ಸಾರ್ವಜನಿಕರು ಸಹಕರಿಸದಿದ್ದರೆ ಲಾಕ್ಡೌನ್ ಅನಿವಾರ್ಯವಾಗಬಹುದು
ಲಾಕ್ಡೌನ್ ಬೇಡ ಎಂದಾದರೆ ನಿರ್ಬಂಧಗಳನ್ನು ಕಟ್ಟು ನಿಟ್ಟು ಪಾಲಿಸಬೇಕು
ಲಸಿಕೆ ಹಾಕಿಕೊಂಡಿದ್ದೇನೆ, ಸೋಂಕು ಬರುವುದಿಲ್ಲ ಎಂಬ ಬೇಜವಾಬ್ದಾರಿ ಬಿಡಬೇಕು ನಮ್ಮ ಜನರು
ವಿಶೇಷ ವರದಿ: ಬಾಲಕೃಷ್ಣ. ಎನ್. ಬೆಂಗಳೂರು
ಹೋದೆಯಾ ಪಿಶಾಚಿ ಎಂದರೆ, ಬಂದೆ ಗವಾಕ್ಷೀಲಿ ಎಂಬಂತೆ ಕರೋನಾ ಮೂರನೇ ಅಲೆ ಕಾಣಿಸಿಕೊಂಡಿದೆ. ಹಿಂದೆಂದಿಗಿಂತಲೂ ವೇಗವಾಗಿ ದೇಶಾದ್ಯಂತ ಹರಡುತ್ತಿದೆ. ಇದಕ್ಕೆ ನಮ್ಮ ರಾಜ್ಯವೂ ಹೊರತಲ್ಲ. ಕರೋನಾ, ರೂಪಾಂತರಿ ಡೆಲ್ಟಾ ನಂತರ ಇದೀಗ ಮತ್ತೊಂದು ರೂಪಾಂತರಿ ಒಮೈಕ್ರಾನ್
ಹರಡುತ್ತಿದ್ದು, ಸೋಂಕು ನಿಯಂತ್ರಣಕ್ಕೆ ಸರಕಾರ ಸೆಮಿ ಲಕ್ಡೌನ್ ಜಾರಿಗೊಳಿಸಿದೆ.
ಇದರ ಮಧ್ಯೆಯೂ ಒಮೈಕ್ರಾನ್ ಫೆಬ್ರವರಿ ವೇಳೆಗೆ ಅತ್ಯಂತ ವ್ಯಾಪಕವಾಗುವ ಸಾಧ್ಯತೆ ಇದೆ. ಹೊಸ ರೂಪಾಂ ತರಿಯ ಸ್ಥಿತಿಗತಿಗಳೇನು? ನಾವು ಏನು ಮಾಡಬೇಕು? ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು ಎಂಬುದನ್ನು ರಾಜ್ಯದ ಕರೋನಾ ತಾಂತ್ರಿಕ ಸಲಹಾ ಸಮಿತಿ ಸದಸ್ಯರೂ ಆಗಿರುವ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅವರು ವಿವರಿಸಿದ್ದಾರೆ.
ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಪೈಕಿ ಶೇ.೩೦ ಮಂದಿಯಲ್ಲಿ ಒಮೈಕ್ರಾನ್ ಇದೆ ಎಂದು ಅಂದಾಜಿಸ ಲಾಗಿದೆ. ಫೆಬ್ರವರಿ ೨ನೇ ವಾರದೊಳಗೆ ಇದು ಶೇ.೭೦ ರಿಂದ ೮೦ಕ್ಕೆ ಏರಬಹುದು. ಈ ವೈರಸ್ ೯೦ ದಿನಗಳವರೆಗೂ ಇರುತ್ತದೆ. ನಂತರ ಕಡಿಮೆಯಾಗುತ್ತದೆ. ವೈಜ್ಞಾನಿಕವಾಗಿ ಇಡೀ ಮನುಕುಲವನ್ನೆ ಕಾಡುತ್ತಿರುವ ಕರೋನಾ ರೂಪಾಂತರಿ ತಳಿಗಳು ಇನ್ನೂ ಜೀವಂತ ವಾಗಿದೆ. ಪ್ರತಿ ಆರು ತಿಂಗಳಿಗೊಮ್ಮೆ ಕರೋನಾ ರೂಪಾಂತರ ಗೊಳ್ಳುತ್ತದೆ. ಜನರು ಸಹಕಾರ ನೀಡಿದರೆ ಫೆಬ್ರವರಿ ಅಂತ್ಯದೊಳಗೆ ಒಮೈಕ್ರಾನ್ ಹಾಗೂ ಕರೋನಾ ಮೂರನೆ ಅಲೆ ಕಡಿಮೆಯಾಗಬಹುದು.
ಕರೋನಾ ಮೊದಲೆರೆಡು ಅಲೆಯಲ್ಲಿ ಇಡೀ ದೇಶದ ಚಿತ್ರಣವೇ ಡೋಲಾಯಮಾನವಾಗಿದೆ. ರಾಜ್ಯದಲ್ಲಿ ಕರೋನಾ ಅಂತ್ಯ ಕಾಣಬೇಕಾದರೆ ಸರಕಾರ ಸೂಚಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ನಿರ್ಲಕ್ಷ್ಯ ವಹಿಸಿದರೆ ಕರೋನಾ ಸೋಂಕಿನ ಅಂತ್ಯ ಕಾಣಲು ಸಾಧ್ಯವಿಲ್ಲ. ಮುಂದಿನ ಎರಡು-ಮೂರು ವಾರ ಎಚ್ಚರಿಕೆ ವಹಿಸದಿದ್ದರೆ ಕರೋನಾ ಹಾಗೂ ಒಮೈಕ್ರಾನ್ ಪ್ರಕರಣಗಳು ತಾರಕ್ಕೇರಲಿವೆ.
ಮೂರನೇ ಅಲೆ ವೇಗವಾಗಿ ಹರಡುವುದರಿಂದ ರೋಗ ಲಕ್ಷಣಗಳು ಕಾಣಿಸಿಕೊಂಡರೆ ಜನರು ಸ್ವಯಂ ಪ್ರೇರಿತವಾಗಿ ಕರೋನಾ ಪರೀಕ್ಷೆಗೆ ಒಳಗಾಗಬೇಕು.
ಇದರಿಂದ ಸೋಂಕು ಹರಡುವ ಪ್ರಮಾಣ ಕಡಿಮೆ ಮಾಡಬಹುದು. ಪಾಸೀಟಿವ್ ಬಂದಲ್ಲಿ ಹೋಮ್ ಕ್ವಾರಂಟೈನ್ ಆಗಬೇಕು. ಕ್ವಾರಂಟೈನ್ ನಿಯಮ ಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ಕರೋನಾ ಲಸಿಕೆ ಪಡೆದುಕೊಂಡರೆ ಕರೋನಾ ಬರುವುದಿಲ್ಲ ಎಂಬ ತಪ್ಪು ಗ್ರಹಿಕೆಯಿಂದಾಗಿಯೇ ಜನರು ಕರೋನಾ ನಿಯಮಗಳನ್ನು ಕಟ್ಟುನಿಟ್ಟಾಗಿ
ಪಾಲಿಸುತ್ತಿಲ್ಲ. ಈ ಮನಸ್ಥಿತಿ ಬದಲಾಗಬೇಕು. ಲಸಿಕೆ ಹಾಕಿಸಿಕೊಂಡರೆ ಕರೋನಾ ಬರುವುದಿಲ್ಲ ಎಂದು ಭಾವಿಸಬಾರದು. ಲಸಿಕೆ ಇರುವುದು ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಮತ್ತೆ ಸೋಂಕು ಕಾಣಿಸಿಕೊಂಡರೆ ಅದರ ತೀವ್ರತೆ ಕಡಿಮೆ ಮಾಡುವ ಉದ್ದೇಶಕ್ಕಾಗಿ ಮತ್ತು ಜನರು ತೀವ್ರರೀತಿಯ ಸಮಸ್ಯೆಗೆ ಒಳಗಾಗಿ ಐಸಿಯುಗೆ ದಾಖಲಾಗುವ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ. ಇದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು.
