ಮುಂಬೈ: ಇತ್ತೀಚೆಗೆ ನಡೆದ ಭೂಲ್ ಭುಲಯ್ಯಾ 3 ಸಿನಿಮಾ ಪ್ರಚಾರದ ಕಾರ್ಯಕ್ರಮದಲ್ಲಿ, ನಟಿಯರಾದ ಮಾಧುರಿ ದೀಕ್ಷಿತ್ (Madhuri dixit) ಮತ್ತು ವಿದ್ಯಾ ಬಾಲನ್ (Vidya balan) “ಅಮಿ ಜೆ ತೋಮರ್ 3.0” ಹಾಡಿಗೆ ಅದ್ಭುತವಾಗಿ ನೃತ್ಯ ಮಾಡಿದ್ದರು. 90ರ ದಶಕದ ಇಬ್ಬರು ಸ್ಟಾರ್ ನಟಿಯರು ಒಟ್ಟಿಗೆ ನೃತ್ಯ ಪ್ರದರ್ಶನ ಮಾಡಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಏತನ್ಮಧ್ಯೆ ಆಘಾತ ಉಂಟಾಯಿತು. ನೃತ್ಯ ಮಾಡುತ್ತಿದ್ದ ವಿದ್ಯಾ ಬಾಲನ್ ಆಯ ತಪ್ಪಿ ಕೆಳಗೆ ಬಿದ್ದರು. ಆದರೆ ಸ್ವಲ್ಪವೂ ವಿಚಲಿತರಾಗದೆ ಅದೇ ಆತ್ಮವಿಶ್ವಾಸದಿಂದ ಮೇಲೆದ್ದು ಮತ್ತೆ ನೃತ್ಯ ಮುಂದುವರಿಸಿದರು. ಸಾಮಾಜಿಕ ಜಾಲತಾಣ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆಮಿ ಜೆ ತೊ ಮಾ ಹಾಡಿಗೆ ನೃತ್ಯ ಮಾಡುವಾಗ ಆಯ ತಪ್ಪಿ ಕೆಳಗೆ ಬಿದ್ದ ವಿದ್ಯಾ ನೃತ್ಯ ಮಾಡುತ್ತಲೇ ಮೇಲೇಳುತ್ತಾರೆ. ಪಕ್ಕದಲ್ಲಿ ನೃತ್ಯ ಮಾಡುತ್ತಿದ್ದ ಮಾಧುರಿ ದೀಕ್ಷಿತ್ ಆಕೆಗೆ ಸಾಥ್ ನೀಡುತ್ತಾರೆ. ಈ ವೈರಲ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನಟ್ಟಿಗರು ವಿದ್ಯಾ ಬಾಲನ್ ಆತ್ಮವಿಶ್ವಾಸಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಇದನ್ನೂ ಓದಿ : Dasara Celebration In Movie: ದಸರಾ ಮಹತ್ವ ಸಾರುವ ಬಾಲಿವುಡ್‌ನ 5 ಸಿನಿಮಾಗಳಿವು
ವೇದಿಕೆಯ ಮೇಲೆ ಬಿದ್ದ ನಂತರವೂ ನೃತ್ಯವನ್ನು ಮನೋಹರವಾಗಿ ಮುಂದುವರಿಸಿದ ವಿದ್ಯಾ ಅವರ ಸಮಚಿತ್ತತೆ ನಿಜವಾಗಿಯೂ ಎದ್ದು ಕಾಣುತ್ತದೆ, ಆತ್ಮವಿಶ್ವಾಸದಿಂದ ಪರಿಸ್ಥಿತಿ ನಿಭಾಯಿಸುವ ಸಾಮರ್ಥ್ಯದಿಂದ ಎಲ್ಲರ ಮನಗೆದ್ದರು. ವಿದ್ಯಾ ಬಾಲನ್ ಬಗ್ಗೆ ತನ್ನ ಮಾಧುರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತೇಜಾಬ್‌ನ “ಏಕ್ ದೋ ತೀನ್” ನ ತನ್ನ ನೃತ್ಯ ಪ್ರದರ್ಶನವನ್ನು ವೀಕ್ಷಿಸಿದಾಗಿನಿಂದ ಅವರ ಜತೆ ನೃತ್ಯ ಮಾಡುವ ಕನಸು ಕಾಣುತ್ತಿದ್ದೆ ಎಂದು ಹೇಳಿದ್ದಾರೆ.
ವಿದ್ಯಾ ಬಾಲಾನ್ “ಇಂದು ನನ್ನ ಒಂದು ಕನಸು ನನಸಾಗಿದೆ. ಮಾಧುರಿ ಅವರ ‘ಏಕ್ ದೋ ತೀನ್’ ಕಾರ್ಯಕ್ರಮವನ್ನು ನೋಡಿ ನಾನು ಅವರಂತೆ ನೃತ್ಯ ಮಾಡಲು ಪ್ರೇರೇಪಿಸಿತು. ನಾನು ಬಿದ್ದಿದ್ದರೂ, ಅವರೊಂದಿಗೆ ನೃತ್ಯ ಮುಂದುವರಿಸಿದೆ ಎಂದು ಹೇಳಿದ್ದಾರೆ.
ನಟ ಕಾರ್ತಿಕ್ ಆರ್ಯನ್ ಮತ್ತು ನಿರ್ದೇಶಕ ಅನೀಸ್ ಬಾಜ್ಮಿ ಸೇರಿದಂತೆ ಹಲವು ಸ್ಟಾರ್ ನಟರಿರುವ ‘ಭೂಲ್ ಭುಲಯ್ಯಾ 3’ ಚಿತ್ರದ ಹಾಡನ್ನು ಮಂಗಳವಾರ ಬಿಡುಗಡೆಗೊಳಿಸಲಾಗಿದೆ. ಈ ಹಾಡು ಜನಪ್ರಿಯ ಟ್ರ್ಯಾಕ್‌ನ ರಿಮೇಕ್ ಆಗಿದ್ದು, ಮೂಲದಲ್ಲಿ ಆದಿತ್ಯ ರಿಖಾರಿ ಹಾಡಿದ್ದಾರೆ. ಪುನರಾವರ್ತಿತ ಆವೃತ್ತಿಯನ್ನು ಆದಿತ್ಯ ಮತ್ತು ತುಳಸಿ ಕುಮಾರ್ ಹಾಡಿದ್ದಾರೆ. ಭೂಲ್ ಭುಲಯ್ಯಾ 1ರಲ್ಲಿ ಅಕ್ಷಯ ಕುಮಾರ್ ಹಾಗೂ ವಿದ್ಯಾ ಬಾಲನ್ ನಟಿಸಿದ್ದು ಚಿತ್ರ ಸೂಪರ್ ಹಿಟ್ ಆಗಿತ್ತು.