Thursday, 28th November 2024

ಮಗಳು ಸಾಯುವಂತಹ ಹುಡುಗಿಯಲ್ಲ: ನಟಿ ಸೌಜನ್ಯ ತಂದೆ

ಬೆಂಗಳೂರು: ಕಿರುತೆರೆ ನಟಿ ಸೌಜನ್ಯ ಮಾದಪ್ಪ ಅವರದ್ದು ಕೊಲೆಯೋ ಆತ್ಮಹತ್ಯೆಯೋ ಎಂಬ ಶಂಕೆ ಆರಂಭವಾಗಿದೆ. ಮಗಳ ಸಾವಿನ ಬಗ್ಗೆ ಸೌಜನ್ಯ ತಂದೆ ನೀಡಿರುವ ಹೇಳಿಕೆ ಈ ಅನುಮಾನಕ್ಕೆ ಪುಷ್ಠಿ ನೀಡುವಂತಿದೆ.

ನಟಿ ಸೌಜನ್ಯ ತಂದೆ ಪ್ರಭು, ನನ್ನ ಮಗಳು ಸಾಯುವಂತಹ ಹುಡುಗಿಯಲ್ಲ. ನಮ್ಮ ಬಳಿ ಕೂಡ ತನಗೆ ಆರೋಗ್ಯ ಸಮಸ್ಯೆಯಾಗಲಿ ಅಥವಾ ಬೇರೆ ಸಮಸ್ಯೆಯಿರುವ ಬಗ್ಗೆಯೂ ಹೇಳಿಲ್ಲ. ಊರಿಗೆ ಬರುತ್ತಿದ್ದೇನೆ ಎಂದು ಹೇಳಿದವರು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನುವುದು ನಂಬಲು ಸಾಧ್ಯವಿಲ್ಲ. ಮಗಳ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳಿವೆ ಆಕೆಯ ಮೊಬೈಲ್ ಫೋನ್ ಸಿಕ್ಕರೆ ಸತ್ಯಾಂಶ ಬಯಲಾಗಲಿದೆ ಎಂದು ಹೇಳಿದ್ದಾರೆ.

ನನ್ನ ಮಗಳು ನೇಣು ಬಿಗಿದುಕೊಂಡಿರುವ ಸಾಧ್ಯತೆ ಕಡಿಮೆಯಿದೆ. ಮಹೇಶ್ ಮೃತ ಸೌಜನ್ಯ ಪಿಎ ಎಂದು ಹೇಳಲಾಗುತ್ತಿದೆ. ಮಹೇಶ್ ಒಬ್ಬನೇ ಮೃತದೇಹವನ್ನು ಇಳಿಸಿದ್ದಾನೆ. ಪೊಲೀಸರನ್ನು ಕರೆಸದೆ ಮೃತದೇಹ ಇಳಿಸಿರುವುದು ಕೂಡ ಅನುಮಾನ ಮೂಡಿಸುತ್ತಿದೆ. ಮಗಳ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಯಬೇಕಿದೆ ಎಂದು ಅಳಲು ತೋಡಿಕೊಂಡಿದ್ದಾರೆ.