ರಾಜಬೀದಿ
ವಿನಾಯಕ ಮಠಪತಿ
ಪೊಲೀಸರು ಬಾಗಲಕೋಟೆಯ ಲೋಕಾಪುರದಿಂದ ಮುಧೋಳ ರಸ್ತೆಯಲ್ಲಿನ ಕಬ್ಬಿನ ತೋಟ, ಕಲ್ಲು ಕ್ವಾರಿಗಳಿಗೆ ಸುತ್ತಾಡಿಸಿದರು. ಅಲ್ಲಿ ಏನಿತ್ತು ನಿಮ್ಮ ಕೆಲಸ ಎಂದು ಕೇಳಿದರೆ ಪೊಲೀಸರು ಹೇಳುವುದು ಮಾಧ್ಯಮಗಳ ಕಣ್ಣು ತಪ್ಪಿಸಿ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದರು.
ಈ ಬಾರಿ ಬೆಳಗಾವಿಯ ಚಳಿಗಾಲದ ಅಧಿವೇಶನ ಅನವಶ್ಯಕ ವಿಷಯಗಳಿಗೆ ಹೆಚ್ಚು ಸದ್ದು ಮಾಡಿದೆ. ದಶಕಗಳ ಸಮಸ್ಯೆಗಳಿಗೆ ಈ ಬಾರಿಯೂ ಸ್ಪಷ್ಟ ಉತ್ತರ ಸಿಗದ ಕಾರಣ ಕೋಟ್ಯಾಂತರ ಜನರ ನಿರೀಕ್ಷೆ ಮುಂದಿನ ವರ್ಷಕ್ಕೆ ತಳ್ಳಲ್ಪಟ್ಟಿದ್ದು ವಿಷಾದನಿಯ.
ಅಧಿವೇಶನದ ಕೊನೆಯ ದಿನ ಉತ್ತರ ಕರ್ನಾಟಕದ ಕುರಿತು ವಿಶೇಷ ಚರ್ಚೆಯು ಅಂಬೇಡ್ಕರ್ ವಿಚಾರವಾಗಿ ಉಂಟಾದ ಗದ್ದಲದಿಂದ ಬದಿಗೆ ಸರಿಯಿತು. ಅತ್ತ ಕಾಂಗ್ರೆಸ್ ಸದಸ್ಯರು ಬಿಜೆಪಿ ವಿರುದ್ಧ ಅಂಬೇಡ್ಕರ್ ವಿಚಾರವಾಗಿ ಜೋರು ಧ್ವನಿಯಲ್ಲಿ ವಾಗ್ದಾಳಿ ನಡೆಸುತ್ತಿದ್ದರೆ, ಇತ್ತ ಬಿಜೆಪಿ ಸದಸ್ಯರು ಅಂದು ಅಂಬೇಡ್ಕರ್ ವಿಚಾರದಲ್ಲಿ
ಕಾಂಗ್ರೆಸ್ ನಡೆದುಕೊಂಡ ರೀತಿಯ ಕುರಿತು ಪ್ರತ್ಯುತ್ತರ ನೀಡುತ್ತಿದ್ದರು. ಇಬ್ಬರು ಸದಸ್ಯರ ಗಲಾಟೆ ಮಧ್ಯೆ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಕೆಲ ಸಮಯ ಕಲಾಪ ಮುಂದೂಡಿದರು.
