Monday, 25th November 2024

Weekend with Mohan Column: ಇವರೇ ಗಾಂಧಿತತ್ವವನ್ನು ಮರೆತರೆ ಹೇಗೆ ?

ವೀಕೆಂಡ್‌ ವಿತ್‌ ಮೋಹನ್‌

ಮೋಹನ್‌ ವಿಶ್ವ

ಭಾರತ ಸ್ವಾತಂತ್ರ್ಯ ಸಂಗ್ರಾಮದ ನೈಜ ಇತಿಹಾಸವನ್ನು ಮುಚ್ಚಿ ಹಾಕುವ ನಿಟ್ಟಿನಲ್ಲಿ ಎಡಚರರು ನಡೆಸಿದ ಕಾರ್ಯಾಚರಣೆ ಯಲ್ಲಿ ಪದೇ ಪದೇ ಕೇಳಿಬರುವ ಹೆಸರು ವೀರ ಸಾವರ್ಕರ್. ನೆಹರು ಪ್ರಧಾನಿಯಾದ ಬಳಿಕ ಶಾಲಾ ಪಠ್ಯಕ್ರಮಗಳನ್ನು ಸಂಪೂರ್ಣವಾಗಿ ಆವರಿಸಿಕೊಂಡ ಎಡಚರರು ಕಾಂಗ್ರೆಸ್ಸಿಗರಿಗೆ ಅನುಕೂಲವಾಗುವ ಇತಿಹಾಸವನ್ನು ಬರೆದು, ನೈಜ ಇತಿಹಾಸವನ್ನು ತಿರುಚಿದರು. ಎಡಚರರ ಪಠ್ಯಗಳನ್ನೇ ವೇದವಾಕ್ಯ ಎಂಬಂತೆ ಶಾಲೆಗಳಲ್ಲಿ ಮಕ್ಕಳ ತಲೆಗೆ ಇಳಿ ವಯಸ್ಸಿನಲ್ಲಿ ತುಂಬಲಾಯಿತು, ಸುಮಾರು ಮೂರರಿಂದ ನಾಲ್ಕು ತಲೆಮಾರಿ ನವರು ಎಡಚರರ ತಿರುಚಿದ ಇತಿಹಾಸವನ್ನು ಪ್ರಶ್ನಿಸುವ ಕೆಲಸ ಮಾಡಲಿಲ್ಲ.

ಬ್ರಿಟಿಷರ ಮೆಕಾಲೆ ಶಿಕ್ಷಣ ಪದ್ಧತಿಯನ್ನು ಬೆಂಬಲಿಸಿಕೊಂಡು ಬಂದ ಕಾಂಗ್ರೆಸ್ಸಿಗೆ ಅನುಕೂಲವಾಗುವಂತೆ ಭಾರತದ ಹಲವು ಸ್ವತಂತ್ರ ಹೋರಾಟಗಾರರ ಇತಿಹಾಸವನ್ನು ತಿರುಚಲಾಯಿತು. ಕಾಂಗ್ರೆಸ್ಸಿನ ಮಂತ್ರಿ ದಿನೇಶ್ ಗುಂಡೂ ರಾವ್, ವೀರ ಸಾವರ್ಕರ್ ಕುರಿತು, ‘ಅವರು ಬ್ರಾಹ್ಮಣರಾಗಿ ಮಾಂಸ ತಿನ್ನುತ್ತಿದ್ದರು ಮತ್ತು ಗೋಹತ್ಯೆಯನ್ನು ಅವರು ವಿರೋಧಿಸಲಿಲ್ಲವೆಂದು’ ಸುಳ್ಳು ಹೇಳುವ ಮೂಲಕ, ಸ್ವಾತಂತ್ರ್ಯ ಹೋರಾಟಗಾರನಿಗೆ ಅವಮಾನ ಮಾಡುವ ಕಾಂಗ್ರೆಸ್ಸಿನ ಚಾಳಿಯನ್ನು ಮುಂದುವರೆಸಿದರು. ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಅಖಂಡ ಭಾರತ ವಿಭಜನೆಯ ರೂವಾರಿ ಮೊಹಮ್ಮದ್ ಅಲಿ ಜಿನ್ನಾನನ್ನು ಹೊಗಳಿ, ‘ಅವರೊಬ್ಬ ಮೂಲಭೂತ ವಾದಿಯಲ್ಲವೆಂದು’ ಹೇಳಿದರು. ಮೂಲಭೂತವಾದ ಮತ್ತು ರಾಷ್ಟ್ರೀಯವಾದಕ್ಕೆ ವ್ಯತ್ಯಾಸ ತಿಳಿಯದ ದಿನೇಶ್ ಗುಂಡೂರಾವ್, ರಾಷ್ಟ್ರೀಯವಾದಿಯಾದ ವೀರ ಸಾವರ್ಕರ್ ಅವರನ್ನು ಮೂಲಭೂತ ವಾದಿ ಎಂದು ಹೇಳಿದ್ದಾರೆ.

