Thursday, 21st November 2024

Vishweshwar Bhat Column: ಜಪಾನಿನಲ್ಲಿ ಇರುವಷ್ಟು ಹೊತ್ತು ʼಕಲಿಯುಗʼವೇ, ಯಾಕೆಂದರೆ…!

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್

ನಾನು ಸುಮಾರು 12 ವರ್ಷಗಳ ಹಿಂದೆಯೇ ಜಪಾನ್‌ಗೆ ಬರಬೇಕಿತ್ತು. ವೀಸಾ ಬಂದಿತ್ತು, ಕೆಟ್ ಆಗಿತ್ತು. ಆದರೆ ಹಠಾತ್ತನೆ ಏನೋ ಅನಾನು ಕೂಲವಾಗಿ ಕೊನೆಕ್ಷಣದಲ್ಲಿ ನನ್ನ ಪ್ರವಾಸವನ್ನು ರದ್ದುಪಡಿಸಬೇಕಾಗಿ ಬಂದಿತು. ಅನಂತರ ಅಲ್ಲಿಗೆ ಹೋಗುವ ಅವಕಾಶಗಳೇ ಬರಲಿಲ್ಲ. ಮದುವೆ-ಮುಂಜಿ ಕಾರ್ಯಕ್ರಮದಲ್ಲಿ ತೀರಾ ಹತ್ತಿರದ ಸ್ನೇಹಿತರು ಮತ್ತು ನೆಂಟರನ್ನು ಆಮಂತ್ರಿಸಲು ಮರೆತುಬಿಡುತ್ತೇವಲ್ಲ, ಹಾಗೆ ನಾನೂ
ಜಪಾನ್ ದೇಶವನ್ನು ಮರೆತುಬಿಟ್ಟಿದ್ದೆ.

ಇಲ್ಲಿ ತನಕ ಸುಮಾರು 98 ದೇಶಗಳನ್ನು ಸುತ್ತಿದ್ದರೂ, 370ಕ್ಕೂ ಹೆಚ್ಚು ಸಲ ವಿದೇಶ ಪ್ರವಾಸ ಮಾಡಿದ್ದರೂ, ಜಪಾನ್ ಮಾತ್ರ ನನ್ನ ಪಾಲಿಗೆ ದಕ್ಕಿರಲಿಲ್ಲ. ಆಫ್ರಿಕಾ ಖಂಡದ ಅರ್ಧದಷ್ಟು ದೇಶಗಳಲ್ಲಿ ಸಂಚರಿಸಿದ್ದರೂ, ಉತ್ತರ ಧ್ರುವದ ನೆತ್ತಿಯ ಮೇಲಿರುವ ಐಸ್ ಲ್ಯಾಂಡ್‌ನಂಥ ದೇಶಕ್ಕೆ ಹೋಗಿಬಂದಿದ್ದರೂ, ನಮ್ಮದೇ ಏಷ್ಯಾ ಖಂಡದಲ್ಲಿರುವ, ಬೆಂಗಳೂರಿನಿಂದ ಮೂರೂವರೆ ಗಂಟೆ ಸಮಯದ (Time difference) ಅಂತರ ದಲ್ಲಿರುವ, ಜಪಾನ್‌ನಂಥ ಮಹತ್ವದ ದೇಶ ನನಗೇಕೆ ದಕ್ಕಲಿಲ್ಲ ಎಂಬುದು ನನಗಿನ್ನೂ ಅಚ್ಚರಿಯೇ.

