Sunday, 15th December 2024

Bigg Boss Telugu 8: ತೆಲುಗು ಬಿಗ್ ಬಾಸ್ ಗೆ ಎಂಟ್ರಿ ಕೊಡಲಿದ್ದಾರೆ ನಟಿ ಪ್ರೇರಣಾ

Bigg Boss Telugu 8

ಹೈದರಾಬಾದ್: ತೆಲುಗಿನಲ್ಲಿ (telugu) ಅತೀ ಹೆಚ್ಚು ವೀಕ್ಷಕರನ್ನು ಹೊಂದಿರುವ ರಿಯಾಲಿಟಿ ಶೋ  ಬಿಗ್ ಬಾಸ್ ತೆಲುಗು ಸೀಸನ್ – 8 (Bigg Boss Telugu 8) ಭಾನುವಾರದಿಂದ ಪ್ರಸಾರವಾಗಲಿದ್ದು, ಪ್ರತಿಬಾರಿಯಂತೆ ಈ ಬಾರಿಯೂ ನಟ ನಾಗಾರ್ಜುನ ಅಕ್ಕಿನೇನಿ (Nagarjuna Akkineni) ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಸಾಕಷ್ಟು ಮನೋರಂಜನೆಯನ್ನು ಕೊಡಲಿರುವ ಇದರ ಪ್ರೀಮಿಯರ್ ಎಪಿಸೋಡ್‌ನ ಬಿಡುಗಡೆಯ ಮೊದಲು ಬಿಗ್ ಬಾಸ್ ತೆಲುಗು 8 ರಲ್ಲಿ 15 ಸದಸ್ಯರು ಭಾಗವಹಿಸಲಿದ್ದಾರೆ ಎನ್ನುವ ವದಂತಿಗಳು ಹೊರಬಿದ್ದಿದೆ.

ಸ್ಪರ್ಧಿಗಳಾಗಿ ಬೆಜವಾಡ ಬೇಬಕ್ಕ, ಯಶ್ಮಿ ಗೌಡ, ನೈನಿಕಾ, ಆದಿತ್ಯ ಓಂ, ಅಭಯ್ ನವೀನ್, ಶೇಖರ್ ಬಾಷಾ, ನಿಖಿಲ್ ಮಳಿಯಕ್ಕಲ್, ಕಿರಕ್ ಸೀತಾ, ವಿಷ್ಣುಪ್ರಿಯಾ, ಪ್ರೇರಣಾ, ಸೋನಿಯಾ ಅಕುಲಾ, ಪರಮೇಶ್ವರ್ ಹಿವ್ರಾಳೆ, ನಾಗ ಮಣಿಕಂಠ, ನ್ಯೂಸ್ ರೀಡರ್ ಕಲ್ಯಾಣಿ ಮತ್ತು ರವಿತೇಜ ಅನಪರ್ತಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.

ಬಿಗ್ ಬಾಸ್ ತೆಲುಗು 8ರ ಪ್ರೀಮಿಯರ್ ಗೂ ಮುನ್ನ ಪ್ರೇರಣಾ ಹೆಚ್ಚು ಮಂದಿಯ ಗಮನ ಸೆಳೆದಿದ್ದಾರೆ.

Bigg Boss Telugu 8

ಯಾರು ಈ ಪ್ರೇರಣಾ ?

ಪ್ರೇರಣಾ ಅವರ ಪೂರ್ಣ ಹೆಸರು ಪ್ರೇರಣಾ ಕಂಬಂ. ಇನ್ ಸ್ಟಾಗ್ರಾಮ್ ನಲ್ಲಿ ಸಕ್ರಿಯರಾಗಿರುವ ಇವರು ದಕ್ಷಿಣ ಭಾರತದ ದೂರದರ್ಶನ ಮತ್ತು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಮತ್ತು ತೆಲುಗು ಚಿತ್ರೋದ್ಯಮದಲ್ಲಿ ಕೆಲಸ ಮಾಡಿದ್ದಾರೆ. 1996ರ ಜೂನ್ 18ರಂದು ಜನಿಸಿದ ಪ್ರೇರಣಾ ಮೂಲತಃ ತೆಲಂಗಾಣದ ಹೈದರಾಬಾದ್‌ನವರು.

“ಹರ ಹರ ಮಹಾದೇವ” ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದರು. 2018 ರಲ್ಲಿ ಪ್ರೇರಣಾ “ಚೂರಿಕಟ್ಟೆ” ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಪಡೆದರು. ರಂಗನಾಯಕಿ ಧಾರಾವಾಹಿ ಮೂಲಕ ಎಲ್ಲರ ಗಮನ ಸೆಳೆದ ಅವರು ಕನ್ನಡ ಚಲನಚಿತ್ರಗಳಾದ ಆನ, ಪೆಂಟಗನ್, ಫಿಸಿಕ್ಸ್ ಟೀಚರ್ ನಲ್ಲಿ ಬಣ್ಣ ಹಚ್ಚಿದ್ದಾರೆ.

2021ರಲ್ಲಿ ಪ್ರೇರಣಾ ಬಿಗ್ ಬಾಸ್ ಕನ್ನಡ ಮಿನಿ-ಸೀಸನ್‌ನಲ್ಲಿ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಶ್ರೀಪಾದ್ ದೇಶಪಾಂಡೆ ಅವರನ್ನು ವಿವಾಹವಾಗಿರುವ ಪ್ರೇರಣಾ ತೆಲುಗು ರಿಯಾಲಿಟಿ ಶೋನಲ್ಲಿ ಯಾವ ರೀತಿ ಪ್ರದರ್ಶನ ನೀಡಬಹುದು ಎಂಬುದನ್ನು ಕಾದು ನೋಡಬೇಕು.