Universities : ಒಂಬತ್ತು ವಿಶ್ವವಿದ್ಯಾಲಯ ಮುಚ್ಚುವ ನಿರ್ಧಾರ ವಾಪಸ್
ವಿಶ್ವವಿದ್ಯಾಲಯಗಳನ್ನು ಮುಚ್ಚುವ ಬದಲು ಅವುಗಳನ್ನ ನಿಧಾನವಾಗಿ ಇತರ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಮಾದರಿಯಲ್ಲಿ ಮೇಲ್ದರ್ಜೆಗೇರಿಸಲು ಚಿಂತಿಸಲಾಗುತ್ತಿದೆ ಎನ್ನಲಾಗಿದೆ. ಇತ್ತೀಚಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಉಪಸಮಿತಿಯಲ್ಲಿ ವಿಶ್ವವಿದ್ಯಾಲಯಗಳನ್ನು ಮುಚ್ಚುವ ಬಗ್ಗೆ ಚರ್ಚಿಸಿ ಅದನ್ನೇ ಅಂತಿಮ ತೀರ್ಮಾನ ಪ್ರಕಟಿಸಲು ಸರಕಾರ ಲೆಕ್ಕಾಚಾರ ಹಾಕಿತ್ತು ಎನ್ನಲಾಗಿದೆ


ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಬಂದ್ ನಿರ್ಧಾರಕ್ಕೆ ಕಾಂಗ್ರೆಸ್ ಶಾಸಕರಿಂದಲೇ ವಿರೋಧ, ಬಿಜೆಪಿಗೆ ಆರಂಭಿಕ ಗೆಲುವು
ಗಡಿ ಜಿಲ್ಲೆ ಚಾಮರಾಜನಗರ ಸೇರಿದಂತೆ ರಾಜ್ಯದ 9 ವಿಶ್ವವಿದ್ಯಾಲಯಗಳನ್ನೂ ಮುಚ್ಚು ವ ನಿರ್ಧಾರದಿಂದ ಸರಕಾರ ಹಿಂದೆ ಸರಿಯುವ ಸಾಧ್ಯತೆ ಇದೆ. ಮುಚ್ಚುವ ನಿಟ್ಟಿನಲ್ಲಿ ಪ್ರಸ್ತಾ ಪವಾಗಿರುವ ಈ 9 ವಿಶ್ವವಿದ್ಯಾಲಯಗಳು ಅದೃಷ್ಟವಶಾತ್ ಕಾಂಗ್ರೆಸ್ ಶಾಸಕರಿರುವ ಜಿಲ್ಲೆ ಗಳಲ್ಲಿವೆ. ಅಷ್ಟೇ ಅಲ್ಲದೆ, ಇವುಗಳಲ್ಲಿ ಕೆಲವು ಕಾಂಗ್ರೆಸ್ ಅವಧಿಯ ಆರಂಭವಾಗಿದ್ದ ಕಾರಣ ಅವುಗಳನ್ನು ಮುಚ್ಚುವುದು ಬೇಡ ಎನ್ನುವ ಬಗ್ಗೆ ಸರಕಾರ ಮಟ್ಟದಲ್ಲಿ ಗಂಭೀರ ಚಿಂತನೆ ನಡೆದಿದೆ. ವಿಶ್ವವಿದ್ಯಾಲಯಗಳನ್ನು ಮುಚ್ಚುವ ಬಗ್ಗೆ ಸರಕಾರ ಸುಳಿವು ನೀಡು ತ್ತಿದ್ದಂತೆಯೇ ಬಿಜೆಪಿ ನಾಯಕರು ವಿಧಾನಮಂಡಲದ ಒಳಗೆ ಮತ್ತು ಹೊರಗೆ ಹೋರಾಟ ನಡೆಸುವುದಾಗಿ ಎಚ್ಚರಿಸಿದ ಹಿನ್ನೆಲೆಯಲ್ಲಿ ಸರಕಾರ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮೇಲ್ಮೋಟಕ್ಕೆ ಕಾಣುತ್ತಿದೆ. ಆದರೆ ವಾಸ್ತವದಲ್ಲಿ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಕಾಂಗ್ರೆಸ್ ಶಾಸಕರಿಂದಲೇ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು ಇದರಿಂದ ಸ್ಥಳೀಯ ವಾಗಿಯೂ ಸರಕಾರದ ಹೆಸರಿಗೆ ಧಕ್ಕೆಯಾಗಲಿದೆ.
