ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್
vbhat@me.com
ಅದೊಂದು ಮಹತ್ವದ ಬಿಜಿನೆಸ್ ಮೀಟಿಂಗ್. ನಿಮ್ಮ ಸಹೋದ್ಯೋಗಿ ಜತೆ ಸೇರಿ ನೀವೊಂದು ಪ್ರೆಸೆಂಟೇ ಶನ್ ಮಂಡಿಸ ಬೇಕಾಗಿದೆ ಎಂದಿಟ್ಟುಕೊಳ್ಳಿ. ನಿಮ್ಮ ಮಾತು ಮುಗಿಸಿ, ‘ಮುಂದಿನದನ್ನು ನನ್ನ ಸಹೋ ದ್ಯೋಗಿ ವಿವರಿಸುತ್ತಾನೆ’ ಎಂದು ಹೇಳುತ್ತೀರಿ. ಆದರೆ ನಿಮ್ಮ ಸಹೋದ್ಯೋಗಿ ಸ್ವಲ್ಪವೂ ತಯಾರಾಗಿಯೇ ಇಲ್ಲ. ಈ ಸ್ಥಿತಿಗೆ Shitting the bed ಅಂತಾರಂತೆ. ‘ನಾನು ನಿನ್ನ ಬಗ್ಗೆ ಸಾಕಷ್ಟು ಕಾಳಜಿವಹಿಸುತ್ತೇನೆ’ ಎಂದು ಹೇಳುವಾಗ I give a shit ಅಂತಾರೆ.
ಎರಡು ವಾರಗಳ ಹಿಂದೆ, ಇಂಗ್ಲಿಷಿನ Shit ಪದದ ಬಗ್ಗೆ ಬರೆದಿದ್ದೆ. ಈ ನಾಲ್ಕಕ್ಷರಗಳ ಒಂದು ಪದ ಎಷ್ಟೆಲ್ಲ ಅರ್ಥ ವನ್ನು ಮೂಡಿಸಬಲ್ಲುದು ಎಂಬ ಬಗ್ಗೆ ಚರ್ಚಿಸಿದ್ದೆ. Shit ಅಂದ್ರೆ ಮಲ ಅಥವಾ ಅಮೇಧ್ಯ ಎಂಬ ಅರ್ಥವಿದ್ದರೂ, ಇಂಗ್ಲಿಷಿನಲ್ಲಿ ಆ ಪದವನ್ನು ಎಂಥೆಂಥ ಸಂದರ್ಭಗಳಲ್ಲಿ ಬಳಸುತ್ತಾರೆ ಎಂಬುದನ್ನು ನೋಡಿದರೆ, ಆ ಪದದ ಅರ್ಥವನ್ನು ‘ಸವಿ’ಯಲು ಕುತೂಹಲ ಮೂಡುವುದಂತೂ ಸತ್ಯ.
‘ಇಂದು ನನಗೆ ಕೈ ತುಂಬಾ ಕೆಲಸ, ನನಗೆ ಬಿಡುವೇ ಇಲ್ಲ’ ಎಂದು ಹೇಳಲು Shit ಪದ ಬೇಕಾ ಎಂದು ಕೇಳಿದರೆ, ‘ಹೂಂ’ ಎಂದು ಯಾರೂ ಹೇಳಲಾರರು. ಆದರೆ Shit ಪದದ ಮಹಾತ್ಮೆಯೇ ಬೇರೆ. I have a lot of shit to do
today ಎಂದು ಹೇಳುವುದನ್ನು ಕೇಳಿರಬಹುದು. ಹಾಗಂದರೆ I am very busy today ಎಂದರ್ಥ. ‘ಇಂದು ನನಗೆ ಕೈತುಂಬಾ ಕೆಲಸ. ನಾನು ನನ್ನ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಪಾವತಿ ಮಾಡಬೇಕು, ಕಾರನ್ನು ಸರ್ವೀಸ್ಗೆ ಬಿಡಬೇಕು, ಮೆಡಿಕಲ್ ರಿಪೋರ್ಟನ್ನು ಕಲೆಕ್ಟ್ ಮಾಡಿಕೊಳ್ಳಬೇಕು, ಬಾಸ್ ಕರೆದ ಮೀಟಿಂಗ್ಗೆ ಹಾಜರಾಗಬೇಕು, ಮಗನ ಶಾಲೆಗೆ ಪೇರೆಂಟ್ಸ್ ಮೀಟಿಂಗ್ಗೆ ಹೋಗಬೇಕು, ರಾತ್ರಿ ಅಮೆರಿಕಕ್ಕೆ ತೆರಳಲು ವಿಮಾನ ನಿಲ್ದಾಣಕ್ಕೆ ಓಡಬೇಕು, ಈ ಮಧ್ಯೆ ‘”I have a lot of shit to pack’ ಎಂದು ಹೇಳುವುದನ್ನು ಕೇಳಿರಬಹುದು. ಸೂಟ್ಕೇಸನ್ನು ಪ್ಯಾಕ್ ಮಾಡಿಕೊಳ್ಳುವಾಗಲೂ Shit ಪದ ಬೇಕು.
