Friday, 25th October 2024

Bachchan Family: 25 ಕೋಟಿ ರೂ. ಮೌಲ್ಯದ ಆಸ್ತಿ ಖರೀದಿಸಿದ ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಮತ್ತು ಅಭಿಷೇಕ್‌ ಬಚ್ಚನ್‌

bachchan Family

ಮುಂಬೈ: ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಬಚ್ಚನ್‌(Amitabh Bachchan) ಮತ್ತು ಅವರ ಪುತ್ರ ಅಭಿಷೇಕ್‌ ಬಚ್ಚನ್‌(Abhishek Bachchan) ಮುಂಬೈನಲ್ಲಿ ಬರೋಬ್ಬರಿ 25 ಕೋಟಿ ರೂ. ಮೌಲ್ಯದ ಆಸ್ತಿ ಖರೀದಿಸಿದ್ದಾರೆ(Bachchan Family). ಮುಂಬೈಯ ಮುಲುಂದ್‌ನಲ್ಲಿರುವ ರೆಸಿಡೆನ್ಸಿಯಲ್‌ ಪ್ರದೇಶದಲ್ಲಿ ಆಸ್ತಿ ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಈ ರೆಸಿಡೆನ್ಸಿಯಲ್‌ ಪ್ರದೇಶ ಮುಂಬೈಯ ಕೇಂದ್ರ ಮತ್ತು ಪಶ್ಚಿಮ ಭಾಗವನ್ನು ಸಂಪರ್ಕಸುತ್ತದೆ ಎನ್ನವುದು ವಿಶೇಷ.

ಸುಪ್ರಸಿದ್ದ ರಿಯಲ್‌ ಎಸ್ಟೇಟ್‌ ಉದ್ಯಮ ಸಂಸ್ಥೆಯಾಗಿರುವ ಸ್ಕ್ವಾರ್‌ ಯಾರ್ಡ್ಸ್‌ ಈ ಬಗ್ಗೆ ಮಾಹಿತಿ ನೀಡಿದ್ದು, ಅಮಿತಾಬ್‌ ಬಚ್ಚನ್‌ ಮತ್ತು ಅವರ ಪುತ್ರ ಅಭಿಷೇಕ್‌ ಬಚ್ಚನ್‌ ಮುಂಬೈಯ ಮುಲುಂದ್‌ ಪ್ರದೇಶದಲ್ಲಿ 24.95 ಕೋಟಿ ಮೌಲ್ಯದ ಫ್ಲ್ಯಾಟ್‌ ಖರೀದಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆ ಪತ್ರಗಳ ಕಾರ್ಯಗಳು ಪೂರ್ನಗೊಂಡಿವೆ. ಇನ್ನು ಒಬೇರಾಯ್‌ ರಿಯಾಲ್ಟಿಸ್‌ ಪ್ರೀಮಿಯಂ ರೆಸಿಡೆನ್ಸಿಯಲ್‌ ಯೋಜನೆ ಇಟರ್ನಿಯಾ ಅಪಾರ್ಟ್‌ನಲ್ಲಿ ಫ್ಲ್ಯಾಟ್‌ ಖರೀದಿಸಿದ್ದಾರೆ. ಈ ಅಪಾರ್ಟ್‌ಮೆಂಟ್‌ನಲ್ಲಿ 3 BHK ಮತ್ತು 4 BHK ಫ್ಲ್ಯಾಟ್‌ಗಳು ಲಭ್ಯವಿವೆ.