ಈ ಬಾರಿ ಸಂಪೂರ್ಣ ಚಳಿಗಾಲ ಅಧಿವೇಶನ ಕುರಿತು ಚರ್ಚೆಯ ದಿಕ್ಕು ಬದಲಿಸಿದ್ದ ಮಹಾಭಾರ ಪ್ರಹಸನ ನಿಜಕ್ಕೂ ಪ್ರಾರಂಭವಾಗಿದ್ದು ಇದೇ ಸಂದರ್ಭದಲ್ಲಿ. ಕೆಲ ಸದಸ್ಯರು ಊಟಕ್ಕೆಂದು ಹೊರಡುತ್ತಿದ್ದರು. ಈ ಮಧ್ಯದ ಸಿದ್ದರಾ ಮಯ್ಯ ಸರಕಾರದ ಏಕೈಕ ಮಹಿಳಾ ಸಚಿವರು, ಸಭಾಪತಿ ಕೊನೆಗೆ ದೌಡಾಯಿಸಿದ್ದಾಗಿತ್ತು. ಅಷ್ಟರ ಸುವರ್ಣಸೌಧದ ಎಡೆಯೂ ಪರಿಷತ್ತಿನಲ್ಲಿ ಏನೋ ನಡೆದಿದೆ ಎಂಬ ಗುಸು ಗುಸು ಚರ್ಚೆಗಳು ಹೆಚ್ಚಾದವು. ಅಷ್ಟರ ಕೆಲವರು ಪರಿಷತ್ ಸದಸ್ಯ ಸಿ.ಟಿ ರವಿ ಕಾರಿಗೆ ಸುವರ್ಣಸೌಧದ ಪಶ್ಚಿಮ ದ್ವಾರದ ಮುಂದೆ ಮುತ್ತಿಗೆ ಹಾಕಿ ಘೋಷಣೆಗಳನ್ನು ಮೊಳಗಿ ಸಿದ್ದರು. ನೆರೆದಿದ್ದ ಪೊಲೀಸರು ಅಚಾನಕ್ಕಾಗಿ ನಡೆದ ಗಲಾಟೆಯಿಂದ ಕ್ಷಣಹೊತ್ತು ವಿಚಲಿತರಾಗಿ ನಂತರ ಪರಿಸ್ಥಿತಿ ತಿಳಿಗೊಳಿಸುವ ಕೆಲಸ ಮಾಡಿದರು.
ಇದಾದ ಕೆಲ ಸಮಯದಲ್ಲಿ ಎಲ್ಲರ ಚಿತ್ತ ಪರಿಷತ್ ಕಲಾಪದ ಮೇಲಿತ್ತು.. ಆಗಲೇ ಎಲ್ಲರಿಗೂ ತಿಳಿದಿದ್ದು ಸಿ.ಟಿ ರವಿ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಆಡಬಾರದ ಮಾತು ಆಡಿದ್ದಾರೆಂದು. ಈ ಸಮಯದ ಸಭಾಪತಿ ಹೊರಟ್ಟಿಯವರ ಕಚೇರಿ ಕಡೆ ಕಾಂಗ್ರೆಸ್ ಪ್ರಮುಖ ಸಚಿವರೊಬ್ಬರು ಬಂದುಬಿಟ್ಟರು. ಯಾರಿಗೂ ಪ್ರವೇಶ ಇರದಂತೆ ಪರಿಷತ್ತಿನ ಬಾಗಿಲುಗಳು ಬಂದ್ ಆದವು. ಅತ್ತ ಬಿಜೆಪಿ ನಾಯಕರು ಹೊರಟ್ಟಿ ಬಳಿ ಓಡಿ ಬಂದರು.
ಈ ಮಧ್ಯೆ ವಿಧಾನಸಭೆ ಹೊರಾಂಗಣದಿಂದ ಪರಿಷತ್ತಿನ ಕಡೆ ಸಿ.ಟಿ.ರವಿ ಬರುತ್ತಿದ್ದಂತೆ ಮತ್ತೆ ಐದಾರು ಯುವಕರ ಗುಂಪು ಹಗೆ ಮುಂದಾಯ್ತು. ಕೂಡಲೇ ರಕ್ಷಣೆಗೆ ಧಾವಿಸಿದ ಮಾರ್ಷಲ್‌ಗಳು ರವಿ ಅವರನ್ನು ಪರಿಷತ್ತಿನ
ಸಭಾಂಗಣದ ಕೂದಲೆಳೆ ಅಂತರದಲ್ಲಿ ತಡೆದರು. ಅಷ್ಟರ ಸಿ.ಟಿ.ರವಿ ಧರಣಿಯನ್ನು ಪ್ರಾರಂಭಿಸಿದರು. ಏನೂ ತಿಳಿಯದ ಸ್ಥಿತಿಯಲ್ಲಿದ್ದ ಬೆಳಗಾವಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಂತೂ ಅಥ್ಲೆಟಿಕ್ಸ್ ರೀತಿಯಲ್ಲಿ ಓಡಿ ಸಿಬ್ಬಂದಿ ಕರೆತಂದಿದ್ದು ಸಿನೆಮಾ ಶೈಲಿಯಲ್ಲಿ ನೋಡುವಂತಿತ್ತು.
