ಪರಿಶ್ರಮ
ಪ್ರದೀಪ್ ಈಶ್ವರ್
parishramamd@gmail.com
ಸಂತೋಷಕ್ಕೆ ಕಾರಣವಾದವನು, ಒಂಟಿತನಕ್ಕೆ ಉತ್ತರವಾದವನು, ನಿಯಂತ್ರಿಸಲಾಗದ ಅಹಂಗೆ ಆಸರೆಯಾದವನು, ಪ್ರತಿದಿನ ಕಳಿಸಿದ ವಾಟ್ಸ್ ಆಪ್ ಮೆಸೇಜಿನಿಂದಲೇ ವಾಟ್ ನೆಕ್ಸ್ಟ್ ಎಂಬ ಪ್ರಶ್ನೆಗೆ ಉತ್ತರಿಸಿದವನು ದೂರವಾದರೆ ಏನ್ ಮಾಡೋದು ಎಂಬ ಪ್ರಶ್ನೆ ಪ್ರೀತಿಯಲ್ಲಿ ವೈಫಲ್ಯವಾದ ಹುಡುಗಿ ಯನ್ನು ಕಾಡುತ್ತಿರುತ್ತೆ.
ಎಷ್ಟೇ ಕಷ್ಟವಾದರು ಅಪ್ಪ-ಅಮ್ಮನನ್ನ ಒಪ್ಪಿಸ್ತಿನಿ, ಅವನು ಸಿಕ್ಕರೆ ಸಾಕು, ನನಗೆ ಆಸ್ತಿ, ಅಂತಸ್ತು ಏನು ಬೇಡ ಅವನಿದ್ದರೆ ಸಾಕು, ಅವನೊಬ್ಬ ನನಗೆ ಸಿಕ್ಕರೆ ಸಾಕು ನೆಮ್ಮದಿಯಾಗಿ ಬದುಕ್ತಿನಿ ಎಂದು ಬಯಸುವ ಹುಡುಗಿಯರಿಗೆ ಇಷ್ಟಪಟ್ಟವನು ಕೈ ಕೊಟ್ಟರೆ ಆಗುವ ನೋವು, ಯಾತನೆ, ವೇದನೆ ಕೇವಲ ಅವರಿಗೆ ಮಾತ್ರ ಗೊತ್ತಾಗೋದು. ಎಷ್ಟೋ ಆಸೆ, ಆಕಾಂಕ್ಷೆ, ಭರವಸೆಗಳೊಂದಿಗೆ ಹುಡುಗಿ ಹುಡುಗನನ್ನು ಇಷ್ಟ ಪಡ್ತಾಳೆ, ಕಲ್ಪನೆಗಳ ಅರಮನೆಯನ್ನ ಕನಸುಗಳ ಸಾಮ್ರಾಜ್ಯವನ್ನ ಕಟ್ಟಿದ ಹುಡುಗಿಗೆ ಲವ್ ಫೇಲ್ಯೂರ್ ಒಂಥರಾ ಲೈಫ್ ಟೈಮ್ ಜ್ಞಾಪಕ. ಪ್ರೀತಿಯಲ್ಲಿ ಸೋತ ತಕ್ಷಣ ಡಿಪ್ರೆಸ್ಸ್ ಆಗಿಬಿಡ್ತಾರೆ, ಸತ್ತೇ ಹೋಗ್ತೀನಿ ಎಂಬ ತೀರ್ಮಾನಕ್ಕೆ ಬಂದುಬಿಡ್ತಾರೆ. ಕೆಲವರು ಪ್ರಪಂಚವನ್ನ ಬಿಟ್ಟುಹೋಗಿ ಬಿಡ್ತಾರೆ. ಆತ್ಮಹತ್ಯೆಗೆ ಶರಣಾಗಿ ಬಿಡ್ತಾರೆ. ತಾತ್ಕಾಲಿಕ ಸಮಸ್ಯೆಗೆ ಶಾಶ್ವತ ಪರಿಹಾರವನ್ನ ಆತ್ಮಹತ್ಯೆ ಅಂತೀವಿ.
