Friday, 20th September 2024

ಟಿವಿ, ಧಾರಾವಾಹಿಗಳು ಮತ್ತು ಸಾಮಾಜಿಕ ಸ್ವಾಸ್ಥ್ಯ

ಬಿ.ಎನ್. ಯಳಮಳ್ಳಿ.

ಇವತ್ತು ಎಷ್ಟೋೋ ಕುಟುಂಬಗಳಲ್ಲಿ ಮೂಕ ವೈಮನಸ್ಸುಗಳಾಗೋದು, ಎಷ್ಟೋೋ ಮನ, ಮನೆಗಳು ಒಡೆಯುವುದನ್ನು ನೋಡುತ್ತಿಿದ್ದೀವಲ್ಲ. ಇವಕ್ಕೆೆಲ್ಲ ನೇರ ಅಥವಾ ಬಳಸು ಪ್ರೇರಣೆ ಎಂದರೆ, ಟಿವಿ ಧಾರಾವಾಹಿಗಳು ಎಂಬುದು ನನ್ನ ಊಹೆ.

ಮನುಷ್ಯನ ಮೂಲ ಆವಶ್ಯಕತೆಗಳಾದ ಅನ್ನ, ನೀರು, ವಸ್ತ್ರ, ಸೂರು, ವಿದ್ಯೆೆ, ಉದ್ಯೋೋಗ ಮತ್ತು ಕುಟುಂಬ ಜೀವನ ಸೌಲಭ್ಯಗಳು ಲಭ್ಯವಾದ ಮೇಲೆ ಬೇಕಾಗಿರೋದು ಮನರಂಜನೆ. ಮನರಂಜನೆಯ ಉದ್ದೇಶ ದಣಿವಾರಿಸಿಕೊಂಡು, ಫ್ರೆೆಶ್ ಆಗಿ, ಆಹ್ಲಾಾದಿತರಾಗಿ ಸೃಜನಶೀಲತೆಯನ್ನು ಪುನಃ ಹರಿತಗೊಳಿಸುವದಕ್ಕಾಾಗಿ ಎಂದು ಹೇಳಬಹುದು. ಹೊಸ ಹೊಸ ಜ್ಞಾನಾರ್ಜನೆಯ ಹಸಿವೂ ಆಗಿರಬಹುದು. ಬೌದ್ಧಿಿಕ ಬೆಳವಣಿಗೆಯ ಗುರಿಯೂ ಆಗಬಹುದು. ಅದಕ್ಕೆೆ ಮನುಷ್ಯಹುಡುಕಿದ ಸಾಧನಗಳು ಆಟ-ಪಾಠ, ಕಥೆ ಹೇಳುವುದು, ಸಂಗೀತ, ನೃತ್ಯ, ನಾಟಕ, ಚಲನ ಚಿತ್ರ ಮತ್ತು ಟೆಲಿವಿಷನ್ ಎಂದು ಮುಂತಾಗಿ ಇಲ್ಲಿಯವರೆಗೆ ಬೆಳೆದು ಬಂದವುಗಳು. ಇವುಗಳಲ್ಲಿ ಕೊನೆಯ ಎರಡು ದೊಡ್ಡ ಉದ್ಯೋೋಗಗಳಾಗಿಯೇ ಬೆಳೆದಿವೆ. ಅಪಾರವಾಗಿ ಸೃಜನಶೀಲತೆ, ಉದ್ಯೋೋಗಾವಕಾಶ ಮತ್ತು ರಾಷ್ಟ್ರೀಯ ಉತ್ಪನ್ನಗಳನ್ನು ಒದಗಿಸುವಲ್ಲಿ ಸಮರ್ಥವಾಗಿವೆ. ದೇಶದ ಸಂಸ್ಕೃತಿ, ಫ್ಯಾಾಷನ್ ಮತ್ತು ಟೆಕ್ನಾಾಲಜಿಗಳಿಂದ ಪೂರೈಕೆ ಪಡೆದು ವಾಪಸು ಅವುಗಳನ್ನೇ ನವೀಕರಿಸಿ ವರ್ಧಿಸಿ ಹಂಚುವ ಕಾರ್ಯ ಮಾಡುತ್ತಿಿವೆ.

ಮನುಷ್ಯನ ಅನುಕೂಲಸಿಂಧು ಸ್ವಭಾವಕ್ಕೆೆ ತಕ್ಕುದಾಗಿ ಟೆಕ್ನಾಾಲಜಿಯು ಪರಿಹಾರ ರೂಪವಾಗಿ ಪೇಟೆಯಲ್ಲಿನ ಸಿನಿಮಾ ಥಿಯೇಟರನ್ನೇ ಮನೆಗೆ ಟೆಲಿವಿಷನ್ ಸೆಟ್ ಆಗಿ ತಂದುಕೊಟ್ಟಿಿತು. ಒಂದೇ ಸಿಟ್ಟಿಿಂಗ್‌ನಲ್ಲಿ ನೋಡಲಿಕ್ಕೆೆ ವೇಳೆ ಮತ್ತು ವ್ಯವಧಾನಗಳ ಕೊರತೆ ನೀಗಿಸಲಿಕ್ಕಾಾಗಿ ಅದೇ ದೀರ್ಘ ಸಿನಿಮಾ ಕಥೆಗಳು ತುಂಡು ತುಂಡಾಗಿ ಟಿವಿ ಧಾರಾವಾಹಿಗಳಾಗಿ ಬಂದವು. ಈ ಟಿವಿ ಸೀರಿಯಲ್‌ಗಳಿಗೆ ಇನ್ನೊೊಂದು ಹೆಸರು ಟಿವಿ ಸ್ಸೋ್‌ೃ ಅಂತ.