ಇದನ್ನೂ ಓದಿ: Vishweshwar Bhat Column: ಬೋ*ಮಗ ಸಂಸ್ಕೃತ ಪದವೇ ?
ಕೆಲ ದಿನಗಳ ಹಿಂದೆ, ನಾನು ನನ್ನ ಸ್ನೇಹಿತರೊಬ್ಬರ ಮನೆಗೆ ಹೋಗಿದ್ದೆ. ಅವರ ಮಗ ಲ್ಯಾಪ್ಟಾಪ್ ಹಿಡಿದು ಆಫೀಸಿನ ಕೆಲಸದಲ್ಲಿ ಮಗ್ನನಾಗಿದ್ದ. ಅದೇ ವೇಳೆ ನನ್ನ ಸ್ನೇಹಿತ ಅದೇ ರೂಮಿನಲ್ಲಿ ತಾನು ಬಿಡಿಸಿದ ಪೇಂಟಿಂಗ್ ಅನ್ನು ತೋರಿಸಲು ನನ್ನನ್ನು ಕರೆದ. ಆಗ ಸ್ನೇಹಿತನ ಮಗ, ‘Dad, please don’t touch my shit without asking’ ಎಂದು ಜೋರಾಗಿ ಕೂಗಿದ್ದು ಕೇಳಿ ನನಗೆ ನಗು ಬಂತು. ಲ್ಯಾಪ್ಟಾಪ್ಗೆ ಸಂವೇದಿಯಾಗಿ ಆತ Shit ಪದವನ್ನು ಬಳಸಿದ್ದ. ಕೆಲ ಹೊತ್ತಿನ ನಂತರ, ಸ್ನೇಹಿತನ ಮತ್ತೊಬ್ಬ ಮಗನ ಆಗಮನವಾಯಿತು. ಆತ ಒಳ್ಳೆಯ ಹಾಡುಗಾರ. ತನ್ನ ತಮ್ಮನ ಬಗ್ಗೆ ಅಣ್ಣ, ‘He makes shit sound good’ ಎಂದ.
ನನ್ನ ಸ್ನೇಹಿತನ ಇಬ್ಬರು ಮಕ್ಕಳು ಪರಸ್ಪರ ಮಾತಾಡಿಕೊಳ್ಳುತ್ತಿದ್ದರು- ’Bro, do you know what happened today? My friend’s sister broke up with her boyfriend because she didn’t want to deal with his shit anymore ’ ಎಂದ. ಆಕೆ ಆತನ ವರ್ತನೆಯನ್ನು ಸಹಿಸಿಕೊಳ್ಳಲಿಲ್ಲ ಎಂದು ಹೇಳುವಾಗಲೂ ಶಿಟ್ ಪದ ಬಳಕೆಯಾಗಿತ್ತು.
ಹಾಗೆ ಆತ ಮಾತನ್ನು ಮುಂದುವರಿಸುತ್ತಾ, ‘ಇನ್ನು ಮುಂದೆ ಅವಳ ಬಾಯ್ ಫ್ರೆಂಡ್ ಇದನ್ನೆಲ್ಲ ಹೇಗೆ ನಿಭಾಯಿಸು ತ್ತಾನೋ ಗೊತ್ತಿಲ್ಲ.. he needs to get his shit together ಅಂದ್ರೆ ಪರಿಸ್ಥಿತಿಯನ್ನು ನಿಭಾಯಿಸುವುದು, ಸುಧಾರಿಸಿ ಕೊಳ್ಳುವುದು ಎಂದು ನಾನು ಅರ್ಥೈಸಿಕೊಂಡೆ. ಅಷ್ಟಕ್ಕೇ ಸುಮ್ಮನಾಗದ ನಾನು, ಅವನನ್ನು ತುಸು ಕೆಣಕಲು, ‘To get your shit together ಅಂದ್ರೆ ಏನು?’ ಅಂದೆ.