ಗೌರವಾನ್ವಿತ ಹುಡುಗಿಯರೇ, ಇಷ್ಟಪಟ್ಟವನು ಕೈ ಕೊಟ್ಟರೆ ಬೀ ಕೂಲ. ಮನೆಯ ಮೂಲೆಯಲ್ಲಿ ಕೂತು ಅಳುವುದನ್ನ ನಿಲ್ಲಿಸಿ. ಸಾಯ್ತಿನಿ ಎಂಬ ನಿರ್ಧಾರವನ್ನ ನಿಮ್ಮ ಮನಸ್ಸಿನಿಂದ ತೆಗೆದುಹಾಕಿ. ನನಗ್ಯಾರು ಇಲ್ಲ ಎಂಬ ಸಂಧಿಗ್ದತೆಯಿಂದ ಹೊರ ಬನ್ನಿ. ಸ್ವಲ್ಪ ಧೈರ್ಯ ಬೆಳೆಸಿಕೊಳ್ಳಿ, ಕಳೆದು ಕೊಂಡಿದ್ದು ಇಷ್ಟಪಟ್ಟವನನ್ನೇ ವಿನಃ ಆತ್ಮವಿಶ್ವಾಸವನ್ನಲ್ಲ ಎಂದುಕೊಳ್ಳಿ. ಗೆಳತಿಯರೊಂದಿಗೆ ಹೆಚ್ಚು ಹೆಚ್ಚು ಸಮಯ ಕಳೆಯಿರಿ. ಒಂದು ಒಳ್ಳೆಯ ಪುಸ್ತಕ ಓದಿ, ಮನೆಯ ಕೆಲಸವನ್ನ ಶ್ರದ್ಧೆಯಿಂದ ನಿರ್ವಹಿಸಿ. ಒಳ್ಳೆಯ ಹುಡುಗ ನಿನ್ನ ಬಿಟ್ಟು ಹೋಗಿರ ಬಹುದು ಆದರೆ ದೇವರಂತ ಹುಡುಗ ಬರದೇ ಇರ್ತಾನಾ ಎಂಬ ನಿರೀಕ್ಷೆಯಲ್ಲಿ ಬದುಕಿರಿ. ಸೋತಿದ್ದು ಪ್ರೀತಿ ಯಲ್ಲಿ ವಿನಃ ಬದುಕಿನಲ್ಲಿ ಅಲ್ಲ ಎಂದು ತೀರ್ಮಾನಿಸಿ. ಪ್ರಾರಂಭದ ಕೆಲದಿನಗಳು ತುಂಬ ಕಷ್ಟ, ಆದರೂ ಸಹ ಧೈರ್ಯ ಬೆಳೆಸಿಕೊಳ್ಳಿ.
ನಿನ್ನ ಅವನು ಬಿಟ್ಟು ಹೋದ ಎಂದರೇ ಅವನಿಗೆ ಅದೃಷ್ಟವಿಲ್ಲವೆಂದು ಭಾವಿಸಿ. ಆ ನೋವನ್ನ ಮರೆಯಲು ಸಡನ್ನಾಗಿ ಇನ್ನೊಂದು ಪ್ರೀತಿಗೆ ಕೈ ಹಾಕ ಬೇಡಿ. ಸ್ವಲ್ಪ ಸಹನೆಯಿಂದ ವರ್ತಿಸಿ. ಜಸ್ಟ್ ಬಿ ಕೂಲ್. ಎಷ್ಟೇ ಆದರೂ ದೇವತೆಯಂತ ಹುಡುಗಿಗೆ ದೇವರೇ ಸಿಗುವುದು, ದೇವರಂತ ಹುಡುಗ ಸಿಕ್ತಾನೆ. ಹೆದರಬೇಡಿ ಆಯ್ತಾ. ಆಲ್ ಡಿ ಬೆಸ್ಟ್!
