ರಸದೌತಣ
ಯಗಟಿ ರಘು ನಾಡಿಗ್
naadigru@gmail.com
ಓದುಗರು ಬರೆಯುವ ಪತ್ರ, ಲೇಖನ, ತೋಡಿಕೊಳ್ಳುವ ಅಳಲು, ಕುಂದುಕೊರತೆ ಇತ್ಯಾದಿಗಳಿಗೆ ದಿನಪತ್ರಿಕೆಗಳು ಪ್ರತ್ಯೇಕವಾದ ಇ-ಮೇಲ್ ವಿಳಾಸವನ್ನು ನೀಡುವುದು ವಾಡಿಕೆ. ಅಲ್ಲದೆ ಅಂಕಣಕಾರರ ಬರಹದ ಜತೆಗೂ ಇ-ಮೇಲ್ ವಿಳಾಸ ಪ್ರಕಟವಾಗುವುದು
ಸಾಮಾನ್ಯ. ವಿಶ್ವವಾಣಿ ಪತ್ರಿಕೆಯಲ್ಲೂ ಇಂಥ ವ್ಯವಸ್ಥೆಯಿದೆ.
ನಮ್ಮ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಸರ್ ಅವರ ‘ಆಸ್ಕ್ ದಿ ಎಡಿಟರ್’ ಎಂಬ ಅಂಕಣ ಪ್ರತಿ ಭಾನುವಾರದ
‘ವಿರಾಮ’ ಪುರವಣಿಯಲ್ಲಿ ಪ್ರಕಟವಾಗುವುದೂ ನಿಮಗೆ ಗೊತ್ತು. ಓದುಗರು ತಮ್ಮನ್ನು ಕಾಡುತ್ತಿರುವ ವೈವಿಧ್ಯಮಯ ಪ್ರಶ್ನೆ, ಗೊಂದಲ ಅಥವಾ ಸಮಸ್ಯೆಗಳನ್ನು ಈ ವಿಭಾಗದಲ್ಲಿ ಹರವಿಟ್ಟು ಅವಕ್ಕೆ ‘ಸಾಂತ್ವನ’ ರೂಪದ ಉತ್ತರಗಳನ್ನು ಪಡೆಯುವುದಿದೆ. ಆದರೆ ಕೆಲವರು, ಪತ್ರಿಕೆಯ ಇಂಥ ಪ್ರತಿಯೊಂದು ಇ-ಮೇಲ್ ವಿಳಾಸಕ್ಕೂ, ಆಯಾ ವಿಭಾಗದ ಆಶಯಕ್ಕೆ ತಕ್ಕಂತೆ ಏಕಕಾಲಕ್ಕೆ ಬರಹಗಳನ್ನು ಕಳಿಸುವುದುಂಟು; ಅಂಥ ವೇಳೆ ಗಡಿಬಿಡಿಯ ನಿರ್ಲಕ್ಷ್ಯದ, ಒಂದು ವಿಭಾಗಕ್ಕೆ ಕಳಿಸಬೇಕಾದ್ದನ್ನು ಮತ್ತೊಂದಕ್ಕೆ ಕಳಿಸಿ ಕೈತೊಳೆದು ಕೊಳ್ಳುವುದೂ ಉಂಟು!
