Monday, 25th November 2024

ಇವಾನ್‌ಲೊಡೆ ದಂಡೆಯ ವಾಟರ್‌ ವರ್ಲ್ಡು..!

ಅಲೆಮಾರಿಯ ಡೈರಿ

mehandale100@gmail.com

ಮೊದಲೇ ಹೇಳಿಕೇಳಿ ಕೂತಲ್ಲಿ ಕೂರದ, ನಿಲ್ಲದ ಅಲೆಮಾರಿ ನಾನು. ಅದರಲ್ಲೂ ಚಹ ಸಿಗುತ್ತೆ, ಅದಿನ್ನು ರುಚಿ ರುಚಿ ಎಂದೇ ನಾದರೂ ಹತ್ತಿಸಿಬಿಟ್ಟರೆ, ರಪ್ಪರಪ್ಪನೆ ಬೀಸುವ ಚಳಿಯಲ್ಲೂ ಒಂದು ಕವರ್ ಬಿಗಿದು ಹೊರಟುಬಿಡುತ್ತಿದ್ದೆ.

ಮೊನ್ನೆಮೊನ್ನೆ ಟರ್ಕಿರಿಟರ್ನ್ ಎಂದುಕೊಂಡು ಆರಾಮ ಮಾಡೊಣ ಎಂದು ಫೋನಾ ಯಿಸಿದವರಿಗೆಲ್ಲ ಟರ್ಕಿ, ಇಸ್ತಾಂಬುಲ್, ಅಂಟಾಲ್ಯ, ಪಮ್ಮುಕ್ಕಲೇ ಮತ್ತದರ ಹಾಟ್ ಏರ್‌ಬಲೂನು ಎಂದೆಲ್ಲ ಕತೆ ಹೊಡೆಯುತ್ತಿದೆ. ಅಪ್ಪಿತಪ್ಪಿಯೂ ಓವರ್‌ಟೇಕ್ ಮಾಡದ ಮತ್ತು ಮಾಡಿದರೂ ಅದಕ್ಕಿರುವ ರೂಲ್ಸು ಫಾಲೋ ಮಾಡುವ, ಆದರೆ ಟರ್ಕಿಯಲ್ಲಿ ಏನೇ ಮಾಡಿದರೂ ಗಂಟೆಗೆ ನಲವತ್ತೈದು ಕಿ.ಮೀ.ಗಿಂತಾ ಜಾಸ್ತಿ ಸ್ಪೀಡ್ ಓಡಿಸದ ಮತ್ತು ಒಂದೇ  ಒಂದು ಬೈಕು ಕಾಣದ ದೇಶದ ಬಗ್ಗೆ ಸ್ವಲ್ಪ ಜಂಭದಿಂದಲೇ ಮಾತಾಡುತ್ತ ಕೂತಿದ್ದೆ.

ಆಗಲೇ ಈ ರಾಣಿ ವಾಸಿಸುತ್ತಿದ್ದ ಆದರೆ ತೀರ ಒಂದು ಭಾಗದ ಅರಮನೆಯ ಟ್ರೆಕಿಂಗ್ ಐಡಿಯಾವನ್ನು ಇಲ್ಲಿಂದ ಮೂನ್ನೂರು ಕಿ.ಮೀ. ದೂರದ ಜಾಗದಲ್ಲಿ ಕೂತಿದ್ದು, ಇಂಗ್ಲೆಂಡ್‌ ನ ಇದ್ದರೂ ಬಾರದ ಪ್ರಕಾಶ ಕುಲಕರ್ಣಿ ಹೇಳುತ್ತಿದ್ದರೆ ಸರಕ್ಕನೆ ಎದ್ದು ಕೂತಿದ್ದೆ. ಲ್ಯಾಂಡ್ ಲೋಕೇಶನ್ ಮತ್ತು ಟ್ರೈನ್ ಡೀಟೈಲ್ ಕಳ್ಸುಕಳ್ಸು ಎನ್ನುತ್ತಾ. ಆ ಟ್ರೆಕಿಂಗ್ ಇನ್ಯಾವುದೋ ದಿನ ಘಟಿಸಿತು ಆ ಭಾಗ ಬೇರೆ ಬರೆಯುತ್ತೇನೆ.