ವೃತ್ತಿ ಸಂಬಂಧಿ ಕಾರ್ಯನಿಮಿತ್ತ ಅನೇಕ ದೇಶಗಳಿಗೆ ಹೋಗುವ ಪ್ರಸಂಗ ನನ್ನ ಪಾಲಿಗೆ ಒದಗಿಬರುವುದು ಸಹಜ. ಇಲ್ಲದಿದ್ದರೆ ಅಂಥ ಸಂದರ್ಭ ಅಥವಾ ಅವಕಾಶಗಳನ್ನು ನಾನಾದರೂ ಸೃಷ್ಟಿಸಿಕೊಳ್ಳುತ್ತೇನೆ. ಆದರೆ ಜಪಾನ್ ವಿಷಯ ದಲ್ಲಿ ಅದೇಕೋ ಅವೆರಡೂ ಆಗಿರಲಿಲ್ಲ. ಪಾಕಿಸ್ತಾನಕ್ಕೆ 2 ಸಲ ಹೋಗಿ ಬಂದಿರುವ ನನಗೆ, ಇದೇ ರೀತಿಯ ವಿಷಾದ ನಮ್ಮ ಪಕ್ಕದ ರಾಷ್ಟ್ರವಾದ ಬಾಂಗ್ಲಾದೇಶಕ್ಕೆ ಇನ್ನೂ ಹೋಗಲು ಸಾಧ್ಯವಾಗದಿರುವ ಬಗ್ಗೆಯೂ ಇದೆ. ಬಾಂಗ್ಲಾ ರಾಜಧಾನಿ ಢಾಕಾಕ್ಕೆ ಹೋಗಲು ಹೆಚ್ಚು ಶ್ರಮಪಡಬೇಕಿಲ್ಲ, ನಿಜ. ಆದರೆ ಅಲ್ಲಿಗೆ ಹೋಗಲು ಆಗಲಿಲ್ಲ ಎನ್ನುವುದೂ ನಿಜವೇ. ಹೋದ ದೇಶಕ್ಕೇ ಹತ್ತಾರು ಸಲ ಹೋಗಿರುತ್ತೇನೆ, ಆದರೆ ಕೆಲವು ದೇಶಗಳು ಹೇಗೋ ‘ಬಚಾವ್’ ಆಗಿಬಿಡುತ್ತವೆ. ಭಾರತದ ರಾಷ್ಟ್ರಪತಿ ಯಾದವರು ತಮ್ಮ ಅಧಿಕಾರಾವಧಿಯ 5 ವರ್ಷಗಳಲ್ಲಿ ಅಲ್ಲಿ ತನಕ ತಾವು ಭೇಟಿ ನೀಡದ, ನೋಡಲೇಬೇಕೆಂದು ಅಂದುಕೊಂಡಿರುವ ಮತ್ತು ತಮ್ಮ ಹಿಂದಿನವರು ಅಲ್ಲಿ ತನಕ ಭೇಟಿ ನೀಡದ ದೇಶಗಳಿಗೆ ಹೋಗಲು ಬಯಸುತ್ತಾರಂತೆ.

ಈ ಕಾರಣದಿಂದ ಡಾ. ಅಬ್ದುಲ್ ಕಲಾಂ ಅವರು ಐಸ್‌ಲ್ಯಾಂಡ್ ಮತ್ತು ಉಕ್ರೇನ್‌ಗೆ ಭೇಟಿ ನೀಡಿದ್ದರು. ಪ್ರಧಾನಿ ನರಸಿಂಹರಾವ್ ಅವರು
ಆಫ್ರಿಕಾದ ಬುರ್ಕಿನೋಪಾಸೋಕ್ಕೆ ಹೋಗಿದ್ದೂ ಆ ಕಾರಣಕ್ಕೆ. ನಾನು ಸಹ ಜಗತ್ತಿನ ನಕಾಶೆಯನ್ನು ಹರಡಿಕೊಂಡು ಇಲ್ಲಿ ತನಕ ಹೋಗದ ದೇಶಗಳನ್ನು ಆಗಾಗ ನೋಡುತ್ತಿರುತ್ತೇನೆ. ಅಲ್ಲಿಗೆ ಹೋಗುವ ಯಾವುದಾದರೂ ನೆಪಗಳನ್ನು ಹುಡುಕುತ್ತಿರುತ್ತೇನೆ. ಬಯಕೆ ಉತ್ಕಟವಾದಾಗ, ನನ್ನ ಪಾಡಿಗೆ ಸುಮ್ಮನೆ ಹೊರಟುಬಿಡುತ್ತೇನೆ. ಯಾವ ದೇಶವನ್ನೇ ಆಗಲಿ, ನೋಡಿ ಬರಲು ಬಲವಾದ ಕಾರಣಗಳು ಬೇಕಿಲ್ಲ. ಅದಕ್ಕೆ ಹತ್ತಾರು ಲಕ್ಷ ರುಪಾಯಿಗಳೂ ಬೇಕಿಲ್ಲ. ಅಷ್ಟಕ್ಕೂ ಬೇಕಿರುವುದು ಸಮಯ, ಧೈರ್ಯ ಮತ್ತು ದೇಶ ನೋಡಬೇಕೆಂಬ ಉತ್ಕಟ ಆಸೆ. ಈಗಿನ ದಿನಗಳಲ್ಲಂತೂ 25-30 ವರ್ಷದ ಹುಡುಗಿ ಯರು ಹೆಗಲಿಗೆ ಬ್ಯಾಕ್ಪ್ಯಾಕ್ ನೇತಾಕಿಕೊಂಡು solo tour ಅಂತ ಒಬ್ಬರೇ ಹತ್ತಾರು ದೇಶಗಳಿಗೆ ಹೊರಟುಬಿ
ಡುತ್ತಾರೆ. ಅಷ್ಟರಮಟ್ಟಿಗೆ ಅಂತಾರಾಷ್ಟ್ರೀಯ ಪ್ರಯಾಣ ಸಲೀಸಾಗಿದೆ.

