ಬಿಗ್ ಬಾಸ್ನಲ್ಲಿ ಚೈತ್ರಾ ಕುಂದಾಪುರ (Chaithra Kundapura) ಅವರ ಆಟ ಸ್ವತಃ ಮನೆಯೊಳಗಿರುವ ಸ್ಪರ್ಧಿಗಳಿಗೇ ಇಷ್ಟವಾಗುತ್ತಿಲ್ಲ. ಇದಕ್ಕಾಗಿಯೆ ಅವರು ಪ್ರತಿವಾರ ಕಳಪೆ, ನಾಮಿನೇಷನ್ ಆಗುತ್ತಿದ್ದಾರೆ. ಟಾಸ್ಕ್ ಮಧ್ಯೆ ಕೂಡ ಇವರು ತೆಗೆದುಕೊಳ್ಳುವ ನಿರ್ಧಾರಗಳಿಗೆ ಪ್ರತಿ ಬಾರಿ ಜಗಳ ಆಗುತ್ತದೆ. ಹೆಚ್ಚಿನ ಬಾರಿ ಇವರು ಸುಳ್ಳು ಹೇಳುತ್ತಲೇ ಇರುತ್ತಾರೆ ಎಂಬ ಮಾತು ಕೂಡ ಮನೆಮಂದಿ ಇಂದ ಕೇಳಿಬಂದಿದೆ. ಕಳೆದ ವಾರ ಉಸ್ತುವಾರಿ ವಿಚಾರದಲ್ಲಿ ಚೈತ್ರಾ ತೆಗೆದುಕೊಂಡ ತಪ್ಪು ನಿರ್ಧಾರ ಮತ್ತು ಕಳಪೆ ಹಾಗೂ ವೀಕೆಂಡ್ ಬಂದಾಗ ಹುಷಾರು ತಪ್ಪುವ ಬಗ್ಗೆ ಸುದೀಪ್ ಇವರಿಗೆ ಕ್ಲಾಸ್ ತೆಗೆದುಕೊಂಡಿದ್ದರು.
ಭಾನುವಾರ ಸೂಪರ್ ಸಂಡೇ ವಿಥ್ ಸುದೀಪ್ ಎಪಿಸೋಡ್ನಲ್ಲಿ ಕಿಚ್ಚ ಮನೆಮಂದಿಗೆ ಒಂದು ಚಟುವಟಿಕೆ ನೀಡಿದ್ದಾರೆ. ಇಲ್ಲಿ ಚೈತ್ರಾ ಅವರನ್ನು ಮನೆಮಂದಿ ಕಸದ ಬುಟ್ಟಿಗೆ ಹೋಲಿಸಿ ವೇಸ್ಟ್ ಎಂದು ಹೇಳಿದ್ದಾರೆ. ಹೌದು, ಬಿಗ್ ಬಾಸ್ ಮನೆಗೆ ಕಸದ ಬುಟ್ಟಿ ಬಂದಿದೆ. ಬಿಗ್ಬಾಸ್ ಮನೆಯ ಕಸ ಯಾರೆಂದು ತಿಳಿಸಿ, ಅವರನ್ನು ಆ ಬುಟ್ಟಿಗೆ ಹಾಕಬೇಕು ಎಂದು ಕಿಚ್ಚ ಸುದೀಪ್ ಹೇಳುತ್ತಾರೆ. ಇದಕ್ಕೆ ಹೆಚ್ಚಿನವರು ಚೈತ್ರಾ ಹೆಸರನ್ನೇ ತೆಗೆದುಕೊಂಡಿದ್ದಾರೆ.
ಇದಕ್ಕೆ ಕಾರಣವನ್ನೂ ನೀಡಿರುವ ಮನೆಮಂದಿ, ಐಶ್ವರ್ಯಾ ಅವರು ಮಾತನಾಡಿ, ಮುಖವಾಡ ಕಳಚುತ್ತೇನೆ ಎಂದು ಹೇಳುತ್ತಾ, ಅವರೇ ಒಂದು ವೇಷ ತೊಟ್ಟುಕೊಂಡು ಆಡುತ್ತಿದ್ದಾರೆ ಎಂದು ಹೇಳಿದ್ದಾರೆ. ಮಾತು ಮನೆ ಕೆಡಿಸ್ತು ತೂತು ಒಲೆ ಕೆಡಿಸ್ತು ಅನ್ನೋ ಹಾಗೆ, ಚೈತ್ರಕ್ಕ ಇಡೀ ಮನೆಯನ್ನೇ ಕೆಡಿಸಿಬಿಟ್ಯಾಳ್ರೀ.. ಎಂದು ಹನುಮಂತು ಆರೋಪ ಮಾಡಿದ್ದಾರೆ. ಇನ್ನು ಮೋಕ್ಷಿತಾ ಅವರು, ಕಳಪೆ ಪಟ್ಟ ಸಿಕ್ತು ಎಂದಕೂಡಲೇ ಫುಲ್ ಹುಷಾರು ತಪ್ಪುತ್ತಾರೆ. ವೀಕೆಂಡ್ ಅಲ್ಲಿ ಫುಲ್ ಡಲ್ ಆಗಿರುತ್ತಾರೆ. ಮತ್ತೆ ರಾತ್ರಿ ದಿಢೀರ್ ಅಂತ ಚಾರ್ಜ್ ಆಗುತ್ತಾರೆ. ಫೈರ್ ಬ್ರ್ಯಾಂಡ್ ಈಸ್ ಬ್ಯಾಕ್ ಅಂತಾರೆ. ಅದು ಹೇಗೆ ಎಂಬುದು ನಮಗೆ ಗೊತ್ತಿಲ್ಲ ಎಂದಿದ್ದಾರೆ.
ರಜತ್ ಕಿಶನ್ ಅವರು, ಈ ಡವ್‌ಗಳನ್ನು ಬಿಟ್ಟು ಮನೆಗೆ ವಾಪಸ್ ಹೋಗೋದು ಉತ್ತಮ ಎಂದು ಚೈತ್ರಾ ಬಗ್ಗೆ ನೇರವಾಗಿ ಆರೋಪ ಮಾಡಿದ್ದಾರೆ. ಹೀಗೆ ಚೈತ್ರಾ ಕುಂದಾಪುರ ಮನೆಯಲ್ಲಿ ಇರಲು ಯೋಗ್ಯರೇ ಅಲ್ಲ. ಇವರಿಂದ ಏನೂ ಆಗೋದಿಲ್ಲ. ಇವರು ವೇಸ್ಟ್ ಆಗಿದ್ದಾರೆ. ಮನೆಯಲ್ಲಿ ಇರಲು ಇವರು ವೇಸ್ಟ್ ಅಂತ ಮನೆಯ ಎಲ್ಲ ಸದಸ್ಯರು ಹೇಳಿದ್ದಾರೆ.
BBK 11: ಗಾಂಚಲಿ ಬಿಡಿ..: ವೀಕೆಂಡ್ನಲ್ಲಿ ಕೂಲ್ ಆಗಿರುತ್ತಿದ್ದ ಹನುಮಂತನಿಗೆ ಬಿಸಿ ಮುಟ್ಟಿಸಿದ ಸುದೀಪ್