ಹುಡುಗರೇ ಪ್ರೀತಿಸಿದವಳು ದೂರವಾದರೆ ಈ ಪ್ರಶ್ನೆಗೆ ಉತ್ತರಿಸುವುದು ತುಂಬ ಕಷ್ಟ, ವೇದಾಂತ ಮಾತನಾಡಿದರೇ ಬೈತೀರ. ಬುದ್ಧಿಮಾತು ಹೇಳಿದರು ಇವನ್ಯಾರೋ ಆಸಾಮಿ ಎಂದು ವಿಮರ್ಶಿಸಲು ಶುರು ಮಾಡ್ತೀರಾ. ಹದಿಹರೆಯದ ವಯಸ್ಸಿನಲ್ಲೂ, ಪ್ರಾಯದ ಒಬ್ಬ ಹುಡುಗಿಯನ್ನ ಪ್ರೀತಿಸ್ತೀರ, ಅವಳೇ ಸರ್ವಸ್ವ, ಪ್ರಪಂಚ, ಉಸಿರು, ಭವಿಷ್ಯ ಅಂತ ಬದುಕುತ್ತೀರ. ಬೆಳಿಗ್ಗೆಯಿಂದ ರಾತ್ರಿ ಯವರೆಗೂ ಪ್ರತಿ ಮೌನದಲ್ಲೂ ಅವಳ ನೆನಪು ಕಾಡುತ್ತಿರುತ್ತದೆ.
ಎದ್ದಾಗಿನಿಂದ ಮಲಗುವವರೆಗೂ ಅವಳ ಜಪವನ್ನ ತಪಸ್ಸಿಗಿಂತ ಶ್ರದ್ದೆಯಿಂದ ಮಾಡ್ತೀರ.
ಕಾಡುವ ಅವಳ ಮುಗುಳ್ನಗೆ, ಅವಳ ಮುಗ್ಧತೆ, ಹೇಳಲಾಗದ ಅವಳ ಅಮಾಯಕತೆ, ನಿದ್ದೆ ಕೆಡಿಸುವ ಕಣ್ಣಿನ ನೋಟ, ಟೆಂಪ್ಟ್ ಮಾಡುವ ಅವಳ ಸೌಂದರ್ಯವನ್ನ ಪದೇ ಪದೇ ನೆನಸಿಕೊಂಡು ಬದುಕ್ತಾ ಇರ್ತೀರ. ಪ್ರಪೋಸ್ ಮಾಡಿದ ಹುಡುಗಿ ಗ್ರೀನ್ ಸಿಗ್ನಲ್ ಕೊಟ್ಟರೇ ಹುಡುಗರಿಗೆ ಬರುವ ಮೊಂಡು ಧೈರ್ಯ, ಅವಳಿಗೋಸ್ಕರ ಏನ್ ಬೇಕಾದರೂ ಸಾಧಿಸ್ತೀನಿ, ದುಡ್ಡೇ ಅಲ್ವ ಎಷ್ಟು ಬೇಕೋ ಅಷ್ಟು ಮಾಡ್ತೀನಿ, ಅವಳನ್ನ ರಾಣಿಯಂತೆ ನೋಡಿಕೊಳ್ತೀನಿ ಎಂಬ ತೀರ್ಮಾನಗಳು ರೂಲ್ ಮಾಡ್ತಾವೆ.
ಆದರೆ ದುರಂತವೇನೆಂದರೆ ತುಂಬಾ ಹುಡುಗರಿಗೆ ಇಷ್ಟಪಟ್ಟ ಹುಡುಗಿಯರು ಸಿಗುವುದಿಲ್ಲ. ಪ್ರೀತಿಯಲ್ಲಿದ್ದಾಗ ಕೇವಲ ಎಮೋಷನ್ಸ್, ಫೀಲಿಂಗ್ಸ್ ಮಾತ್ರ ಕೆಲಸ ಮಾಡಿರುತ್ತೆ. ಆದರೆ ಒಮ್ಮೆ ಪ್ರೀತಿ ಮದುವೆಯವರೆಗೂ ನಡೆದಾಗ ಎದುರಾಗುವ ಪರಿಸ್ಥಿತಿಗಳೇ ಬೇರೆ ಇಷ್ಟಪಟ್ಟವಳನ್ನ ಮದುವೆಯಾಗಲು ಹೋದಾಗ ಅಪ್ಪನ ಕೋಪ, ಅಮ್ಮನ ಪ್ರೀತಿ, ಸಂಬಂಧಿಕರ ವಿಶ್ವಾಸ, ಮನೆಯ ಸಂಪ್ರದಾಯ ಅಡ್ಡ ಬರುತ್ತೆ. ಏಕೆಂದರೇ ಪ್ರೀತಿಯಲ್ಲಿದ್ದಾಗ ಐ ಲವ್ ಯೂ ಎಂದು ಹೇಳುವಾಗ ಬರುವ ಧೈರ್ಯ ಐ ಮ್ಯಾರಿ ಯೂ ಎಂದು ಹೇಳಲು ಕಷ್ಟವಾಗುತ್ತದೆ. ಏಕೆಂದರೇ ಎಕ್ಸಾಮ್ ಪೀಸ್ ಕಟ್ಟುವಾಗ ಇರುವ ಧೈರ್ಯ, ಎಕ್ಸಾಮ್ ಬರೆಯುವಾಗ ಬರುವುದಿಲ್ಲ.
