ಸುಪ್ತ ಸಾಗರ
rkbhadti@gmail.com
ಪ್ರಕೃತಿಯ ಜೀವಿಸಂಪತ್ತನ್ನು ನಿಖರವಾಗಿ ಗುರುತಿಸುವುದು, ಪಟ್ಟಿ ಮಾಡುವುದು ಆಕಾಶದಲ್ಲಿರುವ ನಕ್ಷತ್ರಗಳನ್ನು ಎಣಿಸುವಷ್ಟೇ ಕಷ್ಟದ ಕೆಲಸ. ಆದರೆ ವಿಜನಿಗಳು ಹತ್ತು ಕೋಟಿ ಜೀವಿಗಳು ಇರಬಹುದೆಂದು ಅಂದಾಜು ಮಾಡಿದ್ದಾರೆ. 250 ವರ್ಷಗಳಲ್ಲಿ ವಿಜನಿಗಳು ಜೀವಿ ವೈವಿಧ್ಯ ಭಂಡಾರದ ಗಣತಿಯಲ್ಲಿ 17 ಲಕ್ಷ ಪ್ರಭೇದಗಳನ್ನು ಮಾತ್ರ ಗುರುತಿಸಿದ್ದಾರೆ.
ನಮ್ಮ ಭೂಮಿಯ ಮೇಲೆ ಎಷ್ಟು ಜೀವಿಗಳಿರಬಹುದು? ಏಕಕೋಶ ಜೀವಿ ಅಮೀಬಾದಿಂದ ಹಿಡಿದು ಅತಿಬುದ್ಧಿವಂತ ಜೀವಿ ಎನಿಸಿಕೊಂಡಿರುವ ಮನುಷ್ಯನವರೆಗಿನ ಭೂಮಂಡಲದ ಮೇಲಿನ ಕೋಟ್ಯಂತರ ಜೀವ ವೈವಿಧ್ಯ ಅಚ್ಚರಿ ಹುಟ್ಟಿಸುತ್ತದೆ. ಆದರೆ ನಾವು ಸಾಮಾನ್ಯರು ಈ ಪೈಕಿ ಹೆಚ್ಚೆಂದರೆ ಒಂದೆರಡು ನೂರು ಜೀವಿಗಳನ್ನು ಇಡೀ ಜೀವಮಾನದಲ್ಲಿ ನೋಡಿರಬಹುದು. ಹಾಗಾ ದರೆ ಕೋಟ್ಯಂತರ ಜೀವಿಗಳಿವೆ ಎಂಬುದನ್ನು ಗುರುತಿಸಿ ದ್ದಾದರೂ ಯಾರು? ಸಹಜವಾಗಿ ಅದೇ ಕೆಲಸದಲ್ಲಿ ನಿರತ ಜೀವ ವಿಜ್ಞಾನಿಗಳು.
ಮುಂದಿನ ಪ್ರಶ್ನೆ ಅವರು ಈ ಎಲ್ಲ ಜೀವಿಗಳನ್ನೂ ಬೇರೆ ಬೇರೆಯಾಗಿ ಗುರುತಿಸುವುದಾ ದರೂ ಹೇಗೆ? ಇದು ನಿಜವಾಗಿ ಕೌತುಕದ ಸಂಗತಿ. ಇಂಥ ಜೀವಿ ಬಗೆಯನ್ನು ತಾಂತ್ರಿಕವಾಗಿ ‘ಪ್ರಭೇದ’ ಎನ್ನಲಾಗುತ್ತದೆ. ಅಧ್ಯಯನದ ಸೌಕರ್ಯಕ್ಕಾಗಿ ಹೀಗೆ ಪ್ರಭೇದಗಳನ್ನಾಗಿ ವಿಜ್ಞಾನಿಗಳು ವರ್ಗೀ ಕರಿಸಿ ಕೊಂಡಿರುತ್ತಾರೆ. ಒಂದು ಪ್ರಭೇದ ಎಂದರೆ ತಮ್ಮ ತಮ್ಮಲ್ಲೇ ಸಂತಾನ ಕ್ರಿಯೆಗೆ ತೊಡಗಿ -ಲವಂತ ಪೀಳಿಗೆಯನ್ನು ಉತ್ಪತ್ತಿ ಮಾಡಬಲ್ಲ ಜೀವಿಗಳ ಗುಂಪು.
