Sunday, 13th October 2024

ಪತ್ನಿ ಹುಟ್ಟುಹಬ್ಬದ ಫೋಟೋ ಶೇರ್‌ ಮಾಡಿದ ಅಲ್ಲು ಅರ್ಜುನ್

ಹೈದರಾಬಾದ್‌: ತೆಲುಗು ನಟ, ನಾನ ಪೇರು ಸೂರ್ಯ ಖ್ಯಾತಿಯ ಅಲ್ಲು ಅರ್ಜುನ್ ಅವರ ಪತ್ನಿ ಸ್ನೇಹಾ ರೆಡ್ಡಿ ಜನ್ಮದಿನ ಇಂದು. ತಮ್ಮ 35ನೇ ಹುಟ್ಟುಹಬ್ಬವನ್ನು ಹೈದರಾಬಾದಿನಲ್ಲಿ ಆಚರಿಸಿಕೊಂಡರು.

ತಮ್ಮ ಟ್ವಟರ್‌ ಖಾತೆಯಲ್ಲಿ ಸ್ನೇಹಾ ರೆಡ್ಡಿ ಜತೆಗಿನ ಫೋಟೋ  ಶೇರ್‌ ಮಾಡಿರುವ ಅಲ್ಲು ಅರ್ಜುನ್‌, ಸಂದೇಶವೊಂದನ್ನು ಪೋಸ್ಟ್ ಮಾಡಿದ್ದಾರೆ. ಮೆನಿ ಮೆಮಿ ಹ್ಯಾಪಿ ರಿಟರ್ನ್ಸ್ ಆಫ್ ದಿ ಡೇ ಟು ದ ಮೋಸ್ಟ್ ಸ್ಪೆಶಲ್ ಪರ್ಸನ್ ಇನ್ ಮೈ ಲೈಫ್. ನಿನ್ನೊಂದಿಗೆ ಹೆಚ್ಚು ಹೆಚ್ಚು ಸಮಯ ಕಳೆಯಲು ಇಚ್ಛಿಸುತ್ತೇನೆ. ಹ್ಯಾಪಿ ಬರ್ತ್ ಡೇ ಕ್ಯೂಟಿ ಎಂದು ಪೋಸ್ಟ್ ಮಾಡಿದ್ದಾರೆ.

2011ರಲ್ಲಿ ಅಲ್ಲು ಅರ್ಜುನ್‌ ಹಾಗೂ ಸ್ನೇಹಾ ರೆಡ್ಡಿ ವಿವಾಹವಾದರು. 2014ರಲ್ಲಿ ಇವರಿಗೆ ಅಲ್ಲು ಅರ್ಜುನ್‌ ಮತ್ತು 2016ರಲ್ಲಿ ಅಲ್ಲು ಅರ್ಹಾ ಜನಿಸಿದರು. ಸ್ನೇಹಿತರೋರ್ವರ ವಿವಾಹ ಸಮಾರಂಭದಲ್ಲಿ ಅಲ್ಲು ಅರ್ಜುನ್‌ ಸ್ನೇಹಾರನ್ನು ಭೇಟಿಯಾದರು. ವರ್ಷಗಳ ನಂತರ ವಿವಾಹವಾಗಲು ನಿಶ್ಚಯಿಸಿದರು.

ಸದ್ಯ ಅರ್ಜುನ್‌ ತಮ್ಮ ಮುಂದಿನ ಸಿನೆಮಾ ಪುಷ್ಪಾಗಾಗಿ ಸಿದ್ದತೆ ನಡೆಸಿದ್ದಾರೆ. ರಶ್ಮಿಕಾ ಮಂದಣ್ಣ ಚಿತ್ರದ ನಟಿ.