ಇಷ್ಟೆಲ್ಲ ಪ್ರಹಸನಗಳ ನಡುವೆ ಹೊರಟ್ಟಿ ಪರಿಷತ್ ಕಲಾಪ ಪ್ರಾರಂಭಿಸಿದ್ದರು. ಘಟನೆಯ ಕುರಿತು ಸಭಾಪತಿಗಳು ತಮ್ಮ ನಿರ್ಣಯ ತಿಳಿಸಿ ಸದನವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದರು. ಇದೇ ಸಂದರ್ಭಕ್ಕೆ ಕಾಯುತ್ತಿದ್ದ ಬೆಳಗಾವಿಯ ಹಿರೇಬಾಗೇವಾಡಿ ಪೊಲೀಸರು ಲಕ್ಷ್ಮೀ ಹೆಬ್ಬಾಳಕರ್ ಕೊಟ್ಟ ದೂರಿಗೆ ಸಂಬಂಧಿಸಿದಂತೆ ಸಿ.ಟಿ.ರವಿ
ಅವರನ್ನು ಬಂಽಸಲು ತಯಾರಿ ಮಾಡಿಕೊಂಡಿದ್ದರು. ಅಷ್ಟರ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಸರಕಾರದ ವಿರುದ್ಧ ಧಿಕ್ಕಾರ ಕೂಗುತ್ತಿದ್ದಂತೆ ನಾಲ್ಕಾರು ಪೊಲೀಸರು ಬಂದು ಸಿ.ಟಿ.ರವಿ ಅವರನ್ನು ವಶಕ್ಕೆ ಪಡೆದು ರಾಷ್ಟ್ರೀಯ ಹೆದ್ದಾರಿ ಮಾರ್ಗ ಹಿಡಿದು ಕರೆದೊಯ್ದರು.
ಸಿ.ಟಿ.ರವಿ ಪ್ರಕರಣಕ್ಕೆ ರೋಚಕ ತಿರುವು ಕೊಟ್ಟಿದ್ದೇ ಇದೇ ಸಂದರ್ಭ. ಹಿರೇಬಾಗೇವಾಡಿಗೆ ತೆರಳಿದ್ದ ಪೊಲೀಸ್ ವಾಹನ ಎಂ.ಕೆ ಹುಬ್ಬಳ್ಳಿ ಮಾರ್ಗವಾಗಿ ಪಾರಿಶ್ವಾಡ, ದೇವಲತ್ತಿ ಕಡೆ ಮುಖಮಾಡಿ ನೇರವಾಗಿ ಹೋಗಿದ್ದು ಖಾನಾ
ಪುರಕ್ಕೆ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಖಾನಾಪುರಕ್ಕೆ ಯಾವ ಕಾರಣಕ್ಕೆ ಸಿ.ಟಿ ರವಿ ಅವರನ್ನು ಕರೆತರಲಾಗಿತ್ತು ಎಂಬ ಅರಿವು ಪೊಲೀಸರಿಗೂ ಇರಲಿಲ್ಲ. ಈ ಮಧ್ಯದ ವಿಪಕ್ಷ ನಾಯಕ ಆರ್. ಅಶೋಕ್, ಬಸನಗೌಡ ಪಾಟೀಲ ಯತ್ನಾಳ್, ಸುನಿಲ್ ಕುಮಾರ್ ಜೊತೆಗೆ ನೋಡ, ನೋಡು ತ್ತಿದ್ದಂತೆ ಖಾನಾಪುರ ಪೊಲೀಸ್ ಠಾಣೆಯಲ್ಲಿ ಬಿಜೆಪಿಗರು ಜಮಾವಣೆ ಆಗತೊಡಗಿದರು. ಆಗಲೇ ಬೆಳಗಾವಿ ಪೊಲೀಸರು ಖಾನಾಪುರ ಕಾಡನ್ನು ತೊರೆಯುವ ನಿರ್ಧಾರ ಮಾಡಿದ್ದು.
