Saturday, 14th December 2024

ಭಾರತದಲ್ಲಿ ಇ-ಗೇಮಿಂಗ್ ಹೆಚ್ಚಳ

-ಅರುಣಾ ಶರ್ಮಾ

ಭಾರತದಲ್ಲಿನ ಚಲನಶೀಲ ಸ್ಟಾರ್ಟ್‌ಅಪ್ ವ್ಯವಸ್ಥೆಯು ದೇಶವನ್ನು ಇ-ಗೇಮಿಂಗ್ ಉದ್ಯಮದಲ್ಲಿ ಮುಂಚೂಣಿಗೆ ತಲುಪಿಸುತ್ತಿದೆ. ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಈ ಕ್ಷೇತ್ರದಲ್ಲಿ ಪ್ರಮುಖ ಆಡಳಿತಾತ್ಮಕ ನಿಯಂತ್ರಣಗಳ ಸ್ಥಾಪನೆಯ ಅಗತ್ಯ ಕಾಣುತ್ತಿದೆ. ಎರಡು ದೃಷ್ಟಿಯಿಂದ ಇದು ಇಂದಿನ ತುರ್ತು. ಇದರಿಂದ ‘ಕೌಶಲದ ಆಟಗಳು’ ಮತ್ತು ‘ಅದೃಷ್ಟದ ಆಟ-ಜೂಜಿನ’ ನಡುವಿನ ವ್ಯತ್ಯಾಸ ಕಂಡುಕೊಳ್ಳಲು ಸಹಾಯವಾಗುವ ಜತೆಗೆ ಸರಕಾರದ ಆದಾಯಕ್ಕೂ ಗಣನೀಯ ಕೊಡುಗೆ ಸಿಗುತ್ತದೆ. ಇವುಗಳಲ್ಲಿನ ವ್ಯತ್ಯಾಸ ಅತ್ಯಂತ ಸಂಕೀರ್ಣವಾದುದು; ‘ಕೌಶಲದ ಆಟಗಳು’ ಬಳಕೆದಾರನ ಜ್ಞಾನ ಮತ್ತು ಪರಿಣತಿ
ಯನ್ನು ಆಧರಿಸಿರುತ್ತವೆ. ನ್ಯಾಯಾಲಯದ ಹಲವು ನಿರ್ಣಯಗಳಲ್ಲಿ ಈ ಅಂಶಕ್ಕೆ ಒತ್ತುನೀಡಲಾಗಿದೆ. ಉದಾಹರಣೆಗೆ, ಮನೋರಂಜಿಥನ್ ಮನಮೈಲ್ ಮಂಡ್ರತ್ ಮತ್ತು ತಮಿಳುನಾಡು ಸರಕಾರದ ನಡುವೆ (೨೦೦೫); ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿನ ಇಂಡಿಯನ್ ಪೋಕರ್ ಅಸೋಸಿಯೇಷನ್ (ಐಪಿಎ) ಮತ್ತು ಕರ್ನಾಟಕ (೨೦೧೩) ಸರಕಾರದ ನಡುವಿನ ಪ್ರಕರಣ. ಇವೆರಡೂ ಪೋಕರ್ ಕೌಶಲದ ಆಟ ಎಂಬುದು ಗಮನಾರ್ಹ. ಇತ್ತೀಚಿನ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಕೌಶಲ ಆಧಾರಿತ ಆಟಗಳ ವರ್ಗೀಕರಣದ ಅಗತ್ಯವನ್ನು ಪ್ರತಿ ಪಾದಿಸಿದೆ. ಆನ್‌ಲೈನ್ ಗೇಮಿಂಗ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ಆನ್‌ಲೈನ್/ಇಲೆಕ್ಟ್ರಾನಿಕ್/ಡಿಜಿಟಲ್ ರಮ್ಮಿ ಆಟ ಮತ್ತು ಇತರೆ ಆನ್‌ಲೈನ್/ಇಲೆಕ್ಟ್ರಾನಿಕ್/ಡಿಜಿಟಲ್ ಆಧರಿತ ಆಟಗಳ ಮೇಲೆ ‘ಬಾಜಿ’ ಕಟ್ಟುವುದು ಮತ್ತು ‘ಜೂಜಾಟ’ ನಡೆಸುವುದಕ್ಕೆ ತೆರಿಗೆ ವಿಧಿ ಸುವುದು ಅನಿವಾರ್ಯ ಎಂದು
ಕೇಂದ್ರ ಸರಕಾರ ಹೇಳಿದೆ.

ನಿಯಂತ್ರಣಾತ್ಮಕ ಚೌಕಟ್ಟು:
ಗಮನಾರ್ಹವಾಗಿ ಫ್ಯಾಂಟಸಿ ಸ್ಪೋರ್ಟ್ಸ್ ಕ್ಷೇತ್ರ ಸೇರಿದಂತೆ ಭಾರತದ ಇ-ಗೇಮಿಂಗ್ ಉದ್ಯಮ ಇತ್ತೀಚಿನ ದಿನಗಳಲ್ಲಿ ಕ್ಷಿಪ್ರಗತಿಯ ಬೆಳವಣಿಗೆ ಕಾಣುತ್ತಿದೆ. ಪ್ರಾಥಮಿಕವಾಗಿ ಅದೃಷ್ಟದ ಜೂಜು ಹಾಗೂ ಕೌಶಲಾಧಾರಿತ ಆಟಗಳನ್ನು ಪ್ರತ್ಯೇಕಿಸುವುದಕ್ಕೆ ಸ್ಪಷ್ಟವಾದ ನೀತಿ ನಿರೂಪಣೆಗಳು ನಮ್ಮಲ್ಲಿಲ್ಲ. ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿ ಯಿಂದ ಕಾನೂನು ನಿರ್ಣಯಗಳು, ಸ್ವಲ್ಪ ಮಾರ್ಗ ಸೂಚಿಯ ಜತೆಗೆ ಸಮಗ್ರ ನಿಯಂತ್ರಣಾತ್ಮಕ ಚೌಕಟ್ಟಿನ ಅಭಿವೃದ್ಧಿ ಅಗತ್ಯ.

