Sunday, 15th December 2024

BBK 11: ಬಿಗ್ ಬಾಸ್​ನಿಂದ ಮೊದಲ ವಾರ ಹೊರಬಂದ ಯಮುನಾ ಶ್ರೀನಿಧಿಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತೇ?

Yamuna remuneration

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada) ಶುರುವಾಗಿ ಒಂದು ವಾರ ಕಳೆದಿದ್ದು, ಮೊದಲ ಎಲಿಮಿನೇಷನ್ ಕೂಡ ನಡೆದಿದೆ. ಅಚ್ಚರಿ ಎಂಬಂತೆ ಯಮುನಾ ಶ್ರೀನಿಧಿ ಮೊದಲ ವಾರವೇ ಮನೆಯಿಂದ ಔಟ್ ಆದರು. ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರ ಹೆಚ್ಚು ಸೌಂಡ್ ಮಾಡಿದ್ದು, ಜಗದೀಶ್, ಉಗ್ರಂ ಮಂಜು ಮತ್ತು ಯಮುನಾ ಶ್ರೀನಿಧಿ. ಹೆಚ್ಚಾಗಿ ಕಾಣಿಸಿಕೊಂಡಿದ್ದು ಕೂಡ ಇವರೇ. ಇವರಲ್ಲಿ ನಾಮಿನೇಟ್ ಆಗಿದ್ದ ಜಗದೀಶ್ ಮತ್ತು ಯಮುನಾ ಸೇಫ್ ಆಗಲಿದ್ದಾರೆ ಎಂದು ನಂಬಲಾಗಿತ್ತು. ಆದರೆ, ಯಮುನಾ ನಿರ್ಗಮನದ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು.

ಎಲಿಮಿನೇಟ್ ಆದ ಬಳಿಕ ಯಮುನಾ ಅವರು ಕಿಚ್ಚನ ಮುಂದೆ ಬಂದು ಗರಂ ಆಗಿದ್ದರು. ಒಂದೇ ವಾರಕ್ಕೆ ಹೊರಗೆ ಬರುವ ಕಳಪೆ ಸ್ಪರ್ಧಿ ನಾನಲ್ಲ ಎಂದಿದ್ದರು. ಯಮುನಾ ಅವರು ಮೊದಲ ಮೂರು ದಿನ ಉತ್ಸಾಹದಿಂದಲೇ ಮನೆಯಲ್ಲಿದ್ದರು. ಆದರೆ, ನಂತರ ಕೆಲವರು ಆಡಿದ ಮಾತು ಅವರಿಗೆ ಇಷ್ಟವಾಗದಂತೆ ಕಂಡುಬಂತು. ಮಂಜು ಮತ್ತು ಜಗದೀಶ್ ಜೊತೆ ಜಗಳ ಆಡಿದ್ದರು.

ಇವರ ವ್ಯಕ್ತಿತ್ವ ಕೂಡ ಬಿಗ್​ ಬಾಸ್ ಮನೆಯಲ್ಲಿ ಕೆಲವರಿಗೆ ಇಷ್ಟವಾಗಲಿಲ್ಲ. ಅಲ್ಲದೆ ಇವರ ಜೋರು ಧ್ವನಿ, ಹಾವ ಭಾವ, ವ್ಯಕ್ತಿತ್ವ ಬಹುಷಃ ಜನರಿಗೆ ಇಷ್ಟವಾಗಲಿಲ್ಲವೆಂದು ತೋರುತ್ತದೆ. ಹೀಗಾಗಿ ಜನರು ಇವರನ್ನು ಉಳಿಸಿಕೊಳ್ಳದೆ ಎಲಿಮಿನೇಟ್ ಮಾಡಿರುವ ಸಂಭವವಿದೆ. ಮೂಲತಃ ಮೈಸೂರಿನವಾರದ ಯಮುನಾ ಶ್ರೀನಿಧಿ ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಇವರು ಕನ್ನಡ ಧಾರಾವಾಹಿ ಅಶ್ವಿನಿ ನಕ್ಷತ್ರದ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು.

ಕನ್ನಡ ಚಿತ್ರರಂಗದ ಪ್ರಮುಖ ನಟರೊಂದಿಗೆ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 10ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. ಇಷ್ಟೇ ಅಲ್ಲದೆ ಅಮೆರಿಕದಲ್ಲಿ ಸುಮಾರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಭರತನಾಟ್ಯ ತರಬೇತಿ ನೀಡಿದ್ದಾರೆ. ವಿದೇಶದಲ್ಲಿ ಒಂದಷ್ಟು ವರ್ಷ ವಾಸವಾಗಿದ್ದ ಇವರು 2012 ರಲ್ಲಿ ಭಾರತಕ್ಕೆ ಮರಳಿದ್ದರು.

ಇದೀಗ ಮೊದಲ ವಾರವೇ ಎಲಿಮಿನೇಟ್ ಆಗಿರುವ ಯಮುನಾ ಶ್ರೀನಿಧಿ ಅವರ ಸಂಭಾವನೆ ಎಷ್ಟೆಂಬ ವಿಚಾರ ಬೆಳಕಿಗೆ ಬಂದಿದೆ. ಕನ್ನಡದ ಖಾಸಗಿ ವೆಬ್​ಸೈಟ್ ಒಂದು ಪ್ರಕಟಿಸಿರುವ ಸುದ್ದಿಯ ಪ್ರಕಾರ, ಯಮುನಾ ಶ್ರೀನಿಧಿ ಅವರಿಗೆ ಬಿಗ್‌ ಬಾಸ್ ಕನ್ನಡ ಸೀಸನ್ 11 ರಲ್ಲಿ ಪ್ರತಿ ವಾರಕ್ಕೆ 2 ಲಕ್ಷ ಸಂಭಾವನೆ ನಿಗದಿಯಾಗಿತ್ತು ಎಂದು ಹೇಳಲಾಗಿದೆ. ಇದರ ಜೊತೆಗೆ ಶ್ರೀಕೃಷ್ಣ ತುಪ್ಪದ ಕಡೆಯಿಂದ 1 ಲಕ್ಷದ ಚೆಕ್‌ ಗಿಫ್ಟ್‌ ಸಿಕ್ಕಿದೆ. ಈ ಮೂಲಕ ಯಮುನಾ ಅವರು ಒಟ್ಟು 3 ಲಕ್ಷ ಹಣವನ್ನು ಪಡೆದುಕೊಂಡಿದ್ದಾರೆ ಎಂಬ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ ಎಂದು ಬರೆಯಲಾಗಿದೆ.

BBK 11 Nomination: ದೊಡ್ಮನೆಯಲ್ಲಿ ಎಲ್ಲರೂ ನಾಮಿನೇಟ್: ಬಿಗ್ ಬಾಸ್ ನೀಡಿದ ಕಾರಣ ಕೇಳಿ ಶಾಕ್ ಆದ ಸ್ಪರ್ಧಿಗಳು