Sunday, 8th September 2024

ಕಬ್ಬನ್ ಪಾರ್ಕ್ ಹಸಿರಿನ ಸಿರಿ ಉಳಿದೀತೆ?

ನೇರನೋಟ

ಶಶಿಧರ ಹಾಲಾಡಿ 

ಕಬ್ಬನ್ ಪಾರ್ಕ್‌ನಲ್ಲಿ ಏಳು ಮಹಡಿಗಳ ಹೊಸ ಕಟ್ಟಡಕ್ಕೆೆ ಉಚ್ಛ ನ್ಯಾಾಯಾಲಯವು ಅನುಮತಿ ನೀಡಿದ್ದನ್ನು ಕಂಡು, ಕಳವಳಗೊಂಡ ಪರಿಸರ ಪ್ರೇಮಿಗಳು, ‘ಕಬ್ಬನ್ ಪಾರ್ಕ್ ಉಳಿಸಿ’ ಎನ್ನುತ್ತ ಪ್ರದರ್ಶನ ನಡೆಸಿದರು. ಹಸಿರು ತುಂಬಿದ ಕಬ್ಬನ್ ಪಾರ್ಕ್‌ನ ಮರಗಿಡಗಳ ಮಧ್ಯೆೆ ಹೊಸದೊಂದು ಕಟ್ಟಡ ತಲೆ ಎತ್ತಿದರೆ, ಸಹಜವಾಗಿ ಅಷ್ಟರ ಮಟ್ಟಿಗಿನ ಪರಿಸರ ನಾಶವಾಗುತ್ತದೆ ಎಂಬ ಅವರ ಕಳಕಳಿ ಮನನೀಯ.

ಇನ್ನು ಸುಮಾರು ಹತ್ತು ವರ್ಷಗಳಲ್ಲಿ ನಮ್ಮ ದೇಶದ ವಾತಾವರಣ ಇನ್ನಷ್ಟು ಬಿಗಡಾಯಿಸಿ, ಎಲ್ಲೆೆಲ್ಲೂ ಕಲ್ಮಶಗಳು ತುಂಬಿಕೊಳ್ಳುತ್ತವೆ ಎಂಬ ಎಚ್ಚರಿಕೆ ಈಗಾಗಲೇ ದೊರೆತಿದೆ. ಮನುಷ್ಯನ ಸ್ವಯಂಕೃತ ಅಪರಾಧ ಎನಿಸುವಂತಹ ಚಟುವಟಿಕೆಗಳು ಹೀಗೆಯೇ ಮುಂದುವರಿದರೆ 2050ರ ಸಮಯಕ್ಕೆೆ, ಇಡೀ ಭೂಮಂಡಲದ ವಾತಾವರಣ ಕಲುಷಿತಗೊಂಡು, ಮನುಷ್ಯನು ಉಸಿರಾಡಲು ಪರದಾಡಬೇಕಾದೀತು ಎಂದು ನೂರಾರು ಜನ ಪ್ರಾಾಜ್ಞರು, ಚಿಂತಕರು ಎಚ್ಚರಿಸಿದ್ದಾಾರೆ. ಭೂಮಂಡಲದ ವಿಚಾರ ಬಿಡಿ, ನಮ್ಮ ದೇಶದ ರಾಜಧಾನಿ ದೆಹಲಿಯಲ್ಲಿ ಕಳೆದ ವಾರ ಮಕ್ಕಳು, ವೃದ್ಧರು ಉಸಿರಾಡಲು ಏದುಸಿರು ಬಿಡುವಂತಾಯಿತು; ಇಡೀ ವಿಶ್ವದಲ್ಲೇ ಅತಿ ಹೆಚ್ಚು ವಾಯು ಮಾಲಿನ್ಯ ತುಂಬಿದ ನಗರವಾಗಿ ‘ದೆಹಲಿ’ ರೂಪುಗೊಂಡಿತು. ಹೊಗೆ, ದೂಳು, ಕಲ್ಮಶಗಳು ತುಂಬಿ ಹೋದವು. ಪಂಜಾಬಿನ ರೈತರು ಬತ್ತದ ಹುಲ್ಲು ಸುಡುವುದು, ವಾಹನಗಳ ಡೀಸೆಲ್ ಹೊಗೆ, ದೀಪಾವಳಿಯ ದಿನ ಮನಬಂದಂತೆ, ಮತಿಹೀನರಾಗಿ ಜನರು ಸುಟ್ಟ ಪಟಾಕಿಯ ಹೊಗೆ, ಎಗ್ಗಿಿಲ್ಲದೇ ದೂಳು ಹಾರಿಸುವ ಚಟುವಟಿಕೆ ನಡೆಸಿದ್ದು-ಇವೆಲ್ಲವೂ ಸೇರಿ, ದೆಹಲಿಯು ಅಕ್ಷರಶ ವಿಷಗಾಳಿಯ ನಗರವಾಗಿ ಮಾರ್ಪಟ್ಟು, ಅಲ್ಲಿನ ಸರಕಾರವೇ ಜನರಿಗೆ ‘ಹೊರಗೆ ಜಾಸ್ತಿಿ ಓಡಾಡಬೇಡಿ’ ಎಂದು ಎಚ್ಚರಿಸುವಂತಾಯಿತು.