ಮೊದ, ಮೊದಲು ಸಿ.ಟಿ ರವಿ ಅವರನ್ನು ಬೆಂಗಳೂರಿಗೆ ಸ್ಥಳಾಂತರ ಮಾಡುತ್ತಿದ್ದಾರೆ ಎಂಬ ವಿಷಯ ತಿಳಿಯಿತು. ಮತ್ತದೇ ಪೊಲೀಸರ ತಂಡ ಗಣೇಶನನ್ನು ಹೊತ್ತುಕೊಂಡಂತೆ ಸಿ.ಟಿ ರವಿ ಅವರನ್ನು ಹೊತ್ತು ವಾಹನಕ್ಕೆ ಹಾಕಿ ಕೊಂಡರು. ಈ ಸಂದರ್ಭದ ಠಾಣೆಯ ಬಾಗಿಲು ತಾಗಿ ರವಿ ಅವರ ತಲೆಗೆ ಗಾಯವಾಗಿದ್ದು. ಮಾಧ್ಯಮಗಳ
ಕ್ಯಾಮೆರಾ ಕೂಡ ಈ ಸಂದರ್ಭದಲ್ಲಿ ಪೊಲೀಸರ ಘರ್ಷಣೆಗೆ ಕೆಳಗುರುಳಿದ್ದವು. ಇದಾದ ನಂತರ ಸಿ.ಟಿ.ರವಿ ಅವರಿಗೆ ಅಸಲಿ ಯಾತ್ರೆಯ ಅನುಭವ ಆಗಿದ್ದು. ಮತ್ತದೇ ಖಾನಾಪುರ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ಹಿಡಿದ ಪೊಲೀಸ್ ವಾಹನಗಳು ರಾಣಿ ಚನ್ನಮ್ಮ ಆಳಿದ ಕಿತ್ತೂರನ ಕಡೆ ಮುಖ ಮಾಡಿದವು. ಕಿತ್ತೂರು ಕೋಟೆ ಹೊರವಲಯದ
ಸರಕಾರಿ ಆಸ್ಪತ್ರೆಯಲ್ಲಿ ರವಿ ಅವರ ತಲೆಗೆ ಬ್ಯಾಂಡೇಜ್ ಸುತ್ತಿದ ನಂತರ ಬೆಳಗಡಿ, ಕರಿಕಟ್ಟಿ ಮಾರ್ಗವಾಗಿ ಸವದತ್ತಿಗೆ ಪ್ರಯಾಣ ಮುಂದುವರಿಯಿತು.