ಹೀಗೆ ‘ಆಸ್ಕ್ ದಿ ಎಡಿಟರ್’ ವಿಭಾಗಕ್ಕೆ ಕಳಿಸಬೇಕಾದ ಪ್ರಶ್ನೆಯನ್ನು ಒಂದೊಮ್ಮೆ ‘ರಸದೌತಣ’ ಅಂಕಣಕಾರರಿಗೆ ಕಳಿಸಿದರೆ,
ಪ್ರಶ್ನಿಸಿದವರಿಗೆ ಸಿಗುವ ‘ಸಂಭಾವ್ಯ ಉತ್ತರ’ ಹೇಗಿರಬಹುದು ಎಂಬುದಕ್ಕೆ ಒಂದೆರಡು ಪುಟ್ಟ ಝಲಕ್ ಇಲ್ಲಿವೆ…
ಹೆಸರುಬೇಡ, ಪುಂಗನೂರು
ಪ್ರಶ್ನೆ: ಪ್ರಧಾನ ಸಂಪಾದಕರಾದ ಶ್ರೀ ವಿಶ್ವೇಶ್ವರ ಭಟ್ಟರಿಗೆ ನಮಸ್ಕಾರ. ನನ್ನನ್ನು ಬಹಳ ದಿನಗಳಿಂದ ಕಾಡುತ್ತಿರುವ ಗೊಂದಲಕ್ಕೆ ಪರಿಹಾರ ಬಯಸಿ ಈ ಪ್ರಶ್ನೆ ಕಳಿಸಿರುವೆ. ನೆರವಾಗುವಿರಿ ಎಂಬ ವಿಶ್ವಾಸ ನನ್ನದು. ಭಟ್ರೇ, ನನಗೊಂದು ವಿಚಿತ್ರ ಸಮಸ್ಯೆಯಿದೆ.
ಮನೆಯಲ್ಲಿ ಶ್ರೀ ಸತ್ಯನಾರಾಯಣಸ್ವಾಮಿ ಪೂಜೆಯನ್ನೋ, ಯಾವುದಾದರೂ ವ್ರತವನ್ನೋ ಹಮ್ಮಿಕೊಂಡಾಗ ಸಾಕಷ್ಟು ಬಂಧು-ಮಿತ್ರರನ್ನು ಕರೆಯುವುದು ನನ್ನ ವಾಡಿಕೆ. ಇಂಥ ಸಂದರ್ಭದಲ್ಲಿ ಮಂತ್ರಘೋಷ, ಭಜನೆ ತಾರಕಕ್ಕೆ ಏರುತ್ತಿದ್ದಂತೆ, ದೇವರ ಮಂಟಪದ ಮುಂದೆ ಮಡಿಪಂಚೆ ಉಟ್ಟು ಕೂತಿದ್ದ ನಾನು ಇದ್ದಕ್ಕಿದ್ದಂತೆ ಎದ್ದು, ಎರಡೂ ಕೈಗಳನ್ನು ಮೇಲಕ್ಕೆತ್ತಿ ಒಮ್ಮೆ “ಹೋ….ಹೋ…” ಎಂದು
ಜೋರಾಗಿ ಕೂಗುತ್ತಾ (ಕೆಲವೊಮ್ಮೆ ಬಾಯಿ ಬಡ್ಕೊಂಡು), ಓಡುತ್ತಾ ಹಿತ್ತಲಿಗೆ ಬಂದು ಬಾವಿಯ ಬಳಿ ಕೂತುಬಿಡುತ್ತೇನೆ. ಆಹ್ವಾನಿತರ ಎದುರಿಗೆ ಹೀಗೆ ಮಾಡಿದ್ದಕ್ಕೆ ಮುಜುಗರಗೊಂಡ ನನ್ನ ಹೆಂಡತಿ ಮತ್ತು ದೊಡ್ಡ ಮಗ ಅಲ್ಲಿಗೆ ಬಂದು, “ಇದೇನಿದು ನಿಮ್ಮ ಅವಸ್ಥೆ? ಭಜನೆಯ ವೇಳೆ ಎಲ್ಲರೆದುರು ಹೀಗೆ ಕೂಗಾಡಿಕೊಂಡು, ಬಾಯಿ ಬಡ್ಕೊಂಡು ಬಂದು, ಬಾವಿಯ ಬಳಿ ಹೀಗೆ ಕುಕ್ಕರಗಾಲಲ್ಲಿ ಕೂತ್ಕೊಂಡ್ರೆ, ಆಹ್ವಾನಿತರು, ಮಕ್ಕಳು-ಮೊಮ್ಮಕ್ಕಳು ಏನಂದುಕೊಳ್ತಾರೆ?” ಎಂದು ಗದರಿಸಿ, ಎದ್ದು ಬರಲು ಹೇಳುತ್ತಾರೆ. ಬರೋಲ್ಲ ವೆಂದು ನಾನು ಹಟ ಮಾಡಿದರೆ, ಇಬ್ಬರೂ ಸೇರಿ ಅನಾಮತ್ತಾಗಿ ನನ್ನನ್ನು ಎತ್ತಿಕೊಂಡು ಬಂದು ದೇವರ ಮಂಟಪದ ಮುಂದೆ ಕುಕ್ಕರಿಸಿಬಿಡ್ತಾರೆ. ನನಗೆ ಸುಮಾರು 10 ವರ್ಷದಿಂದ ಈ ಸಮಸ್ಯೆ ಕಾಡ್ತಾ ಇದೆ ಭಟ್ರೇ. ಅಲೋಪತಿ, ನ್ಯಾಚುರೋಪತಿ, ಹೋಮಿ ಯೋಪತಿ ಎಲ್ಲ ಕಡೆ ತೋರಿಸಿದ್ರೂ ವಿಧಿಯ ಈ ‘ಕಿತಾಪತಿ’ ನಿಂತಿಲ್ಲ ಭಟ್ರೇ… ನೀವಾದ್ರೂ ಪರಿಹಾರ ಸೂಚಿಸಿ ಪುಣ್ಯ ಕಟ್ಕೊಳ್ಳಿ…
ಉತ್ತರ: ಮಾನ್ಯರೇ, ‘ಆಸ್ಕ್ ದಿ ಎಡಿಟರ್’ ವಿಭಾಗಕ್ಕೆ ಪ್ರಶ್ನೆ ಕಳಿಸುವವರು ತಮ್ಮ ಮತ್ತು ಊರಿನ ಹೆಸರಿನ ಜತೆ, ತಮ್ಮ
ವಯಸ್ಸೇನು, ತಾವು ವಿದ್ಯಾರ್ಥಿಯೋ ಉದ್ಯೋಗಿಯೋ ಬೆಲ್ಲ ಮಾಹಿತಿಯನ್ನೂ ನೀಡುವುದುಂಟು. ಪ್ರಶ್ನಿಸಿದವರ ಇಂಥ ಹಿನ್ನೆಲೆ ಗೊತ್ತಾದರೆ ಉತ್ತರಿಸಲು ನನಗೂ ಸುಲಭವಾಗುತ್ತದೆ. ನೀವಿಲ್ಲಿ ಪ್ರಶ್ನೆಯನ್ನೇನೋ ಕೇಳಿದ್ದೀರಿ, ಮಕ್ಕಳು-ಮೊಮ್ಮಕ್ಕಳು ಇದ್ದಾರೆಂಬ ಮಾಹಿತಿ ನೀವಿತ್ತ ವಿವರದ ಇರೋದ್ರಿಂದ ನೀವೊಬ್ಬರು ವಯೋವೃದ್ಧರು ಅಂದ್ಕೋಬಹುದು. ಆದರೆ ನಿಮ್ಮ ವೃತ್ತಿಯೇನು ಎಂಬುದನ್ನೇ ನೀವು ಹೇಳಿಕೊಂಡಿಲ್ಲ. ಆದರೂ ನನ್ನ ‘ಏಳನೇ ಇಂದ್ರಿಯ’ವನ್ನು ಬಳಸಿ ಊಹಿಸುವುದಾದರೆ, ನೀವೊಬ್ಬ ಮಾಜಿ ರಾಜಕಾರಣಿ ಎಂಬುದು 