ದೂರದ ದೆಹಲಿ ತಾನೆ, ಎಂದು ಸುಮ್ಮನಿರಬಹುದೆ, ಕರ್ನಾಟಕದವರು, ಅದರಲ್ಲೂ ಬೆಂಗಳೂರಿನವರು? ದೆಹಲಿಗೆ ಹೋಲಿಸಿದರೆ, ಇಲ್ಲಿ ಕಲ್ಮಶ ಕಡಿಮೆ ಎಂದು ನಿರ್ಲಕ್ಷ್ಯ ತೋರಿ, ನಮ್ಮ ಪಾಡಿಗೆ ನಾವು ಇರಬಹುದೆ? ಖಂಡಿತಾ ಇಲ್ಲ. ಇನ್ನು ಕೆಲವೇ ವರ್ಷಗಳಲ್ಲಿ ಬೆಂಗಳೂರು ಸಹ ಸಾಕಷ್ಟು ಕಲ್ಮಶಭರಿತ ವಾತಾವರಣವನ್ನು ಹೊಂದುವ ಅಪಾಯವಿದೆ ಎಂದು ಅದಾಗಲೇ ಸಾಕಷ್ಟು ಎಚ್ಚರಿಕೆಗಳು ಬಂದಿವೆ.
ಮುಖ್ಯವಾಗಿ 2008ರ ನಂತರ, ವೆುಟ್ರೋೋ ಮಾರ್ಗದ ನಿರ್ಮಾಣಕ್ಕಾಾಗಿ ಮತ್ತು ಕೆಲವು ಫ್ಲೈ ಓವರ್ ನಿರ್ಮಾಣಕ್ಕಾಾಗಿ ಜಾಗ ಮಾಡಿಕೊಡಲು ಸಾವಿರಾರು ಬೃಹತ್ ಮರಗಳನ್ನು ನಾಶಮಾಡಿದ ನಂತರ, ಬೆಂಗಳೂರಿನ ವಾತಾವರಣವೇ ಬದಲಾಗಿ ಹೋಗಿದೆ. 2010ರ ನಂತರ, ಬೆಂಗಳೂರಿನ ಬೇಸಿಗೆಯು ಸಾಕಷ್ಟು ಉಷ್ಣತೆಯನ್ನು ತೋರುತ್ತಿಿರುವುದು ಒಂದೆಡೆಯಾದರೆ, ಬೆಂಗಳೂರಿನ ಬಡಾವಣೆಗಳಲ್ಲಿ ವಾಹನಗಳು ಸೂಸುವ ಹೊಗೆ ಭರಿತ ಗಾಳಿಯ ಸೇವನೆ ಅನಿವಾರ್ಯ ಎನಿಸಿದೆ. ಕಳೆದ ಒಂದು ದಶಕದಲ್ಲಿ ಬೆಂಗಳೂರು ಕಂಡ ಅಡ್ಡಾಾದಿಡ್ಡ ಬೆಳವಣಿಗೆ ಮತ್ತು ಮೆಟ್ರೋೋ ರೈಲುಗಳ ಸಂಚಾರಕ್ಕೆೆಂದು ನಗರದ ಮಧ್ಯದಲ್ಲೇ ಕಡಿದು ಹಾಕಿದ ಮರಗಳಿಂದಾಗಿ, ಇಲ್ಲಿನ ವಾತಾವರಣವೇ ಬೃಹತ್ ಪ್ರಮಾಣದಲ್ಲಿ ಬದಲಾಗಿ ಹೋಗಿದೆ ಎಂಬುದರಲ್ಲಿ ಲವಲೇಶ ಅನುಮಾನವಿಲ್ಲ. ಉದ್ಯಾಾನವನಗಳ ನಗರ ಎಂಬ ಹೆಸರಿನಲ್ಲಿ, ಸಾಕಷ್ಟು ತಂಪು ಪ್ರದೇಶ ಎಂಬ ಬೆಂಗಳೂರಿನ ಹೆಗ್ಗಳಿಕೆಯು ಕ್ರಮೇಣ ನಾಶವಾಗುವ ಹಂತದಲ್ಲಿದೆ.

ಕಳೆದ ವಾರ ಬೆಂಗಳೂರಿನ ನೂರಾರು ನಾಗರಿಕರು ಮರಗಳ ಪರವಾಗಿ, ಪರಂಪರೆಯ ಉಳಿವಿನ ಪರವಾಗಿ ಪ್ರತಿಭಟನೆ ನಡೆಸಿದ್ದು ಒಂದು ಸುದ್ದಿಯಾಯಿತು. ಬೆಂಗಳೂರಿನ ಶ್ವಾಾಸಕೋಶಗಳಲ್ಲಿ ಒಂದು ಎಂದೇ ಗುರುತಿಸಲ್ಪಟ್ಟಿಿರುವ ಕಬ್ಬನ್ ಪಾರ್ಕ್‌ನಲ್ಲಿ ಏಳು ಮಹಡಿಗಳ ಹೊಸ ಕಟ್ಟಡಕ್ಕೆೆ ಉಚ್ಛ ನ್ಯಾಾಯಾಲಯವು ಅನುಮತಿ ನೀಡಿದ್ದನ್ನು ಕಂಡು, ಕಳವಳಗೊಂಡ ಪರಿಸರ ಪ್ರೇಮಿಗಳು, ‘ಕಬ್ಬನ್ ಪಾರ್ಕ್ ಉಳಿಸಿ’ ಎಂಬ ಮನವಿಯೊಂದಿಗೆ ಪ್ರದರ್ಶನ ನಡೆಸಿದರು. ಈಗಾಗಲೇ ಅವನತಿಯ ಹಾದಿ ಹಿಡಿದಿರುವ ಬೆಂಗಳೂರಿನ ಹಸಿರು ಹೊದಿಕೆಯು, ಈ ರೀತಿಯ ಕಟ್ಟಡ ನಿರ್ಮಾಣ ಚಟುವಟಿಕೆಯಿಂದ ಇನ್ನಷ್ಟು ನಲುಗುವುದು ಎಂಬ ಈ ನಾಗರಿಕರ ಕಾಳಜಿ, ಕಳಕಳಿ ನಿಜಕ್ಕೂ ಪ್ರಾಾಮಾಣಿಕ ಎಂದೇ ಹೇಳಬೇಕು. ನಗರ ಮಧ್ಯೆೆ ಇರುವ ಕಬ್ಬನ್ ಪಾರ್ಕ್, ಆ ಪ್ರದೇಶದ ವಾತಾವರಣವನ್ನು ಸುಸ್ಥಿಿತಿಯಲ್ಲಿಡಲು ತನ್ನದೇ ಕಾಣಿಕೆ ನೀಡುತ್ತಿಿದೆ; ಆ ಮರಗಿಡಗಳ ಮಧ್ಯೆೆ ಹೊಸದೊಂದು ಕಟ್ಟಡ ತಲೆ ಎತ್ತಿಿದರೆ, ಸಹಜವಾಗಿ ಅಷ್ಟರ ಮಟ್ಟಿಿಗಿನ ಪರಿಸರ ನಾಶವಾಗುತ್ತದೆ ಎಂಬ ಅವರ ಕಳಕಳಿ ಮನನೀಯ.