ಹಿಂದೆಂದಿಗಿಂತಲೂ ಈ ದಿನಗಳಲ್ಲಿ ದೇಶ ಸುತ್ತಾಟ ಸುಲಭವಾಗಿದೆ, ದೇಶಗಳ ನಡುವಿನ ಅಂತರ ಕಮ್ಮಿಯಾಗಿದೆ. ಕನ್ನಡ ಭಾಷೆಯ ಹೊರತಾಗಿ ಬೇರೆ ಭಾಷೆ ಬರದಿದ್ದರೂ ಪರವಾಗಿಲ್ಲ, ಜಗತ್ತನ್ನು ಸುತ್ತಿ ಬರಬಹುದು. 2 ವರ್ಷಗಳ ಹಿಂದೆ, ನಾನು ಅಮೆರಿಕಕ್ಕೆ ಹೋದಾಗ, ನಮ್ಮ ಬಸ್ಸಿನಲ್ಲಿ ಚೀನಾದ 80-85 ವರ್ಷದ ವೃದ್ಧ ದಂಪತಿಗಳಿದ್ದರು. ಅವರಿಗೆ ಮ್ಯಾಂಡರಿನ್ ಹೊರತಾಗಿ ಬೇರೆ ಭಾಷೆಯೇ ಬರುತ್ತಿರಲಿಲ್ಲ. ಅವರು 42 ದಿನಗಳಿಂದ ಅಮೆರಿಕ ಸುತ್ತುತ್ತಿದ್ದರು. ತಮ್ಮ ಮೊಬೈಲಿನಲ್ಲಿರುವ Google Translate ಆಪ್ ಓಪನ್ ಮಾಡಿಕೊಂಡು ಹೇಳಬೇಕಿರುವು ದನ್ನು ತಮ್ಮ ಭಾಷೆಯಲ್ಲಿಯೇ ಹೇಳುತ್ತಿದ್ದರು. ಅದನ್ನು ಕೇಳಿಸಿಕೊಂಡವರು ಅವರ ಭಾಷೆಯಲ್ಲಿ ಹೇಳಿದರೆ, ಅದು ಮ್ಯಾಂಡರಿನ್ ಭಾಷೆಗೆ ತರ್ಜುಮೆ ಯಾಗಿ ಅವರಿಗೆ ಕೇಳಿಸುತ್ತಿತ್ತು. ಪ್ರವಾಸದುದ್ದಕ್ಕೂ ಭಾಷೆಯ ಸಮಸ್ಯೆಯೇ ಆಗಲಿಲ್ಲ ಎಂದು ಅವರು ಹೇಳಿದ್ದರು. ಅದರಲ್ಲೂ ಈ ದಿನಗಳಲ್ಲಿ ಕೈಯಲ್ಲಿ ಮೊಬೈಲ್ ಇದ್ದರೆ, international roaming ಸಂಪರ್ಕ ಹೊಂದಿದ್ದರೆ, ಗೂಗಲ್ ಮ್ಯಾಪ್ ಸಹಾಯದಿಂದ ಎಲ್ಲಿಗೆ ಬೇಕಾದರೂ ಹೋಗಬಹುದು, ಗಮ್ಯಸ್ಥಾನ ತಲುಪಬಹುದು.

ನಾನು ಮತ್ತು ನನ್ನ ಸ್ನೇಹಿತ ಕಿರಣ್ ಉಪಾಧ್ಯಾಯ ಡ್ರೈವ್ ಮಾಡಿಕೊಂಡು ಕಜಕಿಸ್ತಾನ್, ಕಿರ್ಗಿಸ್ತಾನ್, ಉಜ್ಬೆಕಿಸ್ತಾನ್, ಜೋರ್ಡನ್, ಸೌದಿ ಅರೇಬಿಯಾ, ಒಮಾನ್, ಯುನೈಟೆಡ್ ಕಿಂಗ್ಡಮ್‌ನ ಸ್ಕಾಟ್ಲೆಂಡ್, ವೇಲ್ಸ ಅನ್ನು ಸುತ್ತಿದ್ದು ಹಾಗೇ. ನಮಗೆ ಅಲ್ಲಿನ ದೇಶಗಳ ಹಾದಿ ಗೊತ್ತಿಲ್ಲದಿದ್ದರೂ,
ಒಬ್ಬೇ ಒಬ್ಬರನ್ನೂ ಕೇಳದೇ, ಅನಾಯಾಸವಾಗಿ ಸುತ್ತಿ ಬಂದಿದ್ದೆವು.