ಸ್ವತಂತ್ರ ಭಾರತಕ್ಕಾಗಿ ಹೋರಾಡಿ, ಅಂಡಮಾನಿನ ಜೈಲಿನಲ್ಲಿ ಕರಿನೀರಿನ ಶಿಕ್ಷೆ ಅನುಭವಿಸಿದ ಸಾವರ್ಕರರನ್ನು ಮೂಲಭೂತವಾಧಿ ಎನ್ನುವ ಗುಂಡೂರಾವ್, ಹುಟ್ಟಿನಿಂದಲೇ ಐಷಾರಾಮಿ ಜೀವನ ನಡೆಸುತ್ತಾ, ಅಖಂಡ ಭಾರತವನ್ನು ತುಂಡು ಮಾಡಿ, ಲಕ್ಷಾಂತರ ಹಿಂದೂಗಳ ಸಾವಿಗೆ ಕಾರಣನಾದ ಮೊಹಮ್ಮದ್ ಅಲಿ ಜಿನ್ನಾನನ್ನು
ಆಧುನಿಕ ಮುಸಲ್ಮಾನನೆಂದು ಹೊಗಳಿzರೆ. ಜಿನ್ನಾ ಹುಟ್ಟುಹಾಕಿದ ದೇಶ ಪಾಕಿಸ್ತಾನದಲ್ಲಿ ಇಂದಿಗೂ ಮೂಲ ಭೂತವಾದಿಗಳು ಆಡಳಿತ ನಡೆಸುತ್ತಿzರೆ, ಪಾಕಿಸ್ತಾನ ತನ್ನನ್ನು ‘ಇಸ್ಲಾಮಿಕ್ ರಿಪಬ್ಲಿಕ್ ಆಫ್‌ ಪಾಕಿಸ್ತಾನ್’ಎಂದು ಕರೆದು ಕೊಳ್ಳುತ್ತದೆ.

ಕಾಶ್ಮೀರ ಪ್ರತ್ಯೇಕತಾವಾದಿಗಳನ್ನು ಸ್ವತಂತ್ರ ಹೋರಾಟಗಾರರೆಂದು ಎಡಚರರು ಅನೇಕ ಬಾರಿ ಕರೆದಿದ್ದಾರೆ, ಅವರನ್ನೇ ಅನುಸರಿಸುವ ಕಾಂಗ್ರೆಸ್ ಪಕ್ಷದ ನಾಯಕರು, ಪ್ರತ್ಯೇಕತಾವಾದಿಗಳ ಪರವಾಗಿ ಮಾತನಾಡುವಾಗ, ದಿನೇಶ್ ಗುಂಡುರಾವ್ ಅವರಿಗೆ ಮೂಲಭೂತವಾದ ನೆನಪಾಗುವುದಿಲ್ಲ. ಭಾರತದ ಸ್ವತಂತ್ರ ಹೋರಾಟದಲ್ಲಿ ಮಹಾತ್ಮಾ ಗಾಂಧಿಯವರ ಅಹಿಂಸೆಯ ಹೋರಾಟದ ಜೊತೆಗೆ, ಸಾವರ್ಕರ್‌ರ ಕ್ರಾಂತಿಕಾರಿ ಹೋರಾಟದ ಪಾಲೂ ಬಹಳಷ್ಟಿದೆ. ಸುಭಾಷ್ ಚಂದ್ರ ಬೋಸರು ಅಂದು ‘ಇಂಡಿಯನ್ ನ್ಯಾಷನಲ್ ಆರ್ಮಿ’ ಕಟ್ಟದಿದ್ದರೆ, ಬ್ರಿಟಿಷರು ಹೆದರಿ ಭಾರತ ಬಿಟ್ಟು ಓಡುತ್ತಿರಲಿಲ್ಲ ಮತ್ತು ಇಂದು ಭಾರತವನ್ನು ಅಷ್ಟ ದಿಕ್ಕುಗಳಿಂದ ಕಾಯುತ್ತಿರುವುದು ಸುಭಾಷರು ಕಟ್ಟಿದ ಭಾರತೀಯ ಸೈನ್ಯ. ಮಹಾತ್ಮಾ ಗಾಂಧಿಯವರ ಹೆಸರನ್ನು ಕೇವಲ ರಾಜಕೀಯಕ್ಕೆ ಬಳಸಿಕೊಳ್ಳುವ ಕಾಂಗ್ರೆಸ್ಸಿಗರು, ಅವರ ಹಲವು ತತ್ವಗಳನ್ನು ವಿರೋಧಿಸುತ್ತಾ ಬಂದಿದ್ದಾರೆ.