ಆದರೆ, ಅದಕ್ಕೆ ಮೊದಲೇ ಹೋದಲ್ಲ ಹಳ್ಳಿಗಳನ್ನು ತಿರುಗುವ ನನ್ನ ಹುಕಿಗೆ ಭಾರತದ ಯಾವ ರಾಜ್ಯಗಳೂ ಉಳಿದಿಲ್ಲ. ಹಾಗಾಗಿ ಅಲ್ಲ ಮಾಡುತ್ತಿದ್ದ ಒಂದು ಪ್ರಯೋಗ ಮತ್ತು ಓಡಾಟವನ್ನೇ ಇಲ್ಲೂ ಮಾಡುವ ಲೆಕ್ಕಾಚಾರದಲ್ಲಿ ನೋಟ್ ಮಾಡಿಕೊಂಡು ಕಾಟ್ಸ್‌ವರ್ಲ್ಡ್‌ನ ಆಚೆಗಿರುವ ಒಂದೆರಡು ಹಳ್ಳಿಗೆ ಕಾಲಿಕ್ಕುವ ಇರಾದೆಯಲ್ಲಿ ಬೆಳಗ್ಗೆ ಐದೂವರೆಗೆಲ್ಲ ಆಸ್ಟರ್ಲೀ ರೈಲು ನಿಲ್ದಾಣಕ್ಕೆ ಆಗಲೇ ಆರಂಭ ವಾಗಿದ್ದ ಹಾನ್‌ಸ್ಲೋ ಬಸ್ ಸರ್ವೀಸ್ ತೊಂಬತ್ತೊಂದರ ಮೂಲಕ ಹೋಗಿ ಇಳಿದಾಗಿತ್ತು.

ಅಲ್ಲಿಂದ ಸುಮಾರು ಹದಿನೈದು ನಿಮಿಷ ಹೋಗಿರಬೇಕು, ಅ ಸಿಟಿ ಮ್ಯಾಪರ್ ಹಿಂಗೆ ಹೋದರೆ ಸುಲಭ ಗುರು, ನೀನ್ಯಾಕೆ ಅಲ್ಲಿ
ಹೋಗ್ತೀಯ ಎಂದು ತೋರಿಸತೊಡಗಿತ್ತು. ಸೋ ಕೂಡಲೇ ಕಾರ್ಡಿ- ಹೇಗಿದ್ದರೂ ಸಂಜೆವರೆಗೆ ಹೋಗಿ ಮುಟ್ಟೋದಲ್ವಾ ಎಂದು ಇತ್ತ ಹಳ್ಳಿಗೆ ಹೋಗಲು ಇಳಿದುಬಿಟ್ಟಿದ್ದೆ.

ಬಹುಶಃ ನಮ್ಮ ಮಲೆನಾಡಿಗೆ ಸ್ವಲ್ಪ ಚಾಲೆಂಜ್ ಮಾಡುವ ರೇಂಜಿನ ನಿಲ್ದಾಣ ಗಳು ಇವು. ಹಾಗೆ ನೋಡಿದರೆ ಸಾಗರ ತಾಳಗುಪ್ಪ ದಂತಹ ಚೆಂದದ ಸ್ಟೆಷನ್‌ಗಳನ್ನು, ಉ.ಕ. ಜಿಲ್ಲೆ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಿದರೆ ಅದರೆ ಮುಂದೆ ಯಾವುದೂ ನಿಲ್ಲಲ್ಲಿ ಕ್ಕಿಲ್ಲ. ಆದರೆ ಅದೆಷ್ಟೆ ಹೇಳಿದರೂ ನಮ್ಮ ಇಲಾಖೆ ಸರಕಾರ ಆ ನಿಟ್ಟಿನಲ್ಲಿ ಗಮನವನ್ನೇ ಹರಿಸುತ್ತಿಲ್ಲ. ನಮ್ಮ ನೆಲಗಳ ದುರ ದೃಷ್ಟ. ಹಾಗೆ ಕಿಂಗ್‌ಹ್ಯಾಮ್ ರೈಲಿನಲ್ಲಿ ಇಳಿದಾಗಲೇ ಗೊತ್ತಾಗಿದ್ದು ಟ್ಯಾಕ್ಸಿ ಕರೆಸುವ ಯೋಜನೆ ಕೈ ಕೊಟ್ಟಿದ್ದು. ರಪರಪನೇ ಆಗಲೇ ಮಳೆ ರಾಚುತ್ತಿತ್ತು. ತಲೆಗೆ ಮೈಗೆಲ್ಲ ರೈನ್ ಕವರ್ ಏರಿಸಿ ಎದುರಿಗೆ ಬರಲಿರುವ ಬಸ್ ಟೈಮಿಂಗ್ ನೋಡಿದರೆ ಅದರ ಪತ್ತೆ ಇರಲಿಲ್ಲ. ಇನ್ನು ಇದೇ ರೈಲಿನಲ್ಲಿ ವಾಪಸ್ಸು ಹೋಗು ವುದಾ ಅಥವಾ ಇಷ್ಟು ಬೇಗಾ ಕಾರ್ಡಿಪ್ ಕಡೆ ತಿರುಗುವುದಾ ಎಂದು ಯೋಚಿಸುವಾಗಲೇ ಗೊತ್ತಾಗಿದ್ದು ಅಷ್ಟು ದೂರದಿಂದ ಬಸ್ ೮೦೧ ಬರ್ತಿರೋದು.