200% ಪಕ್ಕಾ! ನಿಮಗಿರುವ ಸಮಸ್ಯೆಯನ್ನು ಇಲ್ಲಿ ವಿಶ್ಲೇಷಿಸಲು ಯತ್ನಿಸುವೆ. ನೀವೊಬ್ಬ ಶಾಸಕರೋ ಸಂಸದರೋ ಆಗಿ ಈ ಹಿಂದೆ ಕಾರ್ಯನಿರ್ವಹಿಸಿದ್ದು, ಕಳೆದ ಒಂದೆರಡು ಅವಧಿಯಿಂದ ಜನರು ನಿಮಗೆ ಚುನಾವಣೆಯಲ್ಲಿ ಮಣ್ಣು ಮುಕ್ಕಿಸಿ, ಕೈಗೆ ‘ತಿಪಟೂರು ತೆಂಗಿನಕಾಯಿಯ ರಕ್ಷಾಕವಚ’ ನೀಡಿ ಬಿಟ್ಟಿದ್ದಾರೆ ಎನಿಸುತ್ತದೆ. ಇದಕ್ಕೂ ಮುನ್ನ ನೀವು ಚುನಾಯಿತ ಪ್ರತಿನಿಧಿಯಾಗಿ ಸದನವನ್ನು ಪ್ರವೇಶಿಸಿದ್ದ ಸಂದರ್ಭದಲ್ಲಿ, ಬಹುತೇಕವಾಗಿ ನಿಮಗೆ ಆಡಳಿತ ಪಕ್ಷದವರಾಗುವ ಸೌಭಾಗ್ಯ ಸಿಗದೆ, ಸತತವಾಗಿ ವಿಪಕ್ಷದ ಸ್ಥಾನದಲ್ಲಿ ಕೂತಿದ್ದಿರಿ ಎನಿಸುತ್ತದೆ. ಹೀಗಾಗಿ, ಆಳುಗರ ಕಡೆಯಿಂದ ಸದನದಲ್ಲಿ ಏನೇ ಪ್ರಸ್ತಾವ ಮಂಡನೆಯಾದರೂ ಅಥವಾ ಚರ್ಚೆಗೆ ಮೊದಲಿಟ್ಟರೂ, ವಿಪಕ್ಷದವರಾಗಿರುವ ಒಂದೇ ಕಾರಣಕ್ಕೆ ಅದನ್ನು ವಿರೋಽಸುವುದು ನಿಮಗೆ ಅಭ್ಯಾಸವಾಗಿಬಿಟ್ಟಿತ್ತು.
ಆಗ ಸಹಜವಾಗೇ ಸದನದಲ್ಲಿ ಗದ್ದಲ ಮತ್ತು ‘ಹೊಯ-ಕೈ’ ಶುರುವಾಗುತ್ತಿದ್ದಂತೆ, ನೀವು ಕೂತಿದ್ದ ಸ್ಥಾನದಿಂದ ಎದ್ದು, ಜೋರಾಗಿ “ಹೋ… ಹೋ…” ಎಂದು ಕೂಗುತ್ತಾ ಬಾಯಿಬಡ್ಕೊಂಡು, ಸದನದ ಸ್ಪೀಕರ್ ಮುಂದಿದ್ದ ಬಾವಿಯ ಬಳಿ ಕುಕ್ಕರಗಾಲಿನಲ್ಲಿ ಧರಣಿಗೆ ಕೂತುಬಿಡುತ್ತಿದ್ರಿ. ಸ್ವಸ್ಥಾನಕ್ಕೆ ಮರಳುವಂತೆ ಪದೇಪದೆ ಸೂಚನೆ ಬಂದರೂ ನೀವು ಕದಲದಿದ್ದಾಗ ಮಾರ್ಷಲ್‌ಗಳು ನಿಮ್ಮನ್ನು ಅನಾಮತ್ತಾಗಿ ಎತ್ತಿಕೊಂಡು ತಂದು ನಿಮ್ಮ ಸೀಟಿಗೆ ಕುಕ್ಕರಿಸುತ್ತಿದ್ದರು ಎಂಬುದು ನನ್ನ ಊಹೆ….