ಪ್ರತಿಯೊಂದೂ ರೀತಿಯ ಪ್ರಾಣಿ ಅಥವಾ ಸಸ್ಯ ಒಂದು ನಿರ್ದಿಷ್ಟ ಪ್ರಭೇದಕ್ಕೆ ಸೇರಿರುತ್ತದೆ. ಪ್ರಕೃತಿಯ ಇಂಥ ಇಡೀ ಜೀವಿಸಂಪತ್ತನ್ನು ನಿಖರವಾಗಿ ಗುರುತಿಸುವುದು, ವಿಭಾಗಿಸುವುದು, ಪಟ್ಟಿ ಮಾಡುವುದು ಆಕಾಶದಲ್ಲಿರುವ ನಕ್ಷತ್ರಗಳನ್ನು ಎಣಿಸುವಷ್ಟೇ ಕಷ್ಟದ ಕೆಲಸ. ಆದರೆ ವಿಜನಿಗಳು ಒಂದರಿಂದ ಹತ್ತು ಕೋಟಿ ಜೀವಿಗಳು ಇರಬಹುದೆಂದು ಅಂದಾಜು ಮಾಡಿದ್ದಾರೆ. ಆದರೆ, ಕಳೆದ 250 ವರ್ಷಗಳಲ್ಲಿ ವಿಜನಿಗಳು ನಿಸರ್ಗದ ಜೀವಿ ವೈವಿಧ್ಯ ಭಂಡಾರದ ಗಣತಿಯಲ್ಲಿ ತೊಡಗಿ 17 ಲಕ್ಷ ಪ್ರಭೇದಗಳನ್ನು ಮಾತ್ರ ಗುರುತಿಸಿದ್ದಾರೆ.
ತಿಳಿದಿದ್ದು ಇನ್ನೂ ಸಾಸಿವೆಯಷ್ಟು. ತಿಳಿದುಕೊಳ್ಳಬೇಕಾಗಿರುವುದು ಸಾಗರದಷ್ಟು ಎಂಬಂತೆ ಶೇ.೮೦ ಜೀವ ವೈವಿಧ್ಯ ವನ್ನು ಪತ್ತೆ ಹಚ್ಚಬೇಕಾ ಗಿರುವುದು ಜೀವ ವಿಜನಿ ಗಳಿಗೆ ಬಹುದೊಡ್ಡ ಸವಾಲು ಎನ್ನುತ್ತಾರೆ ಬೆಂಗಳೂರು ವಿಶ್ವವಿದ್ಯಾಲಯದ ಜೈವಿಕ ವಿಜ್ಞಾನ ವಿಭಾಗದ ಸಂಶೋಧಕರಾದ ಡಾ||ಎಚ್.ಪಿ. ಪುಟ್ಟರಾಜು ಹಾಗೂ ಡಾ||ಹುಚ್ಚೇಶ ಸಿ. ಹೂಲಗೇರಿ. ಇವರ ನೇತೃತ್ವದಲ್ಲಿ ಬೆಂಗಳೂರು ವಿವಿಯ ಪ್ರಯೋಗಾಲಯದಲ್ಲಿ ರೇಷ್ಮೆ ಹುಳುವಿನ ಪರಾವಲಂಬಿ ಕೀಟವಾದ ಊಜಿನೊಣದ ತಳಿಯ ವೈವಿಧ್ಯವನ್ನು ಕುರಿತು ಡಿಎನ್‌ಎ ಬಾರ್‌ಕೊಡಿಂಗ್ ತಂತ್ರಜನ ಮಹತ್ವದ
ಪುರಾವೆಯನ್ನು ಪತ್ತೆಹಚ್ಚಿದ್ದಾರೆ.
ಕ್ರಿ.ಶ.18 ಶತಮಾನದಲ್ಲಿ ಕರೋಲಸ್‌ಲೇನಿಯಸ್ ಎಂಬ ಪ್ರಕೃತಿ ಶಾಸ್ತ್ರಜ್ಞ ಮೊದಲ ಬಾರಿಗೆ ಜೀವಿಗಳ ವರ್ಗೀಕರಣ ಶಾಸ್ತ್ರಕ್ಕೆ ಕೈ ಹಾಕಿದ. ಈ ಹಿನ್ನೆಲೆಯಲ್ಲಿ ಅವರನ್ನು ಆಧುನಿಕ ವರ್ಗೀಕರಣದ ಪಿತಾಮಹ ಎಂದೇ ಕರೆಯುತ್ತಾರೆ. ಪಾರಂಪರಿಕ ವರ್ಗೀಕರಣ ಶಾಸ್ತ್ರವೆಂದರೆ ‘ಚಹರೆ