ಆಡಳಿತಾತ್ಮಕ ಮಾರ್ಗದರ್ಶನ:
ಭಾರತೀಯ ಕೆಳ-ಮಧ್ಯಮ ವರ್ಗದ ಕುಟುಂಬಗಳು ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳ ಹಿನ್ನೆಲೆಯಲ್ಲಿ, ಆ ವರ್ಗದ ವ್ಯಕ್ತಿಗಳಿಗೆ ಇಂಥ ಆನ್‌ಲೈನ್ ಗೇಮಿಂಗ್ ಗೀಳಾಗಿ ಪರಿಣಮಿಸಬಹುದಾದ ಅಪಾಯಗಳಿವೆ. ಜೂಜಾಟ ನಿಯಂತ್ರಣ ಕುರಿತಂತೆ ಭಾರತ ಸರಕಾರ ಇಂಥ ಪ್ರಾಥಮಿಕ ಸಂಗತಿಗಳನ್ನು ಆಧರಿಸಿ, ಕ್ರಮಕೈಗೊಳ್ಳುವ ಅಗತ್ಯವಿದೆ. ಜೂಜಾಟದ ಚಟುವಟಿಕೆಗಳಿಗೆ ಪರವಾನಗಿ ನೀಡುವುದಕ್ಕೆ ಕೇಂದ್ರ ಮತ್ತು ರಾಜ್ಯಸರಕಾರಗಳಿಗೆ ೧೮೫೭ರ ಸಾರ್ವಜನಿಕ ಜೂಜಾಟ ನಿಯಂತ್ರಣ ಕಾಯಿದೆ ಅಧಿಕಾರ ನೀಡಿದೆ. ಇದನ್ನು ಆನ್‌ಲೈನ್‌ಗೂ ಅನ್ವಯಿಸಿ, ಸಾರ್ವಜನಿಕರಿಗೆ ಇಂಥ ಆಟಗಳ ಗೀಳು ಮತ್ತು ಅದರಿಂದುಂಟಾಗಬಹುದಾದ ಆರ್ಥಿಕ ನಷ್ಟಕ್ಕೆ ಸಂರಕ್ಷಣೆ ನೀಡಬಹುದು. ಸಂಭಾವ್ಯ ಹಣಕಾಸು ಲಾಭ-ನಷ್ಟಗಳ ನಡುವಿನ ಸಮತೋಲನ ಕಾಯ್ದುಕೊಳ್ಳುವ ಉದ್ದೇಶವನ್ನು ಇದು ಹೊಂದಿರುತ್ತದೆ. ಆದರೆ ಪರಿಣಾಮಕಾರಿ ನಿಯಂತ್ರಣದ
ವಿಷಯದಲ್ಲಿ ಇ-ಗೇಮಿಂಗ್ ವೇದಿಕೆಗಳು ಹೊಸ ಸವಾಲುಗಳನ್ನು ತಂದೊಡ್ಡಿರುವುದು ನಿಜ.

ಆಗಬೇಕಾದುದೇನು?
* ಆನ್‌ಲೈನ್ ಮತ್ತು ಆ-ಲೈನ್ ಆಟಗಳ ನಡುವೆ ಒಂದೇ ರೀತಿಯಲ್ಲಿ ಕಾನೂನು ಜಾರಿಗೊಳಿಸಲಾಗದು.
* ಸುಪ್ರೀಂ ಕೋರ್ಟ್ ನಿಗದಿಪಡಿಸಿದ ವರ್ಗೀಕರಣ ಆಧರಿಸಿ ಕೆಲ ವಿಚಾರಗಳಲ್ಲಿ ಸಮಾನ ನೀತಿ ರೂಪುಗೊಳ್ಳಬೇಕು.
* ಇದನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಖಾತ್ರಿ ಮಾಡಿಕೊಳ್ಳುವ ವಿಭಾಗ ರಚನೆಯಾಗಬೇಕು.
* ಕೇಂದ್ರ ಮತ್ತು ಪ್ರತ್ಯೇಕ ರಾಜ್ಯ ಸರಕಾರಗಳ ನಡುವಿನ ನ್ಯಾಯಾಡಳಿತ ಕ್ಷೇತ್ರದ ಗಡಿಗಳನ್ನು ನಿರೂಪಿಸಬೇಕು.
* ಮಾರ್ಗದರ್ಶಿ ನೀತಿಯಾಗಿ ಕೌಶಲ ಮತ್ತು ಅದೃಷ್ಟಗಳ ನಡುವಿನ ವ್ಯತ್ಯಾಸ ಗುರುತಿಸುವ ಕೆಲಸ ಆಗಬೇಕು.
* ಆನ್‌ಲೈನ್ ಗೇಮಿಂಗ್ ಆಪ್‌ಗಳ ಮೇಲೆ ತೆರಿಗೆಯಂಥ ನಿಯಂತ್ರಣಕ್ಕೆ ಪ್ರತ್ಯೇಕ ನೀತಿ ಅಗತ್ಯ.

(ಲೇಖಕರು ಅಭಿವೃದ್ಧಿ ಆರ್ಥಿಕ ತಜ್ಞರು ಮತ್ತು ಭಾರತ ಸರಕಾರದ ನಿವೃತ್ತ ಕಾರ್ಯದರ್ಶಿ)