Thursday, 12th December 2024

BBK 11: ಗೋಲ್ಡ್ ಸುರೇಶ್ ಆಡಿದ ಆ ಮಾತಿಗೆ ಗೊಳೋ ಅಂತ ಅಳುತ್ತಾ ಗಾರ್ಡರ್ ಏರಿಯಾಗೆ ಓಡಿದ ಐಶ್ವರ್ಯ

Aishwarya Crying

ಪ್ರತಿ ಸೀಸನ್​ನಂತೆ ಈ ಬಾರಿ ಕೂಡ ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಕಣ್ಣೀರ ಧಾರೆ ಜೋರಾಗಿ ಹರಿಯುತ್ತಿದೆ. ಮೊದಲ ದಿನ ಅನುಷಾ ರೈ ಗಂಜಿ ಸೇರ್ತಿಲ್ಲ-ಕಾಫಿ ಸಿಕ್ಕಿಲ್ಲ ಅಂತ ಕ್ಯಾಮೆರಾ ಮುಂದೆ ಕಣ್ಣೀರಿಟ್ಟಿದ್ದರು. ಬಳಿಕ ಧನರಾಜ್ ಆಚಾರ್ ಕನ್ಫೆಷನ್ ರೂಮ್​ನಲ್ಲಿ ನನಗೆ ಕಷ್ಟ ಆಗ್ತಿದೆ, ಕಾನ್ಫಿಡೆನ್ಸ್ ಕಳೆದುಕೊಳ್ಳುತ್ತಾ ಇದ್ದೇನೆ ಎಂದು ಅತ್ತಿದ್ದರು. ಇದೀಗ ಬಿಗ್ ಬಾಸ್ ಮನೆಯ ಮುದ್ದು ಚೆಲುವೆ ಐಶ್ವರ್ಯ ಗೊಳೋ ಎಂದು ಗಾರ್ಡನ್ ಏರಿಯಾದಲ್ಲಿ ಕಣ್ಣೀರು ಸುರಿಸಿದ್ದಾರೆ.

ಐಶ್ವರ್ಯ ಕಣ್ಣೀರಿಗೆ ಕಾರಣವೇನು?:

ಬಿಗ್ ಬಾಸ್ ಸ್ವರ್ಗ ವಾಸಿಗಳಿಗೆ ಒಂದು ಟಾಸ್ಕ್ ನೀಡಿದ್ದರು. ನರಕದಲ್ಲಿರುವ ಇಬ್ಬರು ಸ್ಪರ್ದಿಗಳು ಏಕೆ ಸ್ವರ್ಗಕ್ಕೆ ಬರಲು ಅರ್ಹರಲ್ಲ ಎಂಬುದನ್ನು ಕಾರಣ ಸಹಿತ ವಿವರಿಸಬೇಕು ಎಂದು. ಇಲ್ಲಿ ಐಶ್ವರ್ಯ ಅವರು ಗೋಲ್ಡ್ ಸುರೇಶ್ ಹೆಸರು ತೆಗೆದುಕೊಂಡಿದ್ದಾರೆ. ‘ಮೊದಲ ದಿನ ನಮ್ಮಿಬ್ಬರ ಮಧ್ಯೆ ಉತ್ತಮ ಮಾತುಕತೆ ನಡೆದಿತ್ತು. ನಾನು ನಿಮ್ಮನ್ನ ಅಣ್ಣನ ಸ್ಥಾನದಲ್ಲಿ ನೋಡುತ್ತಿದ್ದೇನೆ. ಆದರೆ, ಈಗ ಆ ಬಾಂಧವ್ಯ ಇಲ್ಲ ಅಂತ ನನಗೆ ಅನಿಸುತ್ತಿದೆ. ಆ ಬಾಂಧವ್ಯ ನೀವು ಇಟ್ಟುಕೊಂಡಿಲ್ಲ’ ಎಂದು ಹೇಳಿದ್ದಾರೆ.

ಐಶ್ವರ್ಯ ಅವರ ಈ ಕಾರಣವನ್ನು ಒಪ್ಪಿಕೊಳ್ಳದ ಸುರೇಶ್ ‘ಹೌದು ನಂಗೆ ನಿಮ್ಮ ಜೊತೆ ಕನೆಕ್ಟಿವಿಟಿ ಕಡಿಮೆ, ನಿಮ್ಮ ಮಾತು-ನಿಮ್ಮ ಬಿಹೇವಿಯರ್ ನಂಗೆ ಇಷ್ಟವಾಗುತ್ತಿಲ್ಲ. ಹೀಗಿದ್ದಾಗ ನಾನು ಯಾರನ್ನೂ ಮಾತನಾಡಿಸಲು ಹೋಗುವುದಿಲ್ಲ’ ಎಂದು ಹೇಳಿದ್ದಾರೆ. ಇಲ್ಲಿ ಸುರೇಶ್ ಅವರು ನಿಮ್ಮ ಬಿಹೇವಿಯರ್ ನಂಗೆ ಇಷ್ಟವಾಗುತ್ತಿಲ್ಲ ಎಂಬ ಪದ ಉಪಯೋಗಿಸಿದ್ದು ಐಶ್ವರ್ಯ ಅವರಿಗೆ ತುಂಬಾ ನೋವುಂಟು ಮಾಡಿದೆ.