ಹೀಗಾಗಿ ವಿಶ್ವವಿದ್ಯಾಲಯಗಳನ್ನು ಮುಚ್ಚುವ ಬದಲು ಅವುಗಳನ್ನ ನಿಧಾನವಾಗಿ ಇತರ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಮಾದರಿಯಲ್ಲಿ ಮೇಲ್ದರ್ಜೆಗೇರಿಸಲು ಚಿಂತಿಸಲಾಗುತ್ತಿದೆ ಎನ್ನಲಾಗಿದೆ. ಇತ್ತೀಚಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಉಪಸಮಿತಿಯಲ್ಲಿ ವಿಶ್ವವಿದ್ಯಾಲಯಗಳನ್ನು ಮುಚ್ಚುವ ಬಗ್ಗೆ ಚರ್ಚಿಸಿ ಅದನ್ನೇ ಅಂತಿಮ ತೀರ್ಮಾನ ಪ್ರಕಟಿಸಲು ಸರಕಾರ ಲೆಕ್ಕಾಚಾರ ಹಾಕಿತ್ತು ಎನ್ನಲಾಗಿದೆ.
ವಿಶ್ವವಿದ್ಯಾಲಯಗಳನ್ನು ಮುಚ್ಚುವುದರಿಂದ ಸರಕಾರಕ್ಕೆ ಲಾಭವಾಗುವುದಕ್ಕಿಂತ ನಷ್ಟ ವಾಗುವುದೇ ಹೆಚ್ಚು ಎನ್ನುವುದು ತಿಳಿಯುತ್ತಿದ್ದಂತೆ ಸರಕಾರ ನಿರ್ಧಾರದಿಂದ ಹಿಂದೆ ಸರಿಯಲು ತೀರ್ಮಾನಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದು ವಿವಿಗಳ ಸಾವು-ಬದುಕಿನ ವ್ಯಥೆ: ಸಂಗೀತ, ತಾಂತ್ರಿಕ ಮತ್ತು ಜಾನಪದ ಎನ್ನುವ ವಿವಿಧ ವಿಶ್ವವಿದ್ಯಾಲಯಗಳೂ ಸೇರಿದಂತೆ ರಾಜ್ಯದಲ್ಲಿ ಸುಮಾರು 42ಕ್ಕೂ ಹೆಚ್ಚು ವಿಶ್ವ ವಿದ್ಯಾಲಯಗಳಿವೆ. ಇವುಗಳ ಪೈಕಿ ಬಿಜೆಪಿ ಅವಧಿಯಲ್ಲಿ ಜಿಲ್ಲೆಗೊಂದು ವಿಶ್ವವಿದ್ಯಾಲಯ ಎನ್ನುವಂತೆ ಘೋಷಣೆ ಮಾಡಲಾಗಿತ್ತು. ಅವುಗಳಲ್ಲಿ ಕೆಲವು ಅವೈಜ್ಞಾನಿಕ ಎನಿಸಿದರೆ, ಹಲವು ಅವೈಜ್ಞಾನಿಕ ಎನ್ನುವ ಟೀಕೆಗಳಿವೆ. ಅಂದರೆ, ಸುಮಾರು 100 ಕಾಲೇಜುಗಳಿಗೆ ಒಂದು ವಿಶ್ವವಿದ್ಯಾಲಯ ಇರಬೇಕು ಎನ್ನುವ ಚಿಂತನೆ ಹಿನ್ನೆಲೆಯಲ್ಲಿ ಕೆಲವು ವಿವಿಗಳನ್ನು ಆರಂಭಿಸಿದರೆ, ಕೆಲವು ಕೇಂದ್ರ ಸರಕಾರದ ಸಲಹೆಯಂತೆ ಆರಂಭಿಸಿದ್ದಾಗಿವೆ.