ಭಾರತದಲ್ಲಿ ಮೊದಲು ಚಾನೆಲ್ ಇದ್ದಿದ್ದು ಸರಕಾರಿ ಸ್ವಾಾಮ್ಯದ ‘ದೂರದರ್ಶನ’, ಸುದ್ದಿ, ಸಂಗೀತ, ವಾರದ ಸಿನಿಮಾ ಆದರೆ ಬೇಕಾದಷ್ಟಾಾಗಿತ್ತು. ಕೇಂದ್ರ ಮಂತ್ರಿಿಗಳೊಬ್ಬರು ವಿದೇಶಕ್ಕೆೆ ಹೋದಾಗ ಅಲ್ಲಿನ ಟೆಲಿವಿಷನ್‌ನಲ್ಲಿ ಒಳ್ಳೆೆಯ ಧಾರಾವಾಹಿಗಳನ್ನು ನೋಡಿದರಂತೆ. ಆಕರ್ಷಿತರಾಗಿ ವಿಶೇಷ ಅಭ್ಯಾಾಸ ಮಾಡಿ ವಾಪಸು ಬಂದು ದೂರದರ್ಶನದವರ ಜತೆ ಚರ್ಚೆ ಮಾಡಿದರಂತೆ. ಆಗ 1984 ರಲ್ಲಿ ಭಾರತದಲ್ಲಿ ಪ್ರಸಾರವಾದ ಮೊದಲ ಟಿವಿ ಧಾರಾವಾಹಿ ಹಿಂದಿಯಲ್ಲಿ ‘ಹಮ್ ಲೋಗ್’. ಪ್ರಸಿದ್ಧ ಹಿಂದಿ ಸಾಹಿತಿ ಮನೋಹರ ಶ್ಯಾಾಮ್ ಜೋಶಿಯವರು ಬರೆದಿದ್ದು. ಎಲ್ಲ ಕುಳಿತು ನೋಡುತ್ತಿಿದ್ದರು. ಮಧ್ಯಮ ವರ್ಗದ ಕೌಟುಂಬಿಕ ಕಥೆ.

ಬಹಳೇ ಜನಪ್ರಿಿಯವಾಗಿ ಒಟ್ಟು 154 ಧಾರಾವಾಹಿ ಕಂತುಗಳಲ್ಲಿ ಓಡಿತ್ತು. ಆಗಿನ ಕಾಲಕ್ಕೆೆ ಅದೊಂದು ದಾಖಲೆ. ಈಗ ಇದು ಲೆಕ್ಕವಿಲ್ಲ. ಮುಂದೆ ‘ಸ್ವಾಾಭಿಮಾನ’, ಬುನಿಯಾದ್’, ನುಕ್ಕಡ್’ ಮೊದಲಾದ ಧಾರಾವಾಹಿಗಳು ಬಂದವು. ಅಷ್ಟರಲ್ಲಿ 1995 ಸುಮಾರಿಗೆ ಜೀ ಮುಂತಾದ ಖಾಸಗಿ ಚಾನೆಲ್‌ಗಳ ಪ್ರವೇಶ ಆಯಿತು. ನಾವುಗಳು ಪೌರಾಣಿಕ ಗಾಥೆಗಳನ್ನು ಅಜ್ಜಿಿ, ಅಮ್ಮಂದಿರಿಂದ ಕೇಳಿದ್ದೆವು. ಸಿನಿಮಾ ನೋಡಿ ಕೂಡ ತಿಳಿದುಕೊಂಡಿದ್ದೆವು, ಆದರೆ ಕಥೆ ಇಷ್ಟೊೊಂದು ವಿಸ್ತೃತವಾಗಿ ತಿಳಿದದ್ದು ‘ರಾಮಾಯಣ’, ‘ಮಹಾಭಾರತ’ ಮತ್ತು ‘ಚಾಣಕ್ಯ’ ಟಿವಿ ಸೀರಿಯಲ್‌ಗಳನ್ನು ನೋಡಿದಾಗಲೇ. ಏನು ಕಾಸ್ಟಿಿಂಗ್ ಅಂತೀರಾ! ರಾಮ, ಆಂಜನೇಯ, ಕೃಷ್ಣ , ಮುಂತಾದ ಮುಖ್ಯ ಪಾತ್ರಗಳ ಚಾರಿತ್ರ್ಯ, ವೈಶಿಷ್ಟ್ಯಗಳು ಮನವರಿಕೆಯಾಗಿದ್ದೇ ಈ ಸೀರಿಯಲ್‌ಗಳಿಂದ. ಸಾಕಷ್ಟು ಸಮಯ ಮತ್ತು ಬಿಡಿಸಿ ಹೇಳುವ ಸಾಧ್ಯತೆಗಳು ಒಂದು ಪಾತ್ರದ ಬೆಳವಣಿಗೆಯಲ್ಲಿ ಒಳ್ಳೆೆಯ ಸಹಕಾರಿಗಳು.

