Thursday, 12th December 2024

Bigg Boss Kannada: ಎಲ್ಲ ಮ್ಯಾಚ್ ಫಿಕ್ಸಿಂಗ್: ಬಿಗ್ ಬಾಸ್ ಮನೆಯಲ್ಲಿ ಮತ್ತೆ ಧ್ವನಿ ಎತ್ತಿದ ಜಗದೀಶ್

Hamsa vs Jagadish

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada) ಎರಡನೇ ವಾರಕ್ಕೆ ಕಾಲಿಟ್ಟಿದೆ. ಬರ ಬರುತ್ತಾ ರೋಚಕತೆ ಪಡೆಯುತ್ತಿರುವ ಶೋನಲ್ಲಿ, ಈ ವಾರ ಇಡೀ ಮನೆಯ ಸದಸ್ಯರು ನಾಮಿನೇಟ್ ಆಗಿದ್ದಾರೆ. ದೊಡ್ಮನೆಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಇವುಗಳ ಮಧ್ಯೆ ಜಗದೀಶ್ ಅವರು ಯಾವುದನ್ನೂ ತಲೆಕೆಡೆಸಿಕೊಳ್ಳದೆ ತಮ್ಮ ಗೇಮ್ ಆಡುತ್ತಿದ್ದು, ಯಾವುದೇ ಪರಿಸ್ಥಿತಿ ಇರಲಿ ತಮಗೆ ಹೇಳಬೇಕು ಅನಿಸಿದ್ದನ್ನು ಅಲ್ಲಿಯ ಹೇಳುತ್ತಿದ್ದಾರೆ.

ಎಲ್ಲರೂ ನಾಮಿನೇಟ್ ಆಗುವ ಮುನ್ನ ಬಿಗ್ ಬಾಸ್​ ಮನೆಯ ಮಂದಿಗೆ ಯಾರು ಅರ್ಹರು?- ಯಾರು ಅನರ್ಹರು? ಎಂಬ ಟಾಸ್ಕ್ ನೀಡಿದ್ದರು. ಎರಡನೇ ದಿನಕ್ಕೆ ಕಾಲಿಟ್ಟಿದ್ದ ಈ ಚಟುವಟಿಕೆಯಲ್ಲಿ ವಾದ-ಪ್ರತಿವಾದಗಳು ಜೋರಾಗಿಯೇ ನಡೆದವು. ಮಾತಿನ ಮಲ್ಲ ಜಗದೀಶ್ ಈ ಸಂದರ್ಭ ಜಗಳ ಆಡಲಿಲ್ಲ. ಆದರೆ, ತಮ್ಮ ನಯವಾದ ಮಾತುಗಳಿಂದಲೇ ಕ್ಯಾಪ್ಟನ್ ಹಂಸ ಅವರಿಗೆ ಖಡಕ್ ವಾರ್ನಿಂಗ್ ಕೊಟ್ಟರು.

ಮನೆಯ ಸದಸ್ಯರಿಗೆ ನಾಮಿನೇಟ್‌ ಮಾಡಲು ಬಿಗ್‌ ಬಾಸ್‌ ಒಂದು ಟಾಸ್ಕ್ ನೀಡುತ್ತಾರೆ. ಇಬ್ಬರು ನಿಂತು ಯಾರು ಶ್ರೇಷ್ಠ ಎಂದು ಚರ್ಚಿಸಬೇಕು. ಇಬ್ಬರು ಸ್ಪರ್ಧಿಗಳ ಚರ್ಚೆಯನ್ನು ಗಮನಿಸಿ ಮನೆಯ ಕ್ಯಾಪ್ಟನ್‌ ಆದ ಹಂಸ ಅವರು ಯಾರು ನಾಮಿನೇಟ್‌ ಆಗಬೇಕೆಂದು ಮಸಿ ಬಳಿಯಬೇಕಿತ್ತು.