ಸೋಂಕಿನ ಪಾಸಿಟಿವಿಟಿ ದರದ ಆಧಾರದ ಮೇಲೆ ಲಾಕ್ಡೌನ್ ಹಾಗೂ ಕಟ್ಟುನಿಟ್ಟಿನ ಕ್ರಮಗಳು ತೆಗೆದುಕೊಳ್ಳುವುದು ಅಗತ್ಯ. ಸೋಂಕು ಇಳಿಮುಖ ವಾದಾಗ ಕ್ರಮಗಳನ್ನು ಸಡಿಲಗೊಳಿಸುವುದು ಅನಿವಾರ್ಯವಾಗುತ್ತದೆ. ೩೬೫ ದಿನವೂ ನಿರ್ಬಂಧ ಹೇರಲು ಸಾಧ್ಯವಿಲ್ಲ. ಏಕೆಂದರೆ ಜನರು ತಮ್ಮ ಚಟುವಟಿಕೆಗಳಲ್ಲಿ ತೊಡಗಬೇಕು. ಜೀವ ಮತ್ತು ಜೀವನ ಸಮತೋಲನದಲ್ಲಿ ಹೋಗಬೇಕಾಗುತ್ತದೆ. ಸದ್ಯಕ್ಕೆ ಕರೋನಾ ಮೂರನೇ ಅಲೆ ಹಾಗೂ ಒಮೈಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಕಠಿಣ ನಿರ್ಭಂದಗಳನ್ನು ಶೀಘ್ರದಲ್ಲೆ ಹಾಕಲಾಗಿದೆ. ಇದರಿಂದ ಸೋಂಕು ಹರಡುವುದನ್ನು ತಡೆಯಲು ಸಾಧ್ಯವಾಗುತ್ತದೆ.
ಆಸ್ಪತ್ರೆಗೆ ದಾಖಲಾಗುವ ಅನಿವಾರ್ಯ ಎದುರಾದಾಗ ಉಸಿರುಕಟ್ಟಿದಂತಾಗುತ್ತದೆ. ಜನರು, ವಾರಿಯರ್ಸ್ಗಳ ಕಷ್ಟ ಅರ್ಥ ಮಾಡಿಕೊಳ್ಳಬೇಕು.
ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಆಗ ಮಾತ್ರ ಆಸ್ಪತ್ರೆಗೆ ದಾಖಲಾಗುವುದನ್ನು ತಪ್ಪಿಸಬಹುದು.
ಜನರ ಸಹಕಾರವಿಲ್ಲದಿದ್ದರೆ ಅಸಾಧ್ಯ
ಕರೋನಾ ನಿಯಂತ್ರಿಸಬೇಕಾದರೆ, ಲಾಕ್ಡೌನ್ ಮಾಡದೇ ಇರಬೇಕಾದರೆ ಜನರ ಸಹಕಾರ ಅಗತ್ಯ. ಅದು ಸಿಗದೇ ಇದ್ದರೆ ಯಾವ ವೈರಸ್ಸನ್ನೂ ತಡೆಗಟ್ಟಲು ಸಾಧ್ಯವಿಲ್ಲ ಎನ್ನುವುದನ್ನು ಎಲ್ಲರೂ ಅರಿತುಕೊಳ್ಳಬೇಕು. ಕರೋನಾ ಎನ್ನುವುದು ಗುಪ್ತಗಾಮಿನಿ, ಏರಿದರೆ ಏರುತ್ತಲೇ ಇರುತ್ತದೆ. ಮಕ್ಕಳಿಗೆ ಈಗಾಗಲೇ ಲಸಿಕೆ ನೀಡಲಾಗುತ್ತಿದೆ. ಮಕ್ಕಳ ಮೇಲೆ ಮೂರನೇ ಅಲೆ ಹಾಗೂ ಕರೋನಾ ರೂಪಾಂತರ ತಳಿ ಒಮೈಕ್ರಾನ್ ಪ್ರಭಾವ ಕಡಿಮೆ ಬೀರಲಿದೆ. ಆದರೆ, ಪೋಷಕರು ಎಚ್ಚರಿಕೆಯಿಂದ ಇರುವುದು ಸೂಕ್ತ. ಟೆಸ್ಟಿಂಗ್ ಮುಂದುವರಿಯಬೇಕು,
ಮಾಸ್ಕ್ ಕಡ್ಡಾಯವಾಗಬೇಕು
ಸೋಂಕು ಹೆಚ್ಚಾಗುತ್ತಿದೆ, ಮಾಸ್ಕ್ ಹಾಕಿಕೊಳ್ಳಬೇಕು. ಸೋಂಕು ಕಡಿಮೆಯಾಗಿದೆ, ಮಾಸ್ಕ್ ಬೇಡ ಎಂಬ ಮನೋಭಾವ ಬೇಡ. ಕರೋನಾ ಸಂಪೂರ್ಣ ನಿರ್ಮೂಲನೆಯಾಗುವವರೆಗೆ ಪ್ರತಿನಿತ್ಯ ಮನೆಯಿಂದ ಹೊರಬಂದಾಗ ಮಾಸ್ಕ್ ಧರಿಸುವುದು ನಮ್ಮ ದಿನಚರಿಯಾಗಬೇಕು. ಸಾಮಾಜಿಕ ಅಂತರ ಪಾಲಿಸ ಬೇಕು. ಸಮಾವೇಶ, ಊರ ಜಾತ್ರೆ, ಹಬ್ಬಗಳನ್ನು ನಿರ್ಬಂಽಸುವುದರ ಜತೆಗೆ ಅವುಗಳಲ್ಲಿ ಭಾಗವಹಿಸುವುದಿಲ್ಲ ಎಂದು ನಾವೇ ನಿರ್ಧರಿಸಬೇಕು.