ನಂತರ ಹುಲಿಕಟ್ಟಿ ದಾಟಿ ರಾಮದುರ್ಗ ಡಿವೈಎಸ್ಪಿ ಕಚೇರಿಗೆ ಕರೆತಂದರು. ಈ ಸಂದರ್ಭದಲ್ಲಿ ಪೊಲೀಸರು ಬಾಗಲ ಕೋಟೆಯ ಲೋಕಾಪುರದಿಂದ ಮುಧೋಳ ರಸ್ತೆಯಲ್ಲಿನ ಕಬ್ಬಿನ ತೋಟ, ಕಲ್ಲು ಕ್ವಾರಿಗಳಿಗೆ ಸುತ್ತಾಡಿಸಿದರು. ಅಲ್ಲಿ ಏನಿತ್ತು ನಿಮ್ಮ ಕೆಲಸ ಎಂದು ಕೇಳಿದರೆ ಪೊಲೀಸರು ಹೇಳುವುದು ಮಾಧ್ಯಮಗಳ ಕಣ್ಣು ತಪ್ಪಿಸಿ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದರು, ಇದೇ ಕಾರಣಕ್ಕೆ ಹೋಗಿದ್ದೇವು ಎಂಬ ಉತ್ತರ. ನಂತರ ಯಾದವಾಡ, ಯರಗಟ್ಟಿ ರಸ್ತೆ ಮೂಲಕ ಅಂಕಲಗಿ ಪೊಲೀಸ್ ಠಾಣೆಯಲ್ಲಿ ಕ್ಷಣಕಾಲ ವಿಶ್ರಾಂತಿ ಪಡೆದಿದ್ದು. ಇಷ್ಟೆಲ್ಲ ಪ್ರಹಸನ ನಂತರ ಮರುದಿನ ಬೆಳಿಗ್ಗೆ ಬೆಳಗಾವಿ ಜಿಲ್ಲಾ ಕೋರ್ಟ್ ಗೆ ಸಿ.ಟಿ ರವಿ ಅವರನ್ನು ಕರೆತಂದಿದ್ದು. ಸಧ್ಯ ರಾಜ್ಯದ ಜನರಿಗೆ ಕಾಡುತ್ತಿರುವ ಕಟ್ಟ ಕಡೆಯ ಪ್ರಶ್ನೆ ಸಿ.ಟಿ.ರವಿ ಅವರನ್ನು ಇಷ್ಟೆಲ್ಲ ಸ್ಥಳಗಳಿಗೆ ಅಲೆದಾಡಿಸಿದ್ದು ಯಾವ ಕಾರಣ? ಇಲ್ಲಿ ದಿಕ್ಕು ತಪ್ಪಿದ್ದು ಸಿ.ಟಿ.ರವಿ ಅವರಾ ಅಥವಾ ಬೆಳಗಾವಿ ಪೊಲೀಸರಾ? ಪ್ರಬುದ್ಧತೆ ಪ್ರದರ್ಶಿಸಿದ ಸತೀಶ್ ಜಾರಕಿಹೊಳಿ ಸಿ.ಟಿ.ರವಿ ಪ್ರಕರಣದ ನಂತರ ಹೆಚ್ಚು ಗಮನ ಸೆಳೆದಿದ್ದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಆಡಿದ ಆ ಒಂದು ಮಾತು. ದೇಶದಲ್ಲಿ ಇಂತಹ ಅನೇಕ ಪ್ರಕರಣಗಳು ಸದನದಲ್ಲಿ ನಡೆದುಹೋಗಿವೆ. ಇಬ್ಬರೂ ನಾಯಕರು ಈ ಪ್ರಕರಣವನ್ನು ಇಲ್ಲಿಯೇ ಕೈಬಿಡುವುದು ಒಳಿತು ಎಂಬ ಹೇಳಿಕೆ ತುಂಬಾ ಸದ್ದು ಮಾಡಿದೆ.