ಆದರೆ, ಈ ಹೊಸ ಕಟ್ಟಡದ ವಿವರ ಕುತೂಹಲಕಾರಿಯಾಗಿದ್ದು, ಉಚ್ಛ ನ್ಯಾಾಯಾಲಯದ ಅನುಮತಿಯ ಮೇರೆಗೆ ಆ ಯೋಜನೆ ಚಾಲನೆಗೆ ಬಂದಿದೆ. ಉಚ್ಛ ನ್ಯಾಾಯಾಲಯದ ಹಿಂದಿನ ಒಂದು ಆದೇಶದಂತೆ, ಕಳೆದ ಎರಡು ದಶಕಗಳಿಂದ ಕಬ್ಬನ್ ಪಾರ್ಕ್ ಸರಹದ್ದಿನಲ್ಲಿ ಯಾವುದೇ ಪರಿಸರ ನಾಶ ಆಗಿಲ್ಲ; ಜಿ.ಕೆ.ಗೋವಿಂದ ರಾವ್ ವರ್ಸಸ್ ಸ್ಟೇಟ್ ಆಫ್ ಕರ್ನಾಟಕ ಮತ್ತು ಇತರರು (2001) ಪ್ರಕರಣಕ್ಕೆೆ ಸಂಬಂಧಿಸಿದ ಆದೇಶದಲ್ಲಿ, ಕಬ್ಬನ್ ಪಾರ್ಕ್ ಮಿತಿಯಲ್ಲಿ ಯಾವುದೇ ಕಟ್ಟಡ ನಿರ್ಮಾಣ ಮಾಡಬೇಕೆಂದರೂ, ನ್ಯಾಾಯಾಲಯದ ಅನುಮತಿ ಪಡೆಯಬೇಕಿತ್ತು. ಈ ಆದೇಶದ ಹಿನ್ನೆೆಲೆಯಲ್ಲಿ, ಸುಮಾರು 17 ಮರಗಳನ್ನು ಕಡಿದು ಹೊಸ ಕಟ್ಟಡ ಕಟ್ಟಲು ಕರ್ನಾಟಕ ಉಚ್ಛ ನ್ಯಾಾಯಾಲಯದ ರಿಜಿಸ್ಟ್ರಾಾರ್ ಜನರಲ್ ಅವರು ಉಚ್ಛ ನ್ಯಾಾಯಾಲಯಕ್ಕೆೆ 2014ರಲ್ಲಿ ಅಪೀಲು ಸಲ್ಲಿಸಿದ್ದರು. ಈ ಪಿಟಿಷನ್ ಸಲ್ಲಿಸಿ ಐದು ವರ್ಷಗಳ ನಂತರ, ಉಚ್ಛ ನ್ಯಾಾಯಾಲಯವು ಆದೇಶ ನೀಡಿ, ಯಾವುದೇ ಮರವನ್ನು ಕಡಿಯದೇ, ಹೊಸ ಕಟ್ಟಡ ಕಟ್ಟಲು ಅನುಮತಿ ನೀಡಿದೆ. ಅದಕ್ಕೆೆ ಪೂರಕವಾಗಿ, ಪರಿಷ್ಕೃತ ಯೋಜನೆಯಂತೆ, ಯಾವುದೇ ಮರವನ್ನು ಕಡಿಯದೇ, 4924 ಚದರ ಮೀಟರ್ ವಿಸ್ತೀರ್ಣದ ಕಟ್ಟಡ ನಿರ್ಮಾಣಕ್ಕೆೆ ಅವಕಾಶ ದೊರೆತಂತಾಗಿದೆ. ಕಬ್ಬನ್ ಪಾರ್ಕ್‌ನಲ್ಲಿರುವ ಪ್ರೆೆಸ್ ಕ್ಲಬ್ ಮತ್ತು ಹಳೆಯ ಕೆಜಿಐಡಿ ಕಟ್ಟಡದ ನಡುವೆ ಇರುವ ಹಳೆಯ ಚುನಾವಣಾ ಕಮಿಷನರ್ ಅವರ ಕಚೇರಿಯನ್ನು ಸಂಪೂರ್ಣ ಕೆಡವಿ, ಆ ಸ್ಥಳದಲ್ಲಿ ಹೊಸ ಕಟ್ಟಡವನ್ನು ಕಟ್ಟುವ ಯೋಜನೆ ಇದ್ದು, ಇದು ಹೈಕೋರ್ಟ್ ಸಂಕೀರ್ಣಕ್ಕೆೆ ಸಂಬಂಧಿಸಿದ್ದಾಾಗಿದ್ದು, ಅದಕ್ಕೆೆ ಈಗ ಹೈಕೋರ್ಟ್‌ನಿಂದ ಅನುಮತಿ ದೊರೆತಿದೆ.