ಸ್ವಾತಂತ್ರ್ಯ ಪೂರ್ವದಲ್ಲಿ ರಾಜಕೀಯ ಪಕ್ಷವೆಂಬ ಕಲ್ಪನೆಯೇ ಇರಲಿಲ್ಲ, ಸ್ವತಂತ್ರ ಬಂದ ನಂತರ ಮಹಾತ್ಮಾ ಗಾಂಧಿಯವರು ಕಾಂಗ್ರೆಸ್ ಸಂಘಟನೆಯನ್ನು ವಿಸರ್ಜಿಸಿಯೆಂದು ‘ನೆಹರು’ ವಿಗೆ ಹೇಳಿದಾಗ ಅವರ ಮಾತನ್ನು ನೆಹರು ಕೇಳಲಿಲ್ಲ. ತಮ್ಮ ಸ್ವಾರ್ಥಕ್ಕಾಗಿ ಈ ಸಂಘಟನೆಯನ್ನೇ ರಾಜಕೀಯ ಪಕ್ಷವನ್ನಾಗಿಸಿ, ಸಂಘಟನೆ ಯಲ್ಲಿದ್ದಂತಹ ಉಳಿದ ಸ್ವಾತಂತ್ರ್ಯ ಹೋರಾಟಗಾರರಿಗೆ ಮೋಸ ಮಾಡಿ ಮಹಾತ್ಮಾ ಗಾಂಧಿಯವರ ಮಾತಿನ ವಿರುದ್ಧ ನೆಹರು ನಡೆದುಕೊಂಡರು.

ಮಹಾತ್ಮಾ ಗಾಂಧಿಯವರಿಗೆ ಭಗವದ್ಗೀತೆಯ ಬಗ್ಗೆ ಅಪಾರ ಗೌರವವಿತ್ತು, ಹಲವರಿಗೆ ಭಗವದ್ಗೀತೆಯಲ್ಲಿರುವ ಜೀವನ ಸಂದೇಶಗಳ ಬಗ್ಗೆ ಹೇಳುತ್ತಿದ್ದರು. ಹಲವು ಸಮಾರಂಭಗಳಲ್ಲಿ ಭಗವದ್ಗೀತೆಯನ್ನು ಉಡುಗೊರೆಯಾಗಿ ನೀಡುತ್ತಿದ್ದರು. ಸ್ವಾತಂತ್ರ್ಯಾ ನಂತರ ಮಹಾತ್ಮಾ ಗಾಂಧಿಯವರ ಹೆಸರನ್ನು ಹೈಜಾಕ್ ಮಾಡಿದ ಕಾಂಗ್ರೆಸ್ ಪಕ್ಷದ ನಾಯಕರು ಭಗವದ್ಗೀತೆಯ ಸಾರವನ್ನು ತಾವುಗಳೇ ಅಳವಡಿಸಿಕೊಳ್ಳಲಿಲ್ಲ. ಶಾಲೆಗಳಲ್ಲಿ ಭಗವದ್ಗೀತೆಯನ್ನು ಮಕ್ಕಳಿಗೆ ‘ನೈತಿಕ ವಿಜ್ಞಾನ’ದ ಪಾಠವನ್ನಾಗಿಸಲು ಮುಂದಾದರೆ ‘ಜಾತ್ಯತೀತತೆ’ಯ ಹೆಸರಿನಲ್ಲಿ ಮೊದಲು ವಿರೋಧಿಸಿದ್ದು ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಪಕ್ಷ ಎಡಚರರಿಗೆ ಶಾಲಾ ಪಠ್ಯಪುಸ್ತಕ ರಚನೆಯ ಜವಾಬ್ದಾರಿಯನ್ನು ನೀಡಿ ವಿದೇಶಿ ನೀತಿಗಳನ್ನು ಜಾರಿಗೆ ತಂದು ಮಹಾತ್ಮಾ ಗಾಂಧಿಯವರು ಭಗವದ್ಗೀತೆಗೆ ನೀಡಿದ್ದ ಪ್ರಾಮುಖ್ಯತೆ ಯನ್ನು ಹೊಸೆದು ಹಾಕಿದರು.