ಆಗಲೇ ಸಿಟಿ ಮ್ಯಾಪರ್ ಅದನ್ನೇ ತೋರಿಸಿತ್ತಾದರೂ ಆ ನಂಬಿಕೆ ನನಗಿನ್ನು ಬಂದಿರಲಿಲ್ಲ. ಕಾರಣ ಆಗಲೆ ಮೂರು ಟ್ಯಾಕ್ಸಿ ಕರೆದು, ಅವರೆಲ್ಲ ಆ ಹಳ್ಳಿ ಮೂಲೆಗೆ ಬರಲ್ಲಪ್ರೋ ಎಂದು (ಬೋಲ್ಟ ಮಾತ್ರ ಇಲ್ಲಿ ನಡೆಯುತ್ತೆ. ಉಬರ್ ಕೂಡಾ ಇತ್ಲಾಗೆ ಬಂದಿಲ್ಲ) ಕ್ಯಾನ್ಸಲ್ ಮಾಡಿ ಆಗಿತ್ತು. ಕಪ್ಪನೆಯ ಆಗಸ ಅದಕ್ಕೂ ಕಪ್ಪನೆಯ ನೆಲದ ಜಾಗ ಕಿಂಗ್‌ಹ್ಯಾಮ್ ನಿಲ್ದಾಣ. ಭರ ಭರನೆ ರೈಲುಗಳು ಬರುತ್ತಿದ್ದಂತೆ, ಹೊರಗೆ ಸೈಕಲ್ ಮೇಲೆ ಬಂದು ಬಂದು ಓಡಿ ಹೋಗಿ ಸೇರಿಕೊಳ್ಳುವ ಜನರನ್ನು ನೋಡುವುದೇ ಒಂದು ದೊಡ್ಡ ಖುಷಿ.

