ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಧಿಕಾರಿಗಳ ವರ್ಗಾವಣೆ ಸಂಬಂಧ ಬೋಸರಾಜು-ಶರಣಪ್ರಕಾಶ್ ನಡುವೆ ವಾಕ್ಸಮರ

ರಾಯಚೂರು ಜಿಲ್ಲೆಯಲ್ಲಿ ಬೋಸರಾಜು ಹಾಗೂ ಶರಣಪ್ರಕಾಶ್ ಪಾಟೀಲ್ ನಡುವೆ ಎರಡು ಗುಂಪುಗಳಾಗಿವೆ. ಆರಂಭದಲ್ಲಿ ಜಿಲ್ಲೆಗೆ ಸೀಮಿತಗೊಂಡಿದ್ದ ಭಿನ್ನಮತ ಇದೀಗ ಬೆಂಗಳೂರಿನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಗೂ ವಿಸ್ತರಿಸಿದ್ದು, ಕೊನೆಗೆ ಸಿಎಂ, ಡಿಸಿಎಂ ಇಬ್ಬರನ್ನೂ ಸಮಾ ಧಾನಪಡಿಸಿದ ಪ್ರಸಂಗ ನಡೆದಿದೆ.

ಶಾಸಕಾಂಗ ಪಕ್ಷದ ಸಭೆಯಲ್ಲಿ ಸಚಿವರ ಕಿತ್ತಾಟ

Profile Ashok Nayak Mar 12, 2025 12:49 PM

ಬಸವರಾಜ ನಾಗಡದಿನ್ನಿ ರಾಯಚೂರು

ಸೋಮವಾರ ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ, ರಾಯ ಚೂರು ಜಿಲ್ಲೆಯ ಭಿನ್ನಮತ ಸ್ಫೋಟಗೊಂಡಿದೆ. ಸಚಿವರಿಬ್ಬರು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸಮ್ಮುಖದಲ್ಲಿಯೇ ಏಕವಚನದಲ್ಲಿ ಬೈದಾಡಿಕೊಂಡ ಘಟನೆ ನಡೆ ದಿದೆ. ರಾಯಚೂರು ಜಿಲ್ಲೆಯಲ್ಲಿ ಬೋಸರಾಜು ಹಾಗೂ ಶರಣಪ್ರಕಾಶ್ ಪಾಟೀಲ್ ನಡುವೆ ಎರಡು ಗುಂಪುಗಳಾಗಿವೆ. ಆರಂಭದಲ್ಲಿ ಜಿಲ್ಲೆಗೆ ಸೀಮಿತಗೊಂಡಿದ್ದ ಭಿನ್ನಮತ ಇದೀಗ ಬೆಂಗಳೂರಿನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಗೂ ವಿಸ್ತರಿಸಿದ್ದು, ಕೊನೆಗೆ ಸಿಎಂ, ಡಿಸಿಎಂ ಇಬ್ಬರನ್ನೂ ಸಮಾಧಾನಪಡಿಸಿದ ಪ್ರಸಂಗ ನಡೆದಿದೆ.

ಇದನ್ನೂ ಓದಿ: Lokayukta Raid: ಅಕ್ರಮ ಆಸ್ತಿ ಗಳಿಕೆ ಆರೋಪ: ತಾವರೆಕೆರೆ ವೈದ್ಯಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ

ತಾರಕಕ್ಕೇರಿದ ಒಳಜಗಳ: ರಾಯಚೂರಿಗೆ ಡಾ.ಶರಣ ಪ್ರಕಾಶ್ ಪಾಟೀಲ್ ಜಿಲ್ಲಾ ಉಸ್ತು ವಾರಿ ಸಚಿವರು. ಆದರೆ ಬೋಸರಾಜು ತಮ್ಮ ಪ್ರಭಾವವನ್ನು ಬಳಸಿಕೊಂಡು, ತಮಗೆ ಬೇಕಿರುವ ಅಧಿಕಾರಿಗಳನ್ನು ಆಯಕಟ್ಟಿನ ಸ್ಥಾನದಲ್ಲಿ ಕೂರಿಸುತ್ತಿದ್ದಾರೆ. ಈ ವೇಳೆ ಯಾವ ಶಾಸಕ ರನ್ನೂ ವಿಶ್ವಾಸಕ್ಕೆ ಪಡೆಯುತ್ತಿಲ್ಲ.