ಮುಸಲ್ಮಾನರ ಓಲೈಕೆಯ ಪರಮಾವಧಿಯಂತೆ ಇಂದಿಗೂ ಕಾಂಗ್ರೆಸ್ ಪಕ್ಷ ಶಾಲಾ ಮಕ್ಕಳಿಗೆ ಭಗವದ್ಗೀತೆ ಭೋಧಿ ಸುವುದನ್ನು ವಿರೋಧಿಸುತ್ತದೆ. ಜಾತ್ಯತೀತತೆಯ ವ್ಯಾಖ್ಯಾನವನ್ನು ಕೇವಲ ಮುಸಲ್ಮಾನರಿಗೆ ಸೀಮಿತಗೊ ಳಿಸಿರುವ ಕಾಂಗ್ರೆಸ್ ಪಕ್ಷ ಅವರ ಓಲೈಕೆಯಲ್ಲಿ ಮಹಾತ್ಮಾ ಗಾಂಧಿಯವರ ತತ್ವಗಳನ್ನು ಗಾಳಿಗೆ ತೂರುತ್ತಿದೆ.

ಗಾಂಧಿಯವರ ತತ್ವದ ಬಗ್ಗೆ ಮಾತನಾಡುವ ದಿನೇಶ್ ಗುಂಡೂರಾವ್ ಭಗವದ್ಗೀತೆಯ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ
ನಡೆದು ಕೊಳ್ಳುವುದರ ಬೆಗ್ಗೆ ಏನು ಹೇಳುತ್ತಾರೆ ? ‘ರಘುಪತಿ ರಾಘವ ರಾಜ ರಾಮ್, ಪತಿತ ಪಾವನ ಸೀತಾರಾಮ್, ಈಶ್ವರ ಅಲ್ಲ ತೇರೆ ನಾಮ’ಎಂಬ ಮಾತನ್ನು ಮಹಾತ್ಮಾ ಗಾಂಽಯವರು ಸದಾ ಹೇಳುತ್ತಿದ್ದರು. ಓಲೈಕೆ ರಾಜಕಾರಣದ ಹಿಂದೆ ಬಿದ್ದಿರುವ ಕಾಂಗ್ರೆಸ್, ರಾಮ ಹಾಗೂ ಈಶ್ವರನ ಹೆಸರನ್ನು ಗಾಂಧಿಯವರ ವಾಕ್ಯದಿಂದ ಬಿಟ್ಟುಬಿಟ್ಟಿದೆ.

ಸ್ವಾತಂತ್ರ್ಯ ನಂತರ ಮಸೀದಿಗಳಿಗೆ ನೀಡಿದ ಮಹತ್ವವನ್ನು ಕಾಂಗ್ರೆಸ್ಸಿಗರು ದೇವಸ್ಥಾನಗಳಿಗೆ ನೀಡಲಿಲ್ಲ, ಮಸೀದಿ ಗಳನ್ನು ಸರಕಾರದ ಅಧೀನದಿಂದ ದೂರವಿಟ್ಟು ದೇವಸ್ಥಾನಗಳನ್ನು ಮಾತ್ರ ಸರಕಾರದ ಅಧೀನದಲ್ಲಿರುವಂತೆ ಮಾಡಿದರು. ‘ವಕ್ಫ್’ ಕಾಯ್ದೆಯನ್ನು ಜಾರಿಗೆ ತರುವ ಮೂಲಕ, ಸುಮಾರು‌ ಮೂರು ಲಕ್ಷ ಕೋಟಿ ರುಪಾಯಿ ಮೌಲ್ಯದ ಆಸ್ತಿಯನ್ನು ಒಂದು ಧರ್ಮಕ್ಕೆ ಸೀಮಿತವಾಗುವಂತೆ ಮಾಡಿದರು.