ನಿಮಗಿಲ್ಲಿ ಒಂದು ವಿಷಯ ಹೇಳಬೇಕು. ಈ ದೇಶ ಮಾತ್ರವಲ್ಲ ಟೆಕ್ನಾಲಜಿಯನ್ನು ಬಳಸಿಕೊಳ್ಳಬೇಕೆನ್ನುವ ಯಾವದೇ ದೇಶಗಳೂ ಸಹಿತ ಅದ್ಭುತವಾಗಿ ಎಲ್ಲ ಹೈ ಎಂಡ್ ತಾಂತ್ರಿಕತೆಯನ್ನು ಬಳಸಲು ತನ್ನ ಜನರಿಗೆ ಅನುವು ಮಾಡಿಕೊಟ್ಟಿವೆ. ನೆನಪಿರಲಿ ನಮ್ಮಲ್ಲಿ ಇನ್ನೂ ಗೂಗಲ್ ಮ್ಯಾಪೇ ಆಕ್ಯೂರಸಿ ಬಗ್ಗೆ ಸಂಶಯದಿಂದಲೇ ಅದೆ ಒಯ್ಯುತ್ತದೆ ಎನ್ನುವ ಕಮೆಂಟು ಚಾಲ್ತಿ ಇರುವ
ಕಾಲಕ್ಕೆ, ಇಲ್ಲಿ ಲಂಡನ್‌ನ ಮೂಲೆ ಮೂಲೆಯ ಸಹಿತ ಥ್ರೀ ಡೀ.. ಸಹಿತ ರಸ್ತೆ ಮನೆ ಮನೆಯ ಚಿತ್ರಗಳನ್ನು ತೋರಿಸುತ್ತ
ಗೈಡ್ ಮಾಡುತ್ತವೆ. ಈವನ್ ನನಗೆ ಇಸ್ತಾಂಬುಲ್‌ನಲ್ಲಿ ಏಆರ್‌ಬಿ ಆಂಡ್ ಬಿ ಮನೆಗೆ ಹೋಗಲು ಮ್ಯಾಪಿಂಗ್ ಮಾಡಿಕೊಂಡರೆ ಅದು ತೀರ ಮನೆಯ ಎದುರಿನ ಚಿತ್ರ ಸಮೇತ ತೋರಿಸಿ ಭಾಷೆ, ನೇರ ಕಾಲ್‌ಗಳ ನೆರವಿಲ್ಲದೆ ಮನೆಗಳನ್ನು ತಲುಪಿದ ಮೊದಲ ಉದಾಹರಣೆ ಇವು.

ಕಾರಣ ಬೆಂಗಳೂರಿನ ಯಾವುದೇ ವಿಳಾಸ ಇದ್ದರೂ ಮತ್ತೆ ಕರೆಯ ಸಹಾಯಯವಿಲ್ಲದೆ ಅಲ್ಲಿಗೇ ಹೋಗಿ ಇಳಿದ ಅನುಭವ ನನ್ನ ಮಟ್ಟಿಗೆ ತೀರ ಕಮ್ಮಿ. ಆದರೆ ಇಲ್ಲಿ ಆಯಾ ವಿಳಾಸದ ಲಿಂಕನ್ನು ತೆಗೆದುಕೊಂಡರೆ ಕರೆಕ್ಟ್ ಆಗಿ ಸ್ಥಳದ ನೇರದರ್ಶನವನ್ನೇ ನೀಡುವಷ್ಟು ನಿಖರತೆ ಕಾರಣ ಸೆಟಲೈಟ್‌ನ ರೆಶಲೂಶನ್ ಆ ಮಟ್ಟದಲ್ಲಿದ್ದು, ನಿಜಕ್ಕೂ ಇಲ್ಲಿ ಏನೂ ಗೊತ್ತಿಲ್ಲದೆಯೂ ವಿಳಾಸ
ತಲುಪಬಹುದಾದ ನಿಖರತೆಗೆ ನಾನು ದಂಗಾಗಿದ್ದಿದೆ. ಕಾರಣ ಭಾಷೆ ಬಾರದಿದ್ದರೂ ಇದು ಇಲ್ಲಿನ ವಿಶೇಷತೆ ಮತ್ತು ತಾಂತ್ರಿಕತೆಯ ಅದ್ಭುತತೆಯೂ ಹೌದು.

