Thursday, 21st November 2024

BBK 11: ಅಳುತ್ತಾ ನರಕಕ್ಕೆ ಹೋದ ಐಶ್ವರ್ಯ: ನನ್ನಿಂದ ತಪ್ಪಾಯಿತು ಎಂದ ಹಂಸ

Aishwarya in Naraka

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಎರಡನೇ ವಾರ ನಡೆಯುತ್ತಿದ್ದು, ಸ್ಪರ್ಧಿಗಳು ಟಾಸ್ಕ್​ನಲ್ಲಿ ಬ್ಯುಸಿಯಾಗಿದ್ದಾರೆ. ನಾಮಿನೇಷನ್​ನಿಂದ ಪಾರಾಗಲು ಬಿಗ್ ಬಾಸ್ ಒಂದೊಂದೆ ಟಾಸ್ಕ್ ನೀಡುತ್ತಿದ್ದಾರೆ. ಇದರಲ್ಲಿ ಗೆದ್ದ ತಂಡದ ಸದಸ್ಯರಿಗೆ ನಾಮಿನೇಷನ್​ನಿಂದ ಬಚಾವ್ ಆಗಲು ಅವಕಾಶ ನೀಡಲಾಗುತ್ತಿದೆ. ಹೀಗಾಗಿ ಟಾಸ್ಕ್ ಗೆಲ್ಲುವುದು ಪ್ರತಿ ತಂಡಕ್ಕೆ ಮುಖ್ಯವಾಗಿದೆ. ಇವುಗಳ ಮಧ್ಯೆ ಸರ್ಧಿಗಳು ಸ್ವರ್ಗದಿಂದ ನರಕಕ್ಕೆ ಕ್ರಮೇಣವಾಗಿ ಅದಲು ಬದಲಾಗುತ್ತಿದ್ದಾರೆ.

ಈ ವಾರ ಮೊದ ವಾರದ ಕ್ಯಾಪ್ಟನ್ ಆಗಿ ನೇಮಕಗೊಂಡ ಹಂಸ ಅವರು ಸಾಕಷ್ಟು ತಪ್ಪೆಸಗಿದ್ದಾರೆ. ಕ್ಯಾಪ್ಟನ್ ತೆಗೆದುಕೊಂಡ ನಿರ್ಧಾರಗಳು ಮನೆಯವರ ಅಸಮಾಧಾನಕ್ಕೆ ಕಾರಣವಾಗಿದೆ. ಇವರು ಮಾಡಿದ ತಪ್ಪಿನಿಂದಲೇ ಇದೀಗ ಸ್ವರ್ಗದಲ್ಲಿದ್ದ ಐಶ್ವರ್ಯ ನರಕಕ್ಕೆ ಹೋಗಿದ್ದಾರೆ. ಬಿಗ್‌ ಬಾಸ್ ಒಂದು ಟಾಸ್ಕ್‌ ನೀಡಿದ್ದರು. ಆದರೆ ಹಂಸ ಅವರು ಇದನ್ನು ಸರಿಯಾಗಿ ನಿಭಾಹಿಸಿಲ್ಲ. ಸ್ವಾರಿ ಬಿಗ್ ಬಾಸ್, ಬೇಕಿದ್ದರೆ ನನ್ನನ್ನು ನರಕಕ್ಕೆ ಕಳುಹಿಸಿ. ತಪ್ಪು ಮಾಡಿದ್ದು ನಾನು. ಸ್ವರ್ಗದವರನ್ನು ಶಿಕ್ಷಿಸಬೇಡಿ ಎಂದು ರಿಕ್ವಸ್ಟ್‌ ಮಾಡಿದ್ದಾರೆ.

ಆದರೆ ಐಶ್ವರ್ಯಾ ಬಿಕ್ಕಿ ಬಿಕ್ಕಿ ಅಳುತ್ತಾ ನರಕದ ಟೀಮ್ ಸೇರಿಕೊಂಡಿದ್ದಾರೆ. ಅನುಷಾ ಅವರನ್ನು ಅಪ್ಪಿಕೊಂಡು ಜೋರಾಗಿ ಅತ್ತಿದ್ದಾರೆ. ಆದರೆ, ಇದನ್ನು ಕಂಡು ಲಾಯರ್‌ ಜಗದೀಶ್‌ ಅವರು ಫುಲ್‌ ಖುಷಿ ಆಗಿದ್ದಾರೆ. ಬಿದ್ದು ಬಿದ್ದು ನಕ್ಕಿದ್ದಾರೆ.

ಈ ವಾರ ಕ್ಯಾಪ್ಟನ್ ಹಂಸ ಮತ್ತು ನರಕ ವಾಸಿಗಳು-ಸ್ವರ್ಗ ವಾಸಿಗಳ ಮಧ್ಯೆ ಜಗಳ ನಡೆಯುತ್ತಲೇ ಇದೆ. ಟಾಸ್ಕ್​ನ ಉಸ್ತುವಾರಿ ನಿಭಾಹಿಸಿದ ಹಂಸ ಅಲ್ಲಲ್ಲಿ ಎಡವಟ್ಟು ಮಾಡಿಕೊಂಡಿದ್ದರು. ನಿಯಮವನ್ನು ಸರಿಯಾಗಿ ಹೇಳದೆ ಗೊಂದಲ ಸೃಷ್ಟಿಸಿದ್ದರು. ನಿನ್ನೆ (ಅ. 10) ಕೂಡ ಟಾಸ್ಕ್​ ವೇಳೆ ಹಂಸ ಅವರು ನರಕದ ಪರವಾಗಿ ತೀರ್ಪು ಕೊಟ್ಟಿದ್ದಾರೆ. ಈ ತೀರ್ಪಿನಿಂದ ಇಡೀ ಮನೆ ಹೊತ್ತಿ ಉರಿದಿದೆ. ಸ್ವರ್ಗದವರು ಹಂಸಾ ವಿರುದ್ಧ ತಿರುಗಿ ಬಿದ್ದಿದ್ದಾರೆ. ಡಿಸಿಷನ್ ಕೊಡಬೇಕಾದರೆ ಯೋಚನೆ ಮಾಡಿ ಕೊಡ್ಬೇಕು ಎಂದು ಹಂಸ ಬಳಿ ಭವ್ಯಾ ರೇಗಾಡಿದ್ದಾರೆ. ಯಾಕೆ ನಿಯತ್ತಿಲ್ವ ನಿಮ್ಗೆ ಎಂದು ಉಗ್ರಂ ಮಂಜು ಕೂಡ ಕ್ಯಾಪ್ಟನ್ ವಿರುದ್ಧ ರೈಸ್ ಆಗಿದ್ದಾರೆ.

Bigg Boss: ಇನ್ನೂರಲ್ಲ, ನಾನೂರಲ್ಲ: ಬಿಗ್ ಬಾಸ್ ಸೆಟ್​ನಲ್ಲಿ ಎಷ್ಟು ಜನರು ಕೆಲಸ ಮಾಡುತ್ತಾರೆ ಗೊತ್ತಾ?