ಅದಕ್ಕೆ ಆತ, ’’If you don’t have your shit together, then your life might be a shitshow or a shitstorm ’ ಎಂದ. ನಾನು ಮನಸ್ಸಿನೊಳಗೆ ‘ಉಸ್ಸಪ್ಪಾ’ ಎಂದೆ. ನಾನು ಅಷ್ಟಕ್ಕೇ ಸುಮ್ಮನಾಗದೇ, ‘ಗುರು, shitshow ಮತ್ತು shitstorm ಅಂದ್ರೆ ಏನು?’ ಎಂದು ಕೇಳಿದೆ. ಅದಕ್ಕೆ ಆತ, ‘ಅಂಕಲ, ನೀವು ವಿಮಾನದಲ್ಲಿ ಒಂದು ವಿಂಡೋಸೀಟ್ ಅನ್ನು ಕಾದಿರಿಸುತ್ತೀರಿ. ನಿಮ್ಮ ಪಕ್ಕದಲ್ಲಿ ಒಬ್ಬ ತಂದೆ ತನ್ನ ಎಂಟು ವರ್ಷದ ಮಗನೊಂದಿಗೆ ಆಗಮಿಸುತ್ತಾನೆ. ಆ ಮಗ ತಾನು ವಿಂಡೋ ಪಕ್ಕದಲ್ಲಿ ಕುಳಿತುಕೊಳ್ಳುತ್ತೇನೆ ಎಂದು ಗಲಾಟೆ ಮಾಡುತ್ತಾನೆ. ತಂದೆ ನಿಮಗೆ ತನ್ನ ಮಗನಿಗಾಗಿ ವಿಂಡೋಸೀಟ್ ಬಿಟ್ಟುಕೊಡ್ತೀರಾ ಎಂದು ವಿನಂತಿಸಿ ಕೊಳ್ಳುತ್ತಾನೆ. ನೀವು ಹೂಂ ಅಂತೀರಾ. ನಂತರ ನೀವು ಕೊನೆ ಸೀಟಿ (ಐಲ)ನಲ್ಲಿ ಬಂದು ಕುಳಿತುಕೊಳ್ಳುತ್ತೀರಿ. ಆ ಸೀಟು ಜಾಮ್ ಆಗಿದ್ದರಿಂದ ಹಿಂದಕ್ಕೆ ಆತುಕೊಳ್ಳಲು ಆಗುವುದಿಲ್ಲ. ಅಷ್ಟೊತ್ತಿಗೆ ಅಲ್ಲಿಗೆ ಬಂದ ಗಗನಸಖಿ ಬೇರೊಬ್ಬ ಪ್ರಯಾಣಿಕನಿಗೆ ನೀಡಬೇಕಿದ್ದ ಕಾಫಿಯನ್ನು ನಿಮ್ಮ ಮೇಲೆ ಚೆಲ್ಲಿ ಬಿಡುತ್ತಾಳೆ… ನಿಮ್ಮ ಈ ಅನುಭವವನ್ನು ಬೇರೆಯವರಿಗೆ ನೀವು ಹೇಳುತ್ತಾ all these things that
went wrong, and you say, it was a total shitshow or shitstorm. ಇವೆರಡೂ ಪದಗಳ ಅರ್ಥ ಒಂದೇ’ ಎಂದು ಸುದೀರ್ಘವಾಗಿ ವಿವರಿಸಿದ. ನಾನು ಜೋರಾಗಿ ನಕ್ಕೆ. ಅದಕ್ಕೆ ಆತ ’Its not a laughing shit. It’s a serious matter’ ಎಂದ. ನನಗೆ ಪುನಃ ನಗು ತಡೆದುಕೊಳ್ಳಲು ಆಗಲಿಲ್ಲ.
ಅದೊಂದು ಮಹತ್ವದ ಬಿಜಿನೆಸ್ ಮೀಟಿಂಗ್. ನಿಮ್ಮ ಸಹೋದ್ಯೋಗಿ ಜತೆ ಸೇರಿ ನೀವೊಂದು ಪ್ರೆಸೆಂಟೇಶನ್ ಮಂಡಿಸಬೇಕಾಗಿದೆ ಎಂದಿಟ್ಟುಕೊಳ್ಳಿ. ನಿಮ್ಮ ಮಾತು ಮುಗಿಸಿ, ‘ಮುಂದಿನ ದನ್ನು ನನ್ನ ಸಹೋದ್ಯೋಗಿ ವಿವರಿಸು ತ್ತಾನೆ’ ಎಂದು ಹೇಳುತ್ತೀರಿ.
ಆದರೆ ನಿಮ್ಮ ಸಹೋದ್ಯೋಗಿ ಸ್ವಲ್ಪವೂ ತಯಾರಾಗಿಯೇ ಇಲ್ಲ. ಈ ಸ್ಥಿತಿಗೆ Shitting the bed ಅಂತಾರಂತೆ. ‘ನಾನು ನಿನ್ನ ಬಗ್ಗೆ ಸಾಕಷ್ಟು ಕಾಳಜಿವಹಿಸುತ್ತೇನೆ’ ಎಂದು ಹೇಳುವಾಗ ‘”I give a shit’ ಅಂತಾರೆ. ನಿಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳಲು ನೀವು ಅನುವು ಮಾಡಿಕೊಟ್ಟರೆ, I take a shit ಎನ್ನಬೇಕು. He is full of shit ಅಂತ ಹೇಳಿದರೆ, ‘ಆತ ಬರೀ ಬಂಡಲ್ ಹೊಡೆಯುತ್ತಾನೆ, ಸುಳ್ಳು ಹೇಳ್ತಾನೆ’ ಎಂದರ್ಥ ಎಂದು shit ಪುರಾಣ ಮುಂದುವರಿಸಿದ.
