Friday, 20th December 2024

Aishwarya-Abhishek: ಡಿವೋರ್ಸ್‌ ವದಂತಿ ನಡುವೆಯೇ ಜತೆಯಾಗಿ ಕಾಣಿಸಿಕೊಂಡ ಐಶ್ವರ್ಯ-ಅಭಿಷೇಕ್‌ ದಂಪತಿ; ಬಿಗ್‌ ಬಿ ಕೂಡ ಸಾಥ್‌!

Abhishek-Aishwarya

ಮುಂಬೈ: ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಬಚ್ಚನ್ (Aishwarya-Abhishek) ಸಂಬಂಧದಲ್ಲಿ ಬಿರುಕು ಮೂಡಿದೆ. ಸದ್ಯದಲ್ಲೇ ಡಿವೋರ್ಸ್ ಆಗಲಿದೆ ಎನ್ನುವ ಗಾಸಿಪ್ ಇಂದಿಗೂ ಹರಿದಾಡ್ತಾ ಇದೆ. ಈ ವಿಚಾರವಾಗಿ ಬಚ್ಚನ್ ಕುಟುಂಬವಾಗಲೀ, ಐಶ್ವರ್ಯ ರೈ ಆಗಲಿ ಯಾವುದೇ ಹೇಳಿಕೆ ನೀಡಿಲ್ಲ. ಇದೀಗ ಐಶ್ವರ್ಯ, ಅಭಿಷೇಕ್ ಬಚ್ಚನ್ ಹಾಗೂ ಅಮಿತಾಬ್ ಬಚ್ಚನ್, ಪುತ್ರಿ ಅರಾಧ್ಯ ಶಾಲಾ ಕಾರ್ಯಕ್ರಮದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

ಐಶ್ವರ್ಯ ರೈ ದುಪ್ಪಟ ಜಾರದಂತೆ ಕಾಳಜಿ ವಹಿಸಿದ ಅಭಿಷೇಕ್!
ಅರಾಧ್ಯ ಓದುತ್ತಿರುವ ಮುಂಬೈನ ಶಾಲೆಯಲ್ಲಿ ವಾರ್ಷಿಕೋತ್ಸವ ಜರುಗಿತ್ತು. ಈ ಸಮಾರಂಭಕ್ಕೆ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಕೂಡ ಆಗಮಿಸಿದರು. ವಿಚ್ಛೇದನದ ವದಂತಿಗಳಿಗೆ ಸ್ಪಷ್ಟನೆ ನೀಡುವ ಮೂಲಕ ತಮ್ಮ ಮಗಳು ಆರಾಧ್ಯ ಅವರ ವಾರ್ಷಿಕೋತ್ಸವ ದಿನದಂದು ಐಶ್ವರ್ಯ ಮತ್ತು ಅಭಿಷೇಕ್ ಕೈ- ಕೈ ಹಿಡಿದುಕೊಂಡು ಆಗಮಿಸಿದ್ದಾರೆ. ಹಾಗೆಯೇ ಶಾಲಾ ಕಾರ್ಯಕ್ರಮದಲ್ಲಿ ಪತ್ನಿ ಐಶ್ವರ್ಯ ದುಪ್ಪಟ ಕೆಳಗೆ ಬೀಳದಂತೆ ಅಭಿಷೇಕ್ ಕಾಳಜಿ ವಹಿಸಿದ್ದಾರೆ. ಇತ್ತ ಅಭಿಷೇಕ್ ಬಚ್ಚನ್ ಪತ್ನಿಯ ದುಪ್ಪಟ ಹಿಡಿದು ಪತ್ನಿಗೆ ಸಹಕರಿಸಿದ್ದ ಫೋಟೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಜೊತೆಯಾಗಿ ಕುಳಿತು ಮಗಳ ಕಾರ್ಯಕ್ರಮ ವೀಕ್ಷಣೆ!
ಆರಾಧ್ಯ ಶಾಲಾ ವಾರ್ಷಿಕೋತ್ಸವ ತೆರಳಿದ್ದ ಬಚ್ಚನ್ ಕುಟುಂಬ‌ ಅರಾಧ್ಯಳ ಸಾಂಸ್ಕೃತಿಕ ಕಾರ್ಯಕ್ರಮ ಒಟ್ಟಿಗೆ ಕುಳಿತು ವೀಕ್ಷಿಸಿದ್ದಾರೆ. ಪುತ್ರಿ ಅರಾಧ್ಯ ನೃತ್ಯವನ್ನು ಐಶ್ವರ್ಯ ಹಾಗೂ ಅಭಿಷೇಕ್ ಬಚ್ಚನ್ ತಮ್ಮ ಮೊಬೈಲ್ ಮೂಲಕ ರೆಕಾರ್ಡ್ ಮಾಡಿದ್ದಾರೆ. ಐಶ್ವರ್ಯ ರೈ, ಅಭಿಷೇಕ್ ಬಚ್ಚನ್ ಹಾಗೂ ಅಮಿತಾಬ್ ಬಚ್ಚನ್ ಮೂವರು ಒಂದೇ ಸಾಲಿನಲ್ಲಿ ಜೊತೆಯಾಗಿ ಕುಳಿತುಕೊಂಡು ಕಾರ್ಯಕ್ರಮ ವೀಕ್ಷಿಸಿದ್ದಾರೆ.

ಈ ಮೂಲಕ ಮಗಳ ಶಾಲಾ ಕಾರ‍್ಯಕ್ರಮಕ್ಕೆ ಒಟ್ಟಿಗೆ ಆಗಮಿಸುವ ಮೂಲಕ ಡಿವೋರ್ಸ್ ಕೇಸ್ ಊಹಾ ಪೋಹಗಳಿಗೆ ತೆರೆ ಎಳಿದಿದ್ದಾರೆ. ಇವರ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗ್ತಾ ಇದ್ದು ಈ‌ ಫೋಟೋ ಹಾಗೂ ವಿಡಿಯೋಗಳಿಗೆ ಇವರ ಅಭಿಮಾನಿಗಳು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಇವರಿಬ್ಬರ ಈ ಜೋಡಿಯನ್ನು ಜೊತೆಯಾಗಿ ನೋಡಿ ಖುಷಿ ವ್ಯಕ್ತಪಡಿಸಿದ್ದು, ಈ ಫೋಟೋದಲ್ಲಿರುವ ಹಾಗೆ ಈ ಜೋಡಿ ಸದಾ ಕಾಲ ಜೊತೆಗಿರಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

ಇದನ್ನು ಓದಿ:Bigg Boss: ಬಿಗ್‍ಬಾಸ್ ನಿರೂಪಣೆಗೆ ಸಲ್ಮಾನ್ ಖಾನ್ ಸಂಭಾವನೆ ಬಾಹುಬಲಿ, ಜೈಲರ್‌ ಬಜೆಟ್‌ಗಿಂತ ಹೆಚ್ಚು!