ಇಂಟರ್ನೆಟ್ ಸಂಪರ್ಕವಂತೂ ಜಗತ್ತಿನ ಯಾವ ಮೂಲೆಗೆ ಹೋದರೂ ಸಿಗುತ್ತದೆ. ಅಲ್ಲಿ ತನಕ ನೀವು ಯಾರನ್ನೂ ಕೇಳಬೇಕಿಲ್ಲ. ಅಷ್ಟೇ ಅಲ್ಲ, ಅಲ್ಲಿ ತನಕ ನೀವು ನಿಮ್ಮ ಸ್ನೇಹಿತರು, ಮನೆ-ಮಂದಿ ಜತೆ ಕನೆಕ್ಟ್ ಆಗಿಯೇ ಇರುತ್ತೀರಿ. ಹಿಂದಿನ ದಿನಗಳಲ್ಲಿ ಕಾಶಿಯಾತ್ರೆಗೆ ಹೋದವರು
ವಾಪಸ್ ಬರುವ ಭರವಸೆ ಇರಲಿಲ್ಲ. ಹೀಗಾಗಿ ಕಾಶಿಗೆ ಹೋಗಿ‌ ಬಂದವರನ್ನು ಊರಲ್ಲಿ ಸನ್ಮಾನಿಸುತ್ತಿದ್ದರು. ಕಾಲ್ನಡಿಗೆಯಲ್ಲಿ ಅಲ್ಲಿಗೆ ಹೋಗಿ ಬರಬೇಕಾದ ದಿನಗಳೂ ಇದ್ದವು. ಆದರೆ ಈ ದಿನಗಳಲ್ಲಿ ವಿದೇಶ ಪ್ರವಾಸ ತೀರಾ ಸಲೀಸು. 10 ದಿನಗಳಲ್ಲಿ ಯುರೋಪಿನ 38 ದೇಶಗಳನ್ನು ನೋಡಿ ವಾಪಸ್ ಬರಬಹುದು.

ಉಗಾಂಡಾ ಮೂಲದ ಅಮೆರಿಕದ ಜೆಸ್ಸಿಕಾ ನಬಾಂಗೋ ಎಂಬ 40 ವರ್ಷ ವಯಸ್ಸಿನ ಮಹಿಳೆ ಬರೆದ The Catch Me If You Can: One Woman’s Journey to Every Country in the World ಎಂಬ ಪುಸ್ತಕವನ್ನು ನೀವು ಓದಿದ್ದೀರೋ ಇಲ್ಲವೋ ಗೊತ್ತಿಲ್ಲ. ವಿದೇಶ
ಸುತ್ತಾಟಕ್ಕೆ ಸಂಬಂಧಿಸಿದಂತೆ ನನ್ನ ಮೇಲೆ ಪ್ರಭಾವ ಬೀರಿದ ಪುಸ್ತಕವದು. ಹೆಸರೇ ಕೇಳದ ದೇಶಗಳಿಗೆ, ಹೋಗಲು ಭಯಪಡುವ ಸ್ಥಳಗಳಿಗೆ, ಏಕಾಂಗಿಯಾಗಿ ಸುತ್ತಿದ ಜೆಸ್ಸಿಕಾ, ವಿಶ್ವಸಂಸ್ಥೆ ಮಾನ್ಯತೆ ನೀಡಿದ 195 ದೇಶಗಳನ್ನು ನೋಡಿ ಬಂದಿದ್ದಾಳೆ. ಯಾರೂ ಭೇಟಿ ನೀಡಲು ಮನಸ್ಸು ಮಾಡದ ಆಸ್ಟ್ರೇಲಿಯಾದ ವಾಯವ್ಯದಲ್ಲಿನ ಮೈಕ್ರೋನೇಷ್ಯಾದಲ್ಲಿರುವ ನೌರು ಎಂಬ ದೇಶದಲ್ಲಿ ತಾನು ಸ್ಕೂಟರ್ ಅಪಘಾತಕ್ಕೀಡಾಗಿ
ಅನುಭವಿಸಿದ ಪ್ರಸಂಗವಿರಬಹುದು, ಜಪಾನಿನ ಹಳ್ಳಿಯೊಂದರಲ್ಲಿ ಆಕ್ಟೊಪಸ್ ಹಿಡಿದು ತಿನ್ನುವ ಜಪಾನಿಯರ ಆಹಾರ ಪದ್ಧತಿ ಇರಬಹುದು, ಅಫ್ಘಾನಿಸ್ತಾನದ ಹಜ್ರತ್ ಅಲಿ ಮಝರ್‌ನಲ್ಲಿನ ಭೀಕರ ಬಡತನವಿರಬಹುದು, ಟೋಂಗಾ ದೇಶದಲ್ಲಿ ತಿಮಿಂಗಿಲಗಳ ಬೆನ್ನಿನ ಮೇಲೆ ಕುಳಿತು ಈಜಿದ ಘಟನೆಯಿರಬಹುದು, ಗಿನಿ ಬಿಸ್ಸಾವು ಗಡಿ ಪ್ರದೇಶವನ್ನು ಅಪರಿಚಿತ ವ್ಯಕ್ತಿಯ ಜತೆ ದಾಟಿದ ಸಾಹಸವಿರಬಹುದು, ವೆನೆಜುವೆಲಾದ ಲಾಸ್ ರೋಕಸ್‌ನ ಸಮುದ್ರ ತೀರದಲ್ಲಿ ಅನುಭವಿಸಿದ ವಿಚಿತ್ರ ಸನ್ನಿವೇಶವಿರಬಹುದು, ಜೆಸ್ಸಿಕಾ ರೋಚಕವಾಗಿ ಈ ಎಲ್ಲ ಅನುಭವಗಳನ್ನು ಕಟ್ಟಿ ಕೊಟ್ಟಿದ್ದಾಳೆ.