ನೀವೊಂದು ಮಹತ್ವದ ಕರೆಯನ್ನು ಮಾಡಬೇಕಾಗಿದೆ, ನಿಮ್ಮ ಮೊಬೈಲ್ ಫೋನ್ ಬ್ಯಾಟರಿ ಖಾಲಿಯಾಗುತ್ತದೆನ್ನಿ. ಆಗ ನೀವು ಹೇಳುತ್ತೀರಿ, ‘”I lost my shit’ ಅಂತ. ಅದರಿಂದ ನಿಮಗೆ ತೊಂದರೆಯಾದರೆ, ‘ನನ್ನ ಮೊಬೈಲ್ ಫೋನ್ ಬ್ಯಾಟರಿ ಖಾಲಿಯಾಗಿದ್ದರಿಂದ, ನನಗೆ ಬಾಸ್ ಜತೆ ಮಾತಾಡಲು ಆಗಲಿಲ್ಲ. ಆತ ನಾಳೆಯಿಂದ ಕೆಲಸಕ್ಕೆ ಬರಬೇಡ ಅಂತ ಹೇಳಿದ. ಹೀಗಾಗಿ now I am in a deep shit’ ಎಂದು ಉದ್ಗರಿಸುತ್ತೀರಿ.
‘ಏನೇ ಆಗಲಿ, ಎಷ್ಟೇ ಖರ್ಚಾಗಲಿ, ಈ ಕೆಲಸ ಆಗಲೇಬೇಕು’ ಎಂದು ಹೇಳುವಾಗಲೂ ಶಿಟ್ ಪದ (At any cost, get
the shit done) ವನ್ನು ಬಳಸುವುದುಂಟು. ‘ಒಂದು ಕಾಲದಲ್ಲಿ ನಾನು ಸಾಮಾನ್ಯ ವ್ಯಕ್ತಿಯಾಗಿದ್ದೆ ಅಥವಾ ಅಪರಿಚಿತನಾಗಿದ್ದೆ’ ಎಂದು ಹೇಳುವಾಗ, Once upon a time, I was a drop of shit ಎಂದು ಹೇಳುವುದುಂಟು. ಕೆಲವರು ‘ಹೊರಗಿಂದ ಚೆಂದ, ಒಳಗೆ ಟೊಳ್ಳು’ ಎಂದು ಹೇಳುವಾಗ, ’some people are just beautifully
wrapped boxes of shit’ ಎನ್ನುವುದನ್ನು ಕೇಳಿರಬಹುದು.
ನನ್ನ ಸ್ನೇಹಿತನ ಮನೆಯಲ್ಲಿದ್ದಷ್ಟು ಹೊತ್ತು ಆಗಾಗ ಶಿಟ್ ಪದ ಒಂದಿಂದು ರೀತಿಯಲ್ಲಿ ಕೇಳಿಬರುತ್ತಲೇ ಇತ್ತು. ಅಲ್ಲಿ
ಶಿಷ್ಟಾಚಾರಕ್ಕಿಂತ ‘ಶಿಟ್ಟಾಚಾರ’ವೇ ಎದ್ದು ಕಾಣುತ್ತಿತ್ತು. ಒಂದು ರೀತಿಯಲ್ಲಿ ಇಡೀ ಮನೆಯೇ Shit ಮಯ ಎಂದು ಅನಿಸಿತು. ಒಳ್ಳೆಯದು, ಕೆಟ್ಟದ್ದು, ಬೇಕಾಗಿದ್ದು, ಬೇಡವಾಗಿದ್ದು, ನರಳಾಟ, ಚೀರಾಟ, ದುಃಖ-ಸಂತಸ, ಆನಂದ, ವಿಷಾದ, ಮದುವೆ-ಸೂತಕ, ನಂಬಿಕೆ-ಅಪನಂಬಿಕೆ… ಹೀಗೆ ಎಲ್ಲ ಸಂದರ್ಭ-ಸನ್ನಿವೇಶಗಳಿಗೂ ಸಲ್ಲುವ ಪದ ಅಂದ್ರೆ ಶಿಟ್. ನನ್ನ ಈ ‘ಶಿಟ್ ಪುರಾಣ’ವನ್ನು ಕೇಳಿ, ‘ಭಟ್ರೇ, please don’t think that whatever you write is a holy shit ’ ಎಂದು ಮಾತ್ರ ಹೇಳಬೇಡಿ.
ಲ್ಯಾಂಡ್ ಲಾಕ್ಡ್ ದೇಶ ಅಂದರೇನು?
ನೀವು landlock country (ಭೂ ಆವೃತ ಅಥವಾ ಭೂಭಾಗದಿಂದ ಸುತ್ತುವರಿದ ಅಥವಾ ದೇಶಗಳಿಂದ ಆವೃತ
ವಾದ) ಎಂಬ ಪದಪುಂಜವನ್ನು ಕೇಳಿರಬಹುದು. ದೇಶವೊಂದು ತನ್ನ ಗಡಿಭಾಗಗಳನ್ನೆಲ್ಲ ಬೇರೆ ದೇಶಗಳ ಗಡಿಗಳೊಂದಿಗೆ ಹಂಚಿಕೊಂಡರೆ, ಆ ದೇಶಕ್ಕೆ landlocked country ಎಂದು ಕರೆಯುತ್ತಾರೆ.
