Saturday, 23rd November 2024

ಸಂವಿಧಾನ ಯಾಕೆ ಸರ್ವಶ್ರೇಷ್ಠ ದಾಖಲಾತಿ ?

ತನ್ನಿಮಿತ್ತ

ಡಾ.ಎನ್.ಸತೀಶ್ ಗೌಡ

ಭಾರತ ದೇಶದ ಸಂವಿಧಾನವನ್ನು ಅಂಗೀಕರಿಸಿ ಇಂದಿಗೆ ೭೧ ವರ್ಷಗಳಾಗಿವೆ. ಇಂದಿನ ಘನ ಸರಕಾರ, ಪ್ರತಿ ನವೆಂಬರ್ 26 ಅನ್ನು ಸಂವಿಧಾನ ದಿನವಾಗಿ ಆಚರಿಸಬೇಕೆಂದು ನಿರ್ದೇಶನ ನೀಡಿರುವುದು ನಿಜಕ್ಕೂ ಅರ್ಥಪೂರ್ಣ ವಿಚಾರ. ದೇಶದ ಸಂವಿಧಾನ ವನ್ನು ಅರಿಯಲು ಒಂದು ಒಳ್ಳೆಯ ಪರಿಕಲ್ಪನೆ.

ನಾವು ಹಿಂದೂ, ಕ್ರೈಸ್ತ ಹಾಗೂ ಮುಸಲ್ಮಾನ ಧರ್ಮಕ್ಕೆ ಸೇರಿರಬಹುದು, ನಮ್ಮಲ್ಲಿ ಭಗವದ್ಗೀತೆ, ಬೈಬಲ್ ಹಾಗೂ ಕುರಾನ್ ಇಲ್ಲದಿದ್ದರೂ, ಪ್ರತಿಯೊಬ್ಬ ದೇಶದ ನಾಗರಿಕನು ಸಂವಿಧಾನವೆಂಬ ಶ್ರೇಷ್ಠ ಕಾನೂನನ್ನು ಇಟ್ಟುಕೊಂಡು ಅದರಲ್ಲಿರುವ ವಿಚಾರಗಳನ್ನು ಸರಳವಾಗಿ ಅರ್ಥೈಸಿಕೊಂಡು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾಗವಹಿಸಿದಾಗ ಮಾತ್ರ ಆ ದೇಶದ ಸಂವಿಧಾನಕ್ಕೆ ಗೌರವ ಬರುತ್ತದೆ ಎಂದರೆ ಅತಿಶಯೋಕ್ತಿಯಾಗಲಾರದು.

ಈ ಸಂಬಂಧ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳು ಸ್ಥಳೀಯ ಸರಕಾರಗಳ ಸಹಾಯವನ್ನು ಪಡೆದುಕೊಂಡು ಪ್ರತಿ ಯೊಬ್ಬ ನಾಗರಿಕನ ಮನೆಗೆ ಸಂವಿಧಾನ, ಕಾನೂನನ್ನು ಆಯಾಯ ಪ್ರಾದೇಶಿಕ ಭಾಷೆಗಳಲ್ಲಿ ತಲುಪುವಂತೆ ಮಾಡಿದಾಗ ಜನರಿಗೆ ಸಂವಿಧಾನದ ಪರಿಕಲ್ಪನೆ ಹಾಗೂ ಅದರಲ್ಲಿರುವ ಉತ್ತಮ ವಿಚಾರಗಳನ್ನು ಪಡೆದುಕೊಳ್ಳಲು ತುಂಬಾ ಸಹಕಾರಿಯಾಗಿರುತ್ತದೆ.

ನಮ್ಮ ದೇಶದ ಸಂವಿಧಾನವನ್ನು ಬೇರೆ ದೇಶಕ್ಕೆ ಹೋಲಿಸಲು ಸಾಧ್ಯವೇ ಇಲ್ಲ. ಕಾರಣ, ಪ್ರಪಂಚದ ಯಾವುದೇ ರಾಷ್ಟ್ರಗಳಿಗೆ
ಭೇಟಿ ನೀಡಿದರೂ ಸಹ ಅಲ್ಲಿ ಕೇವಲ ಕ್ರೈಸ್ತರು (ಕ್ಯಾಥೋಲಿಕ್ ಹಾಗೂ ಪ್ರೊಟೆಸ್ಟಂಟ್) ಹಾಗೂ ಮುಸಲ್ಮಾನರು (ಶಿಯಾ ಹಾಗೂ ಸುನ್ನಿ) ಮಾತ್ರ ನೋಡಬಹುದು. ಆದರೆ ನಮ್ಮ ಭಾರತ ದೇಶದಲ್ಲಿ ಹಿಂದೂ, ಕ್ರೈಸ್ತರು, ಮುಸಲ್ಮಾನರು, ಜೈನರು, ಬೌದ್ಧರು ಹೀಗೆ ಹಲವಾರು ಬಗೆಯ ಧರ್ಮಗಳ ಜನರು ಹಾಗೂ ವಿವಿಧ ಭಾಷೆ ಹಾಗೂ ಸಂಸ್ಕೃತಿ ಒಳಗೊಂಡಂಥ ಜನರು, ಒಂದು ದೇಶದಲ್ಲಿ ಒಂದು ಸಂವಿಧಾನದ ಮೂಲಕ ಬದುಕನ್ನು ನಡೆಸುತ್ತಿದ್ದಾರೆ ಹಾಗೂ 71 ವರ್ಷಗಳಿಂದ ಈ ಸಂವಿಧಾನವು ಉತ್ತಮ ರೀತಿಯಲ್ಲಿ
ಕಾರ್ಯನಿರ್ವಹಿಸುತ್ತಿದೆ ಎಂದರೆ ನಮ್ಮ ಸಂವಿಧಾನ ಶ್ರೇಷ್ಠ ಸಂವಿಧಾನವಲ್ಲವೇ?ನಮ್ಮ ಭಾರತ ಸಂವಿಧಾನ ಏಕೆ ವಿಶಿಷ್ಟ ಹಾಗೂ ಶ್ರೇಷ್ಠ ಎಂಬ ವಿಚಾರವನ್ನು ಅವಲೋಕನ ಮಾಡಿದಂಥ ಸಂದರ್ಭದಲ್ಲಿ, ಬಡವರು, ಕೂಲಿ ಕಾರ್ಮಿಕರು ನಿರ್ಗತಿಕರು ಹಾಗೂ ತುಳಿತಕ್ಕೊಳಗಾದವರು ಕೂಡ ಅತ್ಯಂತ ದೊಡ್ಡ ಸಂವಿಧಾನಿಕ ಹಾಗೂ ಶಾಸನಾತ್ಮಕ ಹುzಗಳನ್ನು ಅಲಂಕರಿಸಬಹುದು.

