Tuesday, 26th November 2024

Aishwarya Rai: ಡಿವೋರ್ಸ್‌ ರೂಮರ್ ನಡುವೆ ಐಶ್ವರ್ಯ ರೈ ಇನ್ಸ್ಟಾ ಪೋಸ್ಟ್‌ ಫುಲ್‌ ವೈರಲ್‌! ಅಂತಹದ್ದೇನಿದೆ?

Aishwarya Rai

ಮುಂಬೈ: ಬಾಲಿವುಡ್‌ ನಟಿ ಐಶ್ವರ್ಯ ರೈ (Aishwarya Rai) ಹಾಗೂ ಪತಿ ಅಭಿಷೇಕ್‌ ಬಚ್ಚನ್‌ ( Abhishek Bachchan) ನಡುವೆ ಏನೂ ಸರಿ ಇಲ್ಲ.. ಸದ್ಯವೇ ಇಬ್ಬರು ವಿಚ್ಛೇದನ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಬಿ ಟೌನ್‌ನಲ್ಲಿ ಹರಿದಾಡುತ್ತಿದೆ. ಇದೀಗ ಅದಕ್ಕೆ ಪುಷ್ಟಿ ಎನ್ನುವಂತೆ ಸೋಮವಾರ ಐಶ್ವರ್ಯ ರೈ ತಮ್ಮ ಇನ್ಸ್ಟಾ‌ಗ್ರಾಂ ಖಾತೆಯಲ್ಲಿ ವಿಡಿಯೋ (Aishwarya Rai Insta Post) ಒಂದನ್ನು ಹಂಚಿಕೊಂಡಿದ್ದು, ಮಹಿಳೆಯರು ತಮಗಾಗಿ ದೃಢವಾಗಿ ನಿಲ್ಲುವಂತೆ ಸಲಹೆ ನೀಡಿದ್ದಾರೆ ಮತ್ತು ಬೇರೊಬ್ಬರಿಗಾಗಿ ತಮ್ಮ ಮೌಲ್ಯವನ್ನು ಎಂದಿಗೂ ರಾಜಿ ಮಾಡಿಕೊಳ್ಳಬೇಡಿ ಎಂದು ಹೇಳಿದ್ದಾರೆ.

ವಿಡಿಯೋದಲ್ಲಿ ಅವರು ಮಹಿಳೆಯ ಮೇಲಾಗುತ್ತಿರುವ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ. ಎಂತಹುದೇ ಪರಿಸ್ಥಿತಿ ಬಂದರೂ ನಿಮ್ಮ ಮೌಲ್ಯವನ್ನು ಬೇರೆಯವರಿಗೋಸ್ಕರ ಬಿಟ್ಟುಕೊಡಬೇಡಿ. ನಿಮ್ಮ ಜೊತೆ ನೀವಿರಿ. ನಿಮ್ಮ ದೈಹಿಕ ರಚನೆ, ಬಟ್ಟೆ ಯಾವುದರ ಮೇಲೆಯೂ ದೂರಬೇಡಿ. ಕಿರುಕುಳ ನೀಡುವವರ ವಿರುದ್ಧ ನಿಲ್ಲಿ ಎಂದು ಹೇಳಿದ್ದಾರೆ. ಮಹಿಳೆಯರ ವಿರುದ್ಧದ ಹಿಂಸಾಚಾರ ನಿರ್ಮೂಲನೆಗಾಗಿ ಲೋರಿಯಲ್ ಪ್ಯಾರಿಸ್ ಎಂಬ ಬ್ರ್ಯಾಂಡ್‌ಗಾಗಿ ಅವರು ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

ಇತ್ತೀಚೆಗೆ ಅಭಿಷೇಕ್‌ ಬಚ್ಚನ್‌ ಹಾಗೂ ಐಶ್ವರ್ಯ ದಂಪತಿಗಳು ಬೇರೆಯಾಗುತ್ತಾರೆ ಎಂಬ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಅದಕ್ಕೆ ಪುಷ್ಟಿ ಎನ್ನುವಂತೆ ಇತ್ತೀಚೆಗೆ ಪುತ್ರಿ ಆರಾಧ್ಯ ಬಚ್ಚನ್‌ ಹುಟ್ಟಿದ ದಿನದಂದು ಅಭಿಷೇಕ್‌ ಸೋಶಿಯಲ್‌ ಮೀಡಿಯಾದಲ್ಲಿ ಶುಭಾಶಯ ಕೋರಿರಲಿಲ್ಲ. ಹಾಗೂ ಆರಾಧ್ಯ ಹುಟ್ಟಿದ ಹಬ್ಬದ ಪ್ರಯುಕ್ತ ನಡೆಸಿದ್ದ ಪಾರ್ಟಿಯಲ್ಲಿ ಬಚ್ಚನ್‌ ಕುಟುಂಬದ ಯಾರೊಬ್ಬ ಸದಸ್ಯರೂ ಭಾಗಿಯಾಗಿರಲಿಲ್ಲ ಎಂದು ತಿಳಿದು ಬಂದಿದೆ.

ವಿಚ್ಛೇದನದ ವದಂತಿಗಳ ನಡುವೆ ಅಭಿಷೇಕ್‌ ಬಚ್ಚನ್‌ ಬಾಲಿವುಡ್‌ ನಟಿ ನಿಮ್ರತ್‌ ಕೌರ್‌ ಜತೆ ಅಫೇರ್‌ ಹೊಂದಿದ್ದಾರೆ ಎಂಬ ಸುದ್ದಿಯೂ ಬಿ ಟೌನ್‌ನಲ್ಲಿಬಹಳ ಸದ್ದು ಮಾಡಿದೆ. ಇವರಿಬ್ಬರೂ ದಸ್ವಿ ಎಂಬ ಸಿನಿಮಾದಲ್ಲಿ ಜತೆಯಾಗಿ ನಟಿಸಿದ್ದರು. ದಸ್ವಿ ಸಿನಿಮಾ ಸೆಟ್‌ನಲ್ಲಿ ಇಬ್ಬರ ನಡುವೆ ಸ್ನೇಹ ಸಲುಗೆ ಶುರುವಾಗಿದೆ ಎನ್ನಲಾಗುತ್ತಿದೆ. ಇದರಿಂದಲೇ ಐಶ್ವರ್ಯ ಪತಿಯಿಂದ ದೂರವಾಗಿದ್ದಾರೆ ಎಂಬ ಮಾತು ಕೆಲ ಕಡೆ ಕೇಳಿ ಬರುತ್ತಿದೆ. ಇತ್ತೀಚೆಗೆ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ವದಂತಿಗಳ ಬಗ್ಗೆ ನಿಮ್ರತ್‌ ಮಾತನಾಡಿದ್ದು, ಗಾಸಿಪ್‌ಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಜನರ ಕೆಲಸವೇ ಗಾಸಿಪ್‌ ಮಾಡುವುದು ಎಂದು ಹೇಳಿದ್ದರು.

ಇದನ್ನೂ ಓದಿ : Abhishek-Aishwarya: ಐಶ್ವರ್ಯ ಜತೆ ಡಿವೋರ್ಸ್‌ ವದಂತಿ ಬೆನ್ನಲ್ಲೇ ಮೌನ ಮುರಿದ ಅಭಿಷೇಕ್ ಬಚ್ಚನ್‌;‌ ವಿಡಿಯೋ ಫುಲ್‌ ವೈರಲ್‌