BJP in Karnataka: ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ಸದ್ಯಕ್ಕೆ ಅಸಾಧ್ಯ
ಪಂಚಮಸಾಲಿ ಲಿಂಗಾಯತ ಸಮಾಜದ (ಉತ್ತರ ಕರ್ನಾಟಕ ಭಾಗದ) ನಾಯಕರಾಗಿ ಬಸನಗೌಡ ಪಾಟೀ ಲ್ ಯತ್ನಾಳ್ ಕತ್ತಿ ಝಳಪಿಸುತ್ತಿದ್ದರೆ, ಇತರ ದಕ್ಷಿಣ ಭಾಗದ ಲಿಂಗಾಯತ ಸಮುದಾಯ ನಾಯಕರಾಗಿ ಬಿ.ವೈ.ವಿಜಯೇಂದ್ರ ಗುರಾಣಿ ಹಿಡಿದು ಹೋರಾಡುತ್ತಿರುವಂತೆ ಭಾಸ ವಾಗುತ್ತಿದೆ ಎನ್ನುತ್ತಾರೆ ಬಿಜೆಪಿ ಕಾರ್ಯಕರ್ತರು

ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್

ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಗದ್ದುಗೆ ಗುದ್ದಾಟದ ಯತ್ನಾಳ್ ಯತ್ನ ನಿಲ್ಲದು, ಉಚ್ಛಾಟನೆ ಕೂಡ ಆಗದು
ಲಿಂಗಾಯತ ಮುದಾಯದಲ್ಲೇ ರಾಜಕೀಯ, ಪ್ರಾಬಲ್ಯ ಸ್ಥಾಪನೆಗೆ ಹೋರಾಟ
ರಾಜ್ಯ ರಾಜಕಾರಣದಲ್ಲಿ ಈಗ ಅಧ್ಯಕ್ಷ ಗಾದಿಗೆ ಗುದ್ದಾಟ ದಿನದಿನಕ್ಕೂ ವಿಪರೀತಕ್ಕೆ ಹೋಗುತ್ತಿದ್ದು, ಆಡಳಿತರೂಢ ಕಾಂಗ್ರೆಸ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಆಕಾಂಕ್ಷಿಗಳು ದೆಹಲಿಗೆ ದಂಡಯಾತ್ರೆ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದರೆ, ಬಿಜೆಪಿಯಲ್ಲಿ ಗದ್ದುಗೆ ಗುzಟ ಬೀದಿ ರಂಪಾಟವಾಗಿ ಹೋಗಿದೆ. ಅಚ್ಚರಿ ಎಂದರೆ, ಬಿಜೆಪಿ ಆಂತಕ ಕಲಹ ಈಗ ಬರೀ ಬಣ ಬಡಿದಾಟಕ್ಕೆ ಸೀಮಿತವಾಗಿಲ್ಲ. ಬದಲಾಗಿ ಇದು ಒಳಜಾತಿಗಳ ಹೋರಾಟದ ಕಡೆ ತಿರುಗಿದೆ. ಅದರಲ್ಲೂ ಲಿಂಗಾಯತರ ಬಹು ಸಂಖ್ಯಾತರೆನ್ನ ಲಾದ ಪಂಚಮಸಾಲಿ ಮತ್ತು ಇತರ ಲಿಂಗಾಯತ ಸಮುದಾಯಗಳ ನಡುವಿನ ರಾಜಕೀಯ ಹಾಗೂ ಪ್ರಾಬಲ್ಯ ಸ್ಥಾಪನೆ ಹೋರಾಟವಾಗಿ ಪರಿಣಮಿಸಿದೆ.
ಹೀಗಾಗಿ ಪಂಚಮಸಾಲಿ ಲಿಂಗಾಯತ ಸಮಾಜದ (ಉತ್ತರ ಕರ್ನಾಟಕ ಭಾಗದ) ನಾಯಕರಾಗಿ ಬಸನಗೌಡ ಪಾಟೀಲ್ ಯತ್ನಾಳ್ ಕತ್ತಿ ಝಳಪಿಸುತ್ತಿದ್ದರೆ, ಇತರ ದಕ್ಷಿಣ ಭಾಗದ ಲಿಂಗಾಯತ ಸಮುದಾಯ ನಾಯಕರಾಗಿ ಬಿ.ವೈ.ವಿಜಯೇಂದ್ರ ಗುರಾಣಿ ಹಿಡಿದು ಹೋರಾಡುತ್ತಿರುವಂತೆ ಭಾಸ ವಾಗುತ್ತಿದೆ ಎನ್ನುತ್ತಾರೆ ಬಿಜೆಪಿ ಕಾರ್ಯಕರ್ತರು.
ಇದನ್ನೂ ಓದಿ: Hari Paraak Column: ಟೈರ್ಡ್ ಆಗಿಲ್ಲ, ರಿಟೈರ್ ಹೆಂಗೆ ಆಗ್ಲಿ ?
ಆದರೆ ಇವೆರಡೂ ಸಮಾಜಗಳ ನಡುವಿನ ಹೋರಾಟ ಪಕ್ಷದ ಇರುವವ ಪ್ರಭಾವಿ ನಾಯಕರಿಗೆ ‘ಸಂತೋಷ’ ತರುವಂತಾಗಿದ್ದು, ಈ ಕಾರಣದಿಂದಲೇ ಬಿಜೆಪಿ ಬೀದಿರಂಪಾಟ ನಿರೀಕ್ಷೆಯಂತೆ ನಿಲ್ಲುತ್ತಿಲ್ಲ. ಸುಲಭವಾಗಿ ನಿಲ್ಲುವುದೂ ಇಲ್ಲ. ಹೀಗಾಗಿ ಸದ್ಯ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರ ಅವರನ್ನು ಪಕ್ಷದ ಹೈಕಮಾಂಡ್ ಯಾವುದೇ ಕಾರಣಕ್ಕೂ ಬದಲಾಯಿಸುವುದೂ ಇಲ್ಲ.
ಹಾಗಂತ ಸದಾ ವಿಜಯೇಂದ್ರ ವಿರುದ್ಧ ಬೆಂಕಿ ಉಗುಳುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಉಚ್ಚಾಟನೆಯಾಗಲಿ, ಅಮಾನತಾಗಲಿ ಮಾಡುವುದೂ ಇಲ್ಲ ಎಂದು ಬಿಜೆಪಿ ಉನ್ನತ ಮೂಲಗಳು ತಿಳಿಸಿವೆ. ಹಾಗಾದರೆ ಬಿಜೆಪಿ ಬಣದ ಬೆಂಕಿ ಸದ್ಯಕ್ಕೆ ಶಮನವಾಗುವುದಿಲ್ಲವೇ ಎನ್ನುವ ಪ್ರಶ್ನೆಗೆ ಪಕ್ಷದ ನಾಯಕರು ಇಲ್ಲ ಎಂದೇ ಹೇಳುತ್ತಿದ್ದಾರೆ.
ಒಂದೊಮ್ಮೆ ವಿಜಯೇಂದ್ರ ಬದಲಾವಣೆ ಮಾಡಿದರೆ, ಆ ಸ್ಥಾನಕ್ಕೆ ಎಲ್ಲ ಸಮುದಾಯಗಳಿಂದಲೂ ಸಾಕಷ್ಟು ಆಕಾಂಕ್ಷಿಗಳು ಈಗಾಗಲೇ ಟವೆಲ್ ಹಾಕಿ ಕುಳಿತಿದ್ದಾರೆ. ಆದರೆ, ಪಕ್ಷದ ಹಿಡಿದಲ್ಲಿರುವ ವೀರಶೈವ ಲಿಂಗಾಯತ ಸಮುದಾಯವನ್ನು ಉಳಿಸಿಕೊಳ್ಳುವ ನಾಯಕರು ಸದ್ಯಕ್ಕೆ ಪಕ್ಷದ ಹೈ ಕಮಾಂಡ್ ಗೆ ಸಿಕ್ಕಿದಂತೆ ಕಾಣುತ್ತಿಲ್ಲ.