ಪುಂಗಣ್ಣ ಎಂಬ ಪುಢಾರಿ ಬರೆದಿರುವ ‘ಸದನದಲ್ಲಿ ಕದನ ಮಾಡೋದು ಹೇಗೆ?’ ಎಂಬ ರಾಜಕೀಯಶಾಸ್ತ್ರ ಕೃತಿಯ ‘ಸಭಾತ್ಯಾಗ’ ಅಧ್ಯಾಯದ 420ನೇ ಕಾಂಡದಲ್ಲಿ ನಿಮ್ಮ ಈ ವರ್ತನೆಯನ್ನು “ಪುನಃಪುನಃ ಬಾವಿ ಸಮೀಪೇ ಧರಣಿಕಾರಕ ಯೋಗಃ” ಎಂದೇ ಉಲ್ಲೇಖಿಸಲಾಗಿದೆ. ಇದು ವಿಪಕ್ಷದವರಾಗಿ ಇರುವಷ್ಟೂ ಅವಧಿಯಲ್ಲಿ ಸದಸ್ಯರನ್ನು ಅಮರಿಕೊಳ್ಳುವ ಯೋಗ ಅಥವಾ ರೋಗ. ಇದು ನಿಮ್ಮ ವ್ಯಕ್ತಿತ್ವದೊಳಗೆ ಆಳವಾಗಿ ಬೇರುಬಿಟ್ಟಿದೆ. ನಾನು ಮೊದಲೇ ಉಲ್ಲೇಖಿಸಿದಂತೆ, ನೀವು ಕಳೆದ ಕೆಲ ವರ್ಷಗಳಿಂದ ಚುನಾವಣೆಯಲ್ಲಿ ಗೆಲ್ಲಲಾಗದೆ ಮನೆಯ ಝಾಂಡಾ ಊರುವಂತಾಗಿದೆ. ಜನರ‍್ಯಾರೂ ನಿಮ್ಮನ್ನು ಮೂಸುತ್ತಿಲ್ಲ, ಸಭೆ-ಸಮಾರಂಭ-ಚಳವಳಿಗೂ ಕರೆಯುತ್ತಿಲ್ಲ. ಹೀಗಾಗಿ ಪ್ರತಿಭಟನೆಗೆ, ಧರಣಿಗೆ ಕೂರುವ ಅವಕಾಶವೇ ನಿಮಗೆ ಸಿಗುತ್ತಿಲ್ಲ. ಆದರೆ, ಮನೆಯಲ್ಲಿನ ಪೂಜೆ-ಪುನಸ್ಕಾರದ ವೇಳೆ ಮಂತ್ರಘೋಷ, ಭಜನೆಯ ಸದ್ದು ತಾರಕಕ್ಕೆ ಏರುತ್ತಿದ್ದಂತೆ ನಿಮಗೆ ಹಿಂದೆ ಸದನದಲ್ಲಿ ನಡೆಯುತ್ತಿದ್ದ ಕದನ-
ಕೋಲಾಹಲ ನೆನಪಾಗಿ, ‘ಸಭಾತ್ಯಾಗ’ದ ಆವೇಶ ಬಂದು, ದೇವರ ಮಂಟಪದ ಮುಂಭಾಗದಿಂದ ಎದ್ದು, ಬಾಯಿ ಬಡ್ಕೊಂಡು ಹಿತ್ತಲಿಗೆ ಬಂದು, ಬಾವಿಯ ಬಳಿ ಹಾಗೆ ಕುಕ್ಕರಗಾಲಲ್ಲಿ ಕೂರುವ ಅಭ್ಯಾಸ ಬೆಳೆದು ಬಿಟ್ಟಿದೆ…. ಶಾಲಾದಿನಗಳಲ್ಲಿ ‘ಅನುವಂಶೀಯತೆ’ (ಏಛ್ಟಿಜಿbಜಿಠಿqs) ಎಂಬ ಪಾಠವನ್ನು ನೀವು ಓದಿದ್ದರೆ, ‘ಜನ್ಮಜಾತ ಗುಣ’ ಮತ್ತು ‘ರೂಢಿಸಿಕೊಂಡ ಗುಣ’ ಎಂಬೆರಡು ಪರಿಕಲ್ಪನೆಗಳ
ಪ್ರಸ್ತಾವ ನಿಮಗೆ ಕಂಡಿರುತ್ತದೆ. ಅಂತೆಯೇ, ನಿಮಗಿರುವ ಸಮಸ್ಯೆ ನೀವು ‘ರೂಢಿಸಿಕೊಂಡ ಗುಣ’ವೇ ವಿನಾ, ಅದು ವಿಧಿಯ ‘ಕಿತಾಪತಿ’ಯಲ್ಲ. ಹಾಗಾಗಿ ಈ ಕಿತಾಪತಿಗೆ ಅಲೋಪತಿ-ಹೋಮಿಯೋಪತಿ-ನ್ಯಾಚುರೋಪತಿ ವಿಧಾನದಲ್ಲೂ ಔಷಧವಿಲ್ಲ.
