Sunday, 24th November 2024

Bigg Boss: ಇನ್ನೂರಲ್ಲ, ನಾನೂರಲ್ಲ: ಬಿಗ್ ಬಾಸ್ ಸೆಟ್​ನಲ್ಲಿ ಎಷ್ಟು ಜನರು ಕೆಲಸ ಮಾಡುತ್ತಾರೆ ಗೊತ್ತಾ?

Bigg Boss set

ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss) ಇದೀಗ ಕನ್ನಡ ಸೇರಿದಂತೆ ಹಿಂದಿ ಮತ್ತು ತಮಿಳಿಯನಲ್ಲಿ ಪ್ರಾರಂಭವಾಗಿದೆ. ಹಿಂದಿ ಬಿಗ್ ಬಾಸ್ ಸೀಸನ್ 18 ಅನ್ನು ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಮುನ್ನಡೆಸುತ್ತಿದ್ದಾರೆ. ಪ್ರತಿ ವೀಕೆಂಡ್ ಇವರು ಬಂದು ವಾರದ ಪಂಚಾಯಿತಿ ನಡೆಸುತ್ತಾರೆ. ಬಿಗ್ ಬಾಸ್ ಬಗ್ಗೆ ಎಲ್ಲರಿಗೂ ಒಂದು ಕುತೂಹಲ ಇದ್ದೇ ಇರುತ್ತದೆ. ಇದರ ಬ್ಯಾಕ್​ಗ್ರಾಂಡ್​ನಲ್ಲಿ ಯಾರು ಇರ್ತಾರೆ?, ಎಷ್ಟು ಜನ ಕೆಲಸ ಮಾಡುತ್ತಾರೆ? ಎಂಬ ಮಾಹಿತಿ ತಿಳಿಯಲು ಅನೇಕರು ಕಾದಿರುತ್ತಾರೆ. ಈ ಕುರಿತ ಮಾಹಿತಿ ನಾವು ನೀಡುತ್ತೇವೆ.

ಬಿಗ್ ಬಾಸ್ ಸೆಟ್​ನ ಒಳಗೆ ಹೋದಾಗ ವಿಡಿಯೋ ಮತ್ತು ಫೋಟೋ ಕ್ಲಿಕ್ಕಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಲ್ಲದೆ ಅಲ್ಲಿ ಕೆಲಸ ಮಾಡುವವರು ತಮ್ಮ ಫೋನ್‌ಗಳನ್ನು ಸಹ ಒಳಗೆ ತೆಗೆದುಕೊಂಡು ಹೋಗುವಂತಿಲ್ಲ. ಹಿಂದಿ ಬಿಗ್ ಬಾಸ್‌ನ ಸೆಟ್‌ಗಳಲ್ಲಿ ಬರೋಬ್ಬರಿ 1000 ಸಿಬ್ಬಂದಿಗಳ ತಂಡವು ಕೆಲಸ ಮಾಡುತ್ತದಂತೆ. ವೀಕೆಂಡ್​ನಲ್ಲಿ ಸಲ್ಮಾನ್ ಖಾನ್ ಬಂದಾಗ ಅವರನ್ನು ನಿರ್ವಹಿಸಲು 200 ಹೆಚ್ಚುವರಿ ಜನರು ಇರುತ್ತಾರಂತೆ.

1000 ಸಿಬ್ಬಂದಿಗಳ ಪೈಕಿ ಅವರು ವಿಭಿನ್ನ ಪಾಳಿಗಳನ್ನು ಕೆಲಸ ಮಾಡುತ್ತಾರೆ. ಸಲ್ಮಾನ್ ಖಾನ್ ಅವರ ‘ವೀಕೆಂಡ್ ಕಾ ವಾರ್’ ಶುಕ್ರವಾರ ಮತ್ತು ಶನಿವಾರದಂದು ಪ್ರದರ್ಶನಗೊಳ್ಳುತ್ತದೆ. ‘ವೀಕೆಂಡ್ ಕಾ ವಾರ್’ ಚಿತ್ರೀಕರಣದ ಸಮಯದಲ್ಲಿ, ಸಲ್ಮಾನ್ ನಿರ್ವಹಣೆಗಾಗಿ 200 ಸಿಬ್ಬಂದಿಗಳ ಹೆಚ್ಚುವರಿ ತಂಡವನ್ನು ನಿಯೋಜಿಸಲಾಗಿದೆ. ಇದರ ಹೊರತಾಗಿ, ಕಾರ್ಯಕ್ರಮದ ಗ್ರ್ಯಾಂಡ್ ಪ್ರೀಮಿಯರ್ ಮತ್ತು ಫಿನಾಲೆ ಸಮಯದಲ್ಲಿ ಇನ್ನೂ 200 ಸಿಬ್ಬಂದಿಗಳು ಇರುತ್ತಾರಂತೆ.

ಜಿಯೋ ಸಿನಿಮಾದಲ್ಲಿ 24 ಗಂಟೆಗಳ ಕಾಲ ಬಿಗ್ ಬಾಸ್ ಲೈವ್ ಸ್ಟ್ರೀಮ್ ವೀಕ್ಷಿಸಬಹುದು. 250 ಸಿಬ್ಬಂದಿ ಯಾವಾಗಲೂ ಇದಕ್ಕಾಗಿ ಕೆಲಸ ಮಾಡುತ್ತಾರೆ. ಸಿಬ್ಬಂದಿ ಸದಸ್ಯರು ಕೂಡ ಸೆಟ್‌ನಲ್ಲಿ ಸಂಪೂರ್ಣ ಕಾಳಜಿ ವಹಿಸುತ್ತಾರೆ. ಅವರಿಗಾಗಿ 24 ಗಂಟೆಗಳ ಲೈವ್ ಕಿಚನ್ ಇದೆ, ಅದರಲ್ಲಿ ಅವರು ಹೋಗಿ ತಮಗೆ ಬೇಕಾದುದನ್ನು ತಿನ್ನಬಹುದು.

ಇನ್ನು ಕನ್ನಡ ಬಿಗ್ ಬಾಸ್ ವಿಚಾರಕ್ಕೆ ಬಂದರೆ, ಸೆಟ್​ನಲ್ಲಿ ಸುಮಾರು 500 ಸಿಬ್ಬಂದಿಗಳು ಕೆಲಸ ಮಾಡುತ್ತಾರೆ. ಇದರಲ್ಲಿ ಕೂಡ ಡೇ-ನೈಟ್ ಶಿಫ್ಟ್ ಇರುತ್ತಂತೆ. ಸುಮಾರು 200 ಮಂದಿ ಸೆಕ್ಯೂರಿಟಿ ಅವರೇ ಇರುತ್ತಾರಂತೆ. ವೀಕೆಂಡ್​ನಲ್ಲಿ ಸುದೀಪ್ ಬಂದಾಗ 30-50 ಹೆಚ್ಚುವರಿ ಜನರು ಕೆಲಸ ಮಾಡುತ್ತಾರಂತೆ.

BBK 11: ಇತಿಹಾಸ ಸೃಷ್ಟಿಸಿದ ಬಿಗ್ ಬಾಸ್ ಕನ್ನಡ ಸೀಸನ್ 11: ಬಿಬಿಕೆ ಅಬ್ಬರಕ್ಕೆ TRP ದಾಖಲೆ ಉಡೀಸ್