ಮಹಾತ್ಮಾ ಗಾಂಧಿಯವರಿಗೆ ಶ್ರೀರಾಮಚಂದ್ರ ಹಾಗೂ ಶ್ರೀ ಕೃಷ್ಣನ ಮೇಲೆ ಅಪಾರ ಭಕ್ತಿಯಿತ್ತು, ಅವರ ಹೆಸರನ್ನು
ಬಳಸಿಕೊಂಡ ನೆಹರು ಕುಟುಂಬದ ಕುಡಿಗಳು ರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದ್ದರು. ರಾಮಸೇತುವಿನ ವಿಷಯದಲ್ಲಿ
೨೦೦೭ ರಲ್ಲಿ ಸರ್ವೋಚ್ಛ ನ್ಯಾಯಾಲಯದಲ್ಲಿ ರಾಮನನ್ನು ಕೇವಲ ಗ್ರಂಥಕ್ಕೆ ಸೀಮಿತಗೊಳಿಸಿದರು. ಶ್ರೀರಾ ಮನು ಕೇವಲ ರಾಮಾಯಣ ಗ್ರಂಥದಲ್ಲಿರುವ ಕಾಲ್ಪನಿಕ ಪಾತ್ರದಾರಿಯಾಗಿದ್ದು ಆತನ ಇರುವಿಕೆಗೆ ಯಾವುದೇ ಸಾಕ್ಷಿ ಸಿಕ್ಕಿಲ್ಲವೆಂದು ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿದರು.

ಶ್ರೀರಾಮನು ಹೆಂಡ ಕುಡಿಯುತ್ತಿದ್ದನೆಂದು ಹೇಳಿದ ಎಡಚರ ಭಗವಾನನ ಪರವಾಗಿ ನಿಲ್ಲುವುದು ಕಾಂಗ್ರೆಸ್ ಪಕ್ಷ. ರಾಮಮಂದಿರದ ಪರವಾಗಿ ಸರ್ವೋಚ್ಛ ನ್ಯಾಯಾಲಯ ತೀರ್ಪನ್ನು ನೀಡಿದಾಗ ಕಾಂಗ್ರೆಸ್ಸಿನವರ ಮುಖ ಇಂಗು ತಿಂದ ಮಂಗನಂತಾಗಿತ್ತು. ರಾಮಮಂದಿರದ ಜಾಗದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಬೇಕೆಂದು ಹೇಳಿದ್ದು ಕಾಂಗ್ರೆಸ್. ನ್ಯಾಯಾಲಯದ ತೀರ್ಪಿನ ಪರವಾಗಿ ಇಂದಿಗೂ ಕಾಂಗ್ರೆಸ್ ಪಕ್ಷ ಗಟ್ಟಿಯಾಗಿ ನಿಂತಿಲ್ಲ. ರಾಮನ ಭಂಟ ಹನುಮನ ಜಯಂತಿಗೆ ಅನುಮತಿ ನೀಡಲು ನಿರಾಕರಿಸುವ ಕಾಂಗ್ರೆಸ್, ಟಿಪ್ಪು ಸುಲ್ತಾನನ ಜಯಂತಿಗೆ ನಿರಾಯಾಸವಾಗಿ ಅವಕಾಶ ನೀಡುತ್ತದೆ. ಮಹಾತ್ಮಾ ಗಾಂಽಯವರಿಗೆ ಶ್ರೀರಾಮ ಹಾಗೂ ಕೃಷ್ಣನ ಮೇಲಿದ್ದಂತಹ ಭಕ್ತಿಯಲ್ಲಿ ಕಾಂಗ್ರೆಸ್ಸಿಗಿಲ್ಲ.