ಮುಂದೆ 2000 ನೇ ಇಸವಿಯ ಸುಮಾರಿಗೆ ವಿದೇಶದಿಂದ ಸ್ಟಾಾರ್‌ಪ್ಲಸ್ ಚಾನೆಲ್ ಬಂದಿತ್ತು. ಸ್ವದೇಶೀ ಖಾಸಗಿ ಕ್ಷೇತ್ರದಲ್ಲಿ ಬಾಲಾಜಿ ಪ್ರೊೊಡಕ್ಷ್ಸ್ ಅಂಥ ಟಿವಿ ಪ್ರೊೊಡಕ್ಷನ್ ಕಂಪನಿಗಳು ತಲೆ ಎತ್ತಿಿದವು. ಕೌಟುಂಬಿಕ ವಸ್ತುವಿನ ಜಾಡಿನಲ್ಲಿ ನಂತರ ಬಾಲಾಜಿ ಬ್ಯಾಾನರ್‌ನ ಹೊರಗಡೆಗೂ ನೂರಾರು ಧಾರಾವಾಹಿಗಳು ಬಂದವು. ವ್ಯಾಾಪಾರೀ ರಿಯಲಿಟಿ ಶೋ ಮಾದರಿಗಳಲ್ಲಿ ‘ಬಿಗ್ ಬಾಸ್’, ಕೌನ್ ಬನೇಗಾ ಕರೋಡಪತಿ’, ಸರಿಗಮಪ’ ಮತ್ತು ಇತರ ನೃತ್ಯ ಶೋಗಳು ಹಲವಾರು ಬಂದವು. ನಮ್ಮ ಕನ್ನಡದ ಶಂಕರ್ ನಾಗ್ ನಿರ್ಮಿಸಿದ ‘ಮಾಲ್ಗುಡಿ ಡೇಸ್’ ಕ್ಲಾಾಸಿಕ್ ಆಗಿ ಮೂಡಿ ಬಂದು ಹಿಂದಿಯಲ್ಲಿ ಜಯಭೇರಿ ಬಾರಿಸಿತು, ನಮ್ಮಲ್ಲಿ ಕೂಡ ಟಿ.ಎನ್. ಸೀತಾರಾಂ ಅವರ ಬ್ಯಾಾನರ್‌ನಲ್ಲಿ ಅತ್ಯಂತ ಜನಪ್ರಿಿಯವಾಗಿ ಅನೇಕ ಧಾರಾವಾಹಿ ಟೈಟಲ್‌ಗಳು ಬಂದವು.

ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಿದ, ಮಾಡಲಾಗದ ಸಾಹಿತ್ಯ, ನಿರ್ದೇಶನ ಮತ್ತು ಅಭಿನಯ ಇವೆಲ್ಲ ಕ್ಷೇತ್ರಗಳ ಕಲಾಕಾರರು ಟಿವಿ ಕ್ಷೇತ್ರಕ್ಕೆೆ ವಲಸೆ ಬಂದರು ಎಂದು ಹೇಳಬಹುದು. ಈ ಬಾಲಾಜಿ ಪ್ರೊೊಡಕ್ಷ್ಸ್ನ ಒಡತಿ ಏಕ್ತಾಾ ಕಪೂರ್ ಹಾಕಿಕೊಟ್ಟದ್ದೇ ಟಿವಿ ಸೀರಿಯಲ್ ಉದ್ಯಮದ ನಿಯಮ ಮತ್ತು ಸೂತ್ರಗಳಾದವು. ಇವರ ಸೀರಿಯಲ್‌ಗಳಿಗೆ ಸಿಕ್ಕುವ ಜಾಹೀರಾತುಗಳ ಮೂಲಕ ಈ ಉದ್ಯಮಕ್ಕೆೆ ಹಣ ಹರಿದು ಬಂತು. ಕಲಾಕಾರರಿಗೆ ಸಿನಿಮಾ ಉದ್ಯಮಕ್ಕಿಿಂತ ಜಾಸ್ತಿಿ ಸಂಭಾವನೆ ಸಿಕ್ಕುವಂತಾಯಿತು. ಏಕ್ತಾಾ ಕಪೂರ್ ಹಿಂದಿ ಚಿತ್ರ ಜಗತ್ತಿಿನ ಜನಪ್ರಿಿಯ ನಟ ಜಿತೇಂದ್ರ ಅವರ ಮಗಳು. ಕೆಲವು ಹಿಂದಿ ಚಿತ್ರಗಳನ್ನು ಸೋದರನ ಜತೆಗೆ ನಿರ್ಮಾಣ ಮಾಡಿದ ಅನುಭವವಿತ್ತಷ್ಟೇ. ಇಲ್ಲಿ ಸ್ಟಾಾರ್ ಪ್ಲಸ್ ಚಾನೆಲ್‌ನ ಒಳ್ಳೆೆಯ ಪ್ರಾಾಯೋಜಿತ ಮಾರುಕಟ್ಟೆೆ ಸಿಕ್ಕಿಿತು. ಒಳ್ಳೆೆಯ ಧಾರಾವಾಹಿ ನಿರ್ಮಾಣದ ತಂಡ ಕಲೆ ಹಾಕಿದರು.