ಪಟ್ಟಿ’ಯನ್ನು ಆಧರಿಸಿ ಜೀವಿಗಳನ್ನು ಗುರುತಿಸುವ ವಿಧಾನ. ಇದರಲ್ಲಿ ಜೀವಿಗಳಲ್ಲಿ ಕಂಡುಬರುವ ವಿವಿಧ ಹೋಲಿಕೆ ಗಳನ್ನು ಮಾನದಂಡವಾಗಿಸಿ ಕೊಂಡು ವರ್ಗಿಕರಿಸಲಾಗುತ್ತದೆ. ಒಂದೇ ರೀತಿಯ ಲಕ್ಷಣವುಳ್ಳ ಜೀವಿಯನ್ನು ಒಂದೊಂದು ಗುಂಪಿನಲ್ಲಿ ಸೇರಿಸುತ್ತಾರೆ. ಆಗ ಗುಂಪಿನ ಮಾದರಿ ಜೀವಿಯ ವಿವರ ಅಧ್ಯಯನ ಇಡಿ ಗುಂಪಿನ ಮುಖ್ಯ ಲಕ್ಷಣಗಳನ್ನು ಅರ್ಥಮಾಡಿ ಕೊಳ್ಳಲು ಸಾಧ್ಯವಾಗುತ್ತದೆ. ಆದರೆ, ಜೀವಶಾಸ್ತ್ರೀಯ ನಾಮಕರಣ ವ್ಯವಸ್ಥೆಗೆ ಅತ್ಯಂತ ಕಷ್ಟಕರವಾದ, ಸಂಕೀರ್ಣ ನಿಯಮಗಳಿವೆ. ಈ ವಿಧಾನದಲ್ಲಿ ಜೀವಿಗಳನ್ನು ಗುರುತಿಸಲು ಸಾಕಷ್ಟು ಪರಿಣತಿ ಬೇಕಾಗುತ್ತದೆ. ಅಲ್ಲದೆ, ಈ ವಿಧಾನದಿಂದ ಜೀವಿ ಗಳನ್ನು ನಿಗದಿತವಾದ ಜೀವನದ ಒಂದು ಹಂತದಲ್ಲಿ ಮಾತ್ರ ಗುರುತಿಸಬಹುದು.
ಇದಕ್ಕಿಂತ ಸವಾಲಿನ ಇನ್ನೊಂದು ಸಮಸ್ಯೆ ಎಂದರೆ ಬಾಹ್ಯವಾಗಿ ಒಂದೇ ಹೋಲಿಕೆ ಇದ್ದು ಅನುವಂಶಿಕ ಆಧಾರದಲ್ಲಿ ವಿಭಿನ್ನವಾಗಿರುವ ಕ್ರಿಪ್ಟಿಕ್‌ನಂಥ ಪ್ರಭೇದಗಳನ್ನು ಗುರುತಿಸುವುದು ಈ ವಿಧಾನದಿಂದ ಅಸಾಧ್ಯ. ಪ್ರಭೇದಗಳು ಜೀವ ವೈವಿಧ್ಯದ ಮೂಲಭೂತ ಭಾಗ. ಪ್ರಭೇದಗಳ ಅಧ್ಯಯನ ಅನ್ವಯಿಕ ಹಾಗೂ ಮೂಲ ವಿಜನದ ಎರಡರ ದೃಷ್ಟಿಯಿಂದಲೂ ಮಹತ್ವ ಪಡೆದಿವೆ. ಆದ್ದರಿಂದ ಜೀವಿ ವೈವಿಧ್ಯವನ್ನು ತಿಳಿಯುವುದು, ದಾಖ ಲಿಸುವುದು, ರಕ್ಷಿಸುವುದು ಮುಖ್ಯ.
ಪ್ರಕೃತಿಯಲ್ಲಿರುವ ಎಲ್ಲ ಜೀವ ಪ್ರಭೇದ ಗಳಿಗೂ ತಮ್ಮದೆ ಆದ ಮೌಲ್ಯ, ಪ್ರಾಮುಖ್ಯ ಇರುವದರಿಂದ ಜೀವ ಪ್ರಭೇದದ ಪೂರ್ಣ ಜನದಿಂದ ಆಹಾರ ಉತ್ಪಾದನೆ ಹೆಚ್ಚಳ, ತಳಿ ಅಭಿವೃದ್ಧಿ, ರೋಗ ಹಾಗು ಕೀಟ ನಿಯಂತ್ರಣ, ವನಸ್ಪತಿ/ಔಷಧೋದ್ಯಮದ ಅಭಿವೃದ್ಧಿ, ಇಂಧನ, ಉರುವಲು, ಕೃಷಿ, ಅರಣ್ಯ, ಹೈನುಗಾರಿಕೆ, ಪ್ರಾಣಿಸಾಕಣೆ ಮುಂತಾದ ಕ್ಷೇತ್ರಗಳಲ್ಲಿ ಜೀವಿವೈವಿಧ್ಯ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಆದ್ದರಿಂದ ಸಮೃಧ ಜೀವಿವೈವಿಧ್ಯವನ್ನು ಸಂರಕ್ಷಿಸಬೇಕಾಗಿದೆ.