ಈ ವಿಷಯದಲ್ಲಿ ಶರಣಪ್ರಕಾಶ್ ಪಾಟೀಲರು ಬೋಸರಾಜು ನಡೆಯನ್ನು ವಿರೋಧಿಸು ತ್ತಿದ್ದಾರೆ. ಆದರೆ ಇತ್ತೀಚೆಗೆ ಈ ಭಿನ್ನಾಭಿಪ್ರಾಯ ತಾರಕಕ್ಕೆ ಹೋಗಿರುವುದರಿಂದ ಸಿಎಲ್‌ಪಿ ಸಭೆಯಲ್ಲಿಯೇ ಈ ಗಲಾಟೆ ನಡೆದಿದೆ ಎನ್ನಲಾಗಿದೆ.

ಈ ಇಬ್ಬರು ಸಚಿವರ ನಡುವೆ ಎರಡು ಬಣಗಳು ನಿರ್ಮಾಣಗೊಂಡಿವೆ. ಶಾಸಕಾಂಗ ಪಕ್ಷದ ಸಭೆಯಲ್ಲಿಯೂ ಇದೇ ಗಲಾಟೆ ಶುರುವಾಗಿದ್ದು, ಅಧಿಕಾರಿಯೊಬ್ಬರ ವರ್ಗಾವಣೆ ಸಂಬಂಧ ಸಚಿವರು ಪರಸ್ಪರ ಏಕವಚನದಲ್ಲಿ ನಿಂದಿಸಿಕೊಂಡಿರುವುದು ಇದೀಗ ಜಿಲ್ಲೆಯಲ್ಲಿ ಸಾಕ ಷ್ಟು ಚರ್ಚೆಗೆ ಗ್ರಾಸವಾಗಿದೆ. ಇದು ಕೇವಲ ಅಧಿಕಾರಿಗಳ ವರ್ಗಾವಣೆಗೆ ಮಾತ್ರವಲ್ಲದೇ, ಅಭಿವೃದ್ಧಿ ವಿಷಯದಲ್ಲಿಯೂ ಕೂಡ ತಾಳಮೇಳವಿಲ್ಲದಂತಾಗಿದ್ದು, ಅಧಿಕಾರಿಗಳು ಇಬ್ಬರು ಸಚಿವರ ನಡುವೆ ಸಿಲುಕಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಎರಡು ಗುಂಪುಗಳು: ಶಾಸಕರಾದ ಹಂಪನಗೌಡ ಬಾದರ್ಲಿ, ಬಸನಗೌಡ ದದ್ದಲ್, ಬಸನ ಗೌಡ ತುರ್ವಿಹಾಳ, ವಿಧಾನ ಪರಿಷತ್ ಸದಸ್ಯ ಶರಣ ಗೌಡ ಬಯ್ಯಾಪುರ, ವಸಂತಕುಮಾರ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಪಾಟೀಲ್ ಇಟಗಿ ಒಂದು ಗುಂಪಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಜತೆ ಗುರುತಿಸಿಕೊಂಡಿದ್ದಾರೆ. ಮಾನ್ವಿ ಶಾಸಕ ಹಂಪಯ್ಯ ನಾಯಕ, ಮೇಲ್ಮನೆ ಸದಸ್ಯ ಬಸನಗೌಡ ಬಾದರ್ಲಿ ಸಚಿವ ಬೋಸರಾಜು ಜತೆಗಿದ್ದಾರೆ.

ಈ ಎರಡು ಗುಂಪು ತಮ್ಮದೇ ಕಾರಣಕ್ಕೆ ಬಲಿಷ್ಠವಾಗಿರುವುದರಿಂದ ಅಧಿಕಾರಿಗಳ ವರ್ಗಾ ವಣೆಯಲ್ಲಿ ನಮ್ಮ ಕೈ ಮೇಲಾಯಿತು, ನಮ್ಮ ಕೈ ಮೇಲಾಯಿತು ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಬಸವರಾಜ ಪಾಟೀಲ್ ಇಟಗಿ ನೇಮಕ ವಾಗಿ ಹತ್ತಾರು ತಿಂಗಳುಗಳೆ ಕಳೆದಿವೆ. ಆದರೆ ಇಂದಿಗೂ ಪೂರ್ಣ ಪ್ರಮಾಣದ ಜಿಲ್ಲಾ ಸಮಿತಿ ಮಾಡಲು ಸಾಧ್ಯವಾಗಿಲ್ಲ.