Sunday, 8th September 2024

ಹಲವು ಪಂಥಗಳಲ್ಲಿ ದೀಪಾವಳಿ ಆಚರಣೆ

ಸಕಾಲಿಕ

ಡಾ.ನಾ.ಸೋಮೇಶ್ವರ

ಜೈನರಿಗೆ ಬೆಳಕಿನಂತಿದ್ದ ಮಹಾವೀರರು ಮರೆಯಾದಾಗ ಎಲ್ಲ ಕಡೆಯುಕತ್ತಲು ಆವರಿಸಿತಂತೆ. ಆಗ ದೇವಾನು ದೇವತೆಗಳು ಪಾವಾನಗರಿಯ ಗಗನದಲ್ಲಿ ನೆರೆದು ಇಡೀ ನಗರವನ್ನು ಬೆಳಗಿದರಂತೆ. ಹಾಗಾಗಿ ಈ ದಿನವು ‘ದೀಪಾಲಿಕ’ ಎನ್ನುವ ಹೆಸರಿನ ಜೈನ ದೀಪಾವಳಿ ಹಬ್ಬದ ಆಚರಣೆಗೆ ಕಾರಣವಾಯಿತು.

ಕಾರ್ತಿಕ ಶುಕ್ಲ ಬಿದಿಗೆಯ ದಿನದಂದು ವಿಶ್ವಕರ್ಮ ಪೂಜೆಯನ್ನು ನಡೆಸುವ ಪದ್ಧತಿಯಿದೆ. ವಿಶ್ವಕರ್ಮನು ವೇದಕಾಲದ ದೇವತೆ. ವಿಶ್ವಕರ್ಮನು ಬಹುಶಃ ಭಾರತೀಯ ಸಂಸ್ಕೃತಿಯ ಪರಿಕಲ್ಪನೆಯಲ್ಲಿ ಕಾಣಿಸಿಕೊಂಡ ಮೊತ್ತ ಮೊದಲ ದೇವತೆಯಿರಬಹುದು.

ವಿಶ್ವಕರ್ಮನು ಇಡೀ ‘ವಿಶ್ವವನ್ನು ನಿರ್ಮಿಸಿದ ದೇವತೆ’ ಎನ್ನುವುದು ಮೂಲ ನಂಬಿಕೆ. ನಂತರದ ದಿನಗಳಲ್ಲಿ ಈ ಹೆಸರನ್ನು ಸೂರ್ಯನಿಗೆ ಅಥವಾ ಇಂದ್ರನಿಗೆ ಆರೋಪಿಸಿರುವುದನ್ನು ನೋಡಬಹುದು. ವಿಶ್ವಕರ್ಮನಿಗೆ ಅಸಂಖ್ಯ ಮುಖಗಳಿವೆ, ಕಣ್ಣುಗಳಿವೆ, ಕೈಗಳಿವೆ, ಕಾಲುಗಳಿವೆ, ರೆಕ್ಕೆಗಳಿವೆ – ಅವನು ಇಡೀ ಬ್ರಹ್ಮಾಂಡವನ್ನು ಸದಾ ಕಾಲ ವೀಕ್ಷಿಸುತ್ತಿರುತ್ತಾನೆ ಎನ್ನುವ ಚಿತ್ರವು ದೊರೆಯುತ್ತದೆ.

ಋಗ್ವೇದವು ಪರಬ್ರಹ್ಮ ಸ್ವರೂಪಿ ವಿಶ್ವಕರ್ಮನ ಹೊಕ್ಕಳಿನಿಂದ ಹಿರಣ್ಯಗರ್ಭವು ಹುಟ್ಟಿತು. ಈ ಹಿರಣ್ಯಗರ್ಭದಿಂದ ಸಕಲ ಬ್ರಹ್ಮಾಂಡ ಮತ್ತು ಚರಾಚರವಸ್ತುಗಳು ಹುಟ್ಟಿದವು ಎನ್ನುವ ವಿವರಣೆಯು ದೊರೆಯುತ್ತದೆ. ಯಜುರ್ವೇದದಲ್ಲಿ ಬರುವ ಪುರುಷ ಸೂಕ್ತದ ಪುರುಷನು ಬಹುಶಃ ಇದೇ ವಿಶ್ವಕರ್ಮನಿರಬೇಕು.