ಉಚ್ಛ ನ್ಯಾಾಯಾಲಯದ ಅನುಮತಿಯೊಂದಿಗೇ ನಿರ್ಮಾಣವಾಗಲು ಉದ್ದೇಶಿತಗೊಂಡಿರುವ ಈ ಕಟ್ಟಡ ನಿರ್ಮಾಣ ಚಟುವಟಿಕೆಯು, ಪರಿಸರ ಪ್ರೇಮಿಗಳ ಆತಂಕವನ್ನು ಹೆಚ್ಚಿಿಸಿದೆ. ಸೂಕ್ತ ಅನುಮತಿಯೊಂದಿಗೆ, ಯಾವುದೇ ಮರವನ್ನು ಕಡಿಯದೇ ಏಳು ಮಹಡಿಯ ಕಟ್ಟಡ ಕಟ್ಟುವ ಯೋಚನೆ ಮೇಲ್ನೋೋಟಕ್ಕೆೆ ಪರಿಸರಕ್ಕೆೆ ಹಾನಿಯನ್ನುಂಟುಮಾಡದೇ ಇರಬಹುದು. ಆದರೆ, ಏಳು ಮಹಡಿ ಮತ್ತು ಎರಡು ಬೇಸ್‌ಮೆಂಟ್ ಹೊಂದಿರಬಹುದಾದ ಈ ಬೃಹತ್ ಕಟ್ಟಡ ನಿರ್ಮಾಣ ಸಮಯದಲ್ಲಿ, ಸಹಜವಾಗಿ ಅಲ್ಲಿನ ಹಸಿರು ಹೊದಿಕೆಗೆ ಹಾನಿಯಾಗುವ ಸಾಧ್ಯತೆ ಇದೆ ಎಂಬುದೇ ಪರಿಸರ ಪ್ರೇಮಿಗಳ ಅಳಲು. ಇಂದು ನಮ್ಮ ನಗರಗಳಲ್ಲಿ ಕಟ್ಟಡ ನಿರ್ಮಾಣ ಪ್ರಕ್ರಿಿಯೆ ಮತ್ತು ಆ ಸಮಯದಲ್ಲಿ ಅವರು ಅನುಸರಿಸುತ್ತಿಿರುವ ಎಚ್ಚರಿಕೆಯನ್ನು ಗಮನಿಸಿದರೆ, ಆ ಕೂಗಿನಲ್ಲಿ ಸತ್ಯಾಾಂಶವನ್ನು ಗುರುತಿಸಬಹುದು. ಕಟ್ಟಡ ನಿರ್ಮಾಣ ಕೆಲಸಗಾರರಿಗೆ ಮತ್ತು ಕೆಳಮಟ್ಟದ ಸೂಪರ್ ವೈಸರ್‌ಗಳಿಗೆ ತಮ್ಮ ಕೆಲಸ ಸುಲಭದಲ್ಲಿ ಮುಗಿಯುವುದು ಪ್ರಥಮ ಆಧ್ಯತೆಯೇ ಹೊರತು, ಸುತ್ತಲಿನ ಪರಿಸರದ ಆರೋಗ್ಯ ಕಾಪಾಡುವುದು ಅಲ್ಲವೇ ಅಲ್ಲ; ವಸ್ತುಸ್ಥಿಿತಿ ಹೀಗಿರುವಾಗಿ, ಕಬ್ಬನ್ ಪಾರ್ಕಿನ ಮರಗಿಡಗಳ ಆರೋಗ್ಯವನ್ನು ನೋಡಿಕೊಳ್ಳುವುದಾದರೂ ಹೇಗೆ? ಆದರೆ, ಉಚ್ಛ ನ್ಯಾಾಯಾಲಯವೇ ಅನುಮತಿ ನೀಡಿರುವುದರಿಂದಾಗಿ, ಮತ್ತೊೊಮ್ಮೆೆ ಮನವಿ ಮಾಡಿ ಕಬ್ಬನ್ ಪಾರ್ಕಿನ ಮತ್ತು ನಗರದ ಪರಿಸರದ ಕ್ಷೇಮವನ್ನೂ ಗಮನಿಸಬೇಕೆಂದು ಕೇಳಿಕೊಳ್ಳುವುದೇ ಈಗ ಉಳಿದಿರುವ ಮಾರ್ಗ ಎನ್ನಬಹುದು.

ಈಗಾಗಲೇ ವಿಪರೀತ ಬೆಳೆದಿರುವ ಬೆಂಗಳೂರು ನಗರದ ಆರೋಗ್ಯವನ್ನು ಕಾಪಾಡಬೇಕಾದರೆ, ಕೋರ್ ಏರಿಯಾ ಅಥವಾ ಮಧ್ಯಭಾಗದ ಬೆಂಗಳೂರಿನಲ್ಲಿ ಯಾವುದೇ ಕಾಮಗಾರಿಯನ್ನು ಕೈಗೊಳ್ಳಲು ಅನುಮತಿ ನೀಡಲೇ ಬಾರದು. ಭಾರತದ ಇತರ ದೊಡ್ಡನಗರಗಳ ವಾತಾವರಣಕ್ಕೆೆ ಹೋಲಿಸಿದರೆ, ಈಗ ಬೆಂಗಳೂರಿನ ವಾತಾವರಣ ಸಾಕಷ್ಟು ಶುದ್ಧ ಎಂದೇ ಹೇಳಬಹುದು. ದೆಹಲಿ, ಲಕ್ನೋೋ ಮೊದಲಾದ ನಗರಗಳ ಕಲುಷಿತ ಗಾಳಿಯನ್ನು ಕಂಡು ರೋಸಿ ಹೋದ ಉತ್ತರ ಭಾರತೀಯರು, ಮೇಲ್ನೋೋಟಕ್ಕೆೆ ಇನ್ನೂ ಶುದ್ಧವಾಗಿ ಕಾಣಿಸುವ ಬೆಂಗಳೂರನ್ನು ತಮ್ಮ ಖಾಯಂ ವಸತಿಯನ್ನಾಾಗಿ ಆಯ್ದುಕೊಳ್ಳುತ್ತಿಿದ್ದಾಾರೆ. ಅಲ್ಲಲ್ಲಿ ಹಸಿರು ತುಂಬಿದ ಉದ್ಯಾಾನವನಗಳು, ರಸ್ತೆೆಯ ಪಕ್ಕದಲ್ಲಿ ದೊಡ್ಡ ದೊಡ್ಡ ಹಸಿರಿನ ಮರಗಳು, ಕಾವೇರಿಯಿಂದ ಹರಿದು ಬರುವ ನೀರು, ದೂಳು ಕಡಿಮೆ ಇರುವ ಬಡಾವಣೆಗಳು-ಇವೆಲ್ಲವೂ ಬೆಂಗಳೂರನ್ನು ಸ್ವರ್ಗ ಸಮಾನವಾಗಿಸಿವೆ. ತಮ್ಮ ಸ್ವಂತ ಊರನ್ನೇ ತೊರೆದು, ದೂರದ ಬೆಂಗಳೂರಿಗೆ ವಲಸೆ ಬಂದು ಇಲ್ಲೇ ನೆಲೆಸುವ ಅವರೆಲ್ಲರ ಪ್ರಮುಖ ಆಕರ್ಷಣೆ ಎಂದರೆ ಇಲ್ಲಿನ ವಾತಾವರಣ. ಕಳೆದ ದಶಕದ ತನಕ ಸಾಕಷ್ಟು ಕಡಿಮೆ ವಾಯುಮಾಲಿನ್ಯ ಹೊಂದಿದ್ದ ಬೆಂಗಳೂರು ಎಲ್ಲರ ಅಚ್ಚು ಮೆಚ್ಚಿಿನ ತಾಣವಾಗಿದ್ದರಲ್ಲಿ ಅಚ್ಚರಿ ಇಲ್ಲ.

