Saturday, 14th December 2024

ಹಿರಿಯ ನಟ ಸೌಮಿತ್ರ ಚಟರ್ಜಿಗೆ ಕೊರೋನ ಸೋಂಕು ದೃಢ

ಕೋಲ್ಕತಾ: ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಬಂಗಾಳದ ಹಿರಿಯ ನಟ ಸೌಮಿತ್ರ ಚಟರ್ಜಿಗೆ ಅಕ್ಟೋಬರ್ 6ರಂದು ಕೊರೋನ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದ್ದು, ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರಗೆ ದಾಖಲಿಸಲಾಗಿದೆ.

ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಶುಕ್ರವಾರ ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 85ರ ವಯಸ್ಸಿನ ಚಟರ್ಜಿ ಕೊರೋನ ವೈರಸ್ ಸೋಂಕು ತಗಲಿದ ಕಾರಣ ಕೋಲ್ಕತಾ ದ ನರ್ಸಿಂಗ್ ಹೋಮ್‌ಗೆ ದಾಖಲಾಗಿದ್ದರು.

ಚಟರ್ಜಿ ಅವರು, ಆಸ್ಕರ್ ಪ್ರಶಸ್ತಿ ವಿಜೇತ ಸತ್ಯಜಿತ್ ರೇ ಜೊತೆಗೆ ಹಲವು ಚಿತ್ರಗಳಲ್ಲಿ ನಟಿಸಿದ್ದರು.