ಜಗದೀಶ್ ಅವರು ‘ಟಾಸ್ಕ್​ ವೇಳೆ ಕ್ಯಾಪ್ಟನ್ ಹಂಸ ಅವರು ತಮಗೆ ಬೇಕಾಗಿರುವವರನ್ನು ಮಾತ್ರ ಆಯ್ಕೆ ಮಾಡಿಕೊಂಡು, ಉಳಿದವರನ್ನು ನಾಮಿನೇಷನ್​ ಮಾಡಿದ್ದಾರೆ’ ಎಂದು ​ ಆರೋಪ ಮಾಡಿದರು. ಇದೆಲ್ಲಾ ಮ್ಯಾಕ್ಸ್ ಫಿಕ್ಸಿಂಗ್ ಎಂದು ಹೇಳಿದ್ದಾರೆ. ತನ್ನನ್ನು ಮ್ಯಾಚ್​ ಫಿಕ್ಸಿಂಗ್ ಎಂದು ಹೇಳಿದ್ದಕ್ಕೆ ರೊಚ್ಚಿಗೆದ್ದ ಹಂಸ, ‘ನಾನು ಯಾರ ಪರವಾಗಿಯೂ ಇಲ್ಲ. ರಂಜಿತ್ ನನಗಾಗಿ ಆಟವಾಗಿದ್ದಾರೆ. ಅವರಿಂದ ಕ್ಯಾಪ್ಟನ್ ಆಗಿದೆ. ಅದನ್ನು ಮರೆತಿಲ್ಲ. ಅದಕ್ಕೆ ಪ್ರತಿಯಾಗಿ ಸ್ವರ್ಗಕ್ಕೆ ಕರೆತಂದಿದ್ದೇನೆ ಅಷ್ಟೇ, ಉಳಿದಂತೆ ಎಲ್ಲರನ್ನು ಸಮಾನವಾಗಿ ಕಾಣ್ತಿದ್ದೇನೆ’’ ಎಂದು ಹಂಸ ಹೇಳಿದ್ದಾರೆ.

ಇಡೀ ಮನೆ ನಾಮಿನೇಟ್:

ಬಿಗ್‌ ಬಾಸ್‌ ಮನೆಯಲ್ಲಿ ಟಾಸ್ಕ್‌ಗೆ ತಯಾರಿ ಮಾಡಿಕೊಳ್ಳುವಾಗ ಪರದೆಯನ್ನು ಇಳಿಸಲಾಗುತ್ತದೆ. ಆಗ ಸ್ಪರ್ಧಿಗಳು ಅದನ್ನು ತೆಗೆದು ಅಥವಾ ಇಣುಕಿ ನೋಡುವಂತಿಲ್ಲ. ಆದರೆ, ಇದೀಗ ಇದನ್ನು ಕೆಲ ಸ್ಪರ್ಧಿಗಳು ಕದ್ದು ಮುಚ್ಚಿ ನೋಡಿದ್ದಾರೆ. ಮೊದಲಿಗೆ ಇಣುಕಿ ಬಂದ ಮಾನಸ ಅವರು, ಶಿಶಿರ್‌ ಬಳಿ ಬೆಲ್ಟ್‌ ಕಟ್ಟಿಕೊಂಡು ಓಡೋ ಥರ ಇದೆ ಎಂದಿದ್ದಾರೆ. ಇದು ಬಿಗ್‌ ಬಾಸ್‌ ಗಮನಕ್ಕೆ ಬಂದಿದ್ದು, ಎಲ್ಲ ಸ್ಪರ್ಧಿಗಳಿಗೆ ಕಠಿಣ ಶಿಕ್ಷೆ ನೀಡಿದ್ದಾರೆ.

‘‘ಲೈನ್ಸ್‌ ಡೌನ್‌ ಆಗಿದ್ದಾಗ, ಅದರಿಂದ ಆಚೆಗೆ ಇಣುಕಿ ನೋಡಬಾರದು ಎಂಬುದು ಈ ಮನೆಯ ತುಂಬ ಮುಖ್ಯವಾದ ನಿಯಮ. ಈಗಷ್ಟೇ ಈ ನಿಯಮ ಉಲ್ಲಂಘಿಸಿದ್ದಾರೆ. ಈ ಕ್ಷಣದಿಂದ ಮನೆಯ ಎಲ್ಲಾ ಸದಸ್ಯರನ್ನು ಬಿಗ್‌ ಬಾಸ್‌ ನಾಮಿನೇಟ್‌ ಮಾಡುತ್ತಿದ್ದಾರೆ’’ ಎಂದು ಹೇಳಿದ್ದಾರೆ. ಇದನ್ನು ಕೇಳಿದ ಮನೆಮಂದಿ ಶಾಕ್ ಆಗಿದ್ದಾರೆ.

BBK 11: ಬಿಗ್ ಬಾಸ್​ನಿಂದ ಮೊದಲ ವಾರ ಹೊರಬಂದ ಯಮುನಾ ಶ್ರೀನಿಧಿಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತೇ?