ಹೈದರಾಬಾದ್: ಕಳೆದ ಕೆಲವು ದಿನಗಳಿಂದ ಪುಷ್ಪ 2 ಚಿತ್ರದ ಕಾಲ್ತುಳಿತ ಪ್ರಕರಣ ಸಂಬಂಧಿಸಿದಂತೆ ಬಾಲಿವುಡ್, ಟಾಲಿವುಡ್ ಸೇರಿದಂತೆ ಸಾರ್ವಜನಿಕ ವಲಯದಲ್ಲಿಯು ಚರ್ಚೆ ಜೋರಾಗಿ ನಡೆಯುತ್ತಿದೆ. ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನ ಕಾಲ್ತುಳಿತ ಪ್ರಕರಣ ಸಂಬಂಧಿಸಿ ಮಾತನಾಡಿದ ನಿರ್ದೇಶಕ ತಮ್ಮಾರೆಡ್ಡಿ ಭಾರದ್ವಾಜ್ (Tammareddy) ಅವರು ಇದೀಗ ನಟ ಅಲ್ಲು ಅರ್ಜುನ್(Allu Arjun) ವಿರುದ್ದ ಗರಂ ಆಗಿದ್ದಾರೆ.
ಅಲ್ಲು ಅರ್ಜುನ್ ಅವರನ್ನು ಬಂಧಿಸಿದ ಕೆಲವು ದಿನಗಳ ನಂತರ ಹಿರಿಯ ತೆಲುಗು ನಿರ್ಮಾಪಕ ಮತ್ತು ನಿರ್ದೇಶಕ ತಮ್ಮಾರೆಡ್ಡಿ ತೀವ್ರವಾಗಿ ಟೀಕಿಸಿದ್ದಾರೆ. ಒಬ್ಬ ವ್ಯಕ್ತಿಯ ಅಹಂಕಾರ ಮತ್ತು ತಪ್ಪಿನಿಂದಾಗಿ ಇಡೀ ತೆಲುಗು ಚಿತ್ರರಂಗವು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಮುಂದೆ ಕೈಮುಗಿದು ತಲೆಬಾಗುವಂತೆ ಆಯಿತು ಎಂದು ನಿರ್ಮಾಪಕ ಅಲ್ಲು ಅರ್ಜುನ್ ವಿರುದ್ದ ಗರಂ ಆಗಿದ್ದಾರೆ.
ತಿಳಿಯದೆ ತಪ್ಪುಗಳು ನಡೆಯಬಹುದು, ಆದರೆ ಅದನ್ನು ಮುಚ್ಚಿಡಲು ತಿಳಿದೂ ಸುಳ್ಳು ಹೇಳುವುದನ್ನು ತಾನು ಒಪ್ಪುವುದಿಲ್ಲ. ಆದರಲ್ಲಿ ತೆಲುಗು ಸಿನಿಮಾ ಇಂಡಸ್ಟ್ರಿ ಪ್ರತಿ ಬಾರಿಯೂ ಸಿಎಂ ಬಳಿ ಹೋಗಿ ತಪ್ಪು ಮಾಡಿದ್ದೇವೆ ಎಂದು ಕೈ ಜೋಡಿಸಿ ನಿಲ್ಲಬೇಕು. ಹೀಗೇಕೆ ಪ್ರತಿಭಾರಿ ಆಗುತ್ತದೆ ಎಂದಿದ್ದಾರೆ. ಹಿಂದೆ ನಟರು ಈ ರೀತಿ ವರ್ತಿಸುತ್ತಿರಲಿಲ್ಲ. ಚಿರಂಜೀವಿ, ಬಾಲಕೃಷ್ಣ, ವೆಂಕಟೇಶ್ ಮತ್ತು ನಾಗಾರ್ಜುನ ಅವರಂತಹ ಲೆಜೆಂಡರಿ ಸ್ಟಾರ್‌ಗಳು ಆಗಾಗ್ಗೆ ತಮ್ಮ ಅಭಿಮಾನಿ ಗಳೊಂದಿಗೆ ಚಲನಚಿತ್ರಗಳನ್ನು ವೀಕ್ಷಿಸಿದ್ದಾರೆ. ಆದರೆ ಅವರು ವಿವೇಚನೆಯಿಂದ ಕೆಲಸ ಮಾಡಿದ್ದಾರೆ ಎಂದರು.
ಅಭಿಮಾನಿಗಳು ಸಿನಿಮಾ ಸ್ಟಾರ್ಗಳನ್ನು ದೇವರು ಎನ್ನುವ ರೀತಿ ಪೂಜಿಸುತ್ತಾರೆ. ತಮ್ಮ ಹೀರೋ ಗಳು ಹೋದಲ್ಲೆಲ್ಲಾ ಬೆಂಗಾವಲು ಮತ್ತು ರೋಡ್‌ಶೋಗಳನ್ನು ನಡೆಸಬೇಕು ಎಂಬಂತೆ ವರ್ತಿಸುತ್ತಿದ್ದಾರೆ. ಇದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಸೆಲೆಬ್ರಿಟಿಗಳು ತಮ್ಮ ಅಭಿಮಾನಿ ಬಳಗ ನೋಡುವುದು ಮಾತ್ರವಲ್ಲ ಸಾಮಾನ್ಯ ಜನರ ಯೋಗಕ್ಷೇಮದ ಬಗ್ಗೆಯೂ ಯೋಚಿಸಬೇಕು ಎಂದು ಹೇಳಿದ್ದಾರೆ.
ಏನಿದು ಪ್ರಕರಣ?
ಪುಷ್ಪ 2 ಸಿನಿಮಾದ ಪ್ರೀಮಿಯರ್ ಶೋಗಾಗಿ ಸಂಧ್ಯಾ ಥಿಯೇಟರ್‌ಗೆ ಪುಷ್ಪ 2 ಚಿತ್ರತಂಡ ತೆರಳಿತ್ತು. ಈ ವೇಳೆ ಅಲ್ಲು ಅರ್ಜುನ್ ನೋಡಲು ಅಭಿಮಾನಿಗಳ ನೂಕುನುಗ್ಗಲು ಹೆಚ್ಚಾಗಿ ಈ ಘಟನೆಯಲ್ಲಿ ರೇವತಿ ಎನ್ನುವ ಮಹಿಳೆ ಸಾವನ್ನಪ್ಪಿದ್ರು. ಗಂಭೀರವಾಗಿ ಗಾಯಗೊಂಡಿರುವ ಮಗ ಶ್ರೀತೇಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪ್ರಾಪ್ತ ವಯಸ್ಕನ ವೈದ್ಯಕೀಯ ವೆಚ್ಚವನ್ನು ನೋಡಿ ಕೊಳ್ಳುವುದಾಗಿ ನಟ ಭರವಸೆ ನೀಡಿದ್ದಾರೆ. ಗಾಯಗೊಂಡ ಮಗುವಿಗೆ 2 ಕೋಟಿ ರೂಪಾಯಿ ಆರ್ಥಿಕ ನೆರವು ಕೂಡ ಘೋಷಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Upcoming Movies: 2025ರಲ್ಲಿ ಸಿನಿಪ್ರಿಯರಿಗೆ ಭರ್ಜರಿ ಮನರಂಜನೆ; ತೆರೆಮೇಲೆ ಅಬ್ಬರಿಸೋಕೆ ರೆಡಿ ಆಗ್ತಿವೆ ಈ ಸಿನಿಮಾಗಳು!