ಇನ್ನು ರಾಜ್ಯಾಧ್ಯಕ್ಷರನ್ನೇ ದಿಕ್ಕರಿಸಿ ಟೀಕಿಸುತ್ತಿರುವ ಹಾಗೂ ನೋಟೀಸ್ ಗಳಿಗೂ ಕೇರ್ ಮಾಡದೆ ಮಾತನಾಡುತ್ತಿರುವ ಬಸನಗೌಡ ಪಾಟೀಲ್ ಅವರನ್ನು ಅಷ್ಟು ಸುಲಭವಾಗಿ ಉಚ್ಛಾಟನೆ ಮಾಡುವು ದಕ್ಕೂ ಸಾಧ್ಯವಿಲ್ಲ. ಕಾರಣ ಇವರ ಹಿಂದೆ ಲಿಂಗಾಯತರ ಪ್ರಬಲ ಎನಿಸಿರುವ ಪಂಚಮಸಾಲಿ ಸಮಾಜವಿರುವುದನ್ನು ತಳ್ಳಿ ಹಾಕಲಾಗದು. ಒಂದೊಮ್ಮೆ ಯತ್ನಾಳ್ ಅವರನ್ನು ಉಚ್ಛಾಟಿಸಿದರೆ, ಉತ್ತರ ಭಾಗದ ಲಿಂಗಾಯತ ಸಮಾಜ ಮುಂದಿನ ಚುನಾವಣೆಯಲ್ಲಿ ಬಿಜೆಪಿ ನಿಲ್ಲುತ್ತದೆ ಎನ್ನುವು ದನ್ನು ಸ್ಪಷ್ಟವಾಗಿ ಹೇಳಲಾಗದು.
ಹೀಗಾಗಿ ವಿಜಯೇಂದ್ರ ಹಾಗೂ ಅವರ ಬಣ ಯತ್ನಾಳ್ ಉಚ್ಛಾಟನೆ ಬೇಡ, ಬರೀ ನೋಟಿಸ್ ಮೂಲಕ ಎಚ್ಚರಿಸಿ ಎಂದಷ್ಟೇ ಹೈಕಮಾಂಡ್ ಮುಂದೆ ಕೋರಿಕೆ ಸಲ್ಲಿಸಿ ಬಂದಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಯತ್ನಾಳ್ ಅವರ ಬೆಂಬಲಕ್ಕೆ ಹಾಗೂ ಯತ್ನಾಳ್ ಬಣದ ಹೋರಾಟದ ಬಗ್ಗೆ ಬಿ.ಎಲ.ಸಂತೋಷ್ ಅವರಿದ್ದಾರೆ ಎಂದು ಯತ್ನಾಳ್ ಆಪ್ತರೇ ಹೇಳಿದ್ದಾರೆ.
ಹೀಗಾಗಿ ಬಿಜೆಪಿ ಹೈಕಮಾಂಡ್ ಈಗ ವಿಜಯೇಂದ್ರ ಅವರನ್ನು ಬದಲಿಸುವಂತೆಯೂ ಇಲ್ಲ. ಯತ್ನಾಳ್ ಅವರನ್ನು ಬಿಡುವಂತೆಯೂ ಇಲ್ಲದ ಧರ್ಮಸಂಕಟದಲ್ಲಿದೆ. ಇದೇ ಸ್ಥಿತಿ ಏಪ್ರಿಲ್‌ವರೆಗೂ ಮುಂದುವರಿಯುವ ಎಲ್ಲ ಸಾಧ್ಯತೆ ಇದೆ ಎಂದು ಪಕ್ಷದ ಹಿರಿಯ ನಾಯಕರು ಹೇಳಿದ್ದಾರೆ.
ಬಿಜೆಪಿ ಹೈಕಮಾಂಡ್ ದುರ್ಬಲವೇ?
