ಚೆನ್ನೈ: ತಮಿಳು ನಟ ವಿಶಾಲ್ (Actor Vishal) ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನೀಡಿ ಕಾಲಿವುಡ್‌ನ ಫೇಮಸ್ ಹೀರೋ ಎಂದೆನಿಸಿಕೊಂಡಿದ್ದಾರೆ. ಅವರ ನಟನೆಯ ಹಲವು ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ‘ಮದಗಜರಾಜ’ (Madha Gaja Raja) ಸಿನಿಮಾ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಸಂಕ್ರಾಂತಿ ಸಮಯದಲ್ಲಿ ಈ ಸಿನಿಮಾ ತೆರೆಗೆ ಬರ್ತಿದ್ದು ಇತ್ತೀಚೆಗೆ ಚಿತ್ರದ ಪ್ರೀ ರಿಲೀಸ್ ಫಂಕ್ಷನ್ ನಲ್ಲಿ ಭಾಗವಹಿಸಿದ್ದ ನಟ ವಿಶಾಲ್ ತೀರಾ ನಿಶ್ಯಕ್ತಿಯಿಂದ, ಆಯಾಸದಿಂದ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಗಾಬರಿಯಾಗಿದ್ದಾರೆ. (Viral Video)
ಮದಗಜರಾಜ ಚಿತ್ರ ಜನವರಿ 12ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ವಿಶಾಲ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ, ಅವರು ಆ ಕಾರ್ಯಕ್ರಮದಲ್ಲಿ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಕಾರ್ಯಕ್ರಮಕ್ಕೆ ಬರುವಾಗಲೇ ವಿಶಾಲ್ ಅವರು ಸಹಾಯಕ ಸಿಬ್ಬಂದಿಯ ಕೈಹಿಡಿದುಕೊಂಡು ಸಭಾಂಗಣಕ್ಕೆ ಬಂದಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.
ನಂತರ ಸಿನಿಮಾದ ಬಗ್ಗೆ ಮಾತನಾಡುವಾಗ ಅವರ ಕೈಗಳು ನಡುಗುತ್ತಿರುವುದು ಹಾಗೂ ಮಾತನಾಡಲು ತೊದಲಿದ್ದಾರೆ. ಅಲ್ಲದೆ ತೀವ್ರವಾಗಿ ಆಯಾಸ ಹಾಗೂ ನಿಶಕ್ತರಾಗಿರುವಂತೆ ಕಾಣಿಸುತ್ತದೆ. ಅವರು ಸ್ಟೇಜ್ ಮೇಲೆ ಮಾತನಾಡುವುದಕ್ಕೆ ಕಷ್ಟಪಡುತ್ತಿರುವುದನ್ನು ನೋಡಿರುವ ನಿರೂಪಕರು ಸ್ಟೇಜ್ ಮೇಲೆ ಸಂವಾದವನ್ನು ಮಾಡುವಂತೆ ಕಾರ್ಯಕ್ರಮವನ್ನು ತುಸು ಬದಲಾಯಿಸಿದ್ದಾರೆ.
What happened to Vishal🙁
— AmuthaBharathi (@CinemaWithAB) January 5, 2025
His hand was so shaking & can't even able hold Mic !!#MadhaGajaRaja pic.twitter.com/UiXez0b5lZ
ಏನಾಗಿದೆ ನಟನಿಗೆ?
ವಿಶಾಲ್ ಅವರು ಈ ರೀತಿ ತೊಂದರೆ ಎದುರಿಸಿರುವುದಕ್ಕೆ ಅವರಿಗೆ ತೀವ್ರವಾದ ಜ್ವರ ಇದದ್ದೇ ಕಾರಣ ಅಂತ ಹೇಳಲಾಗಿದೆ. ಆದರೆ, ಈ ಬಗ್ಗೆ ಅಧಿಕೃತ ಪ್ರಕಟಣೆ ಬಂದಿಲ್ಲ. ಅವರಿಗೆ ಸಾಮಾನ್ಯ ಜ್ವರವಿತ್ತೇ ಅಥವಾ ಏನಾದರೂ ಆರೋಗ್ಯ ಸಮಸ್ಯೆ ಇದೆಯೇ ಎನ್ನುವ ಬಗ್ಗೆ ಈ ವರೆಗೂ ವಿಶಾಲ್ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ವಿಶಾಲ್ ಅವರನ್ನು ಈ ರೀತಿ ನೋಡಿ ಅವರ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ.
12 ವರ್ಷಗಳ ನಂತರ ಮದಗಜರಾಜ ಸಿನಿಮಾ ಬಿಡುಗಡೆಯಾಗುತ್ತಿದ್ದು, ವಿಶಾಲ್, ಸಂತಾನಂ, ವರಲಕ್ಷ್ಮಿ, ಸತೀಶ್, ನಿತಿನ್ ಸತ್ಯ, ಸೋನುಸೂದ್, ಅಂಜಲಿ, ದಿವಂಗತ ನಟರಾದ ಮಣಿವಣ್ಣನ್, ಮನೋಬಾಲಾ, ಮೈಲಸ್ವಾಮಿ, ಚಿಟ್ಟಿಬಾಬು ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ. ‘ಮದಗಜರಾಜ’ ಚಿತ್ರವನ್ನು ಜೆಮಿನಿ ಫಿಲ್ಮ್ ಸರ್ಕ್ಯೂಟ್ ನಿರ್ಮಿಸಿದೆ.
ಈ ಸುದ್ದಿಯನ್ನೂ ಓದಿ : Year Ender 2024: 2024 ಕನ್ನಡಿಗರ ವರ್ಷ; ಪರಭಾಷಾ ಚಿತ್ರರಂಗದಲ್ಲಿ ಸ್ಯಾಂಡಲ್‌ವುಡ್ ಘಮ ಬೀರಿದ ಕಲಾವಿದರಿವರು