Sunday, 24th September 2023

ದುಬೈಗೆ ಪ್ರಯಾಣಿಸಲಿದ್ದ ನಟಿ ಜಾಕ್ವೆಲಿನ್’ಗೆ ತಡೆ

ACtress jacqueline Fernandes

ಮುಂಬೈ: ಲುಕ್ ಔಟ್ ಸುತ್ತೋಲೆ ಕಾರಣದಿಂದಾಗಿ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಪ್ರಯಾಣಕ್ಕೆ ಮುಂಬೈ ವಿಮಾನ ನಿಲ್ದಾಣದ ಇಮಿಗ್ರೇಶನ್ ಅಧಿಕಾರಿಗಳು ತಡೆಯೊಡ್ಡಿದರು. ಸುಕೇಶ್ ಚಂದ್ರಶೇಖರ್ ಪ್ರಕರಣದಲ್ಲಿ ಕಾನೂನು ಜಾರಿ ನಿರ್ದೇಶನಾಲಯ ಈ ನಟಿ ವಿರುದ್ಧ ಲುಕೌಟ್ ನೋಟಿಸ್ ಜಾರಿ ಮಾಡಿತ್ತು.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಸಲುವಾಗಿ ನಟಿ ದುಬೈಗೆ ಪ್ರಯಾಣ ಬೆಳೆಸಲು ಉದ್ದೇಶಿಸಿದ್ದರು. ಅವರನ್ನು ಅಲ್ಪ ಕಾಲ ವಿಚಾರಣೆಗೆ ಗುರಿಪಡಿಸಿದ ಬಳಿಕ ಬಿಡುಗಡೆ ಮಾಡಿ ಏಜೆನ್ಸಿಯ ತನಿಖೆಗಾಗಿ ದೆಹಲಿಯಲ್ಲಿ ಹಾಜರಾಗು ವಂತೆ ಸೂಚಿಸ ಲಾಯಿತು.

ಚಂದ್ರಶೇಖರ್, ಫೆರ್ನಾಂಡಿಸ್ ಜತೆ ಹಣಕಾಸು ವ್ಯವಹಾರ ಹೊಂದಿದ್ದನ್ನು ತನಿಖಾ ಏಜೆನ್ಸಿ ಪತ್ತೆಮಾಡಿತ್ತು. 52 ಲಕ್ಷ ರೂ. ಮೌಲ್ಯದ ಒಂದು ಕುದುರೆ ಹಾಗೂ 9 ಲಕ್ಷ ರೂಪಾಯಿಯ ಒಂದು ಪರ್ಶಿಯನ್ ಬೆಕ್ಕು ಸೇರಿದಂತೆ 10 ಕೋಟಿ ರೂಪಾಯಿ ಮೌಲ್ಯದ ಉಡುಗೊರೆಗಳನ್ನು ಚಂದ್ರಶೇಖರ್, ಫೆರ್ನಾಂಡಿಸ್‌ಗೆ ನೀಡಿದ್ದ ಎಂದು ಚಾರ್ಜ್‌ ಶೀಟ್‌ನಲ್ಲಿ ಉಲ್ಲೇಖಿಸಲಾಗಿತ್ತು.

error: Content is protected !!