ಇಂಥವರೇ ಶೋ ಚಾಲಕರು ಅಥವಾ ನಿರ್ಮಾಪಕರು. ಈ ತಂಡದಲ್ಲಿ ಪ್ರಮುಖವಾಗಿ ಒಬ್ಬ ಮುಖ್ಯ ಲೇಖಕ ಇರ್ತಾರೆ. ಅವರೇ ಕಥೆ ಬರೀತಾರೆ ಅಥವಾ ಯಾವುದೋ ಮೂಲ ಕಥೆಯ ಹಂದರವನ್ನು ನಿರ್ಮಾಪಕ ತಂಡ ಜತೆ ಸೇರಿ ಆಯ್ದುಕೊಳ್ಳುತ್ತದೆ. ಇವರಿಗೆ ಸುಮಾರು ಉಪ ಲೇಖಕರು ಇರ್ತಾರೆ. ಸ್ಕ್ರಿ್ಟಿ್‌ೃ ಮತ್ತು ಸಂಭಾಷಣೆ ಬರೆಯಲಿಕ್ಕೆೆ. ಈ ಟಿವಿ ಲೇಖನ ಸಾಹಿತ್ಯಕ್ಕಿಿಂತ ಸ್ವಲ್ಪ ಭಿನ್ನ. ಈ ವ್ಯವಸ್ಥೆೆ ತಂಡದಿಂದ ತಂಡಕ್ಕೆೆ ಬದಲಾಗಬಹುದು. ಬಾಕಿ ನಿರ್ದೇಶಕರು ಮುಂತಾದ ಇತರ ತಂಡ ಸಿನಿಮಾಲೋಕದ ಥರಾನೇ.

ಧಾರಾವಾಹಿಗಳಿಗೆ ಕಥೆ ಬರೆಯುವ ಫಾರ್ಮುಲಾನೇ ಬೇರೆ ಇರುತ್ತದೆ. ಇಲ್ಲಿನ ಕಥಾವಸ್ತುಗಳಲ್ಲಿ ಪ್ರಮುಖ ಅಂಶಗಳು ಕುಟುಂಬ. ಸಂಯುಕ್ತ ಕುಟುಂಬವಿದ್ದರೆ ಇನ್ನೂ ಮೇಲು. ಮೂಢ ನಂಬಿಕೆಗಳು, ಸಂಪ್ರದಾಯಸ್ಥ ಹಳೇ ವಿಚಾರಗಳು, ಪ್ರೇಮ ಮದುವೆ ಇತ್ಯಾಾದಿ. ಅಮಾಯಕರು ಮೋಸ ಹೋಗುವದು, ಮಾಟ ಮಂತ್ರ, ಭೂತ ಪ್ರೇತ, ವ್ಯಕ್ತಿಿಯ ಅಪಹರಣ, ಸಾಧ್ಯವಾದರೆ ಕೊಲೆ. ಪೊಲೀಸ್ ಸ್ಟೇಷನ್, ಕೋರ್ಟ್ ಸೀನ್ ಇವುಗಳೇ ಆಯ್ಕೆೆಗೆ ಸಾಮಗ್ರಿಿಗಳು.

ಕಥೆಯಲ್ಲಿ ಬದುಕು ನಿಧಾನವಾಗಿ ಸಾಗಬೇಕು. ಇಲ್ಲಿ ಬದುಕಿಗೆ ದಂಡಿಯಾಗಿ ಸಮಯವಿದೆ. ಗಡಿಬಿಡಿ ವರ್ಜ್ಯ. ನವ ಸೊಸೆಯನ್ನು ಮನೆ ತುಂಬಿಸಿಕೊಳ್ಳಲು ಮುಂಬಾಗಿಲಿನಲ್ಲಿಯೇ ನಿಲ್ಲಿಸಿ ಹತ್ತು ಎಪಿಸೋಡ್ ತೆಗೆದರೂ ಚಿಂತೆಯಿಲ್ಲ. ಧಾರಾವಾಹಿಯ ಪ್ರಸ್ತುತಿಯನ್ನು ನಿರೂಪಣೆಯನ್ನು ರಬ್ಬರ್‌ನ್ನು ಎಳೆದು ಎಳೆದು ಎಷ್ಟು ಉದ್ದ ಮಾಡಿ ಮಾರಲಿಕ್ಕಾಾಗುತ್ತದೆಯೋ ಅಷ್ಟೇ ದುಡ್ಡು ಮತ್ತು ಟಿಆರ್‌ಪಿ.