ಮತ್ತೊಮ್ಮೆ ಚುನಾವಣೆಯಲ್ಲಿ ಗೆದ್ದು, ಸದನ ಪ್ರವೇಶಿಸಿದರೆ ಮಾತ್ರವೇ ನಿಮ್ಮೀ ಸಮಸ್ಯೆ ತಹಬಂದಿಗೆ ಬಂದೀತು; ಅಲ್ಲಿಯವರೆಗೂ ಬಾಯಿಬಡ್ಕೊಳ್ಳೋದು, ಹಿತ್ತಲ ಬಾವಿಯ ಬಳಿ ಕುಕ್ಕರಗಾಲಲ್ಲಿ ಕೂರೋದು ನಿಮಗೆ ತಪ್ಪಿದ್ದಲ್ಲ…
ಕಪಿನೀಪತಿ, ಮಂಗನಪಾಳ್ಯ
ಪ್ರಶ್ನೆ: ಭಟ್ರೇ ನಮಸ್ಕಾರ. ಯಾರಲ್ಲೂ ತೋಡಿಕೊಳ್ಳಲಾಗದ ಸಮಸ್ಯೆಯನ್ನು ನಿಮ್ಮಲ್ಲಿ ಹೇಳಿಕೊಳ್ಳುತ್ತಿರುವೆ. ಇದನ್ನು ಪರಿಹರಿಸಿದಲ್ಲಿ ನಿಮ್ಮ ಹೆಸರಲ್ಲಿ ಹನುಮಂತನ ಗುಡಿಯಲ್ಲಿ ನೂರು ಈಡುಗಾಯಿ ಒಡೆಯುವೆ. ನಾನು ಒಂದು ಕಚೇರಿಯಲ್ಲಿ ಅಕೌಂಟೆಂಟ್. ನನ್ನ
ಸಮಸ್ಯೆಯೇನು ಗೊತ್ತಾ? ಕಚೇರಿಯ ವ್ಯವಹಾರದ ಅವಧಿಯ, ಊಟ-ತಿಂಡಿ ಮಾಡುವಾಗಲೋ ನಾನು ಸಹೋದ್ಯೋಗಿಗಳಿಗೆ ‘ಬೊಂಬಾಟ್ ಜೋಕ್’ ಹೇಳಿದರೂ ಅವರು ನಗುವುದೇ ಇಲ್ಲ. ಅಲ್ಲಿಯವರೆಗೂ ಹಸನ್ಮುಖಿಗಳಾಗಿದ್ದ ಅವರು, ನನ್ನ ಜೋಕ್ ಕೇಳುತ್ತಿದ್ದಂತೆ ಮುಖವನ್ನು ಹುಳ್ಳಗೆ ಮಾಡಿಕೊಳ್ಳುತ್ತಾರೆ.