ಇದೇ ದೈವವು ಮುಂದಿನ ದಿನಗಳಲ್ಲಿ ಚತುರ್ಮುಖ ಬ್ರಹ್ಮ ಎನ್ನುವ ಪರಿಕಲ್ಪನೆಯನ್ನು ಪಡೆಯಿತೆಂದು ಕಾಣುತ್ತದೆ. ಪುರಾಣಗಳ ಕಾಲಕ್ಕೆ ವಿಶ್ವಕರ್ಮನು ಬಡಗಿಯಾಗಿ ಇಲ್ಲವೇ ದೇವಶಿಲ್ಪಿಯಾಗಿ ಕಾಣಿಸಿಕೊಳ್ಳುತ್ತಾನೆ. ಕೃಷ್ಣನ ದ್ವಾರಕೆಯನ್ನು ವಿಶ್ವಕರ್ಮನು
ನಿರ್ಮಿಸಿದನೆಂಬ ನಂಬಿಕೆಯಿದೆ. ಸ್ಥಾಪತ್ಯವೇದ ಎನ್ನುವ ಜ್ಞಾನಶಾಖೆಯು ಇಂದಿನ ಆರ್ಕಿಟೆಕ್ಚರ್, ಎಂಜಿನಿಯರಿಂಗ್, ಮೆಟಲರ್ಜಿ ಮುಂತಾದವನ್ನು ಒಳಗೊಂಡಿದೆ. ಇವುಗಳ ಜೊತೆಯಲ್ಲಿ ಅದ್ಭುತವಾದ ಆಯುಧಗಳನ್ನು ನಿರ್ಮಿಸುವ ವಿದ್ಯೆಯಾಗಿ
ಬೆಳೆಯಿತು.

ಕಾಲಾಂತರದಲ್ಲಿ ಮರದ ಕೆಲಸ, ಕಬ್ಬಿಣದ ಕೆಲಸ, ಚಿನ್ನದ ಕೆಲಸಗಳೆಲ್ಲವು ಸ್ಥಾಪತ್ಯವೇದದ ವ್ಯಾಪ್ತಿಯಲ್ಲಿ ಸೇರಿಕೊಂಡವು. ಭಾರತದಲ್ಲಿ ವಿಶ್ವಕರ್ಮ ಜಯಂತಿಯನ್ನು ಕನ್ಯಾ ಸಂಕ್ರಮಣದಂದು, ಅಂದರೆ ಭಾದ್ರಪದ ಮಾಸದ ಕೊನೆಯ ದಿನದಂದು,
ಆಚರಿಸುವ ಪದ್ಧತಿಯಿದೆ. ದೀಪಾವಳಿಯ ಐದನೆಯ ದಿನದಂದು ವಿಶ್ವಕರ್ಮ ಪೂಜೆಯನ್ನು, ಆಯುಧ ಪೂಜೆಯ ರೀತಿ ಯಲ್ಲಿಯೇ, ಅಸ್ತ್ರಶಸ್ತ್ರಗಳನ್ನು ಹಾಗೂ ಯಂತ್ರಗಳನ್ನು ಪೂಜಿಸಿ ಗೌರವಿಸುವುದುಂಟು.

ಜೈನ ದೀಪಾವಳಿ: ಜೈನರಿಗೆ ದೀಪಾವಳಿಯು ಒಂದು ದುಃಖದ ಹಾಗೂ ಸಂತಸದ ಹಬ್ಬ. ದೀಪಾವಳಿಯ ಅಮಾವಾಸ್ಯೆಯ ಬೆಳಗಿನ ಜಾವ, ಜೈನರ 24ನೆಯ ತೀರ್ಥಂಕರರಾದ ಮಹಾವೀರರು ನಿರ್ವಾಣವನ್ನು ಪಡೆಯುವ ದಿನ. ಹಾಗಾಗಿ ಈ ದಿನ ಶೋಕ ದಿನ. ಆದರೆ ಅಂದೇ ಮಹಾವೀರರ ಶಿಷ್ಯರಾದ ಗಣಧರ ಗೌತಮ ಸ್ವಾಮಿ ಕೇವಲ ಜ್ಞಾನವನ್ನು ಪಡೆದ ಶುಭದಿನ. ಹಾಗಾಗಿ ಇದು ಸಂತಸದ ದಿನವೂ ಹೌದು.