ಒಂದು ತಿಂಗಳು ಎಚ್ಚರಿಕೆಯಿಂದಿರಿ
ಇದೀಗ ಕಾಣಿಸಿಕೊಂಡಿರುವ ಕರೋನಾ ಮೂರನೇ ಅಲೆಯ ತೀವ್ರತೆ ಕಮ್ಮಿ ಇರುತ್ತದೆ. ಇದಕ್ಕೆ ವೈರಸ್ ತಳಿ ತನ್ನ ತೀವ್ರತೆ ಕಳೆದುಕೊಂಡಿರುವುದು ಕಾರಣ. ಐಸಿಯುಗೆ ಸೇರುವವರ ಪ್ರಮಾಣ ಕಡಿಮೆ ಇರುತ್ತದೆ. ಸಾವಿನ ಪ್ರಮಾಣವೂ ಇಳಿಮುಖವಾಗುತ್ತದೆ. ಹಾಗೆಂದು ಲಸಿಕೆ ಪಡೆದಿದ್ದೇವೆ, ಸೋಂಕು ತಗುಲಿಸದೆ ಏನೂ ಆಗುವುದಿಲ್ಲ ಎಂಬ ನಿರ್ಲಕ್ಷ್ಯ ಬಿಡಬೇಕು. ಮುಂದಿನ ಒಂದು ತಿಂಗಳು ಎಚ್ಚರಿಕೆಯಿಂದ ಇರುವುದು ಸೂಕ್ತ. ಕರೋನಾ ಲಸಿಕೆ ಪಡೆದವರಿಗೂ ಸೋಂಕು ಹರಡುವ ಸಾಧ್ಯತೆ ಇದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೆ ಪಾಲಿಸಬೇಕು.
ಲಾಕ್ಡೌನ್ ಬಿಟ್ಟರೆ ಬೇರೆ ದಾರಿ ಇಲ್ಲ
ಕರೋನಾ ರಾತ್ರಿಗಿಂತ ಹಗಲಿನ ವೇಳೆಯೇ ಹೆಚ್ಚಾಗಿ ಹರಡುತ್ತದೆ. ಹೀಗಾಗಿ ಜನ ಸ್ವಯಂ ನಿರ್ಬಂಧ ಹಾಕಿಕೊಂಡು ಕರೋನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಸೋಂಕು ಹರಡುವ ಪ್ರಮಾಣ ಕಡಿಮೆಯಾಗುತ್ತದೆ. ಆಗ ಲಾಕ್ಡೌನ್ ಹೇರುವ ಪರಿಸ್ಥಿತಿ ಉದ್ಭವವಾಗುವುದಿಲ್ಲ. ಜನ ನಿಯಮಗಳನ್ನು ಪಾಲಿಸದೇ ಇದ್ದರೆ ಲಾಕ್ಡೌನ್ ಹೇರುವುದು ಬಿಟ್ಟು ಬೇರೆ ದಾರಿ ಇಲ್ಲ. ಏಕೆಂದರೆ, ಸೋಂಕು ಹರಡದೇ ಇರಬೇಕಾದರೆ ಜನ ಬೇಕಾ ಬಿಟ್ಟಿ ಓಡಾಡುವುದನ್ನು ನಿರ್ಬಂಧಿಸಲೇ ಬೇಕಾಗುತ್ತದೆ.