ಮತ್ತೊಂದೆಡೆ, ನಾನು ಏನಾದರೂ ಗಂಭೀರ ವಿಷಯವನ್ನೋ, ಗಹನ ಸಮಸ್ಯೆಯನ್ನೋ, ದುಃಖದ ಸಂಗತಿಯನ್ನೋ ಅವರೊಂದಿಗೆ ಚರ್ಚಿಸಿದರೆ, ಹೊಟ್ಟೆ ಹುಣ್ಣಾಗುವಂತೆ ಗಹಗಹಿಸಿ ನಗುತ್ತಾ ನೆಲದ ಮೇಲೆ ಬಿದ್ದು ಹೊರಳಾಡುತ್ತಾರೆ. ಇವರೆ ಇತ್ತ ನನ್ನ ‘ಹಾಸ್ಯ ಪ್ರಜ್ಞೆ’ಯನ್ನೂ ಗುರುತಿಸದೆ, ಅತ್ತ ನನ್ನ ‘ಗಂಭೀರ ಗ್ರಹಿಕೆ’ಯನ್ನೂ ಲೆಕ್ಕಿಸದೆ ಅವಮಾನಿಸುತ್ತಿದ್ದಾರಾ? ನನ್ನ ಪ್ರತಿಭೆ ಕಂಡು ಅವರಿಗೆ ಅಸೂಯೆ, ಐoಛ್ಚ್ಠ್ಟಿಛಿb ಊಛಿಛ್ಝಿಜ್ಞಿಜ ಆಗುತ್ತಿದೆಯಾ? ಎಂಬ ಗೊಂದಲ ನನಗಾಗುತ್ತಿದೆ. ಸುದ್ದಿವಾಹಿನಿಯೊಂದರ ‘ನಿಮ್ಮ ಗ್ರಹಚಾರ’ ಲೈವ್ ಜ್ಯೋತಿಷ ಕಾರ್ಯಕ್ರಮದಲ್ಲಿ ‘ಅಂಡ-ಪಿಂಡ-ಬ್ರಹ್ಮಾಂಡ’ ಗುರುಗಳಲ್ಲೂ ಈ ಸಮಸ್ಯೆ ತೋಡಿಕೊಂಡೆ. ಆದರೆ ಅವರು, “ನಿನ್ ಮುಂಡಾಮೋಚ್ತು” ಎಂದು ಹೇಳಿ ಲೈನ್ ಕಟ್ ಮಾಡಿ ಕೈಬಿಟ್ರು. ನೀವಾದ್ರೂ ಕೈಹಿಡೀರಿ ಭಟ್ರೇ…
ಉತ್ತರ: ಮಂಗನಪಾಳ್ಯದ ಕಪಿನೀಪತಿಯವರೇ, ನಿಮ್ಮ ಸಮಸ್ಯೆ ಕೇಳಿ ನನಗೆ ಕಣ್ಣಲ್ಲಿ ನೀರು ಬಂತು (ಇನ್ನೆಲ್ಲಿಂದ ಬರೋಕ್ಕೆ ಸಾಧ್ಯ?!!). ನಿಮ್ಮ ಪ್ರಶ್ನೆಯನ್ನು ಕೂಲಂಕಷ ಅವಲೋಕಿಸಿದ ನಂತರ ನನಗಾದ ‘ಸತ್ಯದರ್ಶನ’ ಇಲ್ಲಿದೆ ನೋಡಿ: ವಾಸ್ತವವಾಗಿ ನಿಮಗೆ ಹೇಳಿಕೊಳ್ಳುವಂಥ ಸಮಸ್ಯೆಯೇನೂ ಇಲ್ಲ; ಎಡವಟ್ಟು ಆಗಿರೋದು ನಿಮ್ಮ ಸಹೋದ್ಯೋಗಿಗಳಲ್ಲಿ. ಇದು ಹಳೆಯ ಸಮಸ್ಯೆಯಾದರೂ,
ಕಳೆದ ದಶಕದಲ್ಲಿ ಅದರಲ್ಲೂ ‘ಗೋಲ್‌ಮಾಲ್ ರಾಧಾಕೃಷ್ಣ’ ಚಲನಚಿತ್ರ ಬಂದ ನಂತರ ಇದಕ್ಕೆ ‘ಖಛಿಛಿಠಿZZmZಠಿಜಿ ಖqsbಟಞಛಿ’ ಅಂತ ನಾಮಕರಣವಾಗಿದೆ. ‘ಉಮೇಶ್ ಊನತೆ’ ಅಂತಲೂ ಇದನ್ನು ಕರೆಯಲಾಗುತ್ತೆ. ಸರಳವಾಗಿ ಹೇಳೋದಾದ್ರೆ ಇದನ್ನು ‘ಅಪಾರ್ಥರೋಗ’ ಎನ್ನಬಹುದು. ಅಂದರೆ, ನೀವು ಏನೇ ನಗೆಹನಿ ಹೇಳಿದರೂ, ಗೋಳು ತೋಡಿಕೊಂಡರೂ ನಿಖರವಾಗಿ ಅದರ ವಿರುದ್ಧ ದಿಕ್ಕಿನಲ್ಲಿ ಗ್ರಹಿಸುವ ಅಥವಾ ಅಪಾರ್ಥ ಮಾಡಿಕೊಳ್ಳುವ ರೋಗ. ಇದು ನಿಮ್ಮ ಸಹೋದ್ಯೋಗಿಗಳಲ್ಲಿ ಇದ್ದಂತಿದೆ. ಹೀಗಾಗಿ
ನೀವು ಜೋಕ್ ಹೇಳಿದಾಗಲೂ ಮುಖ ಸಿಂಡರಿಸಿಕೊಳ್ಳುವ ಅಥವಾ ನಿಮ್ಮ ಗೋಳು ಹೇಳಿಕೊಂಡಾಗ ಗಹಗಹಿಸಿ ನಗುವ ವರ್ತನೆ ಅವರಿಂದ ಹೊಮ್ಮುತ್ತಿದೆ ಎನಿಸುತ್ತದೆ. ಆದ್ದರಿಂದ ಚಿಕಿತ್ಸೆ ಬೇಕಿರೋದು ನಿಮ್ಮ ಸಹೋದ್ಯೋಗಿಗಳಿಗೆ…. ಅಥವಾ, ಇನ್ನೊಂದು ಸಾಧ್ಯತೆಯೂ ಇದೆ. ಒಂದೊಮ್ಮೆ, ನೀವು ಜೋಕ್ ಹೇಳುವ ರೀತಿಯು ಯಾರದ್ದೇ ‘ಸತ್ತ ಸುದ್ದಿ’ ಹೇಳುವಂತೆಯೂ, ನೀವು ತೋಡಿ ಕೊಂಡ ಗೋಳು ‘ನಗೆಹನಿ’ಯಂತೆಯೂ ಅವರ ಕಿವಿಗೆ ಅಪ್ಪಳಿಸಿ, ನಿಮ್ಮ ನಿರೀಕ್ಷೆಗೆ ‘ವ್ಯತಿರಿಕ್ತವಾಗಿ’ ಅವರು ವರ್ತಿಸುತ್ತಿರಲೂಬಹುದು. ಹಾಗೇನಾದರೂ ಆಗಿದ್ದಲ್ಲಿ ಅದು ನಿಮ್ಮ ಸಮಸ್ಯೆ, ಅದಕ್ಕೊಂದು ಪರಿಹಾರವಿದೆ. ದಯವಿಟ್ಟು ದೃಶ್ಯಮಾಧ್ಯಮಗಳ ಜ್ಯೋತಿಷ ಕಾರ್ಯಕ್ರಮದ, ಚುನಾವಣಾಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳ ವೀಕ್ಷಣೆಯನ್ನು ನಿಲ್ಲಿಸಿ. ಹಾಗೆ ಮಾಡಿದರೆ ನಿಮಗೂ ಕ್ಷೇಮ, ನಿಮ್ಮ ಸಹೋದ್ಯೋಗಿಗಳೂ ಸೇಫ್….
ಇದನ್ನೂ ಓದಿ: Yagati Raghu Nadig column