ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಚಿಕಿತ್ಸೆಗಾಗಿ ಒಂದು ವಾರ ಆಸ್ಪತ್ರೆಯಲ್ಲಿ ದಾಖಲಾಗಿದ್ದರೂ ಕಂಡಕ್ಟರ್‌ ಭೇಟಿ ಮಾಡದ ಜನಪ್ರತಿನಿಧಿಗಳು, ವಿಧಾನಸಭೆಯಲ್ಲಿ ಚರ್ಚೆ

ಇಲ್ಲಿ ಮಂತ್ರಿಗಳು ಮತ್ತು ಶಾಸಕರು ಸೇರಿದಂತೆ ಆ ಭಾಗದ ಜನಪ್ರತಿನಿಧಿಗಳೂ ಗಾಯಾಳು ಕಂಡಕ್ಟರ್ ಭೇಟಿ ಮಾಡಿ ಧೈರ್ಯ ಹೇಳುವ ಧೈರ್ಯವನ್ನೇ ತೋರಿಸಿಲ್ಲ ಎಂದು ರಕ್ಷಣಾ ವೇದಿಕೆ ವಿವಿಧ ಬಣಗಳೂ ಸಿಟ್ಟಿಗೆದ್ದು ಟೀಕಿಸಿವೆ. ಈ ಪ್ರಕರಣದ ವಿಚಾರದಲ್ಲಿ ಶಾಸಕರು ಪಕ್ಷ ಭೇದ ವನ್ನೇ ಮರೆತು ಮೌನ ವಹಿಸಿದ್ದು, ಅವರ ಕನ್ನಡ ನಿರಾಭಿಮಾನದ ಸಂಕೇತ ತೋರಿಸುತ್ತಿದ್ದು, ಇದು ರಾಜಕೀಯ ವಲಯದಲ್ಲಿ ಹೆಚ್ಚು ಟೀಕಿಗೆ ಗುರಿಯಾಗಿದೆ

ಬೆಳಗಾವಿ ಗಲಾಟೆ, ಸಚಿವ, ಶಾಸಕರ ಬುದ್ಧಿವಂತ ನಡೆ

Profile Ashok Nayak Feb 27, 2025 9:04 AM

ಶಿವಕುಮಾರ್‌ ಬೆಳ್ಳಿತಟ್ಟೆ

ಬೆಳಗಾವಿಯಲ್ಲಿ ರಾಜ್ಯ ಸಾರಿಗೆ ನಿಗಮದ ಕಂಡಕ್ಟರ್ ಮಹದೇವ ಹುಕ್ಕೇರಿ ಅವರು ಕನ್ನಡ ಮಾತನಾಡಲಿಲ್ಲ ಎನ್ನುವ ಕಾರಣಕ್ಕೆ ಮಾರಣಾಂತಿಕ ಹಲ್ಲೆ ನಡೆದಿರುವ ಪ್ರಕರಣ ಈಗ ರಾಜ್ಯ ಸಚಿವರು, ಶಾಸಕರಿಗೆ ತಿರುಗುಬಾಣವಾಗುವ ಸಾಧ್ಯತೆ ಹೆಚ್ಚಾಗಿದೆ. ಕಂಡಕ್ಟರ್ ಮೇಲೆ ಹಲ್ಲೆ ನಡೆಸಿ ತಡವಾಗಿ ಪೋಕ್ಸೊ ಕೇಸನ್ನೂ ದಾಖಲಿಸಿರುವ ಬಗ್ಗೆ ರಾಜ್ಯದ ಮಂತ್ರಿಗಳು ಹಾಗೂ ಶಾಸಕರು ತುಟಿ ಬಿಚ್ಚದಿರುವ ಬಗ್ಗೆ ಕನ್ನಡಪರ ಹೋರಾಟ ಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೆಲ್ಲಕ್ಕಿಂತ ಮುಖ್ಯವಾಗಿ ಹಲ್ಲೆ ಪ್ರಕರಣ ನಡೆದು ಬಳಿಕ ಒಂದು ವಾರ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದರೂ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಬಿಟ್ಟರೆ ಉಳಿದ ಯಾವೊಬ್ಬ ಮಂತ್ರಿಯಾಗಲಿ, ಶಾಸಕರಾಗಲಿ ಕಂಡಕ್ಟರ್ ಭೇಟಿಗೆ ಮುಂದಾಗದಿರುವುದು ಸಂಘಟನೆಗಳನ್ನು ಕೆಂಡಾಮಂಡಲ ಗೊಳಿಸಿದೆ.

ಇದನ್ನೂ ಓದಿ: Vishweshwar Bhat Column: ಬಂದೇ ಬರುತಾನೆ ಶಮಿ ಬಂದೇ ಬರುತಾನೆ !

ಇಲ್ಲಿ ಮಂತ್ರಿಗಳು ಮತ್ತು ಶಾಸಕರು ಸೇರಿದಂತೆ ಆ ಭಾಗದ ಜನಪ್ರತಿನಿಧಿಗಳೂ ಗಾಯಾಳು ಕಂಡಕ್ಟರ್ ಭೇಟಿ ಮಾಡಿ ಧೈರ್ಯ ಹೇಳುವ ಧೈರ್ಯವನ್ನೇ ತೋರಿಸಿಲ್ಲ ಎಂದು ರಕ್ಷಣಾ ವೇದಿಕೆ ವಿವಿಧ ಬಣಗಳೂ ಸಿಟ್ಟಿಗೆದ್ದು ಟೀಕಿಸಿವೆ. ಈ ಪ್ರಕರಣದ ವಿಚಾರದಲ್ಲಿ ಶಾಸಕರು ಪಕ್ಷ ಭೇದವನ್ನೇ ಮರೆತು ಮೌನ ವಹಿಸಿದ್ದು, ಅವರ ಕನ್ನಡ ನಿರಾಭಿಮಾನದ ಸಂಕೇತ ತೋರಿಸುತ್ತಿದ್ದು, ಇದು ರಾಜಕೀಯ ವಲಯದಲ್ಲಿ ಹೆಚ್ಚು ಟೀಕಿಗೆ ಗುರಿಯಾಗಿದೆ.

ಅಂದರೆ ಪ್ರಕಣಕ್ಕೆ ಸಂಬಂಧಿಸಿದಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮಾತ್ರ, ಹ ಆರೋಪಿಗಳ ಮೇಲೆ ಗೂಂಡಾ ಕಾಯ್ದೆ ದಾಖಲಿಸಬೇಕು ಎಂದು ಸಿಡಿದಿದ್ದನ್ನು ಬಿಟ್ಟರೆ ಉಳಿದ ಸಚಿವರು ಜಾರಿಕೊಳ್ಳುವ ಮತ್ತು ದೇಶಾಭಿಮಾನದ ಹೇಳಿಕೆ ನೀಡಿದ್ದಾರೆ.

ವಿಶೇಷವಾಗಿ ಬೆಳಗಾವಿ ಭಾಗದ ಸಚಿವರು, ಶಾಸಕರು ಪ್ರಕರಣದ ಬಗ್ಗೆ ಸ್ಪಷ್ಟ ಯಾವುದೇ ಹೇಳಿಕೆಯನ್ನೂ ನೀಡಲಾಗದೆ ಜಾರಿಕೆಯ ಸಂದೇಶ ನೀಡಿರುವುದು ಕನ್ನಡ ಸಂಘಟನೆ ಗಳನ್ನು ಕೆರಳಿಸಿದೆ. ಹೀಗಾಗಿ ಬೆಳಗಾವಿಯ ಕಂಡಕ್ಟರ್ ಹ ಮತ್ತು ಪೋಕ್ಸೊ ಕೇಸು ಪ್ರಕರಣ ಸೋಮವಾರದಿಂದ ಆರಂಭವಾಗುವ ವಿಧಾನಮಂಡಲ ಜಂಟಿ ಅಧಿವೇಶನದಲ್ಲೂ ಚರ್ಚೆ ಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ರಾಜಕೀಯ ಮುಖಂಡರು ಹೇಳಿದ್ದಾರೆ.

ಈ ಸಚಿವರು, ಶಾಸಕರೇಕೆ ಹೀಗೆ ?

