Saturday, 14th December 2024

Kaun Banega Crorepati: ಆಮೀರ್‌ ಖಾನ್‌ ಕೇಳಿದ ಪ್ರಶ್ನೆಗೆ ಅಮಿತಾಬ್‌ ಸ್ಟನ್‌; ಇಲ್ಲಿದೆ ವಿಡಿಯೋ

kaun banega crorepathi

ಮುಂಬೈ: ಕೌನ್‌ ಬನೇಗಾ ಕರೋಡ್‌ಪತಿ(Kaun Banega Crorepati) ಸೀಸನ್‌ 16ನಲ್ಲಿ ಮುಂಬರುವ ಬರ್ತ್‌ ಡೇ ಸ್ಪೆಷಲ್‌ ಎಪಿಸೋಡ್‌ನಲ್ಲಿ ಬಾಲಿವುಡ್‌ ಪರ್ಫೆಕ್ಷನಿಸ್ಟ್‌ ಆಮೀರ್‌ ಖಾನ್‌(Aamir Khan) ಮತ್ತು ಅವರ ಪುತ್ರ ಜುನೈದ್‌ ಖಾನ್‌(Junaid Khan) ಭಾಗವಹಿಸಿದ್ದಾರೆ. ಈ ಎಪಿಸೋಡ್‌ ಪ್ರೋಮೋ ಇದೀಗ ರಿಲೀಸ್‌ ಆಗಿದ್ದು, ಕಾರ್ಯಕ್ರಮದ ನಿರೂಪಕ ಬಾಲಿವುಡ್‌ನ ಹಿರಿಯ ನಟ ಅಮಿತಾಬ್‌ ಬಚ್ಚನ್‌ (Amitabh Bachchan) ಅವರಿಗೆ ಆಮೀರ್‌ ಕೇಳಿದ ಪ್ರಶ್ನೆಯೊಂದು ಭಾರೀ ಸದ್ದು ಮಾಡುತ್ತಿದೆ. ಆಮೀರ್‌ ಖಾನ್‌ ಕೇಳಿದ ಪ್ರಶ್ನೆಗೆ ಬಿಗ್‌ ಬೀ ಅಚ್ಚರಿಗೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ವೈರಲ್‌ ಆಗಿರುವ ವಿಡಿಯೋದಲ್ಲೇನಿದೆ?

ಬರ್ತ್‌ ಡೇ ಸ್ಪೆಷಲ್‌ ಎಪಿಸೋಡ್‌ನಲ್ಲಿ ಪುತ್ರನೊಂದಿಗೆ ಭಾಗಿಯಾಗಿದ್ದ ಆಮೀರ್‌ ಖಾನ್‌ ಹಾಟ್‌ ಸೀಟ್‌ನಲ್ಲಿ ಕುಳಿತಿದ್ದರು. ಈ ವೇಳೆ ಅವರು ಅಮಿತಾಬ್‌ ಬಚ್ಚನ್‌ ಅವರಿಗೆ ತಮಗೊಂದು ಸೂಪರ್‌ ಡೂಪರ್‌ ಪ್ರಶ್ನೆ ಇದೆ ಎನ್ನುತ್ತಾರೆ. ಅದಕ್ಕೆ ಅಮಿತಾಬ್‌ ಬಚ್ಚನ್‌ ಕೇಳಿ ಎಂದು ಹೇಳುತ್ತಾರೆ. ಆಗ ಆಮೀರ್‌, ಜಯಾ ಜೀ ಶೂಟಿಂಗ್‌ಗೆ ತೆರಳಿದ್ದಾಗ ಅವರು ಯಾವ ಹೀರೋ ಜತೆ ನಟಿಸುವಾಗ ನಿಮಗೆ ಅಸೂಯೆ ಆಗುತ್ತದೆ ಎಂದು ಪ್ರಶ್ನಿಸಿದ್ದಾರೆ.