ಈ ಹಿನ್ನೆಲೆಯಲ್ಲಿ ಚಾಮರಾಜನಗರ, ಹಾಸನ, ಕೊಡಗು, ಬಾಗಲಕೋಟೆ, ಹಾವೇರಿ, ಕೊಪ್ಪಳ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿತ್ತು. ಇದೇವೇಳೆ ಹಿಂದಿನ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸರಕಾರದ ರಾಷ್ಟ್ರೀಯ ಉಚ್ಚತಾ ಶಿಕ್ಷಣಾ ಅಭಿಯಾನ ಅಡಿಯಲ್ಲಿ ಬೆಂಗಳೂರಿನ ಮಹಾರಾಣಿ ಕ್ಲಸ್ಟರ್, ನೃಪತುಂಗಾ ಹಾಗೂ ಮಂಡ್ಯದ ಉನ್ನತ ಕಾಲೇಜು ಗಳನ್ನು ವಿಶ್ವವಿದ್ಯಾಲಯಗಳಾಗಿ ಮೇಲ್ದರ್ಜೆಗೇರಿಸಲಾಗಿತ್ತು (ಈ ಹಿಂದೆ ಕಾಂಗ್ರೆಸ್ ಸರಕಾ ರದ ಆಗಿತ್ತು).
ಹೀಗೆ 9 ವಿಶ್ವವಿದ್ಯಾಲಯಗಳನ್ನು ಆರಂಭಿಸಿದ ಸರಕಾರ ವಿವಿಗಳ ಅಭಿವೃದ್ಧಿಗೆ ಸೂಕ್ತ ಸಿಬ್ಬಂದಿ ಮತ್ತು ಆರ್ಥಿಕ ಸಹಕಾರ ನೀಡಲಿಲ್ಲ. ಹೀಗಾಗಿ ಅವು ಬಡಕಲಾಗಿ ಸಾವು- ಬದುಕಿ ನ ಹೋರಾಟ ನಡೆಸುತ್ತಿದೆ. ಅಷ್ಟೇ ಅಲ್ಲದೆ, ಈಗ ರಾಜಕೀಯ ಹಗ್ಗಜಗ್ಗಾಟದಲ್ಲೂ ಸಿಕ್ಕು ನಜ್ಜುಗುಜ್ಜಾಗಿವೆ.
ಈಗ ಈ ವಿಶ್ವವಿದ್ಯಾಲಯಗಳನ್ನು ಉಳಿಸಿಕೊಳ್ಳದಿದ್ದರೆ ಕೇಂದ್ರ ಸರಕಾರಕ್ಕೆ ನಂಬಿಕೆ ದ್ರೋಹ ಮಾಡಿದಂತಾಗುತ್ತದೆ ಎಂದು ನೃಪತುಂಗ ವಿಶ್ವವಿದ್ಯಾಲಯ ಸಂಸ್ಥಾಪಕ ಕುಲಪತಿ ಶ್ರೀನಿವಾಸ್ ಬಳ್ಳಿ ಹೇಳಿದ್ದಾರೆ.
ಎಲ್ಲಿ ಯಾವ ಶಾಸಕರ ವಿರೋಧ ?
ಕೊಡಗು ವಿಶ್ವವಿದ್ಯಾಲಯ ಮುಚ್ಚುವುದನ್ನು ಅಲ್ಲಿನ ಶಾಸಕ ಮಂಥರ ಗೌಡ ವಿರೋಧಿ ಸುತ್ತಿದ್ದಾರೆ ಎನ್ನಲಾಗಿದೆ. ಅದೇರೀತಿ ಹಾವೇರಿ ವಿಶ್ವವಿದ್ಯಾಲಯ ಮುಚ್ಚಿದರೆ ಉಪ ಸಭಾ ಧ್ಯಕ್ಷ ರುದ್ರಪ್ಪ ಲಮಾಣಿ ವಿರೋಧಿಸುವ ಸಾಧ್ಯತೆ ಇದೆ. ಮಂಡ್ಯದಲ್ಲಿ ಇರುವ ಏಕೈಕ ವಿಶ್ವವಿದ್ಯಾಲಯ ಮುಚ್ಚಲು ಅಲ್ಲಿನ ಶಾಸಕ ಗಣಿಗ ರವಿಕುಮಾರ್ ವಿರೋಧಿಸದೆ ಸುಮ್ಮನಿರಲಾರರು.
ಹಾಗೆಯೇ ಚಾಮರಾಜನಗರದಲ್ಲಿ ಶಾಸಕ ಪುಟ್ಟರಂಗಶೆಟ್ಟಿ, ಸಚಿವ ಎಚ್.ಸಿ.ಮಹಾದೇವ ಪ್ಪ, ಕೊಪ್ಪಳದಲ್ಲಿ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹಾಗೂ ಸಚಿವ ಶಿವರಾಜ ತಂಗಡಗಿ ಸೇರಿದಂತೆ ಅನೇಕರು ವಿರೋಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.