ರಾಮನಾಮವನ್ನು ಕೇವಲ ಹಿಂದೂಗಳು ಮಾತ್ರವಲ್ಲ ಇತರೆ ಧರ್ಮದವರೂ ಜಪಿಸಿದರೆ ತಪ್ಪಿಲ್ಲವೆಂದು ಮಹಾತ್ಮ
ಗಾಂಽ ಹೇಳುತ್ತಾರೆ. ದೇವನೊಬ್ಬ ನಾಮ ಹಲವೆಂಬ ಸ್ಪಷ್ಟತೆ ಅವರಿಗಿತ್ತುಇತರೆ ಧರ್ಮದವರು ಬೇರೆ ಬೇರೆ ಹೆಸರುಗಳಿಂದ ದೇವರನ್ನು ಕರೆಯಬಹುದು, ಆದರೆ ಜಗತ್ತಿಗೆ ಒಬ್ಬನೇ ದೇವರೆಂದು ಹೇಳಿದ್ದರು.‘ನನಗೆ… ದಶರಥನ ಮಗ ಮತ್ತು ಸೀತಾಮಾತೆಗೆ ಭಗವಂತನಾಗಿದ್ದ ರಾಮ, ಹೃದಯದಲ್ಲಿ ಕೆತ್ತಲಾದ ಹೆಸರಾಗಿದ್ದು, ರಾಮನು ಮಾನಸಿಕ, ನೈತಿಕ ಮತ್ತು ದೈಹಿಕ ದುಃಖಗಳನ್ನು ತೆಗೆದುಹಾಕುವ ಸರ್ವಶಕ್ತ ಭಗವಂತನಾಗಿದ್ದ’ ಎಂಬುದನ್ನು ಮಹಾತ್ಮಗಾಂಽ ಹೇಳಿದ್ದರು. ಭಾರತವು ಏಳು ಲಕ್ಷ ಹಳ್ಳಿಗಳಲ್ಲಿ ವಾಸಿಸುತ್ತಿದೆ (ಅಂದಿನ ಕಾಲಘಟ್ಟ ದಲ್ಲಿ) ಚಿಕ್ಕ ಹಳ್ಳಿಗಳಲ್ಲಿ ಕೆಲವು ಸಂದರ್ಭಗಳಲ್ಲಿ ಜನಸಂಖ್ಯೆಯು ಕೆಲವು ನೂರುಗಳನ್ನು ಮೀರುವುದಿಲ್ಲ.

ನಾನು ಅಂತಹ ಹಳ್ಳಿಗೆ ಹೋಗಿ ನೆಲೆಸಲು ಬಯಸುತ್ತೇನೆ, ಅದು ನಿಜವಾದ ಭಾರತ. ಈ ಜನರ ಬಳಿ ನೀವು ಹೆಚ್ಚು
ವೈದ್ಯರು ಮತ್ತು ಆಸ್ಪತ್ರೆಯ ಉಪಕರಣಗಳನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಸರಳ, ನೈಸರ್ಗಿಕ ಪರಿಹಾರಗಳು ಮತ್ತು ರಾಮನಾಮ ಅವರ ಏಕೈಕ ಭರವಸೆ ಎಂಬ ಮಾತುಗಳನ್ನು ಮಹಾತ್ಮಗಾಂಽ ಹೇಳಿದ್ದರು. ಕರೋನ ಸಂದರ್ಭದಲ್ಲಿ ದೇಶದ ಮೂಲೆಮೂಲೆಗಳ ಜನರ ಮನಸ್ಸಿನಲ್ಲಿ ಆತ್ಮವಿಶ್ವಾಸ ತುಂಬಲು ನರೇಂದ್ರ ಮೋದಿಯವರು ತಟ್ಟೆ ಬಾರಿಸಲು ಹೇಳಿದ್ದನ್ನು ಅಣಕಿಸಿದ ಕಾಂಗ್ರೆಸ್, ಆರೋಗ್ಯ ಸಮಸ್ಯೆಗಳು ಬಂದಾಗ ಮಹಾತ್ಮಗಾಂಽಯವರು ರಾಮ ನಾಮ ಜಪದ ಮಹತ್ವವನ್ನು ಹೇಳಿದ್ದನ್ನು ಮರೆಯಬಾರದು.