ಜಗತ್ತಿನಲ್ಲಿ ೪೪ ಈ ರೀತಿಯ ‘ಲ್ಯಾಂಡ್ ಲಾಕ್’ ದೇಶಗಳಿವೆ. ನದಿ ಅಥವಾ ಸಮುದ್ರ ದಡಕ್ಕೆ ಹೊಂದಿಕೊಳ್ಳದ ದೇಶವನ್ನೂ ಹೀಗೆ ಹೇಳುವುದುಂಟು. ಕೆಲವು ಲ್ಯಾಂಡ್ ಲಾಕ್ಡ್ ದೇಶಗಳು ಒಂದು ಅಥವಾ ಒಂದಕ್ಕಿಂತ ಹೆಚ್ಚು ದೇಶಗಳನ್ನು ತಮ್ಮ ಗಡಿಯೊಂದಿಗೆ ಹಂಚಿಕೊಂಡಿರಬಹುದು. ಕೇವಲ ಒಂದು ದೇಶವನ್ನಷ್ಟೇ ಹಂಚಿಕೊಂಡಿರುವ ದೇಶಕ್ಕೆ enclave ಎಂದೂ ಕರೆಯುವುದುಂಟು.
ಆಫ್ರಿಕಾ, ಏಷ್ಯಾ, ಯುರೋಪ್ ಮತ್ತು ದಕ್ಷಿಣ ಅಮೆರಿಕ ಖಂಡಗಳಲ್ಲಿ ಮಾತ್ರ ಲ್ಯಾಂಡ್ ಲಾಕ್ಡ್ ದೇಶವನ್ನು ಕಾಣಬಹುದು. ಆಸ್ಟ್ರೇಲಿಯಾ, ಉತ್ತರ ಅಮೆರಿಕ ಮತ್ತು ಅಂಟಾರ್ಟಿಕಾದಲ್ಲಿ ಭೂ ಭಾಗಗಳಿಂದ ಸುತ್ತುವರಿದ ದೇಶಗಳಿಲ್ಲ. ದಕ್ಷಿಣ ಅಮೆರಿಕದಲ್ಲಿ ಬೊಲಿವಿಯಾ ಮತ್ತು ಪೆರುಗ್ವೆ ಮಾತ್ರ ಲ್ಯಾಂಡ್ ಲಾಕ್ಡ್ ದೇಶಗಳಾಗಿವೆ. ಅತಿಹೆಚ್ಚು ಭೂ ಆವೃತವಾದ ದೇಶಗಳಿರುವುದು ಆಫ್ರಿಕಾ ಖಂಡದಲ್ಲಿ.
ರವಾಂಡ, ಲೆಸೋಥೋ, ನೈಜರ್, ಚಾಡ್, ಬುರ್ಕಿನೋ -ಸೋ, ಜಾಂಬಿಯಾ, ಇಥಿಯೋಪಿಯಾ, ಬುರುಂಡಿ
ಸೇರಿದಂತೆ ಹದಿನಾರು ದೇಶಗಳು ಒಂದಕ್ಕಿಂತ ಹೆಚ್ಚು ದೇಶಗಳ ಜತೆ ತಮ್ಮ ಗಡಿಯನ್ನು ಹಂಚಿಕೊಂಡಿವೆ. ಆಫ್ರಿಕಾ ಖಂಡದಲ್ಲಿ ಅತಿ ದೊಡ್ಡ ಭೂ ಆವೃತ ದೇಶವೆಂದರೆ ಚಾಡ್. ಏಷ್ಯಾದಲ್ಲಿ ಅತಿ ದೊಡ್ಡ ಲ್ಯಾಂಡ್ ಲಾP ದೇಶವೆಂದರೆ
ಕಝಕ್ಸ್ತಾನ್. ಅಮೆರಿಕದ ಟೆಕ್ಸಾಸ್ ರಾಜ್ಯಕ್ಕಿಂತ ನಾಲ್ಕು ಪಟ್ಟು ದೊಡ್ಡ ಮತ್ತು ಅರ್ಜೆಂಟಿನಾಗಿಂತ ತುಸು ಸಣ್ಣದಾದ ಕಝಕ್ ಸ್ತಾನ್ ಸುತ್ತ ರಷ್ಯಾ, ಚೀನಾ, ಕಿರ್ಗಿಜಸ್ತಾನ್, ಉಜ್ಬೆಕಿಸ್ತಾನ್, ಅರಲ್ ಸಮುದ್ರ, ತುರ್ಕಮೆನಿಸ್ತಾನ್, ಕ್ಯಾಸ್ಪಿಯನ್ ಸಮುದ್ರ ಆವರಿಸಿವೆ. ಅತಿ ಚಿಕ್ಕ ಲ್ಯಾಂಡ್ ಲಾಕ್ಡ್ ದೇಶಗಳೆಂದರೆ ವ್ಯಾಟಿಕನ್ ಸಿಟಿ, ಸ್ಯಾನ್ ಮರಿನೋ, ಅಂಡೋರಾ ಮತ್ತು ಲುಕ್ಸೆನ್ ಬರ್ಗ್.
ರಷ್ಯಾ ಅತಿ ಹೆಚ್ಚು ದೇಶಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಅದು ಅಜರ್ಬೈಜಾನ್, ಬೆಲಾರಸ್, ಚೀನಾ, ಎಸ್ತೋನಿಯಾ, ಜಾರ್ಜಿಯಾ, ಕಝಕ್ಸ್ತಾನ, ಉತ್ತರ ಕೊರಿಯಾ, ಲಾಟ್ವಿಯಾ, ಮಂಗೋಲಿಯಾ, ಲಿಕ್ಸ್ಟನ್ ಸ್ಟೆ ನ್, ಲಿಥುವೇನಿಯಾ, ನಾರ್ವೆ, ಪೋಲ್ಯಾಂಡ್, ಉಕ್ರೇನ್ ಸೇರಿ ಹದಿನಾಲ್ಕು ದೇಶಗಳ ಜತೆ ಗಡಿ ಹಂಚಿಕೊಂಡಿದೆ.
ಲಿಕ್ಸ್ಟನ್ ಸ್ಟೆ ನ್ ಮತ್ತು ಉಜ್ಬೆಕಿಸ್ತಾನ್ಗಳನ್ನು ‘ಡಬಲ್ ಲ್ಯಾಂಡ್ ಲಾಕ್ಡ್’ ದೇಶಗಳೆಂದು ಕರೆಯುತ್ತಾರೆ.
ಅವು ಗಡಿಯನ್ನು ಹಂಚಿಕೊಂಡಿರುವ ದೇಶಗಳು ಸಹ ಲ್ಯಾಂಡ್ ಲಾಕ್ಡ್ ಆಗಿರುವುದರಿಂದ ಹಾಗೆ ಕರೆಯುತ್ತಾರೆ. ಉದಾಹರಣೆಗೆ, ಉಜ್ಬೆಕಿಸ್ತಾನ್. ಈ ದೇಶವನ್ನು ಸುತ್ತುಗಟ್ಟಿರುವ ಅಫ್ಘಾನಿಸ್ತಾನ, ಕಝಕಸ್ತಾನ್, ಕಿರ್ಗಿಜಸ್ತಾನ್, ತಜಿಕಿಸ್ತಾನ್ ಮತ್ತು ತುರ್ಕಮೆನಿಸ್ತಾನ್ ಸಹ ಲ್ಯಾಂಡ್ ಲಾಕ್ಡ್ ದೇಶಗಳಾಗಿವೆ. ಅಂದರೆ ಭೂ ಮಾರ್ಗವಾಗಿ ಉಜ್ಬೆಕಿ ಸ್ತಾನಕ್ಕೆ ಹೋಗಬೇಕೆಂದರೆ ಒಂದು ಅಥವಾ ಒಂದಕ್ಕಿಂತ ಹೆಚ್ಚು ದೇಶಗಳನ್ನು ದಾಟಿ ಹೋಗಬೇಕು. ಆಸ್ಟ್ರಿಯಾ, ಸೆರ್ಬಿಯಾ ಮತ್ತು ಜಾಂಬಿಯಾ ದೇಶಗಳು ಎಂಟು ದೇಶಗಳೊಂದಿಗೆ ತಮ್ಮ ಗಡಿಯನ್ನು ಹಂಚಿಕೊಂಡಿವೆ.
ಒಂದೇ ದೇಶ ಆವೃತ (enclave) ವಾಗಿರುವ ದೇಶಗಳೆಂದರೆ, ಸ್ಯಾನ್ ಮರಿನೋ, ಲೆಸೋಥೋ ಮತ್ತು ವ್ಯಾಟಿಕನ್
ಸಿಟಿ. ಯಾವುದೇ ದೇಶ ಲ್ಯಾಂಡ್ ಲಾಕ್ಡ್ ಆಗಿರುವುದರಿಂದ ಅನುಕೂಲವೂ ಇದೆ, ಅನಾನುಕೂಲವೂ ಇದೆ. ಮೊದಲನೆಯದಾಗಿ ಆ ದೇಶಗಳಿಗೆ ಸಮುದ್ರದ ಸಂಪರ್ಕ ಇರುವುದಿಲ್ಲ. ಇದರಿಂದ ಸರಕು-ಸಾಗಾಣಿಕೆ ದುಬಾರಿ ಯಾಗುತ್ತದೆ. ಗಡಿ ಮತ್ತು ನೀರು ಹಂಚಿಕೆ ತಕರಾರು ಯಾವತ್ತೂ ಇದ್ದಿದ್ದೇ. ಇದರ ಅನುಕೂಲವೆಂದರೆ, ಸುಲಭವಾಗಿ ಪಕ್ಕದ ದೇಶಗಳ ಮಾರುಕಟ್ಟೆಯನ್ನು ತನ್ನದನ್ನಾಗಿಸಿಕೊಳ್ಳಬಹುದು. 44 ಲ್ಯಾಂಡ್ ಲಾಕ್ಡ್ ದೇಶಗಳ ಪೈಕಿ, 32 ದೇಶಗಳು ಅಭಿವೃದ್ಧಿ ಹೊಂದುತ್ತಿರುವ ದೇಶಗಳೆಂದು ವಿಶ್ವಸಂಸ್ಥೆಯೇ ಮಾನ್ಯ ಮಾಡಿದೆ.
