Kannada School Locked: ಕಾಗವಾಡದಲ್ಲಿ ಮತ್ತೊಂದು ಶಾಲೆಗೆ ಬೀಗ
1972ರಲ್ಲಿ ಪ್ರಾರಂಭವಾದ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಈವರೆಗೂ ಸಾವಿ ರಾರು ವಿದ್ಯಾರ್ಥಿಗಳು ಕಲಿತು ತಮ್ಮ ಬದುಕು ರೂಪಿಸಿಕೊಂಡದ್ದಾರೆ. ಈಗ ಅದೇ ಶಾಲೆ ಈ ಗ್ರಾಮದ ಮಕ್ಕಳಿಗೆ ಬಾಗಿಲು ಬಂದ್ ಮಾಡಿಕೊಂಡಿದೆ. ಈ ಕುರಿತು ಅಧಿಕಾರಿಗಳನ್ನು ಕೇಳಿದರೆ ಗ್ರಾಮದ ಮಕ್ಕಳು ಶಾಲೆಗೆ ಬರುತ್ತಿಲ್ಲ, ಆ ಕಾರಣಕ್ಕೆ ಶಾಲೆಯನ್ನು ತಾತ್ಕಾಲಿಕ ವಾಗಿ ಬಂದ್ ಮಾಡಿರುವು ದಾಗಿ ಹೇಳುತ್ತಾರೆ


ವಿನಾಯಕ ಮಠಪತಿ
ವಿದ್ಯಾರ್ಥಿಗಳ ದಾಖಲಾತಿ ಕುಸಿತ, ಗಡಿಭಾಗದಲ್ಲಿ ಮುಚ್ಚುತ್ತಿರುವ ಕನ್ನಡ ಶಾಲೆ ಗಳು, ಶಿಕ್ಷಣ ಇಲಾಖೆ ಮೌನ
ಬೆಳಗಾವಿ: ಒಂದು ಕಡೆ ಮಹಾರಾಷ್ಟ್ರ ಸರಕಾರದ ದಬ್ಬಾಳಿಕೆ ಮತ್ತೊಂದು ಕಡೆ ರಾಜ್ಯದ ಶಿಕ್ಷಣ ಇಲಾಖೆ ದಿವ್ಯ ನಿರ್ಲಕ್ಷ್ಯ. ಈ ಎರಡರ ಮಧ್ಯೆ ಸಿಲುಕಿ ಗಡಿ ಭಾಗದ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುತ್ತಿದ್ದು, ಶಾಲೆಯ ಆವರಣದಲ್ಲಿ ಜಾನುವಾರುಗಳು ಅಧಿಕೃತವಾಗಿ ಹಾಜರಿ ಪಡೆದು ವಿಶ್ರಾಂತಿ ಪಡೆಯುವ ಶೋಚನೀಯ ಸ್ಥಿತಿ ಬಂದೊದಗಿದೆ. ಮಹಾರಾ ಷ್ಟ್ರಕ್ಕೆ ಹೊಂದಿಕೊಂಡ ಕಾಗವಾಡ ತಾಲೂಕಿನ ಉಪ್ಪಾರವಾಡಿ ಪ್ರಾಥಮಿಕ ಶಾಲೆ ಬಾಗಿಲು ಬಂದ್ ಆಗಿದೆ. ಗ್ರಾಮದ ಕನ್ನಡ ಮಕ್ಕಳ ಪಾಲಿಗೆ ಆಸರೆಯಾಗಿದ್ದ ಶಾಲೆ ಯು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತುತ್ತಾಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಯಾವ ಶಾಲೆ ಯಲ್ಲಿ ಮಕ್ಕಳು ಪಾಠ ಕೇಳಬೇಕಿತ್ತೋ ಅದೇ ಶಾಲೆಯಲ್ಲಿ ದನಕರುಗಳು ವಿಶ್ರಾಂತಿ ಪಡೆ ಯುವ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: Vinayaka Mathapathy Column: ಮಹಾ ಕುಂಭಮೇಳ: ಹೀಗೊಂದು ಫ್ಲ್ಯಾಷ್ ಬ್ಯಾಕ್!
