಕ್ಕೆ ಕಾರಣ ಬೇರಾರು ಅಲ್ಲ ನಾವೇ. ಆದರೆ ಅದರ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಕಠಿಣ ಕ್ರಮ ಕೈಗೊಳ್ಳುವ ಜವಾಬ್ದಾರಿ ಸರಕಾರದ್ದು. ಆದರೆ ಬೇರೆ ದೇಶಗಳಲ್ಲಿ ನಿಷೇಧಿಸಲ್ಪಟ್ಟ ಆಹಾರ, ಔಷಧಿಗಳು ಮಾತ್ರ ನಮ್ಮ ದೇಶದಲ್ಲಿ ಎಂದಿಗೂ ಎಕ್ಸ್ಪೈರಿ ಆಗುವುದಿಲ್ಲ. ರುಚಿಯ ಹೆಸರಿನಲ್ಲಿ ಇಷ್ಟು ವರ್ಷ ಪ್ರತಿನಿತ್ಯವು ವಿಷವನ್ನೇ ಎಂಜಾಯ್ ಮಾಡುತ್ತಾ ಸವಿದzಯಿತು, ಇನ್ನೂ ಮುಂದೆಯಾದರೂ ಮಸಾಲೆ ಪ್ಯಾಕೆಟ್ ಖರೀದಿಸುವಾಗ ತಪ್ಪದೇ ಮಾಹಿತಿ ಓದುವಿರಿ ತಾನೇ?
(ಲೇಖಕರು: ಶಿಕ್ಷಕರು, ಹವ್ಯಾಸಿ ಬರಹಗಾರರು)