ಹಾಗೆ ಕಾಟ್ಸ್‌ವರ್ಲ್ಡ್‌ಗೆ ಹೊರಡಲು ಬೆಳಗ್ಗೆ ಆಸ್ಟರ್ಲೀ ರೈಲು ನಿಲ್ದಾಣ ತಲುಪಿದರೆ ಏನೋ ವ್ಯತ್ಯಾಸವಾಗಿತ್ತು. ಸೋ ಟ್ಯಾಕ್ಸಿ ನೋಡಿದೆ ಸಿಟಿ ಮ್ಯಾಪರ್ ಎರಡು ನಿಮಿಷ ಗುರು, ಸಿಗುತ್ತೆ ಎನ್ನುತ್ತಿದ್ದಂತೆ ಸರಕ್ಕನೆ ಯೆಸ್ ಎಂದು ಒತ್ತಿ ಕನರ್ಮ ಮಾಡಿದ್ದೆ. ಹಾಗೆ ನೋಡಿದರೆ ಆಸ್ಟರ್ಲೀಯಿಂದ ಕಿಂಗ್ಸ್‌ಕಾಸ್‌ಗೆ ಹೋಗಿದ್ದು ಪೀಕಿಡ್ಲೀ ಲೈನ್ ಮೂಲಕ. ಅಲ್ಲಿಳಿದು ಗ್ರೇಟ್ ವೆಸ್ಟರ್ನ್ ರೈಲ್ವೆಯ ಆಕ್ಸ-ರ್ಡ್ ತಲುಪುವುದಕ್ಕೆ ಯೋಚಿಸುವ ಹೊತ್ತಿಗೆ ಆ ನಿಲ್ದಾಣ ಕೂಡ ಬಂದಾಗಿತ್ತು. ಅಲ್ಲಿಂದ ಸುಮ್ಮನೆ ಪ್ಲಾಟ್ ಫಾರ್ಮ್
ಬದಲಾಯಿಸಿದರೆ ಸಾಕು ಕಿಂಕ್ಸ್‌ಹ್ಯಾಮ್‌ಗೆ ರೈಲು ಹಾಜರ್.

ಅಷ್ಟು ಕರಾರುವಾಕ್ ಮತ್ತು ಒಂದರ ಹಿಂದೆ ಒಂದರಂತೆ ಐದೆಂಟು ನಿಮಿಷಕ್ಕೆ ಜಿ.ಡಬ್ಲು.ಆರ್. ರೈಲು ಸೇವೆ ಶ್ಲಾಘನೀಯ. ಅಲ್ಲಿಂದ ಹೊರ ಬಿzಗಲೇ ಕಂಡಿದ್ದು ರಭಸದಿಂದ ಹರಿವ ಚೆಂದದ ನದಿಯ ಪಕ್ಕದ ಇದ್ದ ಟ್ರಾಕ್ ಅದು. ನದಿ ಇವಾನ್ ಲೋಡ್. ಕನಿಷ್ಠ ಇಪ್ಪತ್ತು ಜನ ಮೀನು ಹಿಡಿಯಲು ನಿಲ್ಲುವ ತಿರುವುಗಳು. ಹೊರಗೆ ಬಂದರೆ ಬಸ್‌ಸ್ಟಾಪು ಅದರ ನಂಬರು ಮತ್ತು ಸಮಯ.
ಮಳೆಯ ಜಿಟಿಜಿಟಿ ಚಳಿ ಮಧ್ಯೆ ಕಾಯ್ದರೆ ಮೇಲೆ ಹೇಳಿದ ಬಸ್ಸು ಬಂದೇಬಿಟ್ಟಿದ್ದು ನಾವೇ ಮೊದಲೇ ಗಿರಾಕಿ ಆವತ್ತಿನ ಮಟ್ಟಿಗೆ ಅದಕ್ಕೆ.