ನಾನಂತೂ ತುವಾಲು ಎಂಬ ದೇಶದ ಹೆಸರನ್ನೇ ಕೇಳಿರಲಿಲ್ಲ. ಹಾಗೆ ಅದರ ರಾಜಧಾನಿ ಫುನಾಫುಟಿ ಹೆಸರನ್ನೂ. ದಕ್ಷಿಣ ಪೆಸಿಫಿಕ್ ಪ್ರಾಂತದಲ್ಲಿರುವ, ಸುಮಾರು 11000 ಜನಸಂಖ್ಯೆಯಿರುವ, ಪುಟ್ಟ ಸ್ವತಂತ್ರ ದ್ವೀಪ ದೇಶವಾದ ತುವಾಲು ಅವಸಾನದ ಅಂಚಿನಲ್ಲಿರುವ ದೇಶ ಎಂದೇ ಪ್ರಸಿದ್ಧ. ವರ್ಷದಿಂದ ವರ್ಷಕ್ಕೆ ಮುಳುಗುತ್ತಿರುವ ಈ ದೇಶ ಯಾವಾಗ ಪೂರ್ತಿ ಗುಳುಂ ಆಗುವುದೋ ಗೊತ್ತಿಲ್ಲ. ಜೆಸ್ಸಿಕಾ ಬರೆದ ಪುಸ್ತಕದಲ್ಲಿಯೇ ನಾನು ಈ ಎಲ್ಲ ವಿವರಗಳನ್ನು ಓದಿದ್ದು. ಇಂದು ಜೆಸ್ಸಿಕಾಗೆ ಏಕಾಂಗಿಯಾಗಿ ಜಗತ್ತಿನ ಪ್ರದಕ್ಷಿಣೆ ಹಾಕುವುದು ಸಾಧ್ಯವಾಗಿದೆ. ಜೆಸ್ಸಿಕಾ ಥರ 35 ವರ್ಷದ ಅಮೆರಿಕದ ಲೇಖಕಿ ಹಾಗೂ ಟ್ರಾವೆಲರ್ ಕ್ಯಾಸಿ ಡೇ ಪಿಕೋಲ್ ‘ಅತಿ ಕಿರಿಯ’ ಮತ್ತು ‘ವೇಗವಾಗಿ ಜಗತ್ತಿನ ಎಲ್ಲ ದೇಶಗಳನ್ನು ಸುತ್ತಿದ ಮಹಿಳೆ’ ಎಂಬ ಅಭಿದಾನಕ್ಕೆ ಪಾತ್ರಳಾಗಿದ್ದಾಳೆ. ಈಕೆ ತನ್ನ ಅನುಭವವನ್ನು ‘ಉmಛಿbಜಿಠಿಜಿಟ್ಞ 196’ ಎಂಬ ಪುಸ್ತಕದಲ್ಲಿ ದಾಖಲಿಸಿzಳೆ. ೨೦೧೫ರಿಂದ ೨೦೧೭ರ ನಡುವೆ ಕೇವಲ ೧೮ ತಿಂಗಳು ೨೬ ದಿನಗಳಲ್ಲಿ ವಿಶ್ವದ ಎಲ್ಲ ದೇಶಗಳಿಗೆ ಭೇಟಿ ನೀಡಿ ಗಿನ್ನೆಸ್ ದಾಖಲೆ ಬರೆದಿzಳೆ.
ಇವರಿಬ್ಬರ ಕೃತಿಗಳನ್ನು ಓದಿದ ಯಾರಿಗೇ ಆಗಲಿ, ಒಂದು ಸಲ ಎಲ್ಲ ದೇಶಗಳ ನೆತ್ತಿಯ ಮೇಲೆ ಕಾಲಿಟ್ಟು ಬರಬೇಕು ಎಂಬ ಅದಮ್ಯ ಆಸೆ ಹುಟ್ಟದೇ ಹೋಗುವುದಿಲ್ಲ.

