ನ್ಯಾಯಾಲಯದಲ್ಲಿ ಶಿಕ್ಷೆ ಸಾಬೀತಾಗಿ ಶಿಕ್ಷೆಗೊಳಗಾದವರು ಮತ್ತು ಅಪರಾಧ ಪ್ರಕರಣಗಳಲ್ಲಿ ಸಿಲುಕಿ ವಿಚಾರಣೆ ಎದುರಿಸುತ್ತಿದ್ದವರನ್ನು ಜೈಲಿಗೆ ಕಳುಹಿಸುವುದು ಸಾಮಾನ್ಯ ಪ್ರಕ್ರಿಯೆ. ಕಾರಾಗೃಹವು ತಪ್ಪಿತಸ್ಥರು ಶಿಕ್ಷೆ ಅನುಭವಿ ಸುವ ಮತ್ತು ಮುಂದೆ ಉತ್ತಮ ಮನುಷ್ಯರಾಗಿ ಬಾಳಲು ಮನಪರಿವರ್ತನೆ ಮಾಡಿಕೊಳ್ಳುವ ಸ್ಥಳ. ಆದರೆ ರಾಜ್ಯದ ಜೈಲು ಗಳು ಕ್ರಿಮಿನಲ್‌ಗಳಿಗೆ ಸುರಕ್ಷಿತ ತಾಣವಾದಂತಿವೆ. ಇವರು ಜೈಲಿನಲ್ಲಿದ್ದುಕೊಂಡೇ ಹೊರಪ್ರಪಂಚದಲ್ಲಿ ಅಕ್ರಮ ಚಟುವಟಿಕೆಗಳನ್ನು ಮುಂದುವರಿಸಬಹುದು. ಅಲ್ಲಿಂದಲೇ ಉದ್ಯಮಿಗಳಿಗೆ ಮೊಬೈಲ್ ಮೂಲಕ ಬೆದರಿಸಿ ಹಫ್ತಾ ವಸೂಲಿ ಮಾಡಬಹುದು. ಜೈಲನ್ನೇ ವಿಲಾಸಿ ತಾಣವಾಗಿಸಿಕೊಂಡು ತಮಗೆ ಬೇಕಾದಂತೆ ಪಾರ್ಟಿ ಮಾಡಬಹುದು. […]
ಜನ್ಮ ತಳೆದಾರಭ್ಯ ಏನಾದರೊಂದು ವಿವಾದಕ್ಕೆ, ಆರೋಪಕ್ಕೆ ಗುರಿಯಾಗುತ್ತಲೇ ಬಂದಿರುವಂಥದ್ದು ‘ಜಿಎಸ್‌ಟಿ’ ಎಂಬ ತೆರಿಗೆ ವ್ಯವಸ್ಥೆ. ಇದರ ಸ್ವರೂಪ ಮತ್ತು ಆಶಯದಲ್ಲಿ ನ್ಯೂನತೆ ಇಲ್ಲದಿದ್ದರೂ ಅನುಷ್ಠಾನದಲ್ಲಿ ಮಾತ್ರ ‘ರಾಜಕೀಯ’...
ಟಾಟಾ ಸಮೂಹದ ಮಾಜಿ ಅಧ್ಯಕ್ಷ ರತನ್ ಟಾಟಾ ಅವರ ನಿಧನಕ್ಕೆ ಇಡೀ ದೇಶ ಮರುಗಿದೆ. ಉದ್ಯಮ ರಂಗದ ಗಣ್ಯರಿಂದ ಹಿಡಿದು ಜನಸಾಮಾನ್ಯರವರೆಗೆ ಎಲ್ಲರೂ ರತನ್ ಟಾಟಾ ಅವರ...
ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ದ್ವೈಮಾಸಿಕ ಸಭೆಯಲ್ಲಿ ರೆಪೋ ದರವನ್ನು ಶೇ. 6.5ರಲ್ಲಿಯೇ ಮುಂದು ವರಿಸಲು ನಿರ್ಧರಿಸಿದೆ. ಇದರಿಂದ ಗೃಹ ಸಾಲ, ವಾಹನ ಸಾಲ ಮತ್ತು ವೈಯಕ್ತಿಕ...