ಅವನು ಅಲ್ಲಲ್ಲಿ ತಿರುಗಿಸುತ್ತ ಹೊರಟಾಗ ಎಲ್ಲಿಗೆ ಎಂದು ಕೇಳುವುದೇ ಇಲ್ಲ. ಕಾರಣ ಒಮ್ಮೆ ಅವನ ಪಕ್ಕದ ಮಶೀನ್ ನಲ್ಲಿ ಕಾರ್ಡ್ ಪಂಚ್ ಆಯಿತಾ ಆವತ್ತಿನ ಮಟ್ಟಿಗೆ ಸಂಪೂರ್ಣ ಲಂಡನ್ ಬಸ್ ಸರ್ವೀಸ್‌ನಲ್ಲಿ ಎಲ್ಲಿ ಬೇಕಿದ್ದರೂ ಓಡಾಡಿ ದರೂ ನಾಲ್ಕೂವರೆ ಪೌಂಡ್ ದಿನದ ಕೊನೆಗೆ ಕಡಿತ ಮಾಡಿ ಕೊಳ್ಳುತ್ತದೆ. ಬ್ಯಾಲೆನ್ಸ್ ಇರಬೇಕಷ್ಟೆ. ನೆನಪಿರಲಿ ಇದೆಲ್ಲ ಪದೇ ಪದೇ ಟಿಕೇಟ್ ಮತ್ತು ಚೆಕ್‌ಇನ್ ಮಾಡಬೇಕಿರುವ ಜಂಜಡ ಗಳಿಲ್ಲ. ಒಂದು ಕಾರ್ಡ್ ಬೆಳಗ್ಗೆ ತೆಗೆದುಕೊಂಡದ್ದೇ ಉzನು ಉದ್ದ ರೈಲಿನ ಎಲ್ಲ
ಕಡೆಯಲ್ಲೂ ಓಡಾಡುತ್ತಾರೆ. ಹಾಗೆಯೇ ಕಿಂಗ್ಸ್‌ಹ್ಯಾಮ್ ನಿಂದ ಬಸ್‌ನಲ್ಲಿ ಊರೂರು ದರ್ಶನ ಮಾಡುತ್ತ ಹೊರಟರೆ ಕಾಲಿಗಡರಿದ್ದು ಕಾಟ್ಸ್‌ವರ್ಡ್ನ್ ಜಗತ್ತು ಫೇಮಸ್ ಮಾಡಿದ ಇತರ ಹಳ್ಳಿಗಳಾದ -ಸ್ಕಾಟ್, ಬೌಲ್ಡ, ಇಲ್ಬುರೀ, ಅಪ್ಪರ್ ರೆಸಿಂಗ್ಟನ್, ಲಿಟ್ಟಲ್ ರೆಸಿಂಗಟನ್ (ಈ ರೆಸಿಂಗ್ ಟನ್‌ಗಳ ಕತೆ ಮುಂದೊಮ್ಮೆ ಬರೆಯುತ್ತೇನೆ. ನೆನಪಿಟ್ಟುಕೊಳ್ಳಿ.

ಕಾರಣ ತೀರ ನಾವು ನೀವೆಲ್ಲ ಕೆಲವೊಮ್ಮೆ ಸಿನೇಮಾ ಸೆಟ್ ಎನ್ನುವ ಕುದುರೆ ಸಾಕುವ ಗೋಲದ ಗ್ರೌಂಡ್‌ಗಳ ಸಮೇತ
ಚಕ್ರದ ಮನೆಗಳು ಈಗಲೂ ಇಲ್ಲಿವೆ) ಲಿಂಭ್ರಿಕ್, ಹೀಗೆ ಹಲವು ಹಳ್ಳಿಗಳ ಮೂಲಕ ಹಾಯ್ದು ಇನ್ನೇನು ಬಾರ್ಟನ್ ಆನ್‌ವಾಟರ್ ತಲುಪಬೇಕು. ಅದಕ್ಕೂ ಎರಡು ಸ್ಟಾಪು ಮೊದಲೇ ರೋಡ್ ಕ್ಲೊಸ್ ಆಗಿತ್ತು. ಬಸ್ ಮೂಲಕ ಸಂಪೂರ್ಣ ಕಾಟ್‌ಫೀಲ್ಡ್ ದರ್ಶನ ಆಗಿ ಹೋಯಿತು ಅವತ್ತು. ಕಾರಣ ಅಲ್ಲಿಂದ ತಿರುಗಿಸಿದವನೇ ಅದೇ ಡ್ರೈವರ್ ಬೇರೆ ನೆಪ ಹೇಳದೆ, ಮುಗರ್ಸ್ಬರೀ ಮತ್ತು ಸ್ಟವ್ ಆನ್ ವಲ್ಡ ಮೂಲಕ ವಾಪಸ್ಸು ಕರೆ ತಂದಿದ್ದ. ಆಗಲೇ ಗೊತ್ತಾಗಿದ್ದು ಕಾರ್ಡಿಫ್ ಹೋಗಲು ನಾನು ಹಿಂದಕ್ಕೆ ಹೋಗದೆ ಈ ಸ್ಟವ್ ಆನ್ ವಲ್ಡ ಮೂಲಕ ಮಾರ್ಟಿನ್ ಇನ್ ಮಾಶ್ ಎಂಬ ಸ್ಟೇಶನ್ ತಲುಪಬಹುದು ಅದೂ ಸೇಮ್ ಬಸ್ ಮೂಲಕ ಎಂದು.