ಬೆಳಗಾವಿ 18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬಹುದೊಡ್ಡ ಜಿಲ್ಲೆ. ಇಲ್ಲಿನ ಎಲ್ಲ ಕ್ಷೇತ್ರಗಳಲ್ಲೂ ಕನಿಷ್ಠ 10 ಸಾವಿರವಾದರೂ ಮತದಾರರು ಮರಾಠಿ ಭಾಷಿಗರಿದ್ದಾರೆ. ಅದರಲ್ಲೂ ಬೆಳಗಾವಿ ದಕ್ಷಿಣ ಭಾಗದ ನಿಪ್ಪಾಣಿ, ಖಾನಾಪುರ ಮತ್ತು ಬೆಳಗಾವಿ ಗ್ರಾಮಾಂ ತರದಲ್ಲಿ 40 ಸಾವಿರದವರೆಗೂ ಇದ್ದಾರೆ. ಈ ಮತಗಳು ಎಲ್ಲಿ ಕೈ ತಪ್ಪುವುದೋ ಎನ್ನುವ ದಿಗಿಲು ಆ ಭಾಗ ಜನಪ್ರನಿಧಿಗಳಿರುವುದು ಸಹಜ ಎನ್ನುತ್ತಾರೆ. ಹೀಗಾಗಿ ಇಲ್ಲಿ ಜನಪ್ರತಿನಿಧಿ ಗಳು ತುಟಿ ಬಿಚ್ಚುವುದಿಲ್ಲ ಎನ್ನುತ್ತಾರೆ ಬೆಳಗಾವಿ ಕಾಂಗ್ರೆಸ್ ಮುಖಂಡರು. 1995ರ ಸಮಯ ದಲ್ಲಿ ಬೆಳಗಾವಿಯಲ್ಲಿ 5 ರಿಂದ 6 ಮಂದಿ ಎಂಇಎಸ್ ಶಾಸಕರಿದ್ದರು. ಆದರೆ ಈಗ ಎಂಇ ಎಸ್ ಪ್ರಾಬಲ್ಯ ಕಡಿಮೆಯಾಗಿ ಯಾವೊಬ್ಬ ಶಾಸಕರೂ ಇಲ್ಲ. ಸ್ಥಳೀಯ ಪಾಲಿಕೆಯಲ್ಲೂ ಅವರ ಸಂಖ್ಯೆ 30ರಿಂದ 8 ಕ್ಕೆ ಇಳಿದಿದೆ.

ಆದರೂ ಕನ್ನಡ ಮತ್ತು ಮರಾಠಿ ಭಾಷೆ ವಿಚಾರ ಬಂದಾಗ ಗಲಾಟೆಗಳಾಗುತ್ತವೆ. ಇದಕ್ಕೆ ಕಾರಣ ಆ ಭಾಗದ ಶಾಸಕರು ಮತದಾರರನ್ನು ಒಲೈಸುವುದೇ ಕಾರಣ ಎನ್ನುತ್ತಾರೆ ಸ್ಥಳೀಯ ಕನ್ನಡ ಸಂಘಟನೆಯ ನಾಯಕರು.

ಯಾವ ಮಂತ್ರಿ ಏನು ಹೇಳಿದರು ?

