Sunday, 15th December 2024

ಪ್ರಾಜೆಕ್ಟ್-ಕೆ ಶೂಟಿಂಗ್‌ ವೇಳೆ ಅಮಿತಾಬ್ ಬಚ್ಚನ್’ಗೆ ಗಾಯ

ಹೈದರಾಬಾದ್‌: ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಹೈದರಾಬಾದ್‌ನಲ್ಲಿ ತಮ್ಮ ಮುಂಬರುವ ಚಿತ್ರ ʼಪ್ರಾಜೆಕ್ಟ್ ಕೆʼ ಶೂಟಿಂಗ್‌ ವೇಳೆ ಗಾಯಗೊಂಡಿದ್ದಾರೆ.

ಪ್ರಸ್ತುತ ಅವರು ಮುಂಬೈನ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅಮಿತಾಬ್ ಬಚ್ಚನ್, ‘ಹೈದರಾಬಾದ್‌ನಲ್ಲಿ ಪ್ರಾಜೆಕ್ಟ್ ‘ಕೆ’ ಚಿತ್ರೀಕರಣದಲ್ಲಿ, ಆಕ್ಷನ್ ದೃಶ್ಯ ಚಿತ್ರಿಸುವ ಸಮಯದಲ್ಲಿ ನನಗೆ ಗಾಯವಾಗಿದೆ. ಪಕ್ಕೆಲುಬು ಮುರಿದಿದೆ. ಹೈದರಾಬಾದ್‌ನ ಎಐಜೆ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಮಾಡಿಸಿಕೊಂಡು ಮನೆಗೆ ಮರಳಿರುವೆ. ನೋವಾಗುತ್ತಿದೆ ಆದರೆ ಅಗತ್ಯ ಚಿಕಿತ್ಸೆ ನೀಡಲಾಗಿದೆ. ಚೇತರಿಕೆಗೆ ಕೆಲ ದಿನಗಳು ಬೇಕು. ವಿಶ್ರಾಂತಿ ಅಗತ್ಯವಿದೆ’ ಎಂದು ಬರೆದುಕೊಂಡಿದ್ದಾರೆ.