ಸತೀಶ್ ಜಾರಕಿಹೊಳಿ ಅವರದು ಮೌನದಿಂದಲೇ ರಾಜಕೀಯ ಸಂದೇಶ ಕೊಡುವ ವ್ಯಕ್ತಿತ್ವ. ಆಗಾಗ್ಗೆ ಅವರು ಆಡುವ ಮಾತುಗಳು ಸದ್ಯದ ಪರಿಸ್ಥಿತಿ ಹಾಗೂ ಮುಂದೆ ಆಗುವ ಅನಾಹುತದ ಕುರಿತು ಎಚ್ಚರಿಕೆಯ ಸಂದೇಶ ವಾಗುವ ಅನುಮಾನವಿಲ್ಲ. ಇದೇ ಕಾರಣಕ್ಕೆ ಸಚಿವ ಸತೀಶ್ ಆಡಿದ ಮಾತು ತೀರಾ ಮಹತ್ವದ್ದು ಎಂದೆನಿಸಿದೆ. ಸಿ.ಟಿ.ರವಿ ಪ್ರಕರಣದಲ್ಲಿ ಅವರು ಆಡಿರುವ ಎನ್ನಲಾದ ಅಶ್ಲೀಲ ಪದದ ಸಮರ್ಥನೆಗೆ ಯಾರೂ ಬರುವ ಮಾತಿಲ್ಲ. ಆದರೆ ಬಂಧನದ ನಂತರ ಗೃಹ ಇಲಾಖೆ ನಡೆದುಕೊಂಡ ರೀತಿಯ ಕುರಿತು ಸ್ವಪಕ್ಷದವರಿಗೂ ಅಸಮಾಧಾನ ಇದೆ. ಖುದ್ದು ಸತೀಶ್ ಜಾರಕಿಹೊಳಿ ಅವರೇ ಹೇಳಿದ್ದು, ರವಿ ಅವರನ್ನು ಕೋರ್ಟ್‌ಗೆ ಹಾಜರುಪಡಿಸುವಂತೆ ಎಂದು. ಆದರೆ ಈ ಮಾತನ್ನು ಪೊಲೀಸರು ಕೇಳಲಿಲ್ಲ ಎಂದು ಹೇಳಿದ್ದರು.
ಪ್ರಸ್ತುತ ಘಟನೆ ಹಾಗೂ ಅದು ಸಾಗುತ್ತಿರುವ ದಾರಿ ನೋಡಿದರೆ ಅನವಶ್ಯಕವಾಗಿ ವಿಷಯ ಎಳೆದಂತಾಗುತ್ತಿದೆ. ಇದರಿಂದ ಹಿರಿಯ ನಾಯಕರು ಮುಜುಗರ ಪಡುವ ಸನ್ನಿವೇಶವೂ ಎದುರಾಗಿದೆ. ಆದರೆ ಇಲ್ಲಿ ಪ್ರಮುಖವಾಗಿ ಸತೀಶ್ ಜಾರಕಿಹೊಳಿ ತಮ್ಮ ರಾಜಕೀಯ ಪ್ರಬುದ್ಧತೆ ಪ್ರದರ್ಶನ ಮಾಡಿದ್ದಾರೆ. ಕೆಲವು ಸಂದರ್ಭಗಳಲ್ಲಿ ರಾಜಕೀಯ ವಾಗಿ ಪಡೆದುಕೊಂಡಷ್ಟು ಕಳೆದುಕೊಳ್ಳುವುದು ಅನಿವಾರ್ಯ. ಆದರೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಆದ ಮನಸ್ಸಿನ ಗಾಯಕ್ಕೆ ಸಧ್ಯ ಔಷಧಿ ಎಂದರೆ ಅದು ಕಾನೂನು ಸಮರ. ಹೋರಾಡಿ ಗೆದ್ದು ಮತ್ತೊಂದು ಉದಾಹರಣೆ ಆಗುತ್ತಾರಾ? ಎಂಬುದನ್ನು ಕಾಲವೇ ತಿಳಿಸಲಿದೆ.
