ಬೆಂಗಳೂರು : ಬಾಲಿವುಡ್‌ನ ಖ್ಯಾತ ನಟ ಆಮೀರ್ ಖಾನ್ (Aamir Khan) ಅವರನ್ನು ಅವಕಾಶಗಳೇ ಅರಸಿಕೊಂಡು ಬರುತ್ತವೆ. ಸದ್ಯ ಆರ್.ಎಸ್ ಪ್ರಸನ್ನ ನಿರ್ದೇಶನದ ʼಸಿತಾರೆ ಜಮೀನ್ ಪರ್ʼ ಚಿತ್ರೀಕರಣ ಮುಗಿಸಿರುವ ಅವರು ಕಿಶೋರ್ ಕುಮಾರ್ ಅವರ ಜೀವನ ಚರಿತ್ರೆ (ಬಯೋಪಿಕ್‌ನಲ್ಲಿ) ನಟಿಸುವುದಾಗಿ ವರದಿಯಾಗಿದೆ. ʼಲೂಡೋ’ ಸಿನಿಮಾ ನಿರ್ದೇಶಕ ಅನುರಾಗ್ ಬಸು (Anurag Basu) ಮತ್ತು ಚಿತ್ರದ ನಿರ್ಮಾಪಕ ಭೂಷಣ್ ಕುಮಾರ್ ಆಮೀರ್ ಜತೆ ಮಾತನಾಡಿದ್ದಾರೆ ಎನ್ನಲಾಗಿದೆ.
ಕಿಶೋರ್ ಕುಮಾರ್ ಅವರ ಬಯೋಪಿಕ್ ಮಾಡುವುದು ಅನುರಾಗ್ ಬಸು ಹಾಗೂ ಭೂಷಣ್ ಕುಮಾರ್ ಅವರ ಕನಸಾಗಿದೆ. ಈ ಚಿತ್ರವನ್ನು ಅದಷ್ಟೂ ಸುಂದರವಾಗಿ ಮಾಡಲು ಮುಂದಾಗಿದ್ದಾರೆ. ಆಮೀರ್ ಖಾನ್ ಕೂಡ ಕಿಶೋರ್ ಕುಮಾರ್ ದೊಡ್ಡ ಅಭಿಮಾನಿಯಾಗಿದ್ದಾರೆ. ಇವೆಲ್ಲವೂ ಆಮೀರ್ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿಗೆ ಪುಷ್ಟಿ ಸಿಕ್ಕಿದೆ.
ಹೊಸ ಪ್ರಾಜೆಕ್ಟ್ ಬಗ್ಗೆ ಮಾತನಾಡಲು ಆಮೀರ್ ಖಾನ್ ಮತ್ತು ಅನುರಾಗ್ ಬಸು ಅವರು ನಾಲ್ಕೈದು ಬಾರಿ ಭೇಟಿಯಾಗಿದ್ದಾರೆ ಎಂಬುದಾಗಿ ವರದಿಯಾಗಿದೆ. ಅಂದ ಹಾಗೆ ಆಮೀರ್ ಖಾನ್ ಕೈಯಲ್ಲಿ ಆರು ಚಿತ್ರಗಳಿವೆ ಎನ್ನಲಾಗಿದೆ. ಅವೆಲ್ಲವೂ ವಿಶೇಷ ಸಿನಿಮಾಗಳೇ. ಕಿಶೋರ್ ಕುಮಾರ್ ಬಯೋಪಿಕ್, ‘ಉಜ್ವಲ್ ನಿಕಮ್ ಬಯೋಪಿಕ್’ ಮತ್ತು ರಾಜಕುಮಾರ್ ಸಂತೋಷಿ ಅವರ ಕಾಮಿಡಿ ಸಿನಿಮಾವೊಂದರ ಸ್ಕ್ರಿಪ್ಟ್ ಅವರ ಬಳಿಯಿದೆ. ʼಘಜನಿ 2, ಲೋಕೆಶ್ ಕನಗರಾಜ್ ಹಾಗೂ ಜೋಯಾ ಅಖ್ತರ್ ಸಿನಿಮಾಗಳಿಗೂ ತಯಾರಿ ನಡೆಸುತ್ತಿದ್ದಾರೆ. ಆಮೀರ್‌ಗೆ ಎಲ್ಲ ಸ್ಕ್ರಿಪ್ಟ್ ಇಷ್ಟವಾಗಿದ್ದು ಆಯ್ಕೆ ಮಾಡುವ ಸಾಧ್ಯತೆಗಳಿವೆ.
ಇದನ್ನೂ ಓದಿ: Lawyer Jagadish : ಮಧ್ಯರಾತ್ರಿಯಲ್ಲಿ ಬೀದಿಗಿಳಿದು ಹೋರಾಟ ಶುರು ಮಾಡಿದ ಲಾಯರ್ ಜಗದೀಶ್!
ಅನುರಾಗ್ ಬಸು ಅಮೀರ್ ಖಾನ್ ಅವರ ಸಿನಿಮಾ ಮಾಡಲು ಮುಂದಾಗಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ಅವರು ಅಮೀರ್ ಖಾನ್‌ಗೆ ರಣಬೀರ್ ಕಪೂರ್ ಜತೆ ನಟಿಸುವ ಅವಕಾಶವೊಂದನ್ನು ನೀಡಿದ್ದರು. ಆದರೆ, ಆ ಪ್ರಾಜೆಕ್ಟ್ ಅರ್ಧದಲ್ಲೇ ನಿಂತಿತ್ತು.
ಇದೀಗ ʼʼ ಸಿತಾರೆ ಜಮೀನ್ ಪರ್ ಮತ್ತು ಜೀವನ ಚರಿತ್ರೆ ( ಬಯೋಪಿಕ್) ಹೊರತು ಪಡಿಸಿ ಆಮೀರ್ ಅವರ ನಿರ್ದೇಶನದಲ್ಲಿ ʼಲಾಹೊರ್ 1947ʼ ಚಿತ್ರ ಸದ್ಯದಲ್ಲೇ ಮೂಡಿಬರಲಿವೆ. ಈ ಚಿತ್ರದಲ್ಲಿ ಸನ್ನಿ ಡಿಯೋಲ್, ಪ್ರೀತಿ ಜಿಂಟಾ , ಶಬಾನಾ ಅಜ್ಮಿ, ಕರಣ್ ಡಿಯೋಲ್ , ಮತ್ತು ಅಲಿ ಫಜಾಲ್ ಇದ್ದಾರೆ. ಈ ಚಿತ್ರವನ್ನು ರಾಜಕುಮಾರ್ ಸಂತೋಷಿ ಅವರು ನಿರ್ದೇಶಿಸಿದ್ದಾರೆ.