Friday, 22nd November 2024

ಆಪ್ಟೆಕ್’ನ ಲಾಕ್ಮೆ ಅಕಾಡೆಮಿಯ ಇಂಡಿಯಾ ಬ್ರ್ಯಾಂಡ್ ಅಂಬಾಸಿಡರ್: ಅನನ್ಯಾ ಪಾಂಡೆ ಆಯ್ಕೆ

ಬೆಂಗಳೂರು: ದೇಶದ ಸೌಂದರ್ಯ ಮತ್ತು ಕೂದಲು ವಿನ್ಯಾಸ ತರಬೇತಿ ಸಂಸ್ಥೆಯಾದ ಆಪ್ಟೆಕ್ ಸಹಯೋಗದ ಲಾಕ್ಮೆ ಅಕಾ ಡೆಮಿಯ ಇಂಡಿಯಾ ಬ್ರ್ಯಾಂಡ್ ಅಂಬಾಸಿಡರ್ ಆಗಿ ಬಾಲಿವುಡ್ ನಟಿ ಅನನ್ಯಾ ಪಾಂಡೆ ಅವರನ್ನು ಆಯ್ಕೆ ಮಾಡಲಾಗಿದೆ.

ಲಾಕ್ಮೆ ಅಕಾಡೆಮಿ ಮತ್ತು ಲಾಕ್ಮೆ ಸಲೂನ್ ನ ಜೊತೆ ದೀರ್ಘ ಕಾಲೀನ ಬಾಂಧವ್ಯ ಹೊಂದಿರುವ, ಯುವ ಸಮೂಹವನ್ನು ತನ್ನ ಮುದ್ದಾದ, ಚಮತ್ಕಾರಿ, ಆಕರ್ಷಕ ನಡಾವಳಿಕೆಯಿಂದ ಎಲ್ಲರನ್ನೂ ಆಕರ್ಷಿಸುವ ಕಣ್ಮಣಿಯಾಗಿ ಅನನ್ಯಾ ಪಾಂಡೆ ಅವರನ್ನು ಹೊರ ಹೊಮ್ಮಿದ್ದಾರೆ.

ಲಾಕ್ಮೆ ಸಂಸ್ಥೆ ಸೌಂದರ್ಯ ಮತ್ತು ಯೋಗಕ್ಷೇಮ ವಲಯದಲ್ಲಿ 25,000 ಕೋಟಿ ರೂಪಾಯಿ ಮೊತ್ತದ ಕಂಪೆನಿಯಾಗಿದ್ದು, ಎಲ್ಲೆಡೆ ಸಲೂನ್ ಗಳು, ಸ್ಪಾಗಳು, ಪಾರ್ಲರ್ ಗಳು, ಸ್ಕಿನ್ ಕ್ಲಿನಿಕ್ ಗಳನ್ನು ಇದು ಹೊಂದಿವೆ. ಕಳೆದ ದಶಕದಲ್ಲಿ ಈ ಸಂಸ್ಥೆ ಶೇ 12 ರಷ್ಟು ಪ್ರಗತಿ ಸಾಧಿಸಿತ್ತು, ಒಟ್ಟಾರೆ 15 ದಶಲಕ್ಷ ಮಂದಿಗೆ ಉದ್ಯೋಗ ನೀಡಿದ್ದು, ಈ ಪೈಕಿ ಶೇ 65 ರಷ್ಟು ಮಹಿಳೆಯರು ಎನ್ನುವುದು ವಿಶೇಷ. ಇದರಲ್ಲಿ 700 ದಶಲಕ್ಷ ಮಂದಿ 25 ವಯೋ ಮಿತಿಗಿಂತ ಕೆಳಗಿನವರು.

ದೇಶದ 100 ನಗರಗಳಲ್ಲಿ 130 ಕೇಂದ್ರಗಳನ್ನು ಹೊಂದಿರುವ ಈ ಸಂಸ್ಥೆಗೆ ತಾವು ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಯಾಗಿರುವುದು ಸಂತಸ ತಂದಿದೆ. ಲಕ್ಷಾಂತರ ಭಾರತೀಯರ ಜೀವನವನ್ನು ರೂಪಿಸುವ, ಸುಂದರಗೊಳಿಸುವ ಕಾಯಕದಲ್ಲಿ ತೊಡಗಲು ಉತ್ಸುಕಳಾಗಿದ್ದೇನೆ. ಇದು ತಮಗೆ ದೊರೆತ ಅತ್ಯಂತ ಉತ್ತಮ ಅವಕಾಶ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಲಾಕ್ಮೆ ಲಿವರ್ ನ ಸಿಇಒ ಮತ್ತು ಕಾರ್ಯಕಾರಿ ನಿರ್ದೇಶಕ ಪುಷ್ಪಕ್ ರಾಜ್ ಶೇನಾಯಿ ಮಾತನಾಡಿ, ಮನಸೆಳೆಯುವ ಶಕ್ತಿ, ವೈಯಕ್ತಿಕ ಶೈಲಿಯಿಂದಾಗಿ ಆಪ್ಟೆಕ್ ನಿಂದ ನಡೆಸಲ್ಪಡುವ ಲಾಕ್ಮೆ ಇಂಡಿಯಾಗೆ ಅನನ್ಯ ಪಾಂಡೆ ಹೊಂದಿಕೊಳ್ಳುತ್ತಾರೆ. ಯುವ ಮುನಸ್ಸುಗಳನ್ನು ಗೆಲ್ಲಲು ನಾವು ಈಕೆಯೊಂದಿಗೆ ದೀರ್ಘಕಾಲದ ಮತ್ತು ಫಲಪ್ರದವಾದ ಒಡನಾಟ ಬಯಸುತ್ತೇವೆ ಎಂದು ಹೇಳಿದರು.

ಆಪ್ಟೆಕ್ ನ ಲಾಕ್ಮೆ ಅಕಾಡೆಮಿಯ ಬ್ರ್ಯಾಂಡ್ ಮುಖ್ಯಸ್ಥರಾದ ಪೂಜಾ ಮುಕುಂದನ್ ಮಾತನಾಡಿ,ನಮ್ಮಲ್ಲಿ ತರಬೇತಿ ಪಡೆದವರು ಅತ್ಯುತ್ತಮ ಬ್ರ್ಯಾಂಡ್ ಅಂಬಾಸಿಡರ್ ಳಾಗಿದ್ದಾರೆ. ನಾವು ಹೊಸ ಪ್ರತಿಭೆಗಳನ್ನು ಪರಿಚಯಿಸುವ ಮತ್ತು ಅವಕಾಶಗಳನ್ನು ನೀಡುವುದನ್ನು ಮುಂದುವರೆಸುತ್ತೇವೆ ಎಂದು ಹೇಳಿದರು.