ಆದರೆ, ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನ ವಾತಾವರಣ, ನೋಟ ಎಲ್ಲವೂ ಬದಲಾಗಿದೆ. ಅನಿಯಂತ್ರಿಿತವಾಗಿ, ಎಲ್ಲೆೆಂದರಲ್ಲಿ ಬೆಳೆಯುತ್ತಿಿರುವ ನಗರದ ಬಾಹುಗಳು ಒಂದೆಡೆಯಾದರೆ, ಈಗಾಗಲೇ ಅಭಿವೃದ್ಧಿಿ ಹೊಂದಿರುವ ಭಾಗಗಳಲ್ಲಿ ತುಂಬುತ್ತಿಿರುವ ಕಸ, ಮಾಲಿನ್ಯ ಇನ್ನೊೊಂದೆಡೆ. ಕಳೆದ ಅರ್ಧ ಶತಮಾನದಲ್ಲಿ, ‘ವೃಷಭಾವತಿ’ಯಂತಹ ನದಿಯನ್ನೇ ಕೊಚ್ಚೆೆಯ ವೈತರಣಿಯನ್ನಾಾಗಿ ಪರಿವರ್ತಿಸಿದ ನಗರ ವಿಸ್ತರಣಾ ಚಟುವಟಿಕೆಯು, ಕಳೆದ ದಶಕದಿಂದ ಇಲ್ಲಿನ ವಾಯು ಮಾಲಿನ್ಯಕ್ಕೆೆ ಕುಠಾರ ಎನಿಸುವ ಕೊಡುಗೆಯನ್ನು ನೀಡುತ್ತಿಿದೆ. ಯಾರದೇ ಅಡೆತಡೆ ಇಲ್ಲದೇ ಎಲ್ಲೆೆಂದರಲ್ಲಿ ಎಸೆಯುತ್ತಿಿರುವ ದೂಳು, ಕಟ್ಟಡ ತ್ಯಾಾಜ್ಯಗಳು, ಮಣ್ಣು, ಸಿಮೆಂಟ್ ತ್ಯಾಾಜ್ಯಗಳು ತಮ್ಮದೇ ರೀತಿಯಲ್ಲಿ ಇಲ್ಲಿನ ವಾಯುಮಾಲಿನ್ಯಕ್ಕೆೆ ಕೊಡುಗೆ ನೀಡುತ್ತಿಿವೆ.
ಮೈಕ್ರೋೋಪಾರ್ಟಿಕಲ್‌ಸ್‌‌ಗಳು ಇಲ್ಲಿನ ಗಾಳಿಯಲ್ಲಿ ಹೆಚ್ಚು ಹೆಚ್ಚು ಸೇರಿಕೊಳ್ಳುತ್ತಿಿವೆ. ವಾಹನಗಳು ಉಗುಳುವ ಹೊಗೆ, ರಸ್ತೆೆ ಪಕ್ಕದ ದೂಳು, ಕಟ್ಟಡ ನಿರ್ಮಾಣ ನಡೆಯುವಾಗ ಗಾಳಿಯೊಂದಿಗೆ ಮಿಶ್ರಣಗೊಳ್ಳುತ್ತಿಿರುವ ಕಲ್ಮಶಗಳು, ಮೈಕ್ರೊೊಪಾರ್ಟಿಕಲ್‌ಸ್‌‌ನ್ನು ವಾತಾವರಣಕ್ಕೆೆ ಸೇರಿಸುತ್ತಿಿವೆ. ದೆಹಲಿಯಂತಹ ನಗರಗಳ ವಾಯುವಿನಲ್ಲಿರುವ ಮೈಕ್ರೊೊಪಾರ್ಟಿಕಲ್‌ಸ್‌‌ಗೆ ಹೊಲಿಸಿದರೆ, ಅದರ ಹತ್ತನೇ ಒಂದರಷ್ಟು ಮಾತ್ರ ಇರುವ ಇಲ್ಲಿನ ಮಾಲಿನ್ಯವು, ದಿನದಿಂದ ದಿನಕ್ಕೆೆ ಕ್ರಮೇಣ ಜಾಸ್ತಿಿಯಾಗುತ್ತಿರುವುದು ದಿಗಿಲು ಹುಟ್ಟಿಸುವ ಸಂಗತಿ.