ಈ ದಿನಗಳಲ್ಲಿ ಕೆಲವು ಯೂಟ್ಯೂಬರ್‌ಗಳು ಮತ್ತು ಇನ್ಸ್ಟಾಗ್ರಾಮ್ ಜ್ಞ್ಛ್ಝ್ಠಿಛ್ಞ್ಚಿಛ್ಟಿಗಳು ದೇಶ ತಿರುಗುವುದನ್ನು ಕಾಯಕ ಮಾಡಿಕೊಂಡಿzರೆ. ತಾವು ನೋಡಿದ ಊರು ಗಳನ್ನು ಯೂಟ್ಯೂಬ್ ಮತ್ತು ಇನ್ಸ್ಟಾ ದಲ್ಲಿ ಪೋ ಮಾಡುತ್ತಾ, ಆ ಮೂಲಕ ಹಣ ಗಳಿಸುತ್ತಿzರೆ. ಇದು ಜಗತ್ತು ನೋಡುವ ಹೊಸ ಅವಕಾಶವನ್ನು ಅನೇಕರ ಪಾಲಿಗೆ ತೆರೆದಿಟ್ಟಿದೆ. ಕೆಲವರಂತೂ ದೇಶ ನೋಡುತ್ತಿದ್ದಾರೋ, ದೇಶ ನೋಡುತ್ತಾ ನೋಡುತ್ತಾ ಹಣ ಮಾಡುತ್ತಿzರೋ ಗೊತ್ತಾ ಗುವುದಿಲ್ಲ. ಉದಾಹರಣೆಗೆ, ನಮ್ಮ ಡಾ.ಬ್ರೋ. ಅಂಥವರಿಗೆ ಊರು ಸುತ್ತುವುದೇ ಪೂರ್ಣಾವಧಿ ಉದ್ಯೋಗ.

ತಮ್ಮ ವೃತ್ತಿಗೆ ‘ಜೈ’ ಎಂದು ದೇಶ ತಿರುಗುವುದನ್ನೇ ಞZಜ್ಞಿ ಟಚಿ ಮಾಡಿಕೊಂಡವರ ದೊಡ್ಡ ಪಟ್ಟಿಯೇ ಸಿಗುತ್ತದೆ. ಅಂದರೆ ಈ ದಿನಗಳಲ್ಲಿ ವಿದೇಶ ಪ್ರವಾಸ ವೃತ್ತಿ-ಪ್ರವೃತ್ತಿ ಎರಡೂ ಹೌದು. ಈಗ ವಿದೇಶಗಳಿಗೆ ಹೋಗಲು ಪ್ಲಾನ್ ಮಾಡುವುದು ಸುಲಭ. ಹಲವಾರು ದೇಶಗಳು ಈಗ ಪ್ರವಾಸಿಗರಿಗೆ ‘ವೀಸಾ ಆನ್ ಅರೈವಲ’ ಅಥವಾ ‘ಇ-ವೀಸಾ’ ನೀಡುತ್ತಿವೆ. ಉದಾಹರಣೆಗೆ, ಯುರೋಪಿಯನ್ ಯೂನಿಯನ್‌ನ
ಶೆಂಗನ್ ವೀಸಾ ಪಡೆಯುವುದರಿಂದ, ೨೬ ದೇಶಗಳಿಗೆ ಪ್ರವಾಸ ಮಾಡಬಹುದು. ಭಾರತದ ಪಾಸ್‌ಪೋರ್ಟ್ ಹೊಂದಿದವರಿಗೆ ಜಗತ್ತಿನ ೫೬ ದೇಶಗಳು ‘ವೀಸಾ ಆನ್ ಅರೈವಲ್’ ನೀಡುತ್ತಿವೆ. ಅಂದರೆ ಆಯಾ ದೇಶಗಳಿಗೆ ಹೋಗಿ‌ ವಿಮಾನ ನಿಲ್ದಾಣದಲ್ಲಿ ವೀಸಾ ಪಡೆಯಬಹುದಾಗಿದೆ. ಕೆಲವು ದೇಶಗಳಲ್ಲಿ ಭಾರತದ ರುಪಾಯಿ ಮಾತಾಡುತ್ತದೆ.

ಹೀಗಾಗಿ ಒಂದು ಕಾಲಕ್ಕೆ ಶ್ರೀಮಂತರಿಗೆ ಮಾತ್ರ ಸೀಮಿತವಾಗಿದ್ದ ವಿದೇಶ ಸುತ್ತಾಟ ಈಗ ಎಲ್ಲರಿಗೂ ದಕ್ಕುವಂತಾಗಿದೆ. ಭಾರತದ
ಆಹಾರಗಳನ್ನು ನೀಡುವ ಹೋಟೆಲ್‌ಗಳು ಯಾವ ದೇಶದಲ್ಲಿ ಇಲ್ಲ ಹೇಳಿ. ಹೀಗಾಗಿ ಊಟ-ಉಪಾಹಾರಕ್ಕೂ ತೊಂದರೆಯಾಗುವುದಿಲ್ಲ. ವೆಜ್ ಬಿಟ್ಟು ಮತ್ತೇನನ್ನೂ ಸೇವಿಸುವುದಿಲ್ಲ ಎನ್ನುವವರಿಗೂ ಹಲವು ಆಯ್ಕೆಗಳಿವೆ. ಯಾವ ದೇಶಕ್ಕೆ ಹೋದರೂ ಬಜೆಟ್‌ಗೆ ತಕ್ಕ ವಾಸ್ತವ್ಯ ವ್ಯವಸ್ಥೆ ಲಭ್ಯ.
ಅಂತಾರಾಷ್ಟ್ರೀಯ ಡ್ರೈವಿಂಗ್ ಲೈಸೆ ಹೊಂದಿದ್ದರೆ, ನೀವೇ ಡ್ರೈವ್ ಮಾಡಿಕೊಂಡು ವಿದೇಶ ಸುತ್ತಬಹುದು.