ಹೀಗೊಂದು ಲೆಕ್ಕಾಚಾರ. ಒಟ್ಟು ಭೂಗೃಹದ ಈಗಿನ ಜೀವಿ ಭಂಡಾರವನ್ನು ಗುರುತಿಸಲು ಎಷ್ಟು ಕಾಲ ಬೇಕಾಗಬಹುದು? ನಿಮಗೆ ಅಚ್ಚರಿ ಆಗಬಹುದು, ಹಗಲು-ರಾತ್ರಿ ಎನ್ನದೇ ಸುಮಾರು 30300 ವರ್ಗೀಕರಣ ಶಾಸ್ತ್ರಜ್ಞರು 1200 ವರ್ಷ ಬರೀ ಈ ಕೆಲಸವನ್ನೇ ಮಾಡಿದರೆ ಕೆಲಸ
ಒಂದು ಮಟ್ಟಿಗೆ ಮುಗಿಯುತ್ತದೆ. ದುರಂತವೆಂದರೆ ಅಷ್ಟ ರಲ್ಲೇ ನಾವು ತಿಳಿದುಕೊಳ್ಳಬೇಕಾದ ಹಲವಾರು ಜೀವ ಸಂಪತ್ತು ನಶಿಸಿಹೋಗಿರುತ್ತದೆ. ನಮ್ಮ ಪುಸ್ತಕಗಳು, ಬಟ್ಟೆ-ಬರೆಗಳಂಥ ವಸ್ತುಗಳನ್ನು ಜೋಡಿಸಿಕೊಳ್ಳು ವುದೇ ನಮಗೆ ಕಷ್ಟದ ಕೇಲಸ. ಇನ್ನು ಈ ಭೂಮಂಡ ಲದ ವ್ಯವಿಧ್ಯದ ಸಂಖ್ಯೆಯನ್ನು ಗುರುತಿಸುವುದು ಹೇಗೆ ಅಂತಿರಾ? ಒಂದೊಮ್ಮೆ ಬೇಗನೆ, ಸರಳವಾಗಿ ಗುರುತಿಸುವ ವಿಧಾನ ಇದ್ದಿದ್ದರೆ?! ಅದಕ್ಕಾಗಿಯೇ ಹೊಸ ವಿಧಾನ ವೊಂದನ್ನು ಜೀವ ವಿಜ್ಞಾನಿಗಳು ಕಂಡುಕೊಂಡಿದ್ದಾರೆ.
ಹೌದು, ಇತ್ತೀಚಿನ ವರ್ಷಗಳಲ್ಲಿ ಅಣುಜೀವಿ ಶಾಸ್ತ್ರದ ಬೆಳವಣಿಗೆಯಿಂದ ಜೀವಿಗಳ ಗುಣ ವಿಶ್ಲೇಷಣೆ ಮಾಡಿ ವರ್ಗೀಕರಿಸಲು ಹೊಸ ವಿಧಾನಗಳು ರೂಪುಗೂಂಡಿದೆ. ಅದುವೆ ಡಿಎನ್‌ಎ (ಡಿಆಕ್ಸಿರೈ ಬೋಸ್ ನ್ಯೂಕ್ಲಿಕ್ ಆಸಿಡ್) ಬಾರ್ ಕೋಡಿಂಗ್. ಡಿಎನ್‌ಎ ಬಾರ್ ಕೋಡಿಂಗ್ ಎಂಬುದು ಅತ್ಯಂತ ವಿನೂತನ ತಂತ್ರಜನ. ಅನ್ನವನ್ನು ತಯಾರಿಸುವವಾಗ ಒಂದು ಅಗಳನ್ನು ಹಿಸುಕಿ ಅನ್ನ ಆಗಿದೆಯೋ ಇಲ್ಲವೋ ಎಂದು ನಿರ್ಧರಿಸಬಹುದಲ್ಲವೆ?
ಹಾಗೆಯೆ ಡಿಎನ್‌ಎ ಬಾರಕೋಡ್ ಎಂದರೆ ಡಿಎನ್‌ಎ ತುಣುಕೊಂದನ್ನು ಆಧಾರವಾಗಿರಿಸಿಕೊಂಡು ಪ್ರಭೇದ ಗಳನ್ನು ಅಧ್ಯಯನ ಮಾಡುವ ನವೀನ ತಂತ್ರಜನ.
ನಾವು ಇಲ್ಲಿ ಪ್ರಮುಖವಾಗಿ ಡಿಎನ್‌ಎ ಬಗ್ಗೆ ಹಾಗೂ ಬಾರ್ ಕೋಡಿಂಗ್ ಬಗ್ಗೆ ಅರ್ಥೈಸಿಕೊಳ್ಳಬೇಕಾಗುತ್ತದೆ. ಮೊದಲಿಗೆ ಡಿಎನ್‌ಎ ಬಗ್ಗೆ ಕೊಂಚ ತಿಳಿಯೋಣ. ನಮ್ಮ ದೇಹದ ರಚನೆ ಮತ್ತು ಕಾರ್ಯಗಳಿಗೆ ಅಣುಗಳೆ ಆಧಾರ ಎಂಬುದು ಗೊತ್ತೇ ಇದೆ. ಭೂಮಿಯ ಮೇಲಿರುವ ಎಲ್ಲ ಸಸ್ಯ ಮತ್ತು ಪ್ರಾಣಿಗಳ ದೇಹದಲ್ಲಿರುವ ಅಣುಗಳೂ ಒಂದೇ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತವೆ. ಪ್ರತಿಯೊಂದು ಜೀವಿಯ ದೇಹವೂ ಅನೇಕ ಜೀವಕೋಶ
ಗಳಿಂದ ರಚಿಸಲ್ಪಟ್ಟಿವೆ. ಈ ಜೀವಕೋಶದಲ್ಲಿ ಡಿಎನ್‌ಎ ಎಂಬ ಅನುವಂಶಿಯ ಚಾಲಕ ಅಣು ರಚನೆ ಇದೆ. ಇದು ನೂಲೆಣೆಯನ್ನು ಹೋಲುವ ಆಕೃತಿಯದ್ದು.
ಹೇಗೆ ಇಂಗ್ಲಿಷ್‌ನಲ್ಲಿ 26 ವರ್ಣ ಮೂಲಾಕ್ಷರಗಳಿರುತ್ತವೆಯೋ ಹಾಗೆ ರಾಸಾಯನಿಕವಾಗಿ ಡಿಎನ್‌ಎ ಅಲ್ಲಿ ಅಡಿನಿನ್, ಗ್ವಾನಿನ್, ಸೈಟೋಸಿನ್, ಥೈಮಿನ್ ಒಳಗೊಂಡ ಅಸಂಖ್ಯಾತ ನ್ಯೂಕ್ಲಿಯೋಟೈಡಗಳು ಇವೆ. ಜೀವಿಯ ಭೌತಿಕ, ರಾಸಾಯನಿಕ, ಜೈವಿಕ ಲಕ್ಷಣಗಳನ್ನು ಸಂತತಿಯಿಂದ ಸಂತತಿಗೆ ವರ್ಗಾವಣೆಯಾಗಲು ಇದು ಕಾರಣ. ಬೀಜದಲ್ಲಿ ಮರದ ವಿನ್ಯಾಸ ಸಂಕ್ಷಿಪ್ತವಾಗಿ ಅಡಗಿರುವ ಹಾಗೆ ಡಿಎನ್‌ಎ ಅಣುವಿನಲ್ಲಿ ಜೀವಕೊಶಗಳ ಕಾರ್ಯ ನಿರ್ವಹಣೆಯ ವಿವರಗಳು ಅಡಕವಾಗಿವೆ.
ಒಟ್ಟಿನಲ್ಲಿ ಪ್ರಸ್ತುತ ತಂತ್ರಜನದಲ್ಲಿ ಡಿಎನ್‌ಎ ಯಲ್ಲಿರುವ ನ್ಯೂಕ್ಲಿಯೋಟೈಡ್‌ಗಳ ಕ್ರಮಾಣುಗತಿಯನ್ನು ವಿಶ್ಲೇಷಿಸಿ ಪ್ರಭೇದಗಳನ್ನು ಗುರುತಿಸಲಾಗು ತ್ತದೆ. 2003ರಲ್ಲಿ ಡಾ||ಪಾಲ್ ಹೆಬರ್ಟ ತಂಡ ಈ ತಂತ್ರಜನವನ್ನು ಅಭಿವೃದ್ಧಿಪಡಿಸಿತು. ಡಿಎನ್‌ಎಯ ಕುತೂಹಲಕಾರಿ ಅಂಶ ಎಂದರೆ, ಯಾವುದೇ ಎರಡು ಜೀವಿಗಳ ಡಿಎನ್‌ಎ ಒಂದೇ ಬಗೆ ಆಗಿರುವುದಿಲ್ಲ. ಒಂದು ಜೀವಿ ಇನ್ನೊಂದು ಜೀವಿಗಿಂತ ಭಿನ್ನವಾಗಿರುವುದಕ್ಕೆ ಕಾರಣ ಕೇವಲ ಒಂದು ತುಣುಕು ಡಿಎನ್‌ಎ ಮಾತ್ರ. ಇದರ ಆಧಾರಿತ ಪ್ರಭೇದಗಳನ್ನು ಗುರುತಿಸುವ ತಂತ್ರಜನದಲ್ಲಿ ಜೀವಿಯ ಜೀನೋ ಮ್‌ನಲ್ಲಿ ವಿಶಿಷ್ಟವಾಗಿರುವ ನಂಬಿಕಸ್ಥ ವಂಶವಾಹಿನಿಗಳನ್ನು ಆಧಾರವಾಗಿರಿಸಿಕೊಂಡು ಅದರಲ್ಲಿರುವ ನ್ಯೂಕ್ಲಿಯೋಟೈಡಗಳ ವೈವಿಧ್ಯದ ಆಧಾರದ ಮೇಲೆ ಪ್ರಭೇದಗಳನ್ನು ಗುರುತಿಸಬಹುದಾಗಿದೆ.
