Wednesday, 18th September 2024

Actor Yash: ಅಂಡರ್‌ವೇರ್‌ ಜಾಹೀರಾತಿನಲ್ಲಿ ಯಶ್‌; ಕಮೆಂಟ್‌ ಮೂಲಕ ರಾಕಿಭಾಯ್‌ ಕಾಲೆಳೆದ ಫ್ಯಾನ್ಸ್‌

Actor Yash

ಬೆಂಳೂರು: ಹೊಂಬಾಳೆ ಫಿಲ್ಸ್ಮ್‌(Hombale Films) ಬ್ಯಾನರ್‌ನಲ್ಲಿ ನಿರ್ಮಾಣವಾದ ಪ್ರಶಾಂತ್‌ ನೀಲ್‌ (Prashanth Neel) ನಿರ್ದೇಶನದ ಕೆ.ಜಿ.ಎಫ್‌. (KGF) ಸರಣಿ ಚಿತ್ರಗಳ ಮೂಲಕ ರಾಕಿಂಗ್‌ ಸ್ಟಾರ್‌ ಯಶ್‌ (Actor Yash) ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಬದಲಾಗಿದ್ದಾರೆ. ಅವರಿಗೆ ಈಗ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಅವರ ಕಾಲ್‌ಶೀಟ್‌ಗಾಗಿ ನಿರ್ಮಾಪಕರು ಕಾಯುತ್ತಿದ್ದಾರೆ. ಜೊತೆಗೆ ಜಾಹೀರಾತಿಗೂ ಬೇಡಿಕೆ ಹೆಚ್ಚುತ್ತಿದೆ. ಪ್ರತಿಷ್ಠಿತ ಬ್ರ್ಯಾಂಡ್‌ಗಳು ಯಶ್‌ ಅವರನ್ನು ರಾಯಭಾರಿಯನ್ನಾಗಿಸಲು ತುದಿಗಾಲಿನಲ್ಲಿ ನಿಂತಿವೆ. ಈ ಮಧ್ಯೆ ಯಶ್‌ ಕಾಣಿಸಿಕೊಂಡ ಜಾಹೀರಾತೊಂದು ವೈರಲ್‌ ಆಗಿದೆ. ಮಜವಾದ ಕಮೆಂಟ್‌ ಮೂಲಕ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಸ್ತುತ ಯಶ್‌ ‘ಟಾಕ್ಸಿಕ್‌’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಾಕ್ಸ್‌ ಆಫೀಸ್‌ನಲ್ಲಿ ಕೊಳ್ಳೆ ಹೊಡೆದ ʼಕೆ.ಜಿ.ಎಫ್‌. 2ʼ ಸಿನಿಮಾ ಬಳಿಕ ಯಶ್‌ ಒಪ್ಪಿಕೊಂಡ ಚಿತ್ರ ಇದು. ಮಲಯಾಳಂ ಚಿತ್ರ ನಿರ್ದೇಶಕಿ, ನಟಿ ಗೀತು ಮೋಹನ್‌ದಾಸ್‌ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ʼಟಾಕ್ಸಿಕ್‌ʼನ ಶೂಟಿಂಗ್‌ ಈಗಾಗಲೇ ಆರಂಭವಾಗಿದೆ. ಅತ್ಯಂತ ಗೌಪ್ಯವಾಗಿ ಚಿತ್ರೀಕರಣ ನಡೆಯುತ್ತಿದ್ದು, ಯಶ್‌ ಅಭಿಮಾನಿಗಳು ಅಪ್‌ಡೇಟ್‌ಗಾಗಿ ಕಾಯುತ್ತಿದ್ದಾರೆ. ಈ ಮಧ್ಯೆ ಯಶ್‌ ತಾವು ಕಾಣಿಸಿಕೊಂಡ ಜಾಹೀರಾತನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಅಂಡರ್‌ವೇರ್‌ ಜಾಹೀರಾತು

ಮ್ಯಾಕ್ರೋಮ್ಯಾನ್‌ (Macroman) ಬ್ರ್ಯಾಂಡ್‌ನ ಅಂಡರ್‌ವೇರ್‌ ಜಾಹೀರಾತಿನಲ್ಲಿ ಯಶ್‌ ಕಾಣಿಸಿಕೊಂಡಿದ್ದು, ಇದನ್ನು ಪೋಸ್ಟ್‌ ಮಾಡಿದ್ದಾರೆ. ಸದ್ಯ ಈ ವೀಡಿಯೊ ನೋಡಿ ಫ್ಯಾನ್ಸ್‌ ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಅನೇಕ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಹಾರ್ಟ್‌ ಎಮೋಜಿ ಮೂಲಕ ಪ್ರತಿಕ್ರಿಯಿಸಿದ್ದಾರೆ. ಕೆಲವರು ಯಶ್‌ ಹಾಟ್‌ ಆಗಿ ಕಾಣಿಸುತ್ತಾರೆ ಎಂದಿದ್ದಾರೆ. ಕೆಲವರಂತೂ ಬೆಂಕಿ ಎಮೋಜಿ ಮೂಲಕ ಕಮೆಂಟ್‌ ಮಾಡಿದ್ದಾರೆ. ಇನ್ನೂ ಹಲವರು ‘ಕೆಜಿಎಫ್‌ 3’ ಟೀಸರಾ ಇದು ಅಂತ ವ್ಯಂಗ್ಯವಾಡಿದ್ದಾರೆ. ʼʼಹೊಸ ಹೇರ್‌ ಸ್ಟೈಲ್‌ ʼಟಾಕ್ಸಿಕ್‌ʼ ಚಿತ್ರಕ್ಕಾಗಿ ಎಂದು ಹಲವರು ಹೇಳಿದ್ದರು. ಈಗ ಗೊತ್ತಾಯ್ತಾ ಈ ಜಾಹೀರಾತಿಗಾಗಿ ಹೇರ್‌ ಸ್ಟೈಲ್‌ ಅಂತʼʼ ಎಂದು ಒಬ್ಬರು ತಿಳಿಸಿದ್ದಾರೆ. ಇನ್ನೊಬ್ಬರು ʼʼನೀವು ಜಾಹೀರಾತು ಮಾಡದಿದ್ದರೂ ಪರವಾಗಿಲ್ಲ. ಆದರೆ ಇಂತಹ ಒಳಉಡುಪಿನ ಆ್ಯಡ್‌ನಲ್ಲಿ ಕಾಣಿಸಿಕೊಳ್ಳಬೇಡಿʼʼ ಎಂದು ಮನವಿ ಮಾಡಿದ್ದಾರೆ.