1972ರಲ್ಲಿ ಪ್ರಾರಂಭವಾದ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಈವರೆಗೂ ಸಾವಿ ರಾರು ವಿದ್ಯಾರ್ಥಿಗಳು ಕಲಿತು ತಮ್ಮ ಬದುಕು ರೂಪಿಸಿಕೊಂಡದ್ದಾರೆ. ಈಗ ಅದೇ ಶಾಲೆ ಈ ಗ್ರಾಮದ ಮಕ್ಕಳಿಗೆ ಬಾಗಿಲು ಬಂದ್ ಮಾಡಿಕೊಂಡಿದೆ. ಈ ಕುರಿತು ಅಧಿಕಾರಿಗಳನ್ನು ಕೇಳಿದರೆ ಗ್ರಾಮದ ಮಕ್ಕಳು ಶಾಲೆಗೆ ಬರುತ್ತಿಲ್ಲ, ಆ ಕಾರಣಕ್ಕೆ ಶಾಲೆಯನ್ನು ತಾತ್ಕಾಲಿಕ ವಾಗಿ ಬಂದ್ ಮಾಡಿರುವುದಾಗಿ ಹೇಳುತ್ತಾರೆ.
ಮಹಾರಾಷ್ಟ್ರ ಗಡಿಗೆ ಹೊಂದಿ ಕೊಂಡಿರುವ ಅಥಣಿ, ನಿಪ್ಪಾಣಿ, ಕಾಗವಾಡ, ಚಿಕ್ಕೋಡಿ ಸೇರಿದಂತೆ ವಿವಿಧ ಜಿಲ್ಲೆಗಳ ಕನ್ನಡ ಶಾಲೆಗಳ ಪರಿಸ್ಥಿತಿ ಅಯೋಮಯವಾಗಿದೆ. ಗಡಿ ಭಾಗದ ಕನ್ನಡ ಶಾಲೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ ಎಂದು ಸರಕಾರ ಹೇಳುತ್ತಲೇ ಇದೆ. ಆದರೆ ಇತ್ತ ಅಧಿಕಾರಿಗಳು ಮಾತ್ರ ಮಕ್ಕಳ ಹಾಜರಾತಿ ಕಡಿಮೆ ಇದೆ ಎಂಬ ಕಾರಣ ನೀಡಿ ಶಾಲೆಗಳನ್ನು ಮುಚ್ಚುತ್ತಲೇ ಇದ್ದಾರೆ.
*
ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಉಪ್ಪಾರವಾಡಿ ಸರಕಾರಿ ಶಾಲೆಯಲ್ಲಿ ಮಕ್ಕಳ ಹಾಜರಾತಿ ಕಡಿಮೆಯಾಗಿದೆ. ಕೇವಲ ಇಬ್ಬರು ವಿದ್ಯಾರ್ಥಿಗಳು ಇದ್ದ ಕಾರಣಕ್ಕೆ ತಾತ್ಕಾಲಿಕವಾಗಿ ಶಾಲೆ ಬಂದ್ ಮಾಡಲಾಗಿದ್ದು, ಮಕ್ಕಳಿಗೆ ಬದಲಿ ವ್ಯವಸ್ಥೆ ಮಾಡಿದ್ದೇವೆ. ಮುಂಬರುವ ದಿನ ಗಳಲ್ಲಿ ಪೋಷಕರ ಮನವೊಲಿಸಿ ಮಕ್ಕಳ ಹಾಜರಾತಿ ಹೆಚ್ಚಿಸುವ ಮೂಲಕ ಶಾಲೆ ಪ್ರಾರಂ ಭಿಸುತ್ತೇವೆ.
- ಎಂ.ಆರ್.ಮುಂಜೆ ಕ್ಷೇತ್ರ ಶಿಕ್ಷಣಾಧಿಕಾರಿ, ಕಾಗವಾಡ
ಗಡಿಭಾಗದ ಕನ್ನಡ ಶಾಲೆಗಳನ್ನು ಮುಚ್ಚುವ ಮೂಲಕ ಗ್ರಾಮೀಣ ಭಾಗದ ಮಕ್ಕಳ ಭವಿಷ್ಯವನ್ನು ಹಾಳು ಮಾಡಲಾಗುತ್ತಿದೆ. ಶಾಲೆಯಲ್ಲಿ ದನ, ಕರುಗಳನ್ನು ಕಟ್ಟಿದ್ದು ಅಧಿ ಕಾರಿಗಳ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ. ಕೂಡಲೇ ಸರಕಾರಿ ಶಾಲೆಯನ್ನು ಪ್ರಾರಂಭಿಸಿ ಮಕ್ಕಳ ನೆರವಿಗೆ ಬರಬೇಕು ಎಂಬುದು ನನ್ನ ಮನವಿ.
ಶಿವಾನಂದ ಸೌದಾಗರ ಸ್ಥಳೀಯ ನಿವಾಸಿ