ಸಾಮನ್ಯವಾಗಿ ಪ್ರಾಣಿ ಗಳಲ್ಲಿ ಮೈಟೋಕಾಂಡ್ರಿಯಾ ಹಾಗೂ ಸಸ್ಯಗಳಲ್ಲಿ ಕ್ಲೋರೊಪ್ಲಾಸ್ಟನ ಜೀನೋಮನಲ್ಲಿರುವ ಕೇಲವು ನಂಬಿಕಸ್ತ
ಜೀನುಗಳನ್ನು ಬಳಸಲಾಗುತ್ತದೆ. ಇನ್ನು ಈ ಬಾರ್‌ಕೋಡಿಂಗ್ ಬಗ್ಗೆ ತಿಳಿದು ಕೊಳ್ಳೊಣ. ನೀವು ಮಾರುಕಟ್ಟೆಯಲ್ಲಿ ಸಿಗುವ ಹಲ್ಲು ಪುಡಿ, ಚಹಾಪುಡಿ,
ಪುಳಿಯೊಗರೆಪುಡಿ, ಸಾಬೂನು ಪುಡಿ ಇತರೆ ವಸ್ತುಗಳ ಪ್ಯಾಕ್ ಮೇಲೆ ಗೆರೆ ಗೆರೆಯ ವಿನ್ಯಾಸದಿಂದ ಕೂಡಿರುವ ಮುದ್ರೆಯನ್ನು ಗಮನಿಸಿ ರಬಹುದು. ಈ ಮುದ್ರೆಯೇ ಬಾರ್‌ಕೋಡ್. ಇದು ಆ ಉತ್ಪನ್ನದ ಬ್ರಾಂಡ್ ಯಾವುದೆಂದು ಗುರುತಿಸುತ್ತದೆ. ಹಾಗೆಯೇ ಡಿಎನ್‌ಎ ಅನ್ನು ಆಧಾರವಾಗಿರಿಸಿ ಕೂಂಡ ಬಾರ್‌ಕೋಡ್‌ಗಳು ಪ್ರಭೇದ ಗಳನ್ನು ಪತ್ತೆಹಚ್ಚಲು ಸಹಾಯಕವಾಗಿದೆ.
ಸಾಮಾನ್ಯವಾಗಿ ಪ್ರಾಣಿವರ್ಗದಲ್ಲಿ ಸೈಟೋ ಕೊಮ ಆಕ್ಸಿಡೆಸ್-M ಹಾಗೂ ಸಸ್ಯವರ್ಗದಲ್ಲಿ ಕ್ಲೋರೊಪ್ಲಾಸ್ಟನ RBCL ಮತ್ತು ಕೆಳವರ್ಗದ ಜೀವಿಗಳಲ್ಲಿ ITS ಜೀನು ಗಳನ್ನು ಬಳಸಲಾಗುತ್ತದೆ. ಏಕೆಂದರೆ ಈ ವಂಶವಾಹಿಗಳು ಎಲ್ಲ ಜೀವಿಗಳಲ್ಲಿ ಸಂರಕ್ಷಣೆಗೊಂಡಿರುತ್ತದೆ. ಏಕಗುಣಿತವಾಗಿ ಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆ ಯಾಗುತ್ತದೆ. ಈ ವಂಶವಾಹಿನಿಗಳಲ್ಲಿ ಇಂಟ್ರಾನಗಳಿಲ್ಲದಿರುವುದು ಮತ್ತು ಹೆಚ್ಚಿನ ಪೈಲೊಜೆನಿಟಿಕ್ ಸಿಗ್ನಲ್ ಅನ್ನು ಒಳಗೊಂಡಿರುವದರಿಂದ ಗೊತ್ತಿರದ ಪ್ರಭೇದಗಳ ಆವಿಷ್ಕಾರಕ್ಕೆ ಅನುಕೂಲಕರ. ಇದರ ಮತ್ತೊಂದು ವೈಶಿಷ್ಟ್ಯವೆಂದರೆ ಜೀವನಚಕ್ರದ ಯಾವುದೇ ಹಂತ ದಲ್ಲಿ ಕೂಡಿದ್ದನ್ನು ಬಳಸಬಹುದಾಗಿದೆ. ಅಲ್ಲದೆ ಕ್ರಿಪ್ಟಿಕ್ ಪ್ರಭೇದಗಳನ್ನು ಸಹ ಕಂಡುಹಿಡಿಯಬಹುದು.
ಹೊಸ ಪ್ರಭೇದಗಳ ಆವಿಷ್ಕಾರಕ್ಕೂ ಬಳಸಬಹುದಾಗಿದೆ. ವಿಧಾನದಿಂದ ವೇಗವಾಗಿ ಕಾರ್ಯನಿರ್ವಹಿಸಬಹುದು. ಇದು ಸರಳವಾಗಿದೆ.
ಈ ತಂತ್ರಜ್ಞಾನದಲ್ಲಿ, ಜೀವಿಗಳಿಂದ ಹಲವಾರು ರಾಸಾಯನಿಕ ವಿಧಾನಗಳನ್ನು ಬಳಸಿ ಜೀವಿಯ ಡಿಎನ್ ಎಯನ್ನು ಬೇರ್ಪಡಿಸಲಾಗುತ್ತದೆ. ನಂತರ ಸೂಕ್ತವಾದ ಪ್ರೈಮರ್‌ಗಳಿಂದ ನಮಗೆ ಬೇಕಾದ ವಂಶವಾಹಿನಿಯ ಪ್ರತಿಯನ್ನು ಪಿಸಿಆರ್ ಮಷಿನ್ ಎಂಬ ವಿಷೇಶಯಂತ್ರವನ್ನು ಬಳಸಿಕೊಂಡು ಒಂದೆರಡು ಗಂಟೆಗಳಲ್ಲಿ ಕೋಟಿ ಕೋಟಿ ವಂಶ ವಾಹಿನಿ ಪ್ರತಿಗಳನ್ನು ಪಡೆಯಲಾಗುತ್ತದೆ. ತರುವಾಯ ಡಿಎನ್‌ಎ ಸೀಕ್ವೆನ್ಸರ್ ಎಂಬ ಮಷಿನ್‌ನಲ್ಲಿ
ವಿಶ್ಲೇಶಿಸಿದಾಗ ನ್ಯೂಕ್ಲಿಯೋಟೈಡಗಳ ಕ್ರಮಾಣುಗತಿ ಯನ್ನು ಪತ್ತೆಹಚ್ಚಿ ತಳಿ ವೈವಿಧ್ಯವನ್ನು ಗುರುತಿಸಲಾಗುತ್ತದೆ.
ಬಾರ್ ಕೋಡ್ ಆಪ್ ಲೈಫ್ ಡೆಟಾ ಬೇಸ್ ಎಂಬ ನ್ಯೂಕ್ಲಿಕ್ ಆಸಿಡ್ ದತ್ತಾಂಶವನ್ನು ಸಂಗ್ರಹಣ ಬಳಸಿ ಕೊಂಡು ವಿಶ್ಲೇಷಣೆ ಮಾಡಬಹುದು. ಸಿಕ್ವೆನ್ಸಗಳು ಎಂದರೆ ಡಿಎನ್‌ಎಯಲ್ಲಿ ಕಂಡುಬರುವ ನ್ಯೂಕ್ಲೀಯೋಟೈ ಡಗಳ ಅನುಕ್ರಮ ಈ ಆಧಾರದ ಮೇಲೆ ಆ ಜೀವಿಯನ್ನು ಗುರುತಿಸುಲು ಒಂದು ಕ್ರಮ ಸಂಖ್ಯೆಯನ್ನು ನೀಡಲಾಗುತ್ತದೆ. ಮನುಷ್ಯರಿಗೆ ಆಧಾರ್ ಕಾರ್ಡ್‌ನಲ್ಲಿ ನಂಬರ್ ಇರುವಂತೆ ಬಾರ್ ಕೊಡಿಂಗನ ಆಧಾರದ ಮೇಲೆ ಬಾರ್
ಕೋಡ್ ಇಂಡೆಕ್ಸ್ ನಂಬರ್ ಇರುತ್ತದೆ. ಇದನ್ನ್ನು ಬಳಸಿ ಬಾರ್‌ಕೋಡ್ ಆಫ್ ಲೈಪ್ ಡೆಟಾಬೇಸನಲ್ಲಿ ಆ ಜೀವಿಯ ಬಗ್ಗೆ ಸಮಗ್ರ ಮಾಹಿತಿ ಕ್ಷಣಾರ್ಧ ದಲ್ಲೆ ಪಡೆಯಬಹುದು.
ಬಾರ್ ಕೋಡಿಂಗ್ ತಂತ್ರಜನ ಹಲವಾರು ಬಹುಮುಖ ಉಪಯೋಗಗಳನ್ನು ಹೊಂದಿವೆ. ಜೀವ ವೈವಿಧ್ಯದ ಪರಿಶೋಧನೆ ಮಾಡಲು ಹಾಗೂ ಜೀವ
ಸಂರಕ್ಷಣಾಕ್ರಮಗಳನ್ನು ಜರುಗಿಸಲು ಇದು ಸಹಕಾರಿ. ಇದು ಕಾನೂನುಬಾಹಿರ ವನ್ಯ ಪ್ರಭೇದಗಳ ಮಾರಾಟದ ತಡೆಗೆ ಡಿಎನ್‌ಎ ಬಾರ್ ಕೋಡಿಂಗ್ ಸಹಾಯಕ. ರೋಗ ವಾಹಕಗಳು, ರೋಗ ಕಾರಕ ಗಳು, ಪೀಡೆಗಳ ನಿಯಂತ್ರಣ ಕ್ರಮ ಜರುಗಿಸಲು ಆಶಾದಾಯಕ ವಾಗಿದೆ. ಅಪರಾಧದ ಪತ್ತೆ ಹಚ್ಚುವಿಕೆ, ಹೊಸ ಪ್ರಭೇದಗಳ ಆವಿಷ್ಕಾರ, ಬೀಜಗಳ ಪ್ರಮಾಣೀರ ಣಕ್ಕೂ ಬಾರ್ ಕೊಡಿಂಗ್ ಬಳಕೆ ಮಾಡಬಹುದು.
ಲಕ್ಷಾಂತರ ವರ್ಷಗಳ ಹಿಂದೆ ಅತಿ, ಸರಳ ರೂಪದಲ್ಲಿ ಆರಂಭವಾದ ಜೀವ ಇಂದು ಲೆಕ್ಕಕ್ಕೆ ಸಿಗಲಾರದಷ್ಟು ಕವಲೊಡೆದಿದೆ. ನಾವಿಂದು ಕೋಟ್ಯಂತರ ಪ್ರಭೇದಗಳನ್ನು ಗುರುತಿಸಬೇಕಿದೆ, ಹೇಸರಿಸಬೇಕಿದೆ. ಅವುಗಳ ಜೀವ ಚರಿತ್ರೆ, ಪ್ರಕೃತಿಯಲ್ಲಿ ಅವುಗಳ ಪಾತ್ರ ಮತ್ತು ಮಾನವ ಕಲ್ಯಾಣಕ್ಕೆ ಅವು ಗಳಿಂದ ಆಗಬಹುದಾದ ಕೋಡುಗೆ ಗಳನ್ನು ಪತ್ತೆಹಚ್ಚಬೇಕಾಗಿದೆ. ಜೀವಿಗಳ ಲಕ್ಷಣ ವರ್ತನೆಯನ್ನು ಆಧಾರ ವಾಗಿಸಿ ವರ್ಗಿಕರಿಸುವುದು ಕಷ್ಟ. ಅಲ್ಲದೆ ಸರಳವಾಗಿ ಮಾಹಿತಿ ತಂತ್ರಜ್ಞಾನದ ಮುಖಾಂತರ ಪ್ರಪಂಚದ ಯಾವುದೇ ಮೂಲೆಯಲ್ಲಿರುವ ಆಸಕ್ತ ರೊಂದಿಗೆ ಹಂಚಿಕೋಳ್ಳಬಹುದಾಗಿದೆ. ಜೀವಿವೈವಿಧ್ಯದ ಪರಿಶೋಧನೆ ಮಾಡಲು ಹಾಗೂ ಜೀವ ಸಂರಕ್ಷಣಾ ಕ್ರಮಗಳನ್ನು ಜರುಗಿಸಲು ಸಹ ಇದು ಸಹಕಾರಿ. ಈ ಬಗ್ಗೆ ತಂತ್ರಜನದ ಮಿತಿ ಹಾಗೂ ಕೇಲವು ಟೀಕೆ ಟಿಪ್ಪಣಿಗಳಿವೆ.
ಏನೇ ಆದರೂ ಪ್ರಸ್ತುತವಾಗಿ ಇದು ಪರಿಣಾಮಕಾರಿ ತಂತ್ರಜ್ಞಾನ. ಇವೆಲ್ಲವೂ ವಿಜ್ಞಾನದ ಪಾರಿಭಾಷಿಕ ವಿವರಣೆಗಳಾದವು. ಎಷ್ಟು ಸಾಧ್ಯವೋ ಅಷ್ಟು ಅರ್ಥಮಾಡಿ ಕೊಳ್ಳೋಣ. ಆದರೆ ವಿಜ್ಞಾನ ಜಗತ್ತಿನ ಇಂಥದ್ದೊಂದು ಸಾಧನೆ ಭವಿಷ್ಯವನ್ನೇ ಬದಲಿಸಬಲ್ಲುದು ಎಂಬುದಂತೂ ನಿಜ. ಈ ಹಿಂದಿನ ಪಾರಂಪರಿಕ ವರ್ಗೀಕರಣ ಕ್ರಮದೊಂದಿಗೆ ಹೊಸ ಡಿಎನ್‌ಎ ಬಾರ್‌ಕೊಡಿಂಗ್ ತಂತ್ರಜನ ಮೇಳೈಸಿ ಕೊಂಡರೆ ಮುಂದಿನ ಕ್ರಾಂತಿ ಊಹೆಗೂ ನಿಲುಕದ್ದು.
Read E-Paper click here