ಕರೋನ ಎರಡನೇ ಅಲೆಯ ಸಂದರ್ಭದಲ್ಲಿ ಸಂಜೆಯ ವೇಳೆ ದೀಪ ಹಚ್ಚಲು ಪ್ರಧಾನಮಂತ್ರಿಗಳು ಕರೆ ಕೊಟ್ಟಾ ಗಲೂ ಕಾಂಗ್ರೆಸ್ ಟೀಕಿಸಿತ್ತು, ಆದರೆ ಮಹಾತ್ಮಗಾಂದಿಯವರು ರಾಮನಾಮ ಜಪದಿಂದ ಮನಸ್ಸಿನ ಮೇಲಾಗುವ ಧನಾತ್ಮಕ ಪರಿಣಾಮಗಳಿಂದ ರೋಗಗಳೇ ವಾಸಿಯಾಗುತ್ತದೆಯೆಂಬು ದನ್ನು ನಂಬಿದ್ದರು. ಅರೋಗ್ಯ ಸಚಿವ ರಾಗಿರುವ ದಿನೇಶ್ ಗುಂಡೂರಾವ್ ನಿಜವಾದ ಗಾಂಧಿ ಅನುಯಾಯಿಯಾಗಿದ್ದರೆ, ರಾಮನ ವಿಷಯದಲ್ಲಿ ಕಾಂಗ್ರೆಸ್ಸಿನ ನಿಲುವನ್ನು ಯಾಕೆ ವಿರೋಧಿಸುವುದಿಲ್ಲ?

ಮಹಾತ್ಮಾಗಾಂಧಿ ಧೂಮಪಾನ ಹಾಗೂ ಮಧ್ಯಪಾನವನ್ನು ವಿರೋಧಿಸುತ್ತಿದ್ದರು, ಸ್ವದೇಶಿ ಚಳುವಳಿಗೆ ಮಹತ್ವ ನೀಡಿದ್ದರು. ಆದರೆ ಗಾಂಧಿ ತತ್ವವನ್ನು ಪಾಲಿಸದ ಕಾಂಗ್ರೆಸ್, ಬ್ರಿಟಿಷರು ಭಾರತ ಬಿಟ್ಟು ತೊಲಗಿದ ನಂತರವೂ ವಿದೇಶಿ ವಸ್ತುಗಳ ಮೇಲಿನ ವ್ಯಾಮೋಹವನ್ನು ಬಿಟ್ಟಿಲ್ಲ. ಮಹಾತ್ಮಾ ಗಾಂಧಿಯವರು ಗೋವುಗಳಿಗೆ ನೀಡುತ್ತಿದ್ದಂ ತಹ ಮಹತ್ವ ಮತ್ಯಾರು ನೀಡುತ್ತಿರಲಿಲ್ಲ, ಗೋವುಗಳನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ ಯೆಂದು ಹೇಳಿದ್ದರು. ಆದರೆ ಗೋವುಗಳನ್ನು ರಕ್ಷಿಸಲು ದೇಶದಲ್ಲಿ ಕಾನೂನನ್ನು ಜಾರಿಗೆ ತಂದರೆ ಜಾತ್ಯಾತೀತತೆ
ಯ ಹೆಸರಿನಲ್ಲಿ ಮುಸಲ್ಮಾನರನ್ನು ಓಲೈಸಲು ಕಾಂಗ್ರೆಸ್ ಕಾನೂನನ್ನು ವಿರೋಧಿಸುತ್ತದೆ.

ಗೋಹತ್ಯೆ ನಿಷೇಧದ ವಿಷಯದಲ್ಲಿ, ವೀರ ಸಾವರ್ಕರ್ ಅವರ ನಿಲುವಿನ ಕುರಿತು ಸುಳ್ಳು ಹೇಳುವ ದಿನೇಶ್ ಗುಂಡೂರಾವ್, ಮಹಾತ್ಮಗಾಂಧಿಯವರ ಆಶಯದಂತೆ ಗೋವುಗಳನ್ನು ರಕ್ಷಿಸಲು ಗೋಹತ್ಯಾ ನಿಷೇಧ
ಕಾನೂನನ್ನು ಜಾರಿಗೆ ತಂದರೆ ಯಾಕೆ ವಿರೋಧಿಸುತ್ತಾರೆ? ತಮ್ಮ ಹೆಸರಿನಲ್ಲಿ ಗಾಂಧಿಯನ್ನು ಸೇರಿಸಿಕೊಂಡು ಅವರ ತತ್ವ ಮತ್ತು ಚಿಂತನೆಗಳಿಗೆ ಸದಾ ಅವಮಾನ ಮಾಡಿಕೊಂಡು ಬರುತ್ತಿರುವ ದಿನೇಶ್ ಗುಂಡೂರಾವ್ ತರಹದ ಕಾಂಗ್ರೆಸ್ಸಿಗರಿಗೆ ಗಾಂಧಿಯೆಂಬ ಪದ ಕೇವಲ ಮತಬ್ಯಾಂಕ್ ಮಾತ್ರ. ತಮ್ಮ ಆಡಳಿತದಲ್ಲಿ ಪ್ರತಿಯೊಂದು ವಿಷ ಯದಲ್ಲಿಯೂ ಸುಳ್ಳುಗಳ ಸರಮಾಲೆಯನ್ನೇ ಹೇಳಿಕೊಂಡು ಬಂದಿರುವ ಕಾಂಗ್ರೆಸ್ ಮಹಾತ್ಮಾ ಗಾಂಧಿಯವರ ತತ್ವಗಳ ವಿರುದ್ಧವೇ ನಡೆದುಬಂದಿದೆ.

ಜಾತ್ಯತೀತತೆಯ ವ್ಯಾಖ್ಯಾನ ವನ್ನು ತಮಗಿಷ್ಟ ಬಂದಂತೆ ಬಳಸಿಕೊಳ್ಳುವ ಕಾಂಗ್ರೆಸ್, ಸದಾ ಮುಸಲ್ಮಾನರ ಓಲೈಕೆಯಲ್ಲಿ ತೊಡಗಿರುತ್ತದೆ. ಭಾರತ ವಿಭಜನೆಯ ಸಂದರ್ಭದಲ್ಲಿ, ನೆಹರು ಜಿನ್ನಾನ ಪರವಾಗಿ ನಿಂತು, ಆತನಿಗೆ ಬೇಕಿರುವ ಸರ್ವ ಸಹಾಯವನ್ನೂ ಮಾಡುವ ಮೂಲಕ ಮಗ್ಗುಲಮುಳ್ಳು ಪಾಕಿಸ್ತಾನವನ್ನು ಹುಟ್ಟುಹಾಕುವಲ್ಲಿ ಮುಖ್ಯಪಾತ್ರ ವಹಿಸಿದ್ದರು. ಪಶ್ಚಿಮದ ಗುಜರಾತಿನಿಂದ ತಮ್ಮ ಹೋರಾಟದ ಪಯಣವನ್ನು ಶುರುಮಾಡಿದ ಗಾಂಧಿ ದೇಶದಾದ್ಯಂತ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಮನೆ ಮನೆಯನ್ನು ತಲುಪಿದ್ದರು.

ಆದರೆ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ಸಿನ ಕೆಲ ಮುಖಂಡರು ಗುಜರಾತಿಗಳನ್ನೇ ಟೀಕಿಸುವ ಮೂಲಕ ಮಹಾತ್ಮಾಗಾಂಧಿಯವರಿಗೆ ಅವಮಾನ ಮಾಡುತ್ತಾರೆ. ದಿನೇಶ್ ಗುಂಡೂರಾವ್ ವೀರ ಸಾವರ್ಕರ್, ಮೊಹಮ್ಮದ್ ಅಲಿ ಜಿನ್ನಾ ಮತ್ತು ಗಾಂಧಿಯವರ ಕುರಿತು ಮಾತನಾಡುವಾಗ ಮೂಲಭೂತವಾದಕ್ಕೆ ಕಾಂಗ್ರೆಸ್ಸಿನ ಕೊಡುಗೆ, ಪಾಕಿಸ್ತಾನದ ಹುಟ್ಟಿಗೆ ಕಾಂಗ್ರೆಸ್ಸಿನ ಕೊಡುಗೆ ಮತ್ತು ಮಹಾತ್ಮಗಾಂಧಿಯವರ ತತ್ವಗಳ ವಿರುದ್ದ ಕಾಂಗ್ರೆಸ್ಸಿನ ಇಬ್ಬಗೆಯ ನೀತಿಯನ್ನು ಮಾತನಾಡಬೇಕು.