ಬಚ್ಚನ್ ಕುಟುಂಬದಿಂದ ಇತ್ತೀಚೆಗೆ ಖರೀದಿಸಿರುವ ಅಪಾರ್ಟ್‌ಮೆಂಟ್‌ಗಳು ಒಟ್ಟು 10,216 ಚದರ ಅಡಿಗ ವಿಸ್ತೀರ್ಣದಲ್ಲಿವೆ. ಬಚ್ಚನ್‌ ಕುಟುಂಬ ಒಟ್ಟು 10 ಅಪಾರ್ಟ್‌ಮೆಂಟ್‌ ಖರೀದಿಸಿದೆ. ಎಂಟು ಅಪಾರ್ಟ್‌ಮೆಂಟ್‌ಗಳು ತಲಾ 1,049 ಚದರ ಅಡಿ ಮತ್ತು ಎರಡು ಪ್ರತಿ ಘಟಕಕ್ಕೆ 912 ಚದರ ಅಡಿಗಳಷ್ಟು ವ್ಯಾಪಿಸಿದೆ. ಇನ್ನು ಪ್ರತಿಯೊಂದು ಅಪಾರ್ಟ್‌ಮೆಂಟ್‌ಗೂ ₹ 1.50 ಕೋಟಿ ರೂ. ಮೌಲ್ಯದ ಕಾರ್‌ ಪಾರ್ಕಿಂಗ್‌ ಪ್ರದೇಶ ಹೊಂದಿವೆ. ಅಭಿಷೇಕ್ ಬಚ್ಚನ್ ಈ ಪೈಕಿ ಆರು ಅಪಾರ್ಟ್‌ಮೆಂಟ್‌ಗಳನ್ನು ₹ 14.77 ಕೋಟಿಗೆ ಖರೀದಿಸಿದ್ದು, ಇನ್ನುಳಿದ ನಾಲ್ಕು ಅಪಾರ್ಟ್‌ಮೆಂಟ್‌ಗಳನ್ನು ಅಮಿತಾಬ್ ಬಚ್ಚನ್ ಖರೀದಿಸಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

ಬಾಲಿವುಡ್‌ನ ಸ್ಟಾರ್‌ ದಂಪತಿ ಅಭಿಷೇಕ್‌ ಬಚ್ಚನ್‌ ಮತ್ತು ಐಶ್ವರ್ಯಾ ರೈ ಬಚ್ಚನ್‌ (Aishwarya Rai Bachchan) ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ ಎನ್ನುವ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ತಮ್ಮ ನಡುವೆ ಯಾವುದೇ ವೈಮನಸ್ಸು ಇಲ್ಲ, ಚೆನ್ನಾಗಿಯೇ ಇದ್ದೇವೆ ಎಂದು ದಂಪತಿ ಆಗಾಗ ಪರೋಕ್ಷವಾಗಿ ಸ್ಪಷ್ಟನೆ ನೀಡಿದರೂ ಈ ವದಂತಿಗೆ ಸಂಪೂರ್ಣ ಬ್ರೇಕ್‌ ಬಿದ್ದಿಲ್ಲ. ಈ ಮಧ್ಯೆ ಅಭಿಷೇಕ್‌ ಮತ್ತು ಐಶ್ವರ್ಯಾ ಸಾರ್ವಜನಿಕವಾಗಿ ಮಾತಿನ ಚಕಮಕಿ ನಡೆಸುತ್ತಿರುವ ಹಳೆ ವಿಡಿಯೊ ಈಗ ವೈರಲ್‌ ಆಗಿದೆ (Abhishek- Aishwarya Fight).

ಇದು ಕೆಲವು ವರ್ಷಗಳ ಹಿಂದಿನ ವಿಡಿಯೊ. ಪ್ರೋ ಕಬಡ್ಡಿ ಪಂದ್ಯ ನಡೆಯುವಾಗ ಐಶ್ವರ್ಯಾ ರೈ ಅವರು ತಮ್ಮ ಕುಟುಂಬ ಸಮೇತ ಗ್ಯಾಲರಿಯಲ್ಲಿ ಕುಳಿತಿದ್ದರು. ಅವರ ಪಕ್ಕದಲ್ಲಿ ಪತಿ ಅಭಿಷೇಕ್​ ಬಚ್ಚನ್​, ಮಗಳು ಆರಾಧ್ಯಾ ಬಚ್ಚನ್​, ಅಭಿಷೇಕ್‌ ಸಹೋದರಿ ನವ್ಯಾ ನವೇಲಿ ನಂದಾ ಮುಂತಾದವರು ಇದ್ದರು. ಈ ವೇಳೆ ಯಾವುದೋ ವಿಚಾರಕ್ಕೆ ಐಶ್ವರ್ಯಾ ರೈ ಮತ್ತು ಅಭಿಷೇಕ್​ ಬಚ್ಚನ್​ ಮಧ್ಯೆ ಚರ್ಚೆ ಆರಂಭವಾಗಿದೆ. ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆಯುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ.

ಈ ಸುದ್ದಿಯನ್ನೂ ಓದಿ: Kaun Banega Crorepati: ಆಮೀರ್‌ ಖಾನ್‌ ಕೇಳಿದ ಪ್ರಶ್ನೆಗೆ ಅಮಿತಾಬ್‌ ಸ್ಟನ್‌; ಇಲ್ಲಿದೆ ವಿಡಿಯೋ