ಪ್ರತಿಯೊಬ್ಬ ನಾಗರಿಕರಿಗೂ ಯಾವುದೇ ಜಾತಿ, ಧರ್ಮ, ಭಾಷೆ, ಲಿಂಗ ಹಾಗೂ ಇನ್ನಿತರ ತಾರತಮ್ಯಗಳನ್ನು ಮಾಡದೆ, ಎಲ್ಲರನ್ನೂ ಸಮಾನವಾಗಿ ನೋಡುವಂಥ ಉಪಬಂಧಗಳು ನಮ್ಮ ಭಾರತ ಸಂವಿಧಾನದಲ್ಲಿ ಅಡಕವಾಗಿರುವುದು ನಿಜಕ್ಕೂ ಸಂತೋಷದ ವಿಚಾರ. ಆದರೆ ನಮ್ಮಜನರು ಸಂವಿಧಾನವನ್ನು ಹಾಗೂ ಅದರ ಮೌಲ್ಯಧಾರಿತ ವಿಚಾರಗಳನ್ನು ತಿಳಿದುಕೊಳ್ಳದೆ ಪ್ರಜಾಪ್ರಭುತ್ವ ಮುಖ್ಯವಾಹಿನಿಯಲ್ಲಿ ಭಾಗವಹಿಸದೆ ಇರುವುದು ಅತ್ಯಂತ ನೋವಿನ ಸಂಗತಿ.

ನಮ್ಮ ಭಾರತ ಸಂವಿಧಾನ ದೇಶದ ಎ ಕಾನೂನುಗಳ ತಾಯಿ ಇದ್ದಂತೆ. ಸಂಸತ್ ಆಗಲಿ ಅಥವಾ ಆಯ ರಾಜ್ಯಗಳ ರಾಜ್ಯ ಶಾಸಕಾಂಗಗಳಾಗಲಿ ಕಾನೂನುಗಳನ್ನು ಮಾಡುವಾಗ, ಸಂವಿಧಾನದ ಆಶಯಗಳಿಗೆ ಹಾಗೂ ಧ್ಯೇಯೋದ್ದೇಶಗಳಿಗೆ ಧಕ್ಕೆ ತರದಂತೆ ರಚಿಸಬೇಕು.

ನಮ್ಮ ಸಂವಿಧಾನವು ಪ್ರಜಾಪ್ರಭುತ್ವ ಮೌಲ್ಯ ಹಾಗೂ ಸಿದ್ಧಾಂತ ಆಶಯಗಳನ್ನು ಸಾರುವ ಒಂದು ಬಹುಮುಖ್ಯ ಸರ್ವೋಚ್ಚ
ಕಾನೂನಾಗಿದೆ. ಈ ಸಂವಿಧಾನದ ಪ್ರಕಾರ ಪ್ರಜೆಗಳೇ ಸಾರ್ವಭೌಮರು. ಇನ್ನೊಂದು ಬಹುಮುಖ್ಯವಾದ ವಿಚಾರವೆಂದರೆ, ಅಮೆರಿಕ ಸಂವಿಧಾನ ಅತ್ಯಂತ 230 ವರ್ಷಗಳ ಹಳೆಯ ಸಂವಿಧಾನವಾದರೂ, ಮೂಲಭೂತ ಹಕ್ಕುಗಳನ್ನು ಮೂಲ ಸಂವಿ ಧಾನದಲ್ಲಿ ಸೇರಿಸಿರಲಿಲ್ಲ. ಭಾರತ ಸಂವಿಧಾನದಲ್ಲಿ ಇನ್ನೊಂದು ಬಹುಮುಖ್ಯ ವಿಚಾರವೆಂದರೆ ಶಾಸಕಾಂಗ, ಕಾರ್ಯಾಂಗ, ಅಥವಾ ನ್ಯಾಯಾಂಗವಾಗಲಿ, ಸಂವಿಧಾನಕ್ಕಿಂತ ದೊಡ್ಡ ಸಂಸ್ಥೆಗಳಲ್ಲ. ಈ ಎ ಅಂಗಗಳು ಸಂವಿಧಾನದ ಪರಿಧಿ ಯಲ್ಲಿ ತಮ್ಮ ಕಾರ್ಯಗಳನ್ನು ನಿರ್ವಹಿಸಬೇಕಾಗುತ್ತದೆ.