ಕಾರಣವಲ್ಲದ ಕಾರಣಕ್ಕೆ ಪ್ರೀತಿಸಿದ ಹುಡುಗಿ ದೂರವಾಗ್ತಾಳೆ, ಮನೆಯ ಪರಿಸ್ಥಿತಿಯಿಂದಲೋ, ಜಾತಿಯ ಸಮಸ್ಯೆಯಿಂದಲೋ, ಸ್ಟೇಟಸ್‌ನ ಕೊರತೆ ಯಿಂದಲೋ ಇಷ್ಟಪಟ್ಟವಳು ದೂರವಾಗ್ತಾಳೆ. ಇಂತಹ ಸಂದರ್ಭದಲ್ಲಿ ತುಂಬಾ ಹುಡುಗರು ಡಿಪ್ರೆಸ್ಸ್ ಆಗ್ತಾರೆ. ಬದುಕೋದೇ ಬೇಡ ಎಂದು ತೀರ್ಮಾನಿ ಸುತ್ತಾರೆ. ಡಾಬಾಗೋ ಕಾಂಡಿಮೆಂಟ್ಸ ಗೋ ರೆಗ್ಯುಲರ್ ಗಿರಾಕಿಗಳಾಗಿ ಬಿಡ್ತಾರೆ. ಖಿನ್ನತೆಯಿಂದ ಹೊರಬರಲಾಗದೇ ನರಳುತ್ತಾರೆ. ಪ್ರತಿ ಇಳಿ ಸಂಜೆಯಲ್ಲು ಅವಳನ್ನ ನೆನಪಿಸಿಕೊಂಡು ಕಣ್ಣಿರಾಕ್ತಾರೆ.
ನಾನು ಇದ್ದು ಏನ್ ಪ್ರಯೋಜನ, ಸತ್ತೋಗ್ತೀನಿ ಅಂತ ಸ್ನೇಹಿತರಿಗೆ ಹೇಳ್ತಾರೆ. ಹತಾಶೆ, ಬೇಸರ, ದುಃಖವನ್ನ ಪರ್ಮನೆಂಟ್ ಅತಿಥಿಗಳಂತೆ ಸ್ವೀಕರಿಸುತ್ತಾರೆ.
ಪ್ರೀತಿಯ ಯುವಕರೇ ನೀವು ಒಬ್ಬ ಹುಡುಗಿಯನ್ನ ಪ್ರೀತಿಸೋದು ಅವಳು ಚೆನ್ನಾಗಿರಲಿ ಅಂತ. ಸಪೋಸ್ ನೀವು ಪ್ರೀತಿ ಸೋದು ಅವಳು ಚೆನ್ನಾಗಿರಲಿ ಅಂತ ಬಯಸೋದು ಆದ್ರೆ, ಅವಳು ಯಾರ ಜೊತೆ ಇದ್ರೂ ಚೆನ್ನಾಗಿರಲಿ ಎಂದು ಬಯಸೋದು.
