ಮುಂಬೈ: ಐಶ್ವರ್ಯಾ ರೈ (Aishwarya Rai) ಮತ್ತು ಅಭಿಷೇಕ್ ಬಚ್ಚನ್(Abhishek Bachchan) ತಮ್ಮ ಮಗಳು ಆರಾಧ್ಯ ಬಚ್ಚನ್ (Aaradhya Bacchan) ಅವರ ಹುಟ್ಟುಹಬ್ಬದ ನೆಪದಲ್ಲಿ ಮತ್ತೆ ಒಂದಾಗಿದ್ದಾರೆ ಎನ್ನಲಾದ ವಿಡಿಯೊವೊಂದು ಈಗ ಸಾಕಷ್ಟು ವೈರಲ್ ಆಗುತ್ತಿದೆ. ಮಗಳ ಬರ್ತ್‌ಡೇಗೆ ಅಭಿಷೇಕ್ ಬಚ್ಚನ್ ಗೈರಾಗಿದ್ದರು ಎಂಬ ಹಲವು ಊಹಾಪೋಹಗಳ ನಡುವೆ ವೈರಲ್ ಆಗುತ್ತಿರುವ ವಿಡಿಯೊ (Viral Video) ಸಾಕಷ್ಟು ಕುತೂಹಲ ಮೂಡಿಸಿದೆ.
ನಟಿ ಐಶ್ವರ್ಯಾ ರೈ ಮಗಳು ಆರಾಧ್ಯಳ ಹುಟ್ಟುಹಬ್ಬದ ಫೋಟೋಗಳನ್ನು ಈ ಹಿಂದೆ ಹಂಚಿಕೊಂಡಿದ್ದರು. ಆರಾಧ್ಯ ಈ ವರ್ಷ 13ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ಅವರ ಡಿವೋರ್ಸ್ ಬಗ್ಗೆ ನಿರಂತರ ವದಂತಿಗಳು ಹರಿದಾಡುತ್ತಿರುವ ನಡುವೆ ಅಭಿಷೇಕ್ ಬಚ್ಚನ್ ಮಗಳ ಹುಟ್ಟುಹಬ್ಬಕ್ಕೆ ಗೈರಾಗಿದ್ದಾರೆ ಎನ್ನಲಾಗಿತ್ತು. ಅಲ್ಲದೇ ಮಗಳ ಹುಟ್ಟುಹಬ್ಬಕ್ಕೆ ಅವರು ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಶುಭ ಕೋರಿರಲಿಲ್ಲ. ಐಶ್ವರ್ಯಾ ರೈ ತನ್ನ ಪ್ರೀತಿಯ ಮಗಳ ಹುಟ್ಟುಹಬ್ಬವನ್ನು ಅಮ್ಮ ಬೃಂದಾ ರೈ ಜತೆ ಸೇರಿ ಆಚರಿಸಿದ್ದರು. ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.
ಆರಾಧ್ಯ ತಂದೆ ಅಭಿಷೇಕ್ ಬಚ್ಚನ್ ಮತ್ತು ಬಚ್ಚನ್ ಕುಟುಂಬದ ಇತರ ಸದಸ್ಯರು ಈ ಆಚರಣೆಯಲ್ಲಿ ಇಲ್ಲದಿರುವುದನ್ನು ಅಭಿಮಾನಿಗಳು ಗಮನಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ಅವರ ಗೈರುಹಾಜರಿಯ ಬಗ್ಗೆಅನೇಕರು ಪ್ರಶ್ನಿಸಿದ್ದರು. ಕೆಲವರು ಐಶ್ವರ್ಯಾ ಮತ್ತು ಅಭಿಷೇಕ್ ಅವರ ದಾಂಪತ್ಯದಲ್ಲಿ ಬಿರುಕು ಉಂಟಾಗಿದೆ ಎಂದು ಊಹಿಸಿದ್ದಲ್ಲದೆ, ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂದೆಲ್ಲ ಪ್ರತಿಕ್ರಿಯಿಸಿದ್ದರು. ಸಾಕಷ್ಟು ಅಭಿಮಾನಿಗಳು ಅಭಿಷೇಕ್ ಬಚ್ಚನ್ ಅವರನ್ನು ದೂರಿದ್ದರು.
ಮುದ್ದು ಮಗಳ ಬರ್ತ್‌ಡೇಗೆ ಅಭಿಷೇಕ್ ಹಾಜರ್!
ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಆರಾಧ್ಯ ಅವರ 13 ನೇ ಹುಟ್ಟುಹಬ್ಬವನ್ನು ಒಟ್ಟಿಗೆ ಆಚರಿಸಿದ್ದಾರೆ ಎನ್ನಲಾದ ಹೊಸ ವಿಡಿಯೊಗಳು ವೈರಲ್ ಆಗಿವೆ. ಐಶ್ವರ್ಯಾ ಮತ್ತು ಅಭಿಷೇಕ್ ಹಲವು ತಿಂಗಳುಗಳಿಂದ ಡಿವೋರ್ಸ್ ವದಂತಿಗಳಿಗೆ ಒಳಗಾಗಿದ್ದಾರೆ. ಬಚ್ಚನ್ ಕುಟುಂಬ ಸದಸ್ಯರಿಲ್ಲದ ಫೋಟೋಗಳನ್ನು ಐಶ್ವರ್ಯಾ ಹಂಚಿಕೊಂಡ ನಂತರ ಅಭಿಷೇಕ್ ಮಗಳ ಹುಟ್ಟುಹಬ್ಬಕ್ಕೆ ಗೈರಾಗಿದ್ದಾರೆ ಎಂದು ಅವರ ಅಭಿಮಾನಿಗಳು ಊಹಿಸಿದ್ದರು. ಅಭಿಷೇಕ್ ಗೈರು ದಂಪತಿ ನಡುವೆ ಬಿರುಕು ಉಂಟಾಗಿದೆ ಎಂಬುದನ್ನು ಸ್ಪಷ್ಟಪಡಿಸಿತ್ತು. ಆದರೆ ಬರ್ತ್‌ಡೇ ಪಾರ್ಟಿ ಆಯೋಜಕರು ಅಭಿಷೇಕ್ ತನ್ನ ಮಗಳ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು ಎಂದು ಖಚಿತಪಡಿಸಲು ಎರಡು ಹೊಸ ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ.
Abhishek Bachchan faced criticism for not wishing Aaradhya on her 13th birthday publicly, but here’s what most don’t know—he was right there at her birthday party celebrating with her! 🎉✨#AaradhyaBachchan #AbhishekBachchan #AishwaryaRai #BachchanFamily #DesiVibes #TiktokIndia… pic.twitter.com/rUu3mhrRvw
— QuipQuestIndian (@StylishSwadeshi) December 1, 2024
ವಿಡಿಯೊದಲ್ಲಿ ಐಶ್ವರ್ಯಾ ಮತ್ತು ಅಭಿಷೇಕ್ ವಿಶೇಷ ಹುಟ್ಟುಹಬ್ಬದ ಆಚರಣೆಯಲ್ಲಿ ಒಟ್ಟುಗೂಡಿಸಿದ್ದಕ್ಕಾಗಿ ಆಯೋಜಕರಿಗೆ ಧನ್ಯವಾದ ತಿಳಿಸಿದ್ದಾರೆ. ದಂಪತಿ ಸೋಲೋ ವಿಡಿಯೊಗಳಲ್ಲಿ, ಪಾರ್ಟಿ ಆಯೋಜಕರು ಆರಾಧ್ಯ ಅವರ 13ನೇ ವರ್ಷದ ಜನ್ಮದಿನವನ್ನು ಆಯೋಜಿಸಿದ್ದು, ಮೆಮೊರೆಬಲ್ ಪಾರ್ಟಿಗಾಗಿ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಆರಾಧ್ಯ ಅವರ ಹುಟ್ಟುಹಬ್ಬದ ಸಮಾರಂಭದಲ್ಲಿ ಐಶ್ವರ್ಯಾ ಮತ್ತು ಅಭಿಷೇಕ್ ಒಟ್ಟಿಗೆ ಇರುವುದನ್ನು ವಿಡಿಯೊಗಳು ಖಚಿತಪಡಿಸುತ್ತವೆ. ಅಭಿಷೇಕ್ ತಮ್ಮ ಮಗಳ ಬರ್ತ್‌ಡೇಗೆ ಗೈರಾಗಿದ್ದರು ಎಂಬ ಗಾಸಿಪ್ ಗೆ ಸದ್ಯ ಬ್ರೇಕ್ ಬಿದ್ದಿದೆ.
ಈ ಸುದ್ದಿಯನ್ನೂ ಓದಿ: Abhishek-Aishwarya: ಐಶ್ವರ್ಯ ಜತೆ ಡಿವೋರ್ಸ್ ವದಂತಿ ಬೆನ್ನಲ್ಲೇ ಮೌನ ಮುರಿದ ಅಭಿಷೇಕ್ ಬಚ್ಚನ್; ವಿಡಿಯೋ ಫುಲ್ ವೈರಲ್