ಘಟನೆ ಬಗ್ಗೆ ಯಾವ ಮಂತ್ರಿ, ಶಾಸಕರು ಏನು ಹೇಳಿದ್ದಾರೆ ಎಂದು ನೋಡಿದರೆ, ಅಚ್ಚರಿ ಯಾಗುತ್ತದೆ. ಬೆಳಗಾವಿಯವರೇ ಆದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಮರಾಠಿ ಯವರು ನನಗೆ ಮತ ಹಾಕಿ ಗೆಲ್ಲಿಸಿದ್ದಾರೆ ಎಂದರೆ, ಇಲ್ಲಿ ಭಾಷಾ ವಿವಾದವನ್ನು ಬೇರು ಸಹಿತ ಕಿತ್ತು ಹಾಕಿದ್ದೇವೆ ಎಂದರ್ಥ. ಭಾಷೆ ಬೇರೆ ಇರಬಬಹುದು. ನಾವೆ ಒಂದು ಎನ್ನುವ ಭಾವನೆ ಇರಬೇಕು. ನಾವೇ ಕಚ್ಚಾಡಬಾರದು. ಎಲ್ಲರಿಗೂ ಅವರದೇ ಭಾಷಾಭಿಮಾನ ಇರುತ್ತದೆ. ಫೋಕ್ಸೊ ಕೇಸು ದಾಖಲಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದರಲ್ಲಿ ಪೊಲೀ ಸ್ ಅಧಿಕಾರಿ ವಿಫಲವಾಗಿದ್ದಾರೆ ಎಂದಿದ್ದಾರೆ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಂದೇನಾ ಗುವುದೋ ನೋಡೋಣ ಎಂದಷ್ಟೇ ಹೇಳಿದ್ದಾರೆ. ಕಾನೂನು ಸಚಿವ ಎಚ್.ಕೆ.ಪಾಟೀಲ, ಕನ್ನಡಿಗರು, ಮರಾಠಿಗರು ಎನ್ನುವ ಬೇಧ ಸರಿಯಲ್ಲ.

ಇದರಲ್ಲಿ ಕೇಸು ದಾಖಲಿಸಿ ಗೊಂದಲ ಸೃಷ್ಟಿಸಲಾಗಿದೆ. ಇದನ್ನು ಸರಿಪಡಿಸಬೇಕಿದೆ ಎಂದಿದ್ದರೆ, ಸಂಪುಟದ ಕೆಲವು ಸಚಿವರು, ದೇಶಾಭಿಮಾನದ ಹೇಳಿಕೆಗಳನ್ನು ನೀಡಿ ಜಾರಿ ಕೊಂಡಿದ್ದಾರೆ. ಆದರೆ ಸಚಿವ ರಾಮಲಿಂಗಾ ರೆಡ್ಡಿ ಅವರು ಮಾತ್ರ ಹಲ್ಲೆ ಆರೋಪಿಗಳ ಮೇಲೆ ಗೂಂಡಾ ಕೇಸು ದಾಖಲಿಸಬೇಕು. ತಡವಾಗಿ ಕಂಡಕ್ಟರ್ ವಿರುದ್ಧ ಫೋಕ್ಸೊ ಕೇಸು ದಾಖಲಿಸಿರುವುದು ಬೋಗಸ್ ಎಂದು ನೇರವಾಗಿ ಆರೋಪಿಸಿದ್ದಾರೆ.

ಹಾಗೆ ನೋಡಿದರೆ, ಈ ವಿಚಾರದಲ್ಲಿ ಬಿಜೆಪಿಯಿಂದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಕೆಲವರನ್ನು ಬಿಟ್ಟರೆ ಉಳಿದ ಉತ್ತರ ಕರ್ನಾಟಕದ ಅನೇಕ ಶಾಸಕರು ಈತನಕ ತುಟಿ ಬಿಚ್ಚುವ ಪ್ರಯತ್ನ ಮಾಡಿಲ್ಲ.

*

ಇಂಥ ಪ್ರಕರಣಗಳು ನಡೆದಾಗ ನಮ್ಮ ಜನಪ್ರತಿನಿಽಗಳು ಕನ್ನಡಿಗರ ಪರ ಮಾತನಾಡ ದಿದ್ದರೂ ಪರವಾಗಿಲ್ಲ. ಹಲ್ಲೆಗೆ ಒಳಗಾದ ಕಂಡಕ್ಟರ್ ಅವರಿಗೆ ನ್ಯಾಯ ಕೊಡಿಸುವ ಹೇಳಿಕೆ ನೀಡುವ ಮಾನವೀಯತೆ ತೋರಬೇಕು. ಇಡೀ ಊರಿನ ಜನಸೇರಿ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದರೆ, ನೊಂದವರಿಗೆ ಧೈರ್ಯ ತುಂಬದೆ ಮನಷ್ಯತ್ವ ಮರೆತರೆ ಹೇಗೆ?

-ದಿನೇಶ್ ಕುಮಾರ್, ಕನ್ನಡ ಪರ ಹೋರಾಟಗಾರರು