ಪ್ರೀತಿಸಿದವಳು ದೂರವಾದರೇ ಅವಳು ಚೆನ್ನಾಗಿರಲಿ ಎಂದು ಬಯಸಿ, ಅವಳ ತೇಜೋವಧೆ ಮಾಡಬೇಡಿ. ಚೆನ್ನಾಗಿರು ಚಿನ್ನ ಎಂದು ಮನಸ್ಸಿನ ಅಂದು ಕೊಳ್ಳಿ. ಅಷ್ಟೇ ಆದರೂ ನೀವು ಇಷ್ಟಪಟ್ಟ ಹುಡುಗಿಯಲ್ಲವೇ. ಹೃದಯವಂತಿಕೆ ತೋರಿಸಿ. ಜೀವನದಲ್ಲಿ ಒಬ್ಬ ಹುಡುಗಿಯನ್ನ ಕಳೆದುಕೊಳ್ಳೋದು ಅಲ್ಲ ದುರಂತವೆಂದರೇ, ಮತೊಬ್ಬಳನ್ನ ಪಡೀತೀನಿ ಎಂಬ ಭರವಸೆ ಕಳೆದುಕೊಳ್ಳುವುದು ದುರಂತವೆಂದರೇ. ಒಮ್ಮೆ ನಿಮ್ಮ ಊರನ್ನ ಸುತ್ತಾಡಿ ಬನ್ನಿ, ಅಷ್ಟು ದೊಡ್ಡ ಊರಲ್ಲಿ ನಿಮಗೆ ಕನೆಕ್ಟ್ ಆಗುವ ಜೀವ ಎಲ್ಲಾ ಇದ್ದೇ ಇರುತ್ತೆ.
ಅವಳ ಗೆಜ್ಜೆಯ ಸಪ್ಪಳ ಬದುಕಿನ ಹೆಜ್ಜೆಗಳನ್ನ ಕೆಡವದಿರಲಿ ಅವಳ ನೋಟ, ಅವಳ ಮುಗುಳುನಗೆ, ಚೆಂದವಾದ ಮೈಕಾಂತ, ಪುಟ್ಟ ಹೆಜ್ಜೆಗಳನ್ನು ಇಡುತ್ತ ಮನಸ್ಸಿನ ಪ್ರೀತಿಯ ಗೆಜ್ಜೆಗಳನ್ನ ಕದಲಿಸುವ ಅವಳ ತಾಕತ್ತು, ಎಷ್ಟೇ ಬಾರಿ ನೋಡಿದರು ಮತ್ತೆ ಮತ್ತೆ ನೋಡಬೇಕೆಂಬ ಸೌಂದರ್ಯ, ಬೇರೆಯವರೆ ಹೊಟ್ಟೆಕಿಚ್ಚು ಪಡುವಷ್ಟು ಚೆಂದ. ಇವೆ ಕೆಲವು ಹುಡುಗಿಯರಿಗೆ ಬೈ ಬರ್ತ್‌ನಂತೆ ಗಿ-ಡ್ ಆಗಿ ಬಂದಿರುತ್ತೆ. ಆದರೆ ತುಂಬಾ ಜನ ಹುಡುಗರು ತಮ್ಮ ಕಾಲೇಜ್ ಲೈಫ್ ನಲ್ಲಿ ಯಾವುದೊ ಒಂದು ಗೆಜ್ಜೆಯ ಸಪ್ಪಳಕ್ಕೆ, ಆ ಗೆಜ್ಜೆಯ ಸಪ್ಪಳವನ್ನ ಜೀವನ ಪೂರ್ತಿ ಕೇಳಬೇಕೆಂಬ ಬಯಕೆಗೆ, ಆ ಗೆಜ್ಜೆಯ
ಸಪ್ಪಳದೊಂದಿಗೆ, ಅವಳು ಬದುಕಿಗೆ ಬಂದರೆ ನಾಡಿ ಮಿಡಿತ ತುಂಬಾ ಜನ ಹುಡುಗರು ಒಂದು ಗೆಜ್ಜೆಯ ಸಪ್ಪಳಕ್ಕೆ ಫಿದಾ ಆಗೋಗಿರುತ್ತಾರೆ. -ಟ್ ಆಗೋಗಿರುತ್ತಾರೆ.
