2007ರಲ್ಲಿ ಶಿಲ್ಪಾ ಶೆಟ್ಟಿ ವಿರುದ್ಧ ದಾಖಲಾಗಿದ್ದ ಅಶ್ಲೀಲತೆ ಪ್ರಕರಣದ ವಿಚಾರಣೆ ನಡೆಸಿದ ಮೆಟ್ರೋ ಪಾಲಿಟನ್ ಮ್ಯಾಜಿಸ್ಟ್ರೇಟ್ ಕೇತಕಿ ಚವ್ಹಾಣ್ ಅವರು, ನಟಿ ವಿರುದ್ಧದ ಪ್ರಕರಣವನ್ನು ಕೈ ಬಿಡಲಾ ಗಿದೆ.
2007 ರಲ್ಲಿ, ರಾಜಸ್ಥಾನದಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರದಲ್ಲಿ ಶಿಲ್ಪಾ ಶೆಟ್ಟಿ ಅವರು ಭಾಗಿಯಾಗಿದ್ದರು. ಈ ವೇಳೆ ನಟ ರಿಚರ್ಡ್ ಗಿಯರ್ ಅವರು ಕಾರ್ಯಕ್ರಮದಲ್ಲಿ ಶಿಲ್ಪಾಗೆ ಮುತ್ತಿಟ್ಟಿದ್ದರು. ಈ ಕಾರ್ಯ ಕ್ರಮದಲ್ಲಿ ಶಿಲ್ಪಾ ಶೆಟ್ಟಿ ಅಶ್ಲೀಲತೆ ಮೆರೆದಿದ್ದಾರೆ ಎಂದು ಆರೋಪಿಸಿ ಕೇಸ್ ದಾಖಲಾಗಿತ್ತು. ಈಗ ಅವರಿಗೆ ಈ ಪ್ರಕರಣದಲ್ಲಿ ರಿಲೀಫ್ ಸಿಕ್ಕಿದೆ.
ಪೊಲೀಸರ ವರದಿ ಹಾಗೂ ದಾಖಲೆಗಳನ್ನು ಪರಿಗಣಿಸಿದಾಗ ಶಿಲ್ಪಾ ಅವರ ವಿರುದ್ಧ ದಾಖಲಾದ ಪ್ರಕರಣ ಆಧಾರ ರಹಿತವಾದದ್ದು. ರಿಚರ್ಡ್ ಗಿಯರ್ ಕೃತ್ಯಕ್ಕೆ ಶಿಲ್ಪಾ ಶೆಟ್ಟಿ ಬಲಿಪಶುವಾಗಿದ್ದಾರೆ ಎಂದು ಕೋರ್ಟ್ ಆದೇಶ ಹೇಳಿದೆ.