ಯಾರದ್ದೇ ಕಾರು (ಛ್ಞಿಠಿಅಇZ), ತಿರುಗುವವರು, ಮಜಾ ಮಾಡುವವರು ನೀವು. ಯಾವ ಸಲಹೆ-ಮಾರ್ಗದರ್ಶನ, ಪರಿಹಾರ ಅಥವಾ ಮಾಹಿತಿಯನ್ನಾದರೂ ಕ್ಷಣಾರ್ಧದಲ್ಲಿ ಪಡೆಯುವುದು ಕಷ್ಟವಲ್ಲ. ವಿದೇಶ ಪ್ರವಾಸವನ್ನು ಇದಕ್ಕಿಂತ ಸುಲಭ, ಸಲೀಸು ಮಾಡಲು ಸಾಧ್ಯವೇ ಇಲ್ಲ. ಇಷ್ಟಾಗಿಯೂ ನೀವು ತಿರುಗುವುದಿಲ್ಲ ಅಂದ್ರೆ ನಿಮ್ಮ ಏನೋ ಐಬು ಇದೆ ಎಂದರ್ಥ.

ವಿದೇಶ ಸುತ್ತಲು ಬಹಳ ಹಣ ಬೇಕು ಎಂದು ಅನೇಕರು ಭಾವಿಸಿದ್ದಾರೆ, ಅದು ಸುಳ್ಳು. ನನ್ನನ್ನು ಕೇಳಿದರೆ, ‘ಮನಸ್ಸು, ಹುಚ್ಚು, ತೀವ್ರ ತುಡಿತ, ಅಪರಿಮಿತ ಉತ್ಸಾಹ, ವಾಂಛೆ, ಟಞ್ಛಟ್ಟಠಿ ಟ್ಞಛಿ ನಿಂದ ಹೊರಬರುವ ಚಡಪಡಿಕೆ ಭಾವ ಇದ್ದರೆ ಸಾಕು’ ಅಂತ ಹೇಳುತ್ತೇನೆ. ಇವಿಷ್ಟು ಇದ್ದರೆ ವರ್ಷ
ದಲ್ಲಿ ಕನಿಷ್ಠ ೪ ದೇಶಗಳನ್ನು ಒಬ್ಬರೇ, ಪತ್ನಿ-ಮಕ್ಕಳೊಂದಿಗಾದರೆ ೨ ದೇಶಗಳನ್ನಾದರೂ ನೋಡಬಹುದು. ಇದಕ್ಕೆ ಸಾಕಷ್ಟು ಪ್ಲಾನಿಂಗ್ ಅಗತ್ಯ. ಅಷ್ಟು ಮಾಡಿದರೆ ನಿಮಗೆ ೬೦ ತುಂಬುವುದರೊಳಗೆ ೧೦೦ ದೇಶಗಳನ್ನು ನೋಡುವುದು ಕಷ್ಟವೇನಲ್ಲ. ಇದನ್ನು ನನ್ನ ಅನುಭವದಲ್ಲಿ ಹೇಳುತ್ತಿದ್ದೇನೆ. ಗೊತ್ತಿ ರಲಿ, ಒಂದು ಲಕ್ಷ ರುಪಾಯಿಯಲ್ಲಿ ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶಕ್ಕೆ ಹೋಗಿ ತಲಾ ೩ ದಿನ ಇದ್ದು ಬರಬಹುದು.
ಇತ್ತೀಚೆಗೆ ಏರ್ ಏಷ್ಯಾ ವಿಮಾನ ಸಂಸ್ಥೆ ೫೦,೦೦೦ ರುಪಾಯಿಗೆ ಏಷ್ಯಾದ ಯಾವುದಾದರೂ ೨ ದೇಶಗಳಿಗೆ (ಷರತ್ತುಗಳು ಅನ್ವಯ) ಕರೆದುಕೊಂಡು ಹೋಗುವುದಾಗಿ ಘೋಷಿಸಿದ್ದನ್ನು ನೆನಪಿಸಿಕೊಳ್ಳಿ. ಆ ಹಣದಲ್ಲಿ ದಿಲ್ಲಿಗೋ, ಗೋವಾಕ್ಕೋ, ವಾರಾಣಸಿಗೋ ಹೋಗಿಬರಲು ಆಗುವುದಿಲ್ಲ.