ಸಹಜವಾಗಿ ಅಂದು ಯಾವುದೊ ಒಂದು ಕಾರ್ಯಕ್ರಮದಲ್ಲಿ ಲಂಗ ಓಣಿಯನ್ನ ಹಾಕಿ ಗೆಜ್ಜೆಯನ್ನು ಕಟ್ಟಿ, ಪುಟ್ಟ ಹೆಜ್ಜೆಯನ್ನು ಇಡುತ್ತಿದ್ದಾಗ ಆ ಮೊದಲ ಗೆಜ್ಜೆಯ ಸಪ್ಪಳಕ್ಕೆ ಫಿದಾ ಆದ ಹುಡುಗನ ಮನಸ್ಥಿತಿ ಹೇಗಿರುತ್ತೆ. ನಂತರ ಏನಾಗಬಹುದು ಎಂಬ ಪ್ರಶ್ನೆಗಳನ್ನು ಹುಡುಕುತ್ತಾ ಹೋದರೆ ಪ್ರತಿಯೊಬ್ಬರ ಕಥೆಯು ವಿಶೇಷ ಎಪಿಸೋಡ್. ಹೀಗೂ ಉಂಟೆ ಕಾರ್ಯಕ್ರಮದ ಒಂದು ಅದ್ಭುತವಾದ ಎಪಿಸೋಡ್ ಆಗೋಗಿಬಿಡುತ್ತೆ. ಅದೊಂದು ದಿನ ಅವಳ ಗೆಜ್ಜೆಯ ಸಪ್ಪಳದೊಂದಿಗೆ ಕಾಲೇಜಿನ ಕಾರಿಡಾರ್‌ನಲ್ಲಿ ನಡೆಯುತ್ತಿದ್ದಳು. ಅದೊಂದು ಎಥ್ನಿಕ್ಸ್ ಡೇ ಯಲ್ಲಿ ಅವಳು ಟ್ರೆಡಿಷನಲ್ ಡ್ರೆಸ್ ಹಾಕಿ ಆ ಇಂಜಿನೀರಿಂಗ್ ಕಾಲೇಜ್ ನ ಕಾರಿಡಾರ್‌ನಲ್ಲಿ ನಡೆಯುತ್ತಿದ್ದರೆ, ಎದುರು ಕಡೆಯಿಂದ ಬಂದ ಅವನ ಮನಸ್ಸು ಏನೋ ಕಳೆದುಕೊಳ್ಳುತ್ತಿದ್ದೀನಿ, ಇವಳನ್ನ ಪಡೆಯಬೇಕು, ಇವಳೇ ನನ್ನ ಭವಿಷ್ಯ, ಬದುಕು, ನನ್ನ ಉಸಿರು, ಇವಳು ಇಲ್ಲ ಅಂದ್ರೆ ಬದುಕೋದು
ಹೇಗೆ ಎಂಬ ನೂರು ಪ್ರಶ್ನೆಗಳು ಮೂಡಿದವು.
ನಿಧಾನವಾಗಿ ಅವಳ ಪಕ್ಕದಿಂದ ನಡೆದುಹೋಗುತ್ತಿದ್ದಾಗ ಓಯ್! ಅಂತ ಕರೆದು ಅವಳನ್ನ ನೀನು ಅಂದರೆ ನನಗೆ ಇಷ್ಟ ಅಂತ ಹೇಳಿಬಿಟ್ಟಾಗ ಅವಳ ಪ್ರತಿಕ್ರಿಯೆ ಎಕ್ಸ್‌ಪೆಕ್ಟ್ ಮಾಡೋದು ತುಂಬಾ ಕಷ್ಟ. ಸಹಜವಾಗಿ ಟ್ರೆಡಿಷನಲ್ ಡ್ರೆಸ್‌ನಲ್ಲಿ ಇದ್ದಿದ್ದ ತಕ್ಷಣ ಹುಡುಗಿಯರು ಟ್ರೆಡಿಷನಲ್ ಅಂತ ಅಲ್ಲಿ, ಮಾಡ್ರನ್ ಡ್ರೆಸ್‌ನಲ್ಲಿ ಇದ್ದಿದ್ದ ತಕ್ಷಣ ಅವರೇನೋ ಮಾಡ್ರನ್ ಅಂತ ಅಲ್ಲ. ಡ್ರೆಸ್ ಅನ್ನೋದು ಅವರ ಅಪ್ಪ ಕೊಡಿಸುವ ಕಾಸಿನ ತಾಕತ್ತು ಮೇಲೆ ನಿಂತಿರುತ್ತೆ. ಕ್ಯಾರೆಕ್ಟರ್ ಅನ್ನೋದು ಅಪ್ಪ ಕೊಟ್ಟಿರುವ ಹೆರಿಡಿಟಿ ಮೇಲೆ ನಿಂತಿರುತ್ತೆ.
