ನವದೆಹಲಿ: ಬಾಲಿವುಡ್‌ನ ಸ್ಟಾರ್ ಕಪಲ್‌ಗಳ ಡಿವೋರ್ಸ್ ವದಂತಿ ಆಗಾಗ ಕೇಳಿಬರುತ್ತಿರುತ್ತವೆ. ನಟಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಸಂಬಂಧ ಡಿವೋರ್ಸ್ ಹಂತಕ್ಕೆ ಬಂದು ತಲುಪಿದೆ ಎಂಬ ಸುದ್ದಿ ಆಗಾಗ ಕೇಳಿಬರುತ್ತಿದೆ. ಇದೀಗ ಬಾಲಿವುಡ್‌ನ ಮತ್ತೊಂದು ಸ್ಟಾರ್ ದಂಪತಿ ನಟ ಗೋವಿಂದ(Actor Govinda) ಮತ್ತು ಸುನೀತಾ ಅಹುಜಾ ನಡುವಿನ ಸಂಬಂಧದಲ್ಲು ಬಿರುಕು ಬಿಟ್ಟಿದೆ ಎಂಬ ಸುದ್ದಿ ಬಿಟೌನ್‌ನಲ್ಲಿ ಹರಿದಾಡುತ್ತಿದೆ(Viral News).
ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಮದುವೆ ಸಂಬಂಧದ ಬಗ್ಗೆ ಮಾತನಾಡಿದ ಸುನೀತಾ ಅಹುಜಾ (Sunita Ahuja) ಅವರು ತನ್ನ ಪತಿಯ ಸ್ವಭಾವದ ಕುರಿತಾಗಿ ಮಾತನಾಡಿದ್ದಾರೆ. ಸುನೀತಾ ಅಹುಜಾ ಅವರ ಮಾತುಗಳನ್ನು ಕೇಳಿದ ನೆಟ್ಟಿಗರು ನಿಮಗೆ ಡಿವೋರ್ಸ್ ಆಗಿದೆಯಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಸುನೀತಾ ಅಹುಜಾ ಅವರು ಈಗ ಮದುವೆ ಬಗ್ಗೆ ಯಾವುದೇ ನಂಬಿಕೆ ಉಳಿದಿಲ್ಲ ಎಂದು ಬಹಿರಂಗಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿ ನಮಗೆ ಎರಡು ಮನೆಗಳಿವೆ ನಾನು ಮತ್ತು ನನ್ನ ಮಕ್ಕಳು ಪ್ರತ್ಯೇಕ ಫ್ಲಾಟ್‌ನಲ್ಲಿದ್ದೇವೆ. ಗೋವಿಂದ ಅವರು ಅಪಾರ್ಟ್ಮೆಂಟ್ ಎದುರಿನ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ತಮ್ಮ ದಾಂಪತ್ಯ ಜೀವನದ ಆರಂಭಿಕ ದಿನಗಳನ್ನು ಮೆಲುಕು ಹಾಕುತ್ತಾ ತನ್ನ ಪತಿ ಮಹಿಳೆಯರನ್ನು ಸ್ಪರ್ಶಿಸಲು ಸಹ ಹೆದರುತ್ತಿದ್ದರು. ಗೋವಿಂದ ವಿಶೇಷವಾಗಿ ರೋಮ್ಯಾಂಟಿಕ್ ಅಲ್ಲ, ಈಗ ಅವನು ಹಾಗೆಯೇ ಇದ್ದಾನೆಯೇ ಎಂದು ನನಗೆ ತಿಳಿದಿಲ್ಲ. ನಿಮ್ಮ ಬೆನ್ನಿನ ಹಿಂದೆ ಜನರು ಏನು ಮಾಡುತ್ತಾರೆಂದು ನಮಗೆ ತಿಳಿಯುವುದಿಲ್ಲ, ಎಂದಿಗೂ ಯಾರನ್ನು ನಂಬಬೇಡಿ, ಜನರು ಊಸರವಳ್ಳಿಯಂತೆ ಬಣ್ಣ ಬದಲಾಯಿಸುತ್ತಾರೆ ಎಂದು ಹೇಳಿದ್ದಾರೆ.
ನಾವು ಮದುವೆಯಾಗಿ 37 ವರ್ಷಗಳು ಆಗಿವೆ ತನ್ನ ಪತಿ ಎಲ್ಲಿಗೆ ಹೋಗುತ್ತಾನೆ? ಏನು ಮಾಡುತ್ತಾನೆ ನನಗೆ ತಿಳಿದಿಲ್ಲ ಅಂದಿದ್ದಾರೆ. ಗೋವಿಂದ ಅವರ ಸ್ವಭಾವದ ಬಗ್ಗೆ ಸಂದರ್ಶನದಲ್ಲಿ ಕೇಳಿದಾಗ, ನನ್ನ ಮುಂದಿನ ಜನ್ಮದಲ್ಲಿ ಅವನು ನನ್ನ ಗಂಡನಾಗಬಾರದು ಎಂದು ನಾನು ಅವನಿಗೆ ಹೇಳಿದ್ದು ಇದೆ. ಆತ ಯಾವಾಗಲೂ ಕೆಲಸದಲ್ಲಿ ಬ್ಯುಸಿ ಇರುತ್ತಾನೆ. ಅವನು ತನ್ನ ಹೆಚ್ಚಿನ ಸಮಯವನ್ನು ಕೆಲಸಕ್ಕಾಗಿ ಮೀಸಲಿಡುತ್ತಾನೆ. ನಾವಿಬ್ಬರೂ ಒಟ್ಟಿಗೆ ಸಿನಿಮಾ ನೋಡಲು ಹೋದ ಸಮಯವು ನನಗೆ ನೆನಪಿಲ್ಲ ಎಂದಿದ್ದಾಳೆ.
ಈ ಬಗ್ಗೆ ನಾನು ತುಂಬಾ ಮಾತನಾಡುವುದಿಲ್ಲ ಯಾಕೆಂದರೆ ನೀವು ಹೆಚ್ಚು ಮಾತನಾಡುವ ಮೂಲಕ ನಿಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತೀರಿ ಎಂದು ನನಗೆ ಅನಿಸಿದೆ ಎಂದು ಸಂದರ್ಶನ ವೊಂದರಲ್ಲಿ ಹೇಳಿಕೊಂಡಿದ್ದಾರೆ. ಇವರ ಈ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಗೋವಿಂದ ಮತ್ತು ಅವರ ಪತ್ನಿ ಸುನೀತಾ ಅಹುಜಾ ಅವರಿಗೆ ಡಿವೊರ್ಸ್ ಆಗಿದೆಯಾ ಎಂದು ಅವರ ಅಭಿಮಾನಿಗಳು ಚರ್ಚೆ ಮಾಡಿಕೊಳ್ಳುವಂತೆ ಆಗಿದೆ.
ಈ ಸುದ್ದಿಯನ್ನೂ ಓದಿ:Physical Abuse: ಟಿವಿ ಸೀರಿಯಲ್ ನೋಡಿ 13 ವರ್ಷದ ಸಹೋದರಿಯನ್ನೇ ಅತ್ಯಾಚಾರ ಮಾಡಿದ; ಬಾಲಕಿ ಈಗ ಗರ್ಭಿಣಿ!