Friday, 13th December 2024

ಪಾನ್‌ಮಸಾಲಾ ಕಂಪೆನಿ ಜಾಹೀರಾತಿಗೆ ಬಿಗ್‌ಬಿ ಗುಡ್‌ ಬೈ

ಮುಂಬೈ: ಬಾಲಿವುಡ್‌ ಮೆಗಾಸ್ಟಾರ್‌ ಪಾನ್‌ಮಸಾಲಾ ಕಂಪನಿಯ ಜಾಹೀರಾತಿನಿಂದ ಹೊರ ಬಂದಿದ್ದಾರೆ.

ಬಾಲಿವುಡ್‌ ನಟ ಇತ್ತೀಚೆಗೆ ಎಂಭತ್ತನೇ ಹುಟ್ಟಿದ ಹಬ್ಬ ಆಚರಿಸಿಕೊಂಡರು. ಜಾಹೀರಾತು ಪ್ರಚಾರ ಕ್ಕಾಗಿ ಪಡೆದುಕೊಂಡಿದ್ದ ಮೊತ್ತವನ್ನೂ ಕಂಪನಿಗೆ ವಾಪಸ್‌ ಮಾಡಿರುವುದಾಗಿ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

ತಂಬಾಕು ವಿರೋಧಿ ಚಳುವಳಿ ಬೆಂಬಲಿಸುವ ನಿಟ್ಟಿನಲ್ಲಿ ಈ ಜಾಹೀರಾತಿನಲ್ಲಿ ಮುಂದಿನ ದಿನಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದಿದ್ದಾರೆ. 80ನೇ ಹುಟ್ಟಿದ ಹಬ್ಬಕ್ಕೆ ಕಾಲಿಟ್ಟ ತಮಗೆ ಶುಭ ಹಾರೈಸಿದ ಅಭಿಮಾನಿಗಳಿಗೆ ಜಾಲತಾಣಗಳ ಮೂಲಕ ಅಮಿತಾಭ್‌ ಬಚ್ಚನ್‌ ಕೃತಜ್ಞತೆ ಸಲ್ಲಿಸಿದ್ದಾರೆ.