ಏನೇ ಆಗಲಿ ಆ ಗೆಜ್ಜೆಯ ಸಪ್ಪಳಕ್ಕೆ ಫಿದಾ ಆದ ಹುಡುಗ ನಂತರ ಏಕಾಗ್ರತೆ ಕಳೆದುಕೊಳ್ತಾನೆ, ಓದಕ್ಕೆ ಆಗಲ್ಲ, ಮತ್ತೊಂದು ಎಥ್ನಿಕ್ ಡೇ ಬರುವಷ್ಟರಲ್ಲಿ, ೪-೫ ಸಬ್ಜೆಕ್ಟ್ ಬ್ಯಾಕ್ ಲಾಗ್ ಇಟ್ಕೊಂಡಿರುತ್ತಾನೆ. ಅವಳು ಮಾತ್ರ ಚೆನ್ನಾಗಿ ಓದಿ ಮುಂದೆ ಹೋಗುತ್ತಿರುತ್ತಾಳೆ. ಇವತ್ತಲ್ಲ ನಾಳೆ ಒಂದು ಹೈಟೆಕ್ ಇಂಜಿನಿ
ಯರ್‌ನ ಮದುವೆ ಆಗಬೇಕು ಅಂತ ಕನಸ್ಸಿನಲ್ಲಿರುತ್ತಾಳೆ. ಇವನು ಮಾತ್ರ ಅವಳ ಕನಸ್ಸಿನಲ್ಲಿ ಬಿದ್ದು ಕನಸನ್ನ ಹಾಳುಮಾಡಿಕೊಂಡು ಬದುಕು ಎಲ್ಲಾ ಒಂದು ಕಡೆ ಬೀದಿಗೆ ಬರುತ್ತೆ.
ಇನ್ನೇನು ಫೈನಲ್ ಇಯರ್‌ಗೆ ಬಂದಾಗ ಇನ್ಮೇಲಾದ್ರೂ ಚೆನ್ನಾಗಿ ಓದಿ ಉದ್ಧಾರ ಆಗೋಣ ಅಂತ ತೀರ್ಮಾನ ಮಾಡ್ತಾನೆ. ಆದರೆ ಓದಕ್ಕೆ ಆಗಬೇಕು ಅಲ್ವಾ. ಯಾಕೆಂದರೆ ಅಷ್ಟೊತ್ತಿಗೆ ಇಂಜಿನಿಯರಿಂಗ್ ಬ್ಯಾಕ್ ಲಾಗ್, ಓದಕ್ಕೆ ಆಗದಿರುವ ನಿಸ್ಸಹಾಯಕತೆ. ಇನ್ಮೇಲಾದರೂ ಓದಿದರೆ ಉದ್ಧಾರ ಆಗ್ತೀವಾ ಎಂಬ ಪ್ರಶ್ನೆ. ಇಂತ ನೂರು ಪ್ರಶ್ನೆಗಳ ನಡುವೆ ಇಂಜಿನಿಯರಿಂಗ್ ಮುಗಿದೇ ಹೊಯ್ತು. ಅದೇನೇ ಆಗಲಿ ಗೆಜ್ಜೆಯ ಸಪ್ಪಳವನ್ನೂ ಬಾಳ ಸಂಗಾತಿಯಂತೆ ಟ್ರೀಟ್ ಮಾಡಿದರೆ ಸಂಗಾತಿಯಾಗಬೇಕಾದ ಗೆಲುವು ಇನ್ಯಾವನಿಗೋ ಹೆಂಡತಿಯಾಗಿ ಹೋಗುತ್ತೆ.