ಕಾಯುವಿಕೆ ಎಂಬ ಪಡಿಪಾಟಲು
ನೀವು ಖ್ಯಾತ ಮಕ್ಕಳ ಪುಸ್ತಕಗಳ ಲೇಖಕ ಡಾ.ಸೆಯೂಸ್ ಬರೆದ Oh, the Places You Will Go ಪುಸ್ತಕವನ್ನು
ಓದಿದ್ದೀರೋ ಇಲ್ಲವೋ ಗೊತ್ತಿಲ್ಲ. ನಾನು ಈ ಪುಸ್ತಕವನ್ನು ಅನೇಕರಿಗೆ ಉಡುಗೊರೆಯಾಗಿ ನೀಡಿದ್ದೇನೆ. ನಾನೇನಾ ದರೂ ಈ ಪುಸ್ತಕವನ್ನು ನನಗೆ ಇಪ್ಪತ್ತು ವರ್ಷ ದಾಟುವ ಮುನ್ನ ಓದಿದ್ದರೆ, ಇಷ್ಟರೊಳಗೆ ಜಗತ್ತಿನ ಎಲ್ಲ ದೇಶಗಳ ನೆಲವನ್ನು ಮೆಟ್ಟಿ ಬಂದಿರುತ್ತಿದೆ. ಪ್ರತಿ ಪಯಣವೂ ಹೇಗೆ ಅವಿಸ್ಮರಣೀಯ ಮತ್ತು ನಾವು ಪ್ರತಿ ಪಯಣದಿಂದ ಅಂಥ ಅನುಭವದಿಂದ ಹೇಗೆ ವಂಚಿತರಾಗುತ್ತೇವೆ ಎಂಬುದನ್ನು ಡಾ.ಸೆಯೂಸ್ ಆ ಕೃತಿಯಲ್ಲಿ ವಿವರಿಸಿದ್ದಾರೆ. ಜಗತ್ತಿನಲ್ಲಿ Most Useless Place ಎಂಬುದಿದ್ದರೆ, The Waiting Place ಅಥವಾ The Waiting Room.
ಡಾ.ಸೆಯೂಸ್ ಬರೆಯುತ್ತಾರೆ- ಭೂಮಿಯ ಮೇಲೆ ಅತ್ಯಂತ ನೀರಸವಾದ ತಾಣ ಅಂತಿದ್ರೆ ಅದು The Waiting Room. ಅಲ್ಲಿ ಯಾವ ಚಟುವಟಿಕೆಯೂ ನಡೆಯುವುದಿಲ್ಲ. ವಿಮಾನ ನಿಲ್ದಾಣದಲ್ಲಿರುವ The Waiting Room ಅನ್ನು ನೋಡಿ. ಆಲ್ಲಿ ಎಲ್ಲರೂ ಜೀವನೋತ್ಸಾಹ ಕಳೆದುಕೊಂಡವರಂತೆ ಇರುತ್ತಾರೆ. ನನಗೆ ಅಲ್ಲಿ ಕುಳಿತಿರುವವ ರನ್ನು ನೋಡಿದರೆ, ಅವರ ಮುಂದೆ ಯಾವುದೇ ಗುರಿಗಳೇ ಇಲ್ಲವೇನೋ ಎಂದೆನಿಸುತ್ತದೆ. ಆ ಜಾಗದಲ್ಲಿ ಎಷ್ಟು ಹೊತ್ತಾದರೂ ಕಳೆಯಲು ಸಿದ್ಧರಾಗಿರುತ್ತಾರೆ. ಆ ರೂಮಿನಲ್ಲಿರುವುದು ಅಲ್ಪ ಕಾಲವಾದರೂ, ನಿಧಾನವಾಗಿ ಅಲ್ಲಿನ ಪರಿಸರಕ್ಕೆ ಒಗ್ಗಿಕೊಂಡುಬಿಡುತ್ತಾರೆ.