ʼಟಾಕ್ಸಿಕ್‌ʼ ಚಿತ್ರದ ಅಪ್‌ಡೇಟ್‌ ಕೇಳಿದ ಫ್ಯಾನ್ಸ್‌

ಯಶ್‌ ಜಾಹೀರಾತನ್ನು ಅಪ್‌ಲೋಡ್‌ ಮಾಡಿದ್ದರೂ ಅದರ ಬಗ್ಗೆ ಚರ್ಚಿಸದ ಅನೇಕರು ಇಲ್ಲೂ ʼಟಾಕ್ಸಿಕ್‌ʼ ಅಪ್‌ಡೇಟ್‌ ಕೇಳಿದ್ದಾರೆ. ಬಹುತೇಕರು ʼಟಾಕ್ಸಿಕ್‌ʼ ಬಗ್ಗೆ ಮಾಹಿತಿ ನೀಡಿ ಎಂದೇ ಆಗ್ರಹಿಸಿದ್ದಾರೆ. ಹೆಚ್ಚಿನ ಕಮೆಂಟ್‌ ʼಟಾಕ್ಸಿಕ್‌ʼ ಬಗ್ಗೆ ಅಪ್‌ಡೇಟ್‌ ಕೊಡಿ ಎನ್ನುವುದೇ ಆಗಿದೆ. ಈ ಮೂಲಕ ಯಶ್‌ ಚಿತ್ರಕ್ಕಾಗಿ ಅಭಿಮಾನಿಗಳು ಯಾವ ರೀತಿ ಕಣ್ಣಿಗೆ ಎಣ್ಣೆ ಬಿಟ್ಟು ಕಾಯುತ್ತಿದ್ದಾರೆ ಎನ್ನುವುದರ ಸುಳಿವು ಸಿಕ್ಕಿದೆ. ಅಭಿಮಾನಿಗಳ ನಿರೀಕ್ಷೆಗೆ ಚ್ಯುತಿ ಬಾರದ ರೀತಿಯಲ್ಲಿ ಅದ್ಧೂರಿಯಾಗಿಯೇ ಚಿತ್ರವನ್ನು ತೆರೆ ಮೇಲೆ ತರಲು ಸಿನಿಮಾ ತಂಡ ಮುಂದಾಗಿದೆ.

ಯಾರೆಲ್ಲ ನಟಿಸುತ್ತಿದ್ದಾರೆ?

ಈ ಸಿನಿಮಾ ಗೋವಾದಲ್ಲಿ ನಡೆಯುವ ಡ್ರಗ್ಸ್‌ ಮಾಫಿಯಾದ ಮೇಲೆ ಬೆಳಕು ಚೆಲ್ಲಲಿದೆ ಎನ್ನಲಾಗಿದೆ. ಯಶ್‌ ಬಿಟ್ಟರೆ ಈ ಸಿನಿಮಾದಲ್ಲಿ ಬೇರೆ ಯಾರೆಲ್ಲ ನಟಿಸುತ್ತಿದ್ದಾರೆ ಎನ್ನುವ ವಿಚಾರವನ್ನು ಚಿತ್ರತಂಡ ರಿವೀಲ್‌ ಮಾಡಿಲ್ಲ. ಲೇಡಿ ಸೂಪರ್‌ಸ್ಟಾರ್‌ ನಯನತಾರಾ, ಮಲಯಾಳಂ ನಟ ಟೊವಿನೊ ಥಾಮಸ್‌ ಮತ್ತಿತರರು ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದ್ದು, ಸದ್ಯ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಹೀಗಾಗಿ ಈ ಸಿನಿಮಾ ಕುತೂಹಲ ಹೆಚ್ಚಿಸಿದೆ. ಮುಂದಿನ ವರ್ಷ ವಿಶ್ವಾದ್ಯಂತ ಈ ಚಿತ್ರ ತೆರೆ ಕಾಣಲಿದೆ.

ಈ ಸುದ್ದಿಯನ್ನೂ ಓದಿ: Actress Nayanthara : ನಟಿ ನಯನತಾರಾ ‘ಎಕ್ಸ್‌’ ಹ್ಯಾಂಡಲ್‌ ಹ್ಯಾಕ್‌!

Leave a Reply

Your email address will not be published. Required fields are marked *