ಒಂದಿಡೀ ದೇಶವು ಕಾತರಿಸಿ ಕಾಯುತ್ತಿದ್ದ ಜಮ್ಮು-ಕಾಶ್ಮೀರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಗಳ ಫಲಿತಾಂಶ ಹೊರಬಿದ್ದಿದೆ. ಬಿಜೆಪಿಯ ಪಾಲಿಗೆ ಜಮ್ಮು-ಕಾಶ್ಮೀರದ ಫಲಿತಾಂಶವು ‘ಬೇವು’ ಆಗಿಯೂ, ಹರಿಯಾಣದ ಫಲಿತಾಂಶವು ‘ಬೆಲ್ಲ’...
ಸಾವಿರಾರು ವರ್ಷಗಳ ಇತಿಹಾಸ ಹೊಂದಿದ ನಮ್ಮ ನಾಡಿನ ಶ್ರೀಮಂತ ಜಾನಪದ ಪರಂಪರೆ ಮತ್ತು ಯಕ್ಷಗಾನಕ್ಕೆ ಯುನೆಸ್ಕೋ ಗೌರವ ಸಿಕ್ಕಿರುವುದು ಕನ್ನಡಿಗರೆಲ್ಲರೂ ಸಂಭ್ರಮಿಸುವ ಸಂಗತಿ. ಯನೆಸ್ಕೋ ತನ್ನ 10ನೇ...
ಪ್ರೀತಿಯ ಮಹಾತ್ಮ ಗಾಂಧಿ ತಾತ, ಇಂದು ನಿನ್ನ ಜನ್ಮದಿನ. ಈ ಸಂದರ್ಭದಲ್ಲಿ ನಿನ್ನ ಸನ್ನಿಧಿಗೆ ಇದೊಂದು ಪುಟ್ಟ ಪತ್ರ. ಸರಳತೆಯೇ ಮೈವೆತ್ತಂತಿದ್ದ, ಅಹಿಂಸೆಯೇ ಉಸಿರಾಗಿದ್ದ ಅನುಪಮ ಚೇತನ...
ಮೈಸೂರಿನ ಪುರಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಮಹಿಷ ಮಂಡಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ತಥಾಕಥಿತ ಎಡಪಂಥೀಯ ವಿಚಾರವಾದಿಯೊಬ್ಬರು, ‘ಹಿಂದೂ ಧರ್ಮ ನಮ್ಮದಲ್ಲ, ನಮಗೆ ಹಿಂದೂ ಧರ್ಮ ಬೇಕಾಗಿಲ್ಲ. ಶೂದ್ರರು ದೇಗುಲಕ್ಕೆ...
ಪಂಜಾಬ್ ರಾಜ್ಯದ ಯುವಜನರಲ್ಲಿ ಕಾಣಬರುತ್ತಿರುವ ಮಾದಕ ವಸ್ತು ವ್ಯಸನವನ್ನು ಹಾಗೂ ಅದರ ಸುತ್ತ ಮುತ್ತಲಿನ ಪಿತೂರಿಗಳನ್ನು ಆಧರಿಸಿ 2016ರಲ್ಲಿ ‘ಉಡ್ತಾ ಪಂಜಾಬ್’ ಎಂಬ ಹಿಂದಿ ಚಲನಚಿತ್ರ ಬಿಡುಗಡೆ...
ಹರ ಕೊಲ್ಲಲ್, ಪರ ಕಾಯ್ವನೇ” ಎಂಬ ಮಾತಿದೆ. ಅನಾರೋಗ್ಯಕ್ಕೀಡಾದಾಗ ನಾವು ವೈದ್ಯರು ಕೊಟ್ಟ ಚೀಟಿ ಹಿಡಿದು ಫಾರ್ಮೆಸಿ ಮಳಿಗೆಗಳಿಗೆ ಹೋಗುತ್ತೇವೆ. ಅಲ್ಲಿ ಕೊಟ್ಟ ಔಷಧಿಯನ್ನು ನಿಷ್ಕಲ್ಮಶ ಮನಸ್ಸಿನಿಂದ...