ಮರಗಿಡಗಳು ಸುತ್ತಲಿನ ವಾತಾವರಣದ ಕಾರ್ಬನ್ ಡೈಕ್ಸೈಡ್‌ನ್ನು ಹೀರಿಕೊಂಡು, ಆಮ್ಲಜನಕವನ್ನು ಉತ್ಪತ್ತಿ ಮಾಡುವ ಪ್ರಮುಖ ಕೆಲಸವನ್ನು ಮಾಡುತ್ತಿರುವುದರ ಜತೆಯಲ್ಲೇ, ದೂಳು ನಿಯಂತ್ರಣದಲ್ಲಿ ತಮ್ಮದೇ ಕೊಡುಗೆ ನೀಡುತ್ತಿವೆ. ಗಾಳಿಯಲ್ಲಿ ಸಂಚರಿಸುವ ದೂಳು, ಮೈಕ್ರೋೋ ಪಾರ್ಟಿಕಲ್‌ಸ್‌‌ನ್ನು ಮರಗಿಡಗಳ ಎಲೆಗಳು, ಸೋಸುತ್ತವೆ ಅಥವಾ ಫಿಲ್ಟರ್ ಮಾಡುತ್ತವೆ. ಹುಣಸೆಯಂತಹ ಸಂಕೀರ್ಣ ಎಲೆಗಳನ್ನು ಹೊಂದಿರುವ ಮರಗಳಿಂದ, ಈ ಸೋಸುವಿಕೆಯ ಪರಿಣಾಮ ಜಾಸ್ತಿ. ಆ ಎಲೆಗಳ ಮೂಲಕ ಹಾದುಹೋಗುವ ಗಾಳಿಯಲ್ಲಿರುವ ದೂಳು ಮತ್ತಿತರ ಕಲ್ಮಶ ಸಾಕಷ್ಟು ಪ್ರಮಾಣದಲ್ಲಿ ತಡೆಯಲ್ಪಟ್ಟು, ಗಾಳಿ ಶುದ್ಧೀಕರಣಗೊಳ್ಳುತ್ತದೆ. ಮರಗಿಡಗಳ ಸಂಖ್ಯೆೆ ಕಡಿಮೆಯಾದಷ್ಟೂ, ದೂಳನ್ನು ತಡೆಯುವ ಈ ಪ್ರಕ್ರಿಯೆಗೆ ತಡೆ ಇಲ್ಲದಂತಾಗಿ, ವಾಯು ಮಾಲಿನ್ಯ ಜಾಸ್ತಿಯಾಗುತ್ತಲೇ ಹೋಗುತ್ತದೆ.