ಪಕ್ಷದ ಹೈಕಮಾಂಡ್ ಸದ್ಯ ಮಣಿಪುರ ರಾಜ್ಯದ ಬೆಳವಣಿಗೆ ಬಗ್ಗೆ ಹೆಚ್ಚು ಗಮನಹರಿಸಿದೆ. ಜತೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ಬಾಕಿಯಿದ್ದು, ಮಾರ್ಚ್ ಅಂತ್ಯಕ್ಕೆ ನಡೆಯುವ ಸಾಧ್ಯತೆ ಇದೆ. ಇದರ ರೇಸ್ ನಲ್ಲಿ ಸದ್ಯ ಬಿಜೆಪಿ ಹಿರಿಯ ನಾಯಕರಾದ ಅನುರಾಗ್ ಸಿಂಗ್ ಠಾಕೂರ್, ವಿನೋದ್ ತಾವಡೆ, ಭೂಪೇಂದ್ರ ಯಾದವ್ ಸೇರಿದಂತೆ ಅನೇಕರಿದ್ದು, ಇವರ ಪೈಕಿ ಅನುರಾಗ್ ಸಿಂಗ್ ಠಾಕೂರ್ ಅಧ್ಯಕ್ಷರಾಗುವ ಸಾಧ್ಯತೆಯಿದ್ದು, ಇದಾದ ನಂತರ ಹೈಕಮಾಂಡ್ ರಾಜ್ಯದ ವಿಚಾರ ವನ್ನು ಕೈಗೆತ್ತಿಕೊಳ್ಳಲಿದೆ. ಹೀಗಾಗಿಯೇ ರಾಜ್ಯಕ್ಕೆ ಭೇಟಿ ನೀಡಬೇಕಿದ್ದ ಬಿಜೆಪಿ ರಾಷ್ಟ್ರೀಯ ಆಂತರಿಕ ಚುನಾವಣಾ ಉಸ್ತುವಾರಿ ಶಿವರಾಜ್ ಸಿಂಗ್ ಚೌಹಾಣ್ ಕಾರ್ಯ ಮುಂದೂಡಲಾಗಿದೆ.
ಚೌಹಾಣ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯದ ವಿಚಾರ ಚರ್ಚಿಸಿದ ನಂತರ ರಾಜ್ಯ ಪ್ರವಾಸ ಕೈಗೊಂಡು, ಸಲಹೆ, ಸೂಚನೆಗಳನ್ನು ನೀಡಲಿzರೆ. ಆನಂತರ ಹೈಕಮಾಂಡ್ ನಾಯಕರ ಜತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿ ರಾಜ್ಯದಲ್ಲಿ ಅಧ್ಯಕ್ಷರ ಚುನಾವಣೆಗೂ ಚಾಲನೆ ನೀಡಲಿದ್ದಾರೆ. ಆ ಮೂಲಕ ಬಣ ಬಡಿದಾಟಕ್ಕೆ ಅಂತ್ಯ ಹಾಡಲಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಏನೆಲ್ಲಾ ಆಗುತ್ತದೆ?
ಏಪ್ರಿಲ್ ವೇಳೆ ಬಿಜೆಪಿಯಲ್ಲಿ ಭಾರೀ ಬದಲಾವಣೆಗಳು ನಡೆಯಲಿದ್ದು, ಬಹುತೇಕ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರನ್ನೇ ಮುಂದುವರಿಸುವ ಸಾಧ್ಯತೆ ಇದೆ. ಆದರೆ ಮರು ಆಯ್ಕೆ ವೇಳೆ ಹಲವು ಕಡಿವಾಣಗಳನ್ನು ಹಾಕುವ ಮೂಲಕ ವಿಜಯೇಂದ್ರ ವೇಗಕ್ಕೆ ಬ್ರೇಕ್ ಹಾಕುವ ಸಾಧ್ಯತೆ ಇದೆ. ಹಾಗೆಯೇ ಯತ್ನಾಳ್ ಅವರಿಗೆ ಬಿಜೆಪಿ ಕೇಂದ್ರ ಸಮಿತಿಯಲ್ಲಿ ಸೂಕ್ತ ಸ್ಥಾನ ನೀಡಿ ರಾಜ್ಯ ರಾಜ ಕಾರಣದಿಂದ ಕೂಂಚ ದೂರ ಸರಿಯುವಂತೆ ಮಾಡಲಾಗುತ್ತದೆ. ಜತೆಗೆ ಅವರ ಬಣದಲ್ಲಿರುವ ರಮೇಶ್ ಜಾರಕಿಹೊಳಿ, ಕುಮಾರ ಬಂಗಾರಪ್ಪ, ಸುಧಾಕರ್, ಅರವಿಂದ್ ಬೆಲ್ಲದ್ ಅವರಿಗೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಯಲ್ಲಿ ಅವಕಾಶ ನೀಡಿ ವಿಜಯೇಂದ್ರ ಅವರ ಏಕಪಕ್ಷೀಯ ನಿರ್ಧಾರ ಗಳನ್ನು ನಿಯಂತ್ರಿ ಸುವ ಸಂಭವ ಹೆಚ್ಚಿದೆ ಎಂದು ಪಕ್ಷದ ನಾಯಕರು ಹೇಳಿದ್ದಾರೆ