ಏನಿದು ಟಿಆರ್‌ಪಿ? ಟೆಲಿವಿಷನ್ ರೇಟಿಂಗ್ ಪಾಯಿಂಟ್. ಅಂದ್ರೆೆ ದಿನದ ಬೇರೆ ಬೇರೆ ಸಮಯಗಳಲ್ಲಿ ಪ್ರೇಕ್ಷಕರು ಯಾವ ಪ್ರೋೋಗ್ರಾಾಮ್ ಎಷ್ಟು ಸಲ ನೋಡ್ತಾಾರೆ ಅನ್ನುವುದರ ಲೆಕ್ಕಾಾಚಾರ. ಒಂದು ಕಥಾವಸ್ತುವಿನ, ಒಂದು ಭಾವದ, ಒಂದು ಘಟನೆಯ, ಒಂದು ಧಾರಾವಾಹಿಯ, ಕಲಾಕಾರರ ಜನಪ್ರಿಿಯತೆಯನ್ನಳೆಯುವ ಸಾಧನ ಮತ್ತು ಪ್ರಕ್ರಿಿಯೆ. ಅಂದರೆ ಎಂಥಾ ಸರಕು ಮಾರಾಟವಾಗುತ್ತದೆ ಎಂಬುದರ ಲೆಕ್ಕಾಾಚಾರ. ಈ ಸಮೀಕ್ಷೆಗೆ ಕ್ರೆೆಟಿವ್‌ಸ್‌ (ಸೃಷ್ಟಿಿಕಾರರು) ಅಂತ ಇರ್ತಾರೆ. ಕಥಾವಸ್ತುವನ್ನು ಪ್ಲಾಾಟ್‌ನ್ನು ಮುಂದೂಡುವಂಥ ಉಪಾಯಗಳನ್ನು ಬಳಸುವುದು ಹಿತಕರ. ಕೊನೆಗೆ ಸುಳ್ಳು ಅನ್ಯಾಾಯಗಳ ಮೇಲೆ ಸತ್ಯ ಮತ್ತು ನ್ಯಾಾಯಗಳೇ ಗೆಲ್ಲಬೇಕು. ಆದರೆ ಸುಗಮವಾಗಿ ಅಲ್ಲ. ದಾರಿ ಕಠಿಣವಾಗಿರಬೇಕು.

ನಿರ್ವಾತದಿಂದ ಹುಟ್ಟಿಿ ಟಿವಿ ಧಾರಾವಾಹಿಗಳ ಒಂದು ದೊಡ್ಡ ಉದ್ಯೋೋಗವೇ ಸೃಷ್ಟಿಿಯಾಗಿ ಕಲೆಯ ಬೆಳವಣಿಗೆಯಾಗಿ ಕಲಾಕಾರರಿಗೆ ದೊಡ್ಡ ವೃತ್ತಿಿಯ ಸೃಷ್ಟಿಿಯಾಯಿತು. ಒಂದು ದೊಡ್ಡ ಪ್ರೇಕ್ಷಕ ವೃಂದ ಹುಟ್ಟಿಿಕೊಂಡಿತು. ಮಧ್ಯಮ ವರ್ಗದ ಮನೆಗಳಲ್ಲಿ ಮಧ್ಯಾಾಹ್ನದ, ಸಂಜೆಯ ದಿನಚರಿಗಳ ಚಿತ್ರ ಬದಲಾಗತೊಡಗಿತು. ಕುಟುಂಬದೊಳಗಿನ ಪರಸ್ಪರ ಮಾತು, ಗಮನ, ಸೇವೆಗಳ ವಿನಿಮಯಗಳ ರೂಲುಗಳು ಬದಲಾಗತೊಡಗಿದವು. ಸಂಬಂಧ ಸೌಹಾರ್ದಗಳು ಹಳಸತೊಡಗಿದವು. ಓದುವ ಮಕ್ಕಳ ಹೋಮ್ ವರ್ಕ್, ಮನೆ ಓದು ಕುಂಠಿತವಾಗತೊಡಗಿದವು. ಮಕ್ಕಳು ಟಿವಿಯಲ್ಲಿ ಬರುವ ಕಾರ್ಟೂನು, ಫ್ಯಾಾಂಟಸಿ ಕಥೆಗಳ, ಹಿಂಸಾತ್ಮಕ ಸ್ಟಂಟ್‌ಗಳ ದಾಸರಾಗತೊಡಗಿದರು. ಪಾಲಕರಿಗೆ ಮಕ್ಕಳ ಸ್ಕೂಲು ಗ್ರೇಡ್‌ಗಳ ಬಗ್ಗೆೆ ಕಾಳಜಿ ಹುಟ್ಟಿಿಕೊಂಡಿತು. ಮಾಧ್ಯಮದಲ್ಲಿನ ಹಿಂಸೆ ಸಮಾಜದಲ್ಲಿ ಇಣುಕತೊಡಗಿತು. ಟಿವಿ ಪ್ರೈಮ್ ಟೈಮ್ ಸುತ್ತ ಹೊಂದಿಸಿಕೊಂಡು ಮನೆಯಲ್ಲಿನ ಎಲ್ಲರ ದಿನಚರಿಗಳ ವೇಳೆ ಮಾರ್ಪಾಡಾಗಬೇಕಾಯಿತು. ಜನ ಇನ್ನಷ್ಟು ಸೋಫಾಗಳಿಗೆ ಅಂಟಿಕೊಂಡರು.