ಮಹಿಳೆಯರ ಶೋಷಣೆ ಸಾಮಾಜಿಕ ಪಿಡುಗು ಪ್ರಜಾಪ್ರಭುತ್ವ ವ್ಯವಸ್ಥೆ ಅತ್ಯುನ್ನತ ವೇದಿಕೆಯಾದ ಸಂಸತ್ತಿಗೆ ಗೆದ್ದು ಬರುವ ಮಹಿಳೆಯರೂ ದೌರ್ಜನ್ಯಕ್ಕೆ ಒಳಗಾಗುತ್ತಿರುವುದು ಶೋಚನೀಯ ಸಂಗತಿ. 1889 ರಲ್ಲಿ ರಚನೆಯಾದ ಐಪಿಯು (ಇಂಟರ್ ಪಾರ್ಲಿಮೆಂಟರಿ ಯುನಿಯನ್)2023 ರಲ್ಲಿ ನೀಡಿರುವ ವರದಿ ಅನ್ವಯ. ಜಗತ್ತಿನ ಎಲ್ಲ
ದೇಶಗಳ ಸಂಸತ್ತಿನನಲ್ಲಿ ಮಹಿಳೆಯರು ಪ್ರತಿನಿಧಿಸುವ ಸರಾಸರಿ ಶೇಕಡಾ 26.9 ರಷ್ಟಿದ್ದು. ಸದ್ಯ 0.4 ಪ್ರತಿಶತ ಹೆಚ್ಚಳ ಕಂಡಿದೆ. ಆದರೆ ಕೆಲ ದೇಶಗಳಲ್ಲಿ ಮಹಿಳೆಯರು ಸಂಸತ್ ಚುನಾವಣೆ ಸ್ಪರ್ಧೆಗೆ ಪಾಲ್ಗೊಳ್ಳುವ ಪ್ರಮಾಣ ಗಣನೀಯ ವಾಗಿ ಇಳಿಕೆ ಕಂಡಿದ್ದರ ಕುರಿತು ಸಂಸ್ಥೆ ಬೆಳಕು ಚೆಲ್ಲಿದೆ.
ಇದಕ್ಕೆ ಪ್ರಮುಖ ಕಾರಣ ಮಹಿಳಾ ಸಂಸದರನ್ನು ಅಶ್ಲೀಲ ಪದಬಳಸಿ ನಿಂದಿಸುವುದು. ಲೈಂಗಿಕ ಕಿರುಕುಳ, ವೈಯಕ್ತಿಕ ದಾಳಿಗಳಿಂದ ಮಹಿಳೆಯರು ರಾಜಕೀಯದಿಂದ ದೂರ ಸರಿಯುತ್ತಿದ್ದಾರೆ ಎಂದು ವರದಿ ಹೇಳಿದೆ.
ಈ ಹಿಂದೆ ಪ್ರಾ ಸಂಸತ್ತಿನಲ್ಲಿ ಮಹಿಳಾ ಸಂಸದರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಜಗತ್ತಿನ ಅನೇಕ ಭಾಗಗಳಲ್ಲಿ ರಾಜಕೀಯವಾಗಿ ಗುರುತಿಸಿಕೊಂಡ ಮಹಿಳೆಯರ
ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಾ ಸಾಗಿವೆ. ಇದರಿಂದ ಭವಿಷ್ಯದಲ್ಲಿ ಮಹಿಳೆಯರು ರಾಜಕೀಯಕ್ಕೆ ಬರಲು ಹಿಂದೇಟು ಹಾಕುವ ಪರಿಸ್ಥಿತಿ ಬಂದರು ಅಚ್ಚರಿ ಪಡಬೇಕಿಲ್ಲ. ಆದರೆ ಭಾರತ ದೇಶ ಇದಕ್ಕೆ ತದ್ವಿರುದ್ಧವಾಗಿ ನಿಂತಿದೆ. ಇಲ್ಲಿ ಮಹಿಳೆ ಯರಿಗೆ ಹೆಚ್ಚಿನ ರಾಜಕೀಯ ಸ್ಥಾನಮಾನ ನೀಡಿದ್ದು, ಇದು ಇನ್ನಷ್ಟು ಬಲಿಷ್ಠವಾದರೆ ದೇಶಕ್ಕೆ ಒಳಿತು.
(ಲೇಖಕರು: ಪತ್ರಕರ್ತರು)
ಇದನ್ನೂ ಓದಿ: Vinayaka Mathapathy Column: ಅಟಲ್‌ಜೀ ಹೃದಯ ಗೆದ್ದ ಫಡ್ನವೀಸ್