ಮಹಾವೀರರು ನಿರ್ವಾಣ ಪಡೆದ ಸ್ಥಳದ ಹೆಸರು ಪಾವಾ ಅಥವ ಪಾವಾಪುರಿ. ಇದು ಇಂದಿನ ಬಿಹಾರ ರಾಜ್ಯದ ನಳಂದ ಜಿಲ್ಲೆ ಯಲ್ಲಿರುವ ಸ್ಥಳ. ಇಲ್ಲಿ ಅಕ್ಟೋಬರ್ 15, 527 ರಂದು ಮಹಾವೀರರು ಮೋಕ್ಷವನ್ನು ಪಡೆದರು ಎನ್ನುತ್ತವೆ ಹಲವು ದಾಖಲೆ
ಗಳು. ಶಕ ವರ್ಷದ ಲೆಕ್ಕಾಚಾರದಲ್ಲಿ, ಶಕವರ್ಷಕ್ಕಿಂತ 603 ವರ್ಷ 5 ತಿಂಗಳು ಹಾಗೂ 10 ದಿನಗಳ ಹಿಂದೆಯೇ ಮಹಾವೀರರು ನಿರ್ವಾಣವನ್ನು ಪಡೆದರು ಎನ್ನಬಹುದು. ಅಕ್ಟೋಬರ್ 13, 1974ರಂದು ಮಹಾವೀರರು ನಿರ್ವಾಣ ಪಡೆದ 2500 ಜಯಂತಿ ಯನ್ನು ಭಾರತದಲ್ಲಿ ಹಾಗೂ ದೇಶಗಳಲ್ಲಿ ಆಚರಿಸಿದರು.

ಆಚಾರ್ಯ ಜಿನಸೇನರು ಬರೆದ ಹರಿವಂಶ ಪುರಾಣದಲ್ಲಿ ಈ ದಿನವನ್ನು ‘ದೀಪಾಲಿಕಾಯ’ ಎಂದು ವರ್ಣಿಸಿರುವುದುಂಟು.
ಅಂದರೆ ‘ಬೆಳಕು ಶರೀರವನ್ನು ಬಿಟ್ಟು ಹೋದ ದಿನ’ ಎಂದರ್ಥ. ಜೈನರಿಗೆ ಬೆಳಕಿನಂತಿದ್ದ ಮಹಾವೀರರು ಮರೆಯಾದಾಗ ಎಲ್ಲ ಕಡೆಯುಕತ್ತಲು ಆವರಿಸಿತಂತೆ. ಆಗ ದೇವಾನು ದೇವತೆಗಳು ಪಾವಾನಗರಿಯ ಗಗನದಲ್ಲಿ ನೆರೆದು ಇಡೀ ನಗರವನ್ನು ಬೆಳಗಿದ ರಂತೆ. ಹಾಗಾಗಿ ಈ ದಿನವು ‘ದೀಪಾಲಿಕ’ ಎನ್ನುವ ಹೆಸರಿನ ಜೈನ ದೀಪಾವಳಿ ಹಬ್ಬದ ಆಚರಣೆಗೆ ಕಾರಣವಾಯಿತು. ಜೈನರು ದೀಪಾವಳಿಯಂದು ದೀಪಗಳನ್ನು ಹಚ್ಚಿ, ಸಿಹಿಯನ್ನು ಹಂಚಿ ತಮ್ಮ ಹೊಸ ವರ್ಷದ ಮೊದಲ ದಿನವನ್ನು ಆಚರಿಸುವುದುಂಟು. ಆದರೆ ಅವರು ಪಟಾಕಿಗಳನ್ನು ಹೊಡೆಯುವುದಿಲ್ಲ. ಏಕೆಂದರೆ ಪಟಾಕಿಯ ಶಬ್ದ, ಬೆಂಕಿ, ಮದ್ದು ಅನೇಕ ಜೀವಿಗಳಿಗೆ ತೊಂದರೆ ಯನ್ನು ಉಂಟು ಮಾಡುತ್ತದೆ. ‘ಅಹಿಂಸಾ ಪರಮೋ ಧರ್ಮಃ’ ಎಂದು ಭಾವಿಸುವ ಜೈನರು ಜೀವ ಹಿಂಸೆಗೆ ಅವಕಾಶವನ್ನು ಮಾಡಿ ಕೊಡಬಹುದಾದ ಪಟಾಕಿಗಳನ್ನು ಸುಡುವುದಿಲ್ಲ.