ಮುಂದೆ ಮಾರ್ಟಿನ್ ಈ ಮಾಶ್ ಮೂಲಕ ಹಾಗೆ ಬಂದು ಡಿಡ್ಕಾಟ್ ಪಾರ್ಕ್ ಮೂಲಕ ಹಾಯ್ದು ಬಾಥ್ ಸ್ಪಾ ತಲುಪಿದೆ ನಾದರೂ ಈ ಹಳ್ಳಿಗಳ ದರ್ಶನ ಮತ್ತು ಅದರ ಮೂಲ ಸೌಂದರ್ಯವನ್ನು ನಮ್ಮ ಚಲನಚಿತ್ರಗಳಲ್ಲಿ ಹೈಪ್ ಮಾಡಿ ತೋರಿಸುತಾರೆ ನ್ನುವದಕ್ಕಿಂತ ಚೆಂದ ಸಾಕಿzರಲ್ಲ ಅದಕ್ಕೆ ಕೊಡಬೇಕು ಮಾರ್ಕು. ಮೇಲೆ ಹೇಳಿದ ಎಲ್ಲ ಹಳ್ಳಿಗಳ ಮನೆಗಳೂ ಒಂದೊಂದು ಸ್ಯಾಂಪಲ. ಈ ದಾರಿಯ ಮೇಲೆ ಆಫ್ ಬೀಟ್ ಪ್ರವಾಸ ಮಾಡಲೇ ಬೇಕೆನ್ನುವುದು ಅದಕ್ಕೆ. ಪ್ರತಿ ಮನೆಗೂ ಕುದುರೆಗಳು ಸುತ್ತಲು, ಕುರಿಗಳು ಮೇಯಲು, ಗಾಳಿಯಂತ್ರ, ಹೊಲ ಉಳುಮೆ ಚೆಂದ ಟಿಲ್ಲರ್ ತರಹದ ಟ್ರಾಕ್ಟರ್ ಸಮೇತ ಅದನ್ನು ಇರಿಸಲು ಸೂಕ್ತ ಹೊರಮನೆ, ಕಾರು ನಿಲ್ಲಿಸಲು ಒಂದೆರಡಲ್ಲ ಕನಿಷ್ಠ ಮೂರು ಮೂರು ಅದರಲ್ಲಿ ಖಾಸಗಿ ಓಡಾಟಕ್ಕೆ ಬೇರೆ, ಸಾಮಾನು ಸರಂಜಾಮು ಸಾಗಿಸಲು ಬೇರೆ, ಹೊಲದ ಕೆಲಸಕ್ಕೇನೆ ಬೇರೆ.

ಇದೆಲ್ಲ ಇದ್ದರೂ ಯಾವ ಮನೆಯ ಎದುರೂ ಒಂದೇ ಒಂದು ಬೈಕುಗಳು ಇಲ್ಲಿರಲ್ಲ. ಯಾಕೆ.. ಅದಿನ್ನೊಂದು ಇಂಟರೆಸ್ಟಿಂಗ್ ಕತೆ.. ಅದನ್ನೆಲ್ಲ ಮತ್ತೆ ಹೇಳುತ್ತೇನೆ. ಬರೀ ಲಂಡನ್ ಮಾತ್ರವಲ್ಲ ಟ್ರರ್ಕಿ ಪೂರ್ತಿ ತಿರುಗಿ ಬಂದೆನಲ್ಲ, ಕೇವಲ ಆಹಾರ ಡೆಲೆವರಿಗೆ
ಅಂದು ಇಂದು ಎಲೆಕ್ಟ್ರಿಕ್ ದ್ವಿಚಕ್ರವಾಹನ ಬಂದಿವೆ ಹೊರತು ಪಡಿಸಿದರೆ ಒಂದೇ ಒಂದು ಬುಲೆಟ್ ಸಾಯಲಿ ನಮ್ಮ ಹಿರೋ ಹೊಂಡಾ ಸಹಿತ ಕಾಣಲಿಲ್ಲ. ಅದೆಲ್ಲ ಮುಂದಿನ ವಾರಕ್ಕಿರಲಿ.

Read E-Paper click here