ಇದರಿಂದ ಅಳುತ್ತಾ ಗಾರ್ಡರ್ ಏರಿಯಾಗೆ ಬಂದ ಐಶ್ವರ್ಯ, ‘ನಾನು ಯಾವತ್ತೂ ಆ ರೀತಿ ಯಾರ ಜತೆಗೂ ಮಾತನಾಡಲ್ಲ. ಕೆಲಸದವರ ಹತ್ತಿರ ಕೂಡ. ನಾನು ಪರ್ಸನಲ್‌ ಆಗಿ ಅವರ ಮೇಲೆ ಬಿದ್ದು ಜಗಳ ಆಡಿದರೆ ಅದು ಒಂದು ಥರ ಅನ್ನಿಸೋದು. ಆದರೆ ನಾನು ಆ ರೀತಿ ಮಾಡಿಲ್ಲ. ಅದು ಅಲ್ಲದೇ ನನ್ನ ಬಿಹೇವಿಯರ್‌ ಸರಿ ಅಲ್ಲ ಅಂತ ಹೇಳುವುದು ಎಷ್ಟರ ಸರಿ?, ನಾನು ಕೆಟ್ಟ ಕೆಟ್ಟ ಶಬ್ದಗಳನ್ನ ಬಳಕೆ ಮಾಡಿದ್ದರೆ ನಂದು ತಪ್ಪು ಆಗತ್ತೆ. ಆದರೆ ನಾನು ಹಾಗೆ ಮಾಡಿಲ್ಲ’ ಎಂದು ಅತ್ತಿದ್ದಾರೆ.

ಐಶ್ವರ್ಯಾಗೆ ಧರ್ಮನ ಮೇಲೆ ಕಣ್ಣು:

ಜಗಳಗಳ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ಪ್ರೇಮಕಥೆ ಶುರುವಾದಂತಿದೆ. ತನ್ನ ಸೈಲೆಂಟ್ ನೇಚರ್​ನಿಂದಲೇ ಹುಡುಗಿಯರ ಮನಸ್ಸು ಕದ್ದಿರುವ ಧರ್ಮ ಕೀರ್ತಿರಾಜ್ ಮೇಲೆ ಐಶ್ವರ್ಯಗೆ ಕ್ರಶ್ ಆದಂತಿದೆ. ಇವರಿಬ್ಬರನ್ನು ಮನೆಮಂದಿ ಸಖತ್ ಆಗಿ ಕಾಲೆಳೆಯುತ್ತಿದ್ದಾರೆ. ಐಶ್ವರ್ಯಾ ಅವರು ಸ್ಪರ್ಧಿಗಳ ಮುಂದೆ ಧರ್ಮ ಅವರನ್ನು ಹಾಡಿ ಹೊಗಳಿದ್ದು, ‘ನೀವು ತುಂಬಾ ಸಾಫ್ಟ್ ಆಗಿ ಮಾತಾಡ್ತೀರ, ಫ್ರೂಟ್ಸ್ ಕಟ್ ಮಾಡುವಾಗ ಮುದ್ದಾಗಿ ಮಾಡ್ತೀರ, ನಾನು ನಿಮ್ಗೆ ಯಾವಾಗ ಫುಲ್ ಬಿದ್ದೋದೆ ಅಂದ್ರೆ.. ಐ ಮೀನ್ ಬಿದ್ದೋಗಿಲ್ಲ’ ಎಂದು ಐಶ್ವರ್ಯ ಹೇಳಿ ನಾಚಿ ನೀರಾಗಿದ್ದಾರೆ.

ಇನ್ನು ಲಾಯರ್ ಜಗದೀಶ್ ಅವರ ಜಗಳ, ಮಾತು, ನಡೆ ಇತರೆ ಸ್ಪರ್ಧಿಗಳ ನಿದ್ದೆಗೆಡಿಸಿದೆ. ಮೊದಲ ದಿನ ಸೈಲೆಂಟ್ ಆಗಿದ್ದ ಜಗದೀಶ್ ಎರಡನೇ ದಿನದಿಂದ ಒಂದಲ್ಲ ಒಂದು ವಿಚಾರಕ್ಕೆ ಜಗಳ ತೆಗೆಯುತ್ತಿದ್ದಾರೆ. ಇದರಿಂದ ಕೇವಲ ನರಕ ವಾಸಿಗಳು ಮಾತ್ರವಲ್ಲದೆ ಸ್ವರ್ಗ ವಾಸಿಗಳು ಕೂಡ ತಲೆ ಕೆಡೆಸಿಕೊಂಡಿದ್ದಾರೆ. ಇದರ ನಡುವೆ ಬಿಗ್ ಬಾಸ್​ಗೂ ವಾರ್ನಿಂಗ್ ನೀಡಿರುವ ಜಗದೀಶ್ ಬಿಗ್ ಬಾಸ್ ಕಾರ್ಯಕ್ರಮವನ್ನು ಹಾಳು ಮಾಡಿಲ್ಲ ಅಂದ್ರೆ ನನ್ ಹೆಸರು ಬೇರೆ ಇಡಿ ಎಂದು ಹೇಳಿದ್ದಾರೆ. ನಂತರ ಹೀಗೆಲ್ಲ ಮಾತನಾಡಿದ್ದಕ್ಕೆ ಕ್ಷಮಿಸಿ ಎಂದೂ ಹೇಳಿದ್ದಾರೆ.

BBK 11: ಧರ್ಮಾ Loves ಐಶ್ವರ್ಯ: ಜಗಳಗಳ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ಅರಳಿತು ಪ್ರೀತಿಯ ಹೂವು