ನಾನು ನಿಮಗೆ ಹೇಳಲು ಹೊರಟಿದ್ದು ಜಪಾನ್ ಕುರಿತು. ವಿಮಾನ ಪ್ರಯಾಣದ ಮಧ್ಯೆ ಮೋಡಗಳು ಹಾದುಹೋಗುವಂತೆ, ಬೇರೆ ಬೇರೆ ವಿಷಯಗಳು ಹಾದುಹೋದವು. ಜಪಾನ್ ಬಗ್ಗೆ ಹೇಳಲು ಅಸಂಖ್ಯ ಕಥೆಗಳಿವೆ. ಅಲ್ಲಿನ ಸ್ವಚ್ಛತೆ, ಪ್ರಾಮಾಣಿಕತೆ, ಸಾರ್ವಜನಿಕ ಆದರ್ಶಗಳ ಬಗ್ಗೆ ಹೇಳಲು ಹೊರಟರೆ ಅದು ಎಂದೂ ಮುಗಿಯದ ಕಥೆಯಾದೀತು.

ಜಪಾನ್ ಹೆಜ್ಜೆ ಹೆಜ್ಜೆಗೂ ‘ಹೊಸ ಪಾಠ ಹೇಳುವ ದೇಶ’ ಎಂದೇ ಪ್ರಸಿದ್ಧ. ಜಪಾನಿನಲ್ಲಿ ಯಾವತ್ತೂ ‘ಕಲಿಯುಗ’ವೇ. ಕಾರಣ ಆ ದೇಶದಲ್ಲಿ ಇದ್ದಷ್ಟು ಹೊತ್ತು ನಾವು ಏನಾದರೂ ಹೊಸತನ್ನು ಕಲಿಯುತ್ತಲೇ ಇರುತ್ತೇವೆ. ಅದರಿಂದ ಸದಾ ಪ್ರೇರಣೆ ಪಡೆಯುತ್ತಲೇ ಇರುತ್ತೇವೆ. ಜಪಾನಿಯರ ದೇಶ
ಪ್ರೇಮ, ಅನ್ಯರ ಬಗ್ಗೆ ಅವರಿಗಿರುವ ಗೌರವ-ಆದರ, ಹೊಸತನಕ್ಕೆ ನಿತ್ಯ ಹುಡುಕಾಟ, ಸಮಯಕ್ಕೆ ನೀಡುವ ಮಹತ್ವ, ಸ್ವಂತ ಮನೆಯ ಜಗುಲಿಗಿಂತ ಊರಿನ ಬೀದಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವ ಕಾಳಜಿ-ಕಳಕಳಿ, ಅಪರೂಪ ಎನಿಸುವ ಪರಿಸರಪ್ರಜ್ಞೆ ಎಂಥವರಿಗಾದರೂ ಅನನ್ಯ ಆದರ್ಶವೇ. ಭಾಷೆ, ಜನ ಗೊತ್ತಿಲ್ಲದ ದೇಶದಲ್ಲಿದ್ದರೂ, ಪರಕೀಯ ಭಾವ ಮೂಡಲು ಬಿಡದ ಆಪ್ತತೆ, ಸೋಪಜ್ಞತೆ ನಮಗರಿವಿಲ್ಲದಂತೆ ಮನೆ
ಮಾಡುವುದು ಜಪಾನಿ ಮಣ್ಣಿನ ವಿಶೇಷ ಗುಣವೇ. ಜಪಾನಿನ ಬಗ್ಗೆ ಕೇಳಿದ ಕಥೆಗಳೆಲ್ಲ ನಿಜವೋ, ಕಟ್ಟುಕಥೆಯೋ ಗೊತ್ತಿಲ್ಲ.

ಆದರೆ ಆ ದೇಶದ ಬಗ್ಗೆ ಅಷ್ಟೊಂದು ಸಕಾರಾತ್ಮಕ ಕಥೆಗಳು ಇರುವುದಂತೂ ನಿಜ. ಅಷ್ಟಕ್ಕೂ ಅನ್ಯರಿಗೆ ಆ ದೇಶದ ಬಗ್ಗೆ ಬಿಟ್ಟಿ ಪ್ರಚಾರ ಮಾಡಿದರೆ ಸಿಗುವುದಾದರೂ ಏನು? ಅದೇನೇ ಇರಲಿ, ನಾನು ಕೇಳಿದ, ನೋಡಿದ ಆ ಕಥೆಗಳನ್ನು ನಿಮಗೆ ಹೇಳಲೇಬೇಕು. ಅಲ್ಲಿ ತನಕ… ಸಯೋನಾರಾ!

ಇದನ್ನೂ ಓದಿ: @vishweshwarbhat