ಈ ನಿಶ್ಚಲತನದಿಂದಾಗಿ ಕಾಯಿಲೆಗಳನ್ನು ಅಂಟಿಸಿಕೊಂಡರು. ಟಿವಿಯಲ್ಲಿ ಕಣ್ಣುಗಳನ್ನು ನೆಟ್ಟು ಕೂರುವ ಚಟ ಮಾಮೂಲಾಯಿತು. ಆಹಾರ ಆರ್ಡರ್ ಮಾಡಲ್ಪಟ್ಟು ಹೊರಗಡೆಯಿಂದ ಬರಲುತೊಡಗಿತು. ರಿಮೋಟ್‌ಗೆ ಹೊಡೆದಾಟ ಶುರು ಆಯ್ತು. ಈ ಬದಲಾವಣೆಯ ದುಷ್ಪರಿಣಾಮಗಳನ್ನು ಕೆಲವರು ಸ್ವಯಂ ಗಮನಿಸಿ ಚಿಕ್ಕ ಪುಟ್ಟ ಸುಧಾರಣೆಗಳನ್ನು ಮಾಡಲು ಶುರು ಮಾಡಿಕೊಂಡರು. ಒಂದೇ ಸಮಾಧಾನದ ವಿಷಯವೆಂದರೆ ಒಂದು ಸಮೀಕ್ಷೆಯ ಪ್ರಕಾರ ಮಕ್ಕಳಿಗಿರುವ ಈ ಗೀಳು ದೊಡ್ಡವರಾದ ಹಾಗೆ ತನ್ನಿಿಂದ ತಾನೇ ಹೊರಟುಹೋಗಬಹುದು ಅಂತೆ, ಅಸಾಮಾನ್ಯ ಉದಾಹರಣೆಗಳನ್ನು ಬಿಟ್ಟರೆ. ಈಗ ಸದ್ಯದ ಸ್ಕೂಲ್ ಗ್ರೇಡ್‌ಗಳನ್ನು ಟಿವಿ ಇದ್ದಾಗ್ಯೂ ಕಾಪಾಡಿಕೊಂಡಿದ್ದರೆ ಸಾಕಿತ್ತು!

ಇದು ಬಾಹ್ಯ ಭೌತಿಕ ಆತಂಕ. ಇದಕ್ಕಿಿಂತ ಗಂಭೀರ ಸಮಸ್ಯೆೆ ಇನ್ನೊೊಂದಿದೆ. ಇದು ಸ್ಪರ್ಧಾ ಯುಗ. ದಿನ ನಿತ್ಯ ಕೇಳುತ್ತೇವೆ. ಈ ಸುದ್ದಿ ಕೇವಲ ನಮ್ಮ ಚಾನೆಲ್ ಮೇಲೆ. ಈ ಸುದ್ದಿ ಬೇರೆ ಎಲ್ಲ ಚಾನೆಲ್‌ಗಳಿಗಿಂತ ಮೊದಲು ನಮ್ಮ ಚಾನೆಲ್ ಮೇಲೆ ಅಂತ. ಇಷ್ಟು ವಾರಗಳಿಂದ ಅಖಂಡವಾಗಿ ನಮ್ಮ ಚಾನೆಲ್ ಪ್ರಥಮ ಸ್ಥಾಾನದಲ್ಲಿ. ಇದನ್ನೇ ಧಾರಾವಾಹಿಗಳ ವಿಷಯದಲ್ಲಿ ಏನಾಗುತ್ತಿಿದೆ ಎಂದು ನೋಡೋಣ. ಧಾರಾವಾಹಿಗಳಲ್ಲಿ ಅಪಾರ ಗಳಿಕೆಯ ಸಾಧ್ಯತೆಯಿದೆ. ಜಾಹೀರಾತುಗಳಲ್ಲಿ ಅಪಾರ ಸಂಪತ್ತು ಇದೆ. ಒಂದು ಧಾರಾವಾಹಿಯನ್ನು ಜನಪ್ರಿಿಯ ಮಾಡಿದಷ್ಟೂ ಜಾಸ್ತಿಿ ಟಿಆರ್‌ಪಿ ಲಭ್ಯ. ಟಿಆರ್‌ಪಿ ಬಂದಷ್ಟೂ ಹೆಚ್ಚೆೆಚ್ಚು ಜಾಹೀರಾತುಗಳು ಲಭ್ಯ. ಜತೆಗೆ ಧಾರಾವಾಹಿಯ ಆಯುಸ್ಸದ ರೇಖೆ ವೃದ್ಧಿಿ. ಇದರಲ್ಲಿ ತೊಡಗಿದ ಕಲಾವಿದರಿಗೆಲ್ಲ ಹೆಚ್ಚೆೆಚ್ಚು ಗಳಿಕೆ ಮತ್ತು ಭವಿಷ್ಯದ ಭದ್ರತೆ. ಹಾಗಾಗಿ ನಮ್ಮ ಸೃಷ್ಟಿಿಕಾರರು (ಕ್ರಿಿಯೇಟಿವ್‌ಸ್‌), ಲೇಖಕರು ಎಲ್ಲಾ ಸೇರಿ ಕಥೆ, ಸನ್ನಿಿವೇಶ, ಪಾತ್ರ, ಮುಖ್ಯವಾಗಿ ಸಂಭಾಷಣೆ ಎಲ್ಲವನ್ನೂ ಹಿಗ್ಗಿಿಸಿ ಸಂವೇದನಾಭರಿತ ಮತ್ತು ಸ್ಫೋೋಟಕವಾಗಿ ಮಾಡಲು ತಮ್ಮ ಸರ್ವ ಬಲವನ್ನೂ ತೊಡಗಿಸಿಬಿಡುತ್ತಾಾರೆ. ಪಾಸಿಟಿವ್ ಮತ್ತು ನೆಗಟಿವ್ ಎರಡೂ ಪಾತ್ರಗಳು ತಮ್ಮ ತಮ್ಮ ದಿಶೆಗಳಲ್ಲಿ ಮಿಂಚುವಂತೆ ಸ್ಕ್ರಿ್ಟಿ್‌ೃ ಬರೆಯಲಾಗುತ್ತದೆ.