ಬೌದ್ಧ ದೀಪಾವಳಿ: ಬೌದ್ಧ ಧರ್ಮದಲ್ಲಿ ದೀಪಾವಳಿಯ ಆಚರಣೆಯಿಲ್ಲ. ಬೌದ್ಧಧರ್ಮದ ಎರಡು ಪ್ರಧಾನ ಶಾಖೆಗಳು ಹೀನ ಯಾನ (ಥೇರಾವಾದ) ಮತ್ತು ಮಹಾಯಾನ. ಮಹಾಯಾನದ ಪ್ರಮುಖ ಶಾಖೆ ವಜ್ರಯಾನ. ಈ ವಜ್ರಯಾನವು ನೇಪಾಳ ದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ವಜ್ರಯಾನವನ್ನು ಗುಹ್ಯಮಂತ್ರ, ಮಂತ್ರಯಾನ ಅಥವಾ ತಂತ್ರಯಾನ ಎಂದೂ ಕರೆಯುವುದುಂಟು. ಕ್ರಿ.ಶ.767ರಲ್ಲಿ ಗುರು ಪದ್ಮಸಂಭವರು ಈ ಪಂಥವನ್ನು ಜನಪ್ರಿಯಗೊಳಿಸಿದರು.

ಪೂರ್ವ ಏಷ್ಯಾ, ಮಂಗೋಲಿಯದಲ್ಲಿ ವಜ್ರಯಾನ ಹೆಚ್ಚು ಪ್ರಸಿದ್ಧವಾಗಿದೆ. ಬುದ್ಧನು ಹೀನಯಾನವನ್ನು ಬಹಿರಂಗವಾಗಿ
ಎಲ್ಲರಿಗೂ ಬೋಧಿಸಿದನಂತೆ. ಆದರೆ ವಜ್ರಯಾನವನ್ನು ಆಯ್ದ ಕೆಲವೇ ಶಿಷ್ಯರಿಗೆ ಮಾತ್ರ ತಿಳಿಸಿದನಂತೆ. ವಜ್ರಯಾನದಲ್ಲಿ ಅನುಯಾಯಿಗಳಿಗೆ ಹೆಚ್ಚು ಸ್ವಾತಂತ್ರ್ಯವಿದೆ. ವಜ್ರಯಾನವನ್ನು ಅನುಸರಿಸುವವರು ತಮಗೆ ಇಷ್ಟವಾದ ದೈವವನ್ನು ಪೂಜಿಸಲು
ಅವಕಾಶವಿದೆ. ಹಾಗಾಗಿ ನೇಪಾಳದ ಕಠ್ಮಂಡು ಕಣಿವೆಯಲ್ಲಿರುವ ನೇವಾರ ಬೌದ್ಧರು ತಮ್ಮದೇ ಆದ ದೀಪಾವಳಿಯನ್ನು ಆಚರಿಸುವರು. ಲಕ್ಷ್ಮೀ ಪೂಜೆಯ ಜೊತೆಗೆ ಐದೂ ದಿನಗಳು ಹಿಂದುಗಳ ಹಾಗೆ ಹಬ್ಬವನ್ನು ಆಚರಿಸಿ ಸಂಭ್ರಮದಲ್ಲಿ ಭಾಗಿಯಾ ಗುತ್ತಾರೆ.

Leave a Reply

Your email address will not be published. Required fields are marked *

error: Content is protected !!