ಒಂದು ಗಂಟೆ ಅಲ್ಲಿ ಕಳೆದ ಬಳಿಕ, ಇನ್ನೂ ಸ್ವಲ್ಪ ಹೊತ್ತು ಇದ್ದಿದ್ದರೆ ಒಳ್ಳೆಯದಿತ್ತು ಎಂದು ಅವರಿಗೆ ಅನಿಸಲಾ ರಂಭಿಸುತ್ತದೆ. ಅಲ್ಲಿಂದ ಒಲ್ಲದ ಮನಸ್ಸಿನಿಂದ ನಿರ್ಗಮಿಸುತ್ತಾರೆ. ನನ್ನ ಪಾಲಿಗೆ ಅದು ಅತ್ಯಂತ ಬೋರಿಂಗ್ ಆದ ತಾಣ. ನಮ್ಮ ಬದುಕಿನಲ್ಲೂ ಅಂಥ ರೂಮು ಇದ್ದರೆ, ಬಹುತೇಕ ಮಂದಿ ಅಲ್ಲಿ ಹೋಗಿ ಕುಳಿತುಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಿದ್ದರು. ತಮ್ಮ ಬದುಕಿನಲ್ಲಿ ಏನೋ ಆಗಲೆಂದು ಅವರು ಆ ತಾಣಕ್ಕೆ ಹೋಗಿ ಕಾಯುತ್ತಾ ಕುಳಿತಿರುತ್ತಿದ್ದರು. ಸೋಮಾರಿಕಟ್ಟೆಯನ್ನಾದರೂ ಸಹಿಸಿಕೊಳ್ಳಬಹುದು. ಕಾರಣ ಅಲ್ಲಿ ಕುಳಿತವರು ಪರಸ್ಪರ ಸಂಭಾಷಣೆಯದರೂ ತೊಡಗಿರುತ್ತಾರೆ.
ಆದರೆ ವಿಮಾನ ನಿಲ್ದಾಣಗಳ The Waiting Room ನಲ್ಲಿ ಕುಳಿತಿರುವವರು ಗೋಡೆಯ ಮುಂದೆ ಕುಳಿತವರಂತೆ ಇರುತ್ತಾರೆ. ಒಂದು ವೇಳೆ ಗೋಡೆಯನ್ನೇ ದಿಟ್ಟಿಸುತ್ತಾ ಅಲ್ಲಿ ಕುಳಿತುಕೊಳ್ಳಬೇಕಾದ ಪ್ರಸಂಗ ಬಂದರೂ ಸರಿಯೇ, ಅದನ್ನು ಒಪ್ಪಿಕೊಳ್ಳುತ್ತಾರೆ ಎಂದು ಡಾ.ಸೆಯೂಸ್ ಹೇಳುತ್ತಾರೆ. ಬದುಕಿನಲ್ಲಿ ಬಸ್ಸಿಗೆ, ರೈಲಿಗೆ, ವಿಮಾನಕ್ಕೆ, ಜನರಿಗೆ ಕಾಯುವುದು ಅನಿವಾರ್ಯ. ಆದರೆ ಅದನ್ನೇ ಅಭ್ಯಾಸ ಮಾಡಿಕೊಳ್ಳಬಾರದು. ಕಾಯುವುದು ಅಂದ್ರೆ ಕಾಯುವು ದೊಂದೇ ಅಲ್ಲ. ಆ ವೇಳೆಯಲ್ಲೂ ಬೇರೆ ಕೆಲಸವನ್ನು ಮಾಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಅಲ್ಲಿ ಕಳೆಯುವ ಸಮಯವನ್ನು ಸಾರ್ಥಕಪಡಿಸಿಕೊಳ್ಳಲು ಯೋಚಿಸಬೇಕು.
‘ನಾನು ಅತಿ ಹೆಚ್ಚು ಪುಸ್ತಕಗಳನ್ನು ಓದಿದ್ದರೆ, ವಿಮಾನ ನಿಲ್ದಾಣಗಳ The Waiting Room ನಲ್ಲಿ’ ಎಂದು ಡಾ.ಸೆಯೂಸ್ ಬರೆದಿzರೆ. ಕಾಯುವುದೆಂದರೆ ಏನೂ ಮಾಡದಿರುವುದು ಎಂದು ಅನೇ ಕರು ಭಾವಿಸಿದ್ದಾರೆ. ಕಾಯುವು ದೆಂದರೆ ದಣಿವು ಆರಿಸಿಕೊಳ್ಳುವುದು ಎಂದು ಭಾವಿಸುವವರೂ ಇzರೆ. ಹೀಗಾಗಿ ಅಂಥವರು ಕಾಯುವು ದನ್ನು ಇಷ್ಟಪಡುತ್ತಾರೆ. ಆದರೆ ಯಾರೂ ಕಾಯುವುದೆಂದರೆ ಸಮಯ ನಿರರ್ಥಕಗೊಳಿಸುವುದು ಎಂದು
ಅರಿಯುವುದಿಲ್ಲ.
ಒಂದು ಮಾತಿದೆ. ಅದನ್ನು ಹೇಳಿದವನು ಯಾರೋ ಗೊತ್ತಿಲ್ಲ. The opposite of talking isn’t listening. The
opposite of talking is waiting ಮತ್ತು The opposite of thinking is also waiting ಅಂತ. ಇನ್ನು ಮುಂದೆ, The Waiting Room ಕಂಡರೆ, ಅಲ್ಲಿ ಅಡಿಯಿ ಡುವ ಮುನ್ನ ಯೋಚಿಸಿ. ನಿಮ್ಮ ಸಮಯ ವನ್ನು ಅರ್ಥಹೀನವಾಗಿ ಕಳೆಯಬೇಕು ಎಂದು ಅನಿಸಿದರೆ ಮಾತ್ರ ಒಳಕ್ಕೆ ಹೋಗಿ.