ಬೆಂಗಳೂರು ಆ ನಿಟ್ಟಿನಲ್ಲಿ ಅದೃಷ್ಟ ಮಾಡಿರುವ ನಗರ ಎಂದೇ ಹೇಳಬೇಕು; ಹಿಂದಿನ ತಲೆಮಾರಿನ ಯೋಜಕರ, ಆಳುವವರ, ಪ್ರಾಾಜ್ಞ ಅಧಿಕಾರಿಗಳ ಮತ್ತು ನಾಗರಿಕರ ಕಾಳಜಿಯಿಂದಾಗಿ ಎಲ್ಲೆೆಡೆ ಮರಗಿಡಗಳು ಬೆಳೆದಿವೆ; ಹಲವು ಬಡಾವಣೆಗಳಲ್ಲಿ ಪಾರ್ಕ್‌ಗಳಿವೆ; ಈ ನಗರಕ್ಕೆೆ ಸಾಕಷ್ಟು ಹಸಿರು ಹೊದಿಕೆ ಇದೆ. ಅದನ್ನು ಹೀಗೆಯೇ ಉಳಿಸಿಕೊಂಡರೆ, ಅಷ್ಟರ ಮಟ್ಟಿಗಾದರೂ, ವಾತಾವರಣದ ಸ್ವಾಾಸ್ಥ್ಯವನ್ನು ಕಾಪಾಡಬಹುದು. ಆದರೆ, ಈ ಸುಂದರ ನಗರದಲ್ಲಿ ಕಳೆದ ಒಂದು ದಶಕದಿಂದ ನಡೆದಿರುವ ಹಸಿರುನಾಶ ಅಗಾಧ. ಈ ಹಿನ್ನೆೆಲೆಯಲ್ಲಿ ಯೋಚಿಸಿದರೆ, ಸೂಕ್ತ ಪ್ರಾಾಧಿಕಾರದಿಂದ ಅನುಮತಿ ಪಡೆದೇ ನಿರ್ಮಾಣಗೊಳ್ಳಲಿರುವ ಬಹುಮಹಡಿ ಕಟ್ಟಡವು, ಬೆಂಗಳೂರಿನ ವಾತಾವರಣವು ಇನ್ನಷ್ಟು ಕಲುಷಿತಗೊಳ್ಳಲು ತನ್ನದೇ ಆದ ಕೊಡುಗೆ ನೀಡಬಲ್ಲದು.
ಬೆಂಗಳೂರಿನ ಶ್ವಾಾಸಕೋಶಗಳಲ್ಲಿ ಒಂದಾಗಿರುವ ಕಬ್ಬನ್ ಪಾರ್ಕ್‌ನಲ್ಲಿ ಉದ್ದೇಶಿತ ಬಹುಮಹಡಿ ಕಟ್ಟಡದ ನಿರ್ಮಾಣದ ಕುರಿತು ಮರುಪರಿಶೀಲಿಸುವುದಾಗಿ ಸರಕಾರದ ಅಂಗಸಂಸ್ಥೆೆಗಳು ಈಗ ಹೇಳಿಕೆ ನೀಡಿವೆ; ಅಷ್ಟರ ಮಟ್ಟಿಗೆ ಪರಿಸರ ಪ್ರೇಮಿಗಳ ಕಾಳಜಿಗೆ ಬೆಲೆ ಸಿಕ್ಕಿದೆ ಎಂಬುದು ಸಮಾಧಾನದ ವಿಷಯ. ಇದು ಕೇವಲ, ಅಂದು ಪ್ರತಿಭಟಿಸಿದ ಕೆಲವೇ ನೂರು ಪರಿಸರ ಪ್ರೇಮಿಗಳ ಮನವಿಯ ಪ್ರಶ್ನೆೆಯಲ್ಲ, ಬದಲಿಗೆ ಸಮಸ್ತ ನಗರದ ಸ್ವಾಾಸ್ಥ್ಯದ ಪ್ರಶ್ನೆ. ಕಬ್ಬನ್ ಪಾರ್ಕ್, ಲಾಲ್ ಬಾಗ್ ಮೊದಲಾದ ಹಸಿರು ತುಂಬಿದ ಪ್ರದೇಶಗಳಲ್ಲಿ ಹೀಗೆ ಒಂದೊಂದೇ ಬಹುಮಹಡಿ ಕಟ್ಟಡಗಳನ್ನು ಕಟ್ಟುತ್ತಾಾ ಹೋದರೆ, ಬೆಂಗಳೂರಿನ ವಾತಾವರಣ ಕಲುಷಿತಗೊಳ್ಳದೇ ಉಳಿದೀತೆ? ಖಂಡಿತಾ ಇಲ್ಲ. ಈ ಹಿನ್ನೆೆಲೆಯಲ್ಲಿ, ಸೂಕ್ತ ಅಪೀಲು ಸಲ್ಲಿಸಿ, ಉದ್ದೇಶಿತ ಕಟ್ಟಡಕ್ಕೆೆ ನೀಡಿರುವ ಅನುಮತಿಯನ್ನು ಮರು ಪರಿಶೀಲಿಸುವಂತೆ ಮಾಡಿ, ಕಬ್ಬನ್ ಪಾರ್ಕ್‌ನ ಹಸಿರು ಸಿರಿಯನ್ನು ಉಳಿಸಿಕೊಳ್ಳಲು ಎಲ್ಲರೂ ಮುಂದಾಗಬೇಕಾದುದು ಇಂದಿನ ಅಗತ್ಯ.

Leave a Reply

Your email address will not be published. Required fields are marked *

error: Content is protected !!