ಮನುಷ್ಯ ಮಾತ್ರರಾದ ಒಬ್ಬ ಅತ್ತೆೆ, ಒಬ್ಬ ಸೊಸೆ, ಒಬ್ಬ ಅತ್ತಿಿಗೆ, ಒಬ್ಬ ನಾದಿನಿ, ವಾರಗಿತ್ತಿಿಯರು, ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು ಒಬ್ಬರೊಬ್ಬರ ದಿಶೆಯಲ್ಲಿ ಸ್ವಾಾಭಾವಿಕ ಪ್ರಸಂಗಗಳಲ್ಲಿ ಎಷ್ಟು ಅಸೂಯೆ ಪಡಲು, ಎಷ್ಟು ದ್ವೇಷ ಸಾಧಿಸಲು ಸಾಧ್ಯ? ದೈಹಿಕ ಅಥವಾ ಮಾನಸಿಕ ಹಾನಿ ಮಾಡುವ ಸಾಧ್ಯತೆ ಇರುವುದೇ ಇಲ್ಲ. ಮನೆ ಮನ ಒಡೆಯುವ ಕೆಲಸ ಸಾಮಾನ್ಯವಾಗಿ ಮಾಡಲಾರರು. ಒಂದು ನಿರುಪದ್ರವಿ ಅಸೂಯೆ ಇರಬಹುದಷ್ಟೇ! ಅಸೂಯೆ ಮಾಡುವವರಿಗೇ ಹಾನಿಯೇ ಹೊರತು ಬೇರೆಯವರಿಗಲ್ಲ. ಇದು ಟಿವಿ ಯುಗದ ಮುಂಚಿನ ಅಪ್ರಚೋದಿತ ಕಾಲದ ಮಾತು.

ಆದರೆ ಈ ಆಧುನಿಕ ಕಾಲದಲ್ಲಿ ಟಿವಿ ನಿರ್ದೇಶಕರುಗಳು, ದೃಶ್ಯ ಸಂಯೋಜಕರು, ಸಂಭಾಷಣಾಕಾರರು ಸಹಜತೆಯಿಂದ ಆಚೆ ಬಂದು ಎಷ್ಟು ಕ್ರಿಿಯೇಟಿವ್ ಆಗಲು ಸಾಧ್ಯ ನೋಡೋಣ ಅಂತ ಪೈಪೋಟಿಗೆ ಇಳಿಯುತ್ತಾಾರೆ. ನೆಗೆಟಿವ್ ದಿಶೆಯಲ್ಲಿ ಇನ್ನೂ ಕೆಟ್ಟ ಕೆಟ್ಟದಾಗಿ ಊಹಿಸುತ್ತ ಹೋಗುತ್ತಾಾರೆ. ಗಾಜಿನ ಪರದೆಯ ಮೇಲೆ ಖಳನಾಯಕ ನಾಯಕಿಯರ ದುಷ್ಟ ಯೋಚನೆಗಳು, ಯೋಜನೆಗಳು ಪರಾಕಾಷ್ಠೆೆಗೆ ತಲುಪಲು ಹೊರಟು ಬಿಡುತ್ತವೆ. ನಮ್ಮ ಪ್ರೇಕ್ಷಕ ಗಣದಲ್ಲಿ ಅದೆಷ್ಟೋೋ ದುರ್ಬಲ ಮನಸ್ಸುಗಳು ಬೊಗಸೆಯೊಡ್ಡಿಿ ಕೂತಿರುತ್ತವೆ. ತಮ್ಮ ಮನೆಗಳಲ್ಲಿರುವ ಅದೇ ತರಹದ ನೆಂಟಸ್ಥನದ ಕೊಂಡಿಗಳನ್ನು ಸ್ಮತಿಪಟಲದ ನೇಪಥ್ಯದಲ್ಲಿ ಮೂಡಿಸಿಕೊಂಡಿರುತ್ತವೆ. ನೆಗೆಟಿವ್ ಪ್ರವೃತ್ತಿಿ ದೃಶ್ಯರೂಪವಾಗಿ ಕಣ್ಣೆೆದುರು ಸುಳಿದಾಗ ಮನಸ್ಸಿಿನೊಳಗೆ ನಾಟಿಕೊಂಡು ಬಿಡುತ್ತದೆ. ಒಳ್ಳೆೆಯ ಪ್ರವೃತ್ತಿಿಗಳನ್ನು ಎತ್ತಿಿಕೊಂಡು ಅನುಕರಿಸುವುದು ಕಷ್ಟ. ಕೆಟ್ಟದ್ದು ಸುಲಭವಾಗಿ ಅಂಟಿಕೊಂಡು ಬಿಡುತ್ತದೆ. ಈ ಖಳನಾಯಕಿಯ, ಸಣ್ಣ ಪುಟ್ಟ ಕುಹಕಿಗಳ ವರ್ತನೆ, ಸಂಚು, ಪಿತೂರಿಗಳು ಅಪೀಲ್ ಆಗಿ ಅಂಟಿಕೊಳ್ಳುವ ಸಾಧ್ಯತೆ ಬಲವಾಗಿ ಇರುತ್ತದೆ. ‘ನಾನೂ ಹೀಗೆಯೇ ಮಾಡಿದರೆ ಏನು ತಪ್ಪುು? ಆ ಧಾರಾವಾಹಿಯಲ್ಲಿ ಅವಳು ಮಾಡಲಿಲ್ಲವೇ?’ ಎನ್ನುವ ಸ್ವಗತ ಧ್ವನಿಸುತ್ತದೆ ಒಳಗೊಳಗೇ. ಜೀವನ ಬೇರೆ, ಅದು ಟಿವಿ ಕಥೆ ನೋಡಿ ಅಲ್ಲಿಯೇ ಮರೆಯಬೇಕಾದ್ದು ಎನ್ನುವ ಸ್ವಂತಿಕೆ, ಪ್ರಬುದ್ಧತೆ, ಒಳ್ಳೆೆಯ, ಗಟ್ಟಿಿ ಮನಸ್ಸು ಎಷ್ಟು ಜನಕ್ಕಿಿದ್ದೀತು?

ಎಷ್ಟೋೋ ಕುಟುಂಬಗಳಲ್ಲಿ ಮೂಕ ವೈಮನಸ್ಸುಗಳಾಗೋದು, ಎಷ್ಟೋೋ ಮನ, ಮನೆಗಳು ಒಡೆಯುವುದನ್ನು ನೋಡುತ್ತಿಿದ್ದೀವಲ್ಲ. ಇವಕ್ಕೆೆಲ್ಲ ನೇರ ಅಥವಾ ಬಳಸು ಪ್ರೇರಣೆ ಎಂದರೆ, ಟಿವಿ ಧಾರಾವಾಹಿಗಳು ಎಂಬುದು ನನ್ನ ಊಹೆ.
ಅಲ್ಲಾ, ಸ್ವಾಾಮಿ ಕ್ರಿಿಯೇಟಿವ್‌ಗಳಾ ನೀವು ನಿಮ್ಮ ಕಥೆಗಳಲ್ಲಿ ವಿಲನ್‌ಗಳನ್ನೂ ವ್ಯಾಾಂಪ್‌ಗಳನ್ನೂ ಜಾಸ್ತಿಿ ವೈಭವೀಕರಿಸಿದಷ್ಟೂ ನಿಮ್ಮಗಳಿಗೆ ಟಿಆರ್‌ಪಿ ಸುರಿಮಳೆ. ನಿಮಗೆ ಬೋನಸ್ಸು. ಆದರೆ ನಿಮ್ಮ ಇದೇ ಕ್ರಿಿಯೇಟಿವಿಟಿ ಎಷ್ಟು ಅಮಾಯಕ ಕುಟುಂಬಗಳನ್ನು ಒಡೆದಿದೆಯೋ ಅಂತ ಯಾವತ್ತಾಾದರೂ ಯೋಚನೆ ಮಾಡಿದ್ದಿರಾ? ಇನ್ನು ಮುಂದಾದರೂ ಆ ಕುರಿತ ಯೋಚಿಸುತ್ತೀರಾ? ಬರಿ ದೃಶ್ಯ ಮಾಧ್ಯಮದ ಸೆನ್ಸರ್ ನಿಯಮಗಳನ್ನು ಪಾಲಿಸಿದರೆ ಆಯ್ತಾಾ? ನಿಮಗೆ ಸಾಮಾಜಿಕ ಸ್ವಾಾಸ್ಥ್ಯದ ಬಗ್ಗೆೆ ಜವಾಬ್ದಾಾರಿಯ ಯೋಚನೆ ಬೇಡವಾ?