ಆಮೀರ್‌ ಪ್ರಶ್ನೆಗೆ ಅಮಿತಾಬ್‌ ಒಂದು ಕ್ಷಣಕ್ಕೆ ಸ್ಟನ್‌ ಆಗಿದ್ದಾರೆ. ಹಾಗೇಯೇ ನಗುತ್ತಾ ಅವರನ್ನು ನೋಡುತ್ತಾರೆ. ಈ ಪ್ರೋಮೋ ಇದೀಗ ಭಾರೀ ಸದ್ದು ಮಾಡುತ್ತಿದೆ. ಈ ಪ್ರೋಮೋ ನೋಡಿದವರು ಫುಲ್‌ ಎಪಿಸೋಡ್‌ಗಾಗಿ ಕಾಯುತ್ತಿದ್ದಾರೆ. ಇನ್ನು ಈ ಕಾರ್ಯಕ್ರಮ ಅಮಿತಾಬ್‌ ಬಚ್ಚನ್‌ ಅವರ 82ನೇ ಹುಟ್ಟುಹಬ್ಬ ಅಂದರೆ ಅಕ್ಟೋಬರ್‌ 11 ರಂದು ರಾತ್ರಿ 9ಗಂಟೆಗೆ ಪ್ರಸಾರವಾಗಲಿದೆ.

KBC ಯ ಸೆಟ್‌ಗಳಿಂದ ಹಂಚಿಕೊಳ್ಳಲಾದ ಮತ್ತೊಂದು ಪ್ರೋಮೋ ರೀಲ್‌ನಲ್ಲಿ, ಅಮೀರ್ ಖಾನ್ ಮತ್ತು ಜುನೈದ್ ಖಾನ್‌ರ ಜೋಡಿಯು ವ್ಯಾನಿಟಿ ವ್ಯಾನ್‌ನಿಂದ ಹೊರಬಂದು ಕ್ಯಾಮೆರಾದೊಂದಿಗೆ ಮಾತನಾಡುತ್ತಾ, ಬಿಗ್ ಬಿಗೆ ಸರ್ಪ್ರೈಸ್‌ ಕೊಡಲು ತಾವು ಇಲ್ಲಿದ್ದೇವೆ. ಯಾರಿಗೂ ಹೇಳ್ಬೇಡಿ ಎಂದು ನೆಟ್ಟಿಗರಲ್ಲಿ ಹೇಳುತ್ತಿರುವುದನ್ನು ಕಾಣಬಹುದಾಗಿದೆ.

ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದ ಮೊದಲ ಸೀಸನ್ 2000 ರಲ್ಲಿ ಪ್ರಾರಂಭವಾಗಿದ್ದು, ಅಮಿತಾಬ್ ಬಚ್ಚನ್ ನಿರೂಪಕರಾಗಿದ್ದರು. ಆಂಗ್ರಿ ಯಂಗ್‌ ಮ್ಯಾನ್‌ ಲುಕ್‌ನಿಂದ ಹೊರಬಂದು ಫ್ರೆಂಚ್‌ ಕಟ್‌ ಗಡ್ಡ, ವಿಭಿನ್ನ ನಿರೂಪಣೆ ಮೂಲಕ ಅಮಿತಾಬ್‌ ಬಚ್ಚನ್‌ ಜನಮಾತಾದರು. ಈ ಕಾರ್ಯಕ್ರಮವು ಜನಸಾಮಾನ್ಯರಲ್ಲಿ ಅವರ ಸ್ಟಾರ್‌ಡಮ್ ಅನ್ನು ನೀಡಿತು. ಕಾರ್ಯಕ್ರಮದ ಮೂರನೇ ಸೀಸನ್ ಅನ್ನು ಶಾರುಖ್ ಖಾನ್ ನಿರೂಪಣೆ ಮಾಡಿದ್ದರು.

ಈ ಸುದ್ದಿಯನ್ನೂ ಓದಿ: ಪ್ಯಾರಿಸ್‌ ಫ್ಯಾಷನ್‌ ವೀಕ್‌ನಲ್ಲಿ ಹಜ್ಜೆ ಹಾಕಿದ ಐಶ್ವರ್ಯಾ ರೈ ಬಚ್ಚನ್‌