Sunday, 8th September 2024

ವನ್ಯಜೀವಿ-ಮಾನವ ಸಂಘರ್ಷ ಕೊನೆಗಾಣಿಸುವತ್ತ ಇರಲಿ ಗಮನ

ಇತ್ತೀಚಿನ ದಿನಗಳಲ್ಲಿ ವನ್ಯಜೀವಿ-ಮಾನವ ಸಂಘರ್ಷ ಹೆಚ್ಚುತ್ತಿದೆ.  ಕಳೆದ ೧೫ ದಿನಗಳ ಅಂತರದಲ್ಲಿ ಮಾನವ-ವನ್ಯಜೀವಿ ಸಂಘರ್ಷದಲ್ಲಿ ೧೧ ಜನರು ಸಾವಿಗೀಡಾಗಿzರೆ. ರಾಜ್ಯದ ನೂರಾರು ಗ್ರಾಮಗಳಲ್ಲಿ ನಿತ್ಯವೂ ಚಿರತೆಗಳು ಕಾಣಿಸಿಕೊಳ್ಳುತ್ತಿವೆ. ದನ-ಕರುಗಳು, ಕುರಿ-ಮೇಕೆ ಗಳನ್ನು ಹಿಡಿದು ತಿನ್ನುತ್ತಿವೆ. ಇದರಿಂದ ಸಾರ್ವಜನಿಕರಲ್ಲಿ ವನ್ಯಜೀವಿ ಸಂರಕ್ಷಣೆ, ಅದರಲ್ಲೂ ಹೆಚ್ಚು ಸಂಘರ್ಷಕ್ಕೊಳಗಾಗುವ ಚಿರತೆ, ಆನೆ, ಕರಡಿ, ಕಾಡು ಹಂದಿಯಂತಹ ಪ್ರಾಣಿಗಳ ಬಗ್ಗೆ ಸಹನೆ, ಅನುಭೂತಿ ಕಡಿಮೆಯಾಗುತ್ತಿದೆ. ಅದೂ ಒಂದು ಜೀವ ಅದಕ್ಕೂ ಜೀವಿಸಲು ಹಕ್ಕಿದೆ ಎಂದು ಹೇಳುತ್ತಿದ್ದ ದಿನಗಳು ಮರೆಯಾಗುತ್ತಿವೆ. ಚಿರತೆಗಳಿಗೆ ದಿನವೊಂದಕ್ಕೆ ಸುಮಾರು ೪ ಕೆ.ಜಿ.ಯಷ್ಟು ಆಹಾರದ ಅವಶ್ಯಕತೆ ಇರುತ್ತದೆ. ಹಾಗಾಗಿ ಅದು ಸಣ್ಣ ಪುಟ್ಟ ಕಾಡು ಪ್ರದೇಶ, ಕಲ್ಲು ಬಂಡೆಗಳಿರುವ ಗುಡ್ಡಗಳು, ಕುರುಚಲು ಕಾಡು, ಎಲ್ಲ ಕಡೆಯೂ ಬದುಕಬಲ್ಲವು. ಎಲ್ಲ ಆವಾಸ ಸ್ಥಾನಗಳಿಗೆ ಹೊಂದಿಕೊಳ್ಳುವ ಗುಣ, ಅದರ ದೇಹ ಗಾತ್ರ ಮತ್ತು ಸಣ್ಣ ಪುಟ್ಟ ಪ್ರಾಣಿಗಳನ್ನು ಭಕ್ಷಿಸಿ ಬದುಕಿ ಉಳಿಯಬಲ್ಲ ಶಕ್ತಿ ಈ ಮಾಂಸಾಹಾರಿ ಪ್ರಾಣಿಗೆ ಎಲ್ಲ ಕಡೆಯೂ ಹೊಂದಿ ಕೊಂಡು ಬದುಕುವ ಹಾಗೆ ಮಾಡಿದೆ.
ಇದು ಸಂಘರ್ಷಕ್ಕೂ ದಾರಿ ಮಾಡಿ ಕೊಟ್ಟಿದೆ. ರಾಜ್ಯದಲ್ಲಿ ಮಾನವ-ಚಿರತೆ ಸಂಘರ್ಷದ ಶೇ.೫೦ಕ್ಕಿಂತ ಹೆಚ್ಚು ಸನ್ನಿವೇಶಗಳು ಕಾಣುವುದು ರಾಮನಗರ, ತುಮಕೂರು, ಮಂಡ್ಯ, ಮೈಸೂರು ಮತ್ತು ಹಾಸನ ಜಿಲ್ಲೆಗಳಲ್ಲಿ. ಇತ್ತೀಚೆಗೆ ಕೊಪ್ಪಳ, ಬಳ್ಳಾರಿ ಮತ್ತು ಕೋಲಾರ ಜಿಗಳಲ್ಲೂ ಹೆಚ್ಚುತ್ತಿದೆ. ಗಮನಿಸಬೇಕಾದ ಅಂಶವೆಂದರೆ ಇದೇ ಜಿಲ್ಲೆಗಳಲ್ಲಿ ಕಲ್ಲು ಕ್ವಾರಿ ಅಥವಾ ಗಣಿಗಾರಿಕೆಯು ಅತಿಯಾಗಿ ನಡೆಯುತ್ತಿರುವುದು. ತಮ್ಮ ನೈಸರ್ಗಿಕ
ಆವಾಸಸ್ಥಾನ ಕಳೆದುಕೊಂಡ ಚಿರತೆಗಳು ಮಾನವ ನಿರ್ಮಿತ ಆವಾಸಸ್ಥಾನಗಳಿಗೆ (ಕಬ್ಬಿನ ಗz, ಜೋಳದ ಹೊಲ, ನೀಲಗಿರಿ ತೋಪು, ಇತರ) ಸ್ಥಳಾಂತರಗೊಳ್ಳುತ್ತವೆ ಮತ್ತು ಸಂಘರ್ಷ ಪ್ರಾರಂಭವಾಗುತ್ತದೆ. ಹಾಗಾಗಿ
ಸಮಾಜ ನಮಗೆ ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಬಳಕೆ ಬೇಕೋ ಅಥವಾ ವನ್ಯಜೀವಿ ಸಂಘರ್ಷವನ್ನು ಕಡಿಮೆ ಗೊಳಿಸುವತ್ತ ಆದ್ಯತೆ ನೀಡಬೇಕೋ ಎಂದು ನಿರ್ಧರಿಸಬೇಕಿದೆ. ಹಾಗಾಗಿ ಮಾನವ ಮತ್ತು ವನ್ಯಜೀವಿ ಸಂಘರ್ಷವನ್ನು ಕಡಿಮೆಗೊಳಿಸುವುದು ಕೇವಲ ಅರಣ್ಯ ಇಲಾಖೆಯ ಜವಾಬ್ದಾರಿಯಲ್ಲ. ಸಮಾಜದ ಹಲವು ವರ್ಗದ ಜನರು ಹಾಗೂ ಸರಕಾರದ ಹಲವು ಇಲಾಖೆಗಳು ಒಗ್ಗೂಡಬೇಕು.

